ಡಿ ದರ್ಜೆ ನೌಕರರಿಗೆ ಸಿಹಿ ಸುದ್ಧಿ ಕೊಟ್ಟ ಸರ್ಕಾರ ..........

ಡಿ ದರ್ಜೆ ನೌಕರರಿಗೆ ಸಿಹಿ ಸುದ್ಧಿ ಕೊಟ್ಟ  ಸರ್ಕಾರ ..........



       ಇದೀಗ ಸರ್ಕಾರ ಡಿ ದರ್ಜೆ ನೌಕರರಿಗೆ ಸಿಹಿ ಸುದ್ದಿ ಕೊಟ್ಟಿದೆ. ಪತಿ, ಪತ್ನಿ ಡಿ ದರ್ಜೆ ನೌಕರಾಗಿದ್ದರೆ ಅವರ ವರ್ಗಾವಣೆ ಸಹಕಾರಿ ಆಗುವಂತೆ ನಿಯಮಗಳನ್ನು ತಿದ್ದುಪಡಿ ಮಾಡಲಾಗಿದೆ. ಹಾಗಾಗಿ ನಿಯಮ ಮತ್ತು ಷರತ್ತುಗಳ ಪ್ರಕಾರ ವರ್ಗಾವಣೆ ಪ್ರಕ್ರಿಯೆ ನಡೆಯಲಿದೆ ಎಂದು ಕರ್ನಾಟಕ ರಾಜ್ಯಪಾಲರಾದ ಆದೇಶದ ಮೇರೆಗೆ ಸಿಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಸರ್ಕಾರದ ಅಧೀನ ಕಾರ್ಯದರ್ಶಿ ವೀರಭದ್ರ ಆದೇಶವನ್ನು ಹೊರಡಿಸಿದ್ದಾರೆ. 

 ಆದೇಶದಲ್ಲಿ, ಕರಡು ನಿಯಮಗಳನ್ನು ದಿನಾಂಕ 21-02-2022 ರಂದು ಅಧಿಸೂಚಿಸಿ, ಸದರಿ ರಾಜ್ಯಪತ್ರವನ್ನು ಸಾರ್ವಜನಿಕರಿಗೆ ನೀಡಲಾಗಿದ್ದು, ಸ್ವೀಕರಿಸಿದ ಆಕ್ಷೇಪಣೆ ಮತ್ತು ಸಲಹೆಗಳನ್ನು ರಾಜ್ಯ ಸರ್ಕಾರ  ಪರಿಗಣಿಸಿದ್ದು,ಇದೀಗ ಕರ್ನಾಟಕ್ ರಾಜ್ಯ ಸಿವಿಲ್ ಸೇವಾ ಅಧಿನಿಯಮವನ್ನು, 1927 (1990 ಅಧಿನಿಯಮ ಸಂಖ್ಯೆ :14) ರ 3 ನೇ ಪ್ರಕರಣದ ೧ನೇ ಉಪ ಪ್ರಕರಣವನ್ನು ೮ನೇ ಪ್ರಕರಣದೊಂದಿಗೆ ಓದಿಕೊಂಡು ಕರ್ನಾಟಕ ಸರ್ಕಾರವು ನಿಯಮಗಳನ್ನು ರಚಿಸುತ್ತದೆ. ನಿಯಮಗಳು ಅಧಿಕೃತ ರಾಜ್ಯಪತ್ರದಲ್ಲಿ ಅಂತಿಮ ಪ್ರಕಟಣೆಯ  ಬರಲಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಗುಂಪು-ಸಿ ಅಥವಾ ಗ್ರೂಪ್ ನೌಕರರಲ್ಲಿ ಪತಿ - ಪತ್ನಿ ಇಬ್ಬರಲ್ಲಿ ಯಾರಾದರೂ ಒಬ್ಬರು ಕೆಲಸಕ್ಕೆ ಸಂಬಂಧಿಸಿದಂತೆ ಕೋರಿಕೆ ಸಲ್ಲಿಸಿದ್ದಲ್ಲಿ ಹುದ್ದೆಯ ಒಂದು ಜೇಷ್ಟತಾ ಘಟಕದಿಂದ ಮತ್ತೊಂದು ಜೇಷ್ಠತಾ ಘಟಕದಲ್ಲಿನ ಅದೇ ಕೇಡರ್ ನ ಸಮಾನ ಹುದ್ದೆಗೆ ವರ್ಗಾವಣೆ ಮಾಡಲಾಗುತ್ತದೆ. ಆದರೆ ಇದಕ್ಕೆ ಷರತ್ತುಗಳು ಅನ್ವಯವಾಗುತ್ತವೆ. 
ಯಾವ ಷರತ್ತುಗಳು?????/


ಏನೆಲ್ಲಾ ಶರತ್ತುಗಳಿವೆ?

🗲  ವರ್ಗಾವಣೆ ಬಯಸುವ ಸರ್ಕಾರೀ ನೌಕರ ಈಗಾಗಲೇ ಕೆಲಸ ಮಾಡುತ್ತಿರುವ ಸ್ಥಳದಲ್ಲಿ ಕನಿಷ್ಠ 7 ವರ್ಷ ಸೇವೆ ಸಲ್ಲಿಸಿರಬೇಕು.

🗲  ಹಾಗೆಯೇ ವರ್ಗಾವಣೆ ಆಗಬೇಕಾದ ಸ್ಥಳದಲ್ಲಿ ಮಂಜೂರಾದ ಹುದ್ದೆ ಖಾಲಿ ಇರಬೇಕು. 

🗲  ಅಂತಹ ವರ್ಗಾವಣೆಯನ್ನು ಒಂದು ಕೇಡರ್ ನಿಂದ ಮತ್ತೊಂದು ಕೇಡರ್ ಗೆ ಮಾಡತಕ್ಕದ್ದಲ್ಲ.
 

🗲  ವರ್ಗಾವಣೆಯನ್ನು ಸರ್ಕಾರಿ ನೌಕರರ ಕೋರಿಕೆಯ ಮೇರೆಗೆ ಮಾಡುವುದರಿಂದ ಅವರ ಜೇಷ್ಟತೆಯನ್ನು ವರ್ಗಾವಣೆಗೊಂಡ ಘಟಕದಲ್ಲಿನ ಕೇಡರ್ ನ ಕೊನೆಯ ವ್ಯಕ್ತಿಯ ಕೆಳಗಿರಬೇಕು.

🗲  ವರ್ಗಾವಣೆಯನ್ನು ಒಂದೇ ಬಾರಿ ಮಾಡಲಾಗುವುದು ಅದಕ್ಕಿಂತ ಹೆಚ್ಚಿನ ಬಾರಿ ಮಾಡಲಾಗುವುದಿಲ್ಲ ಎಂದು ಹೇಳಲಾಗಿದೆ.

🗲  ಈ ಷರತ್ತುಗಳಿಗೆ ಒಳಪಟ್ಟ ಡಿ ಗ್ರೂಪ್ ನೌಕರ ವರ್ಗಾವಣೆ ಆಗಿ ನೇಮಕಗೊಳ್ಳಬಹುದು,
















ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು