ವೋಟರ್ ಐಡಿ-ಆಧಾರ್ ಸಂಖ್ಯೆ ಜೋಡಣೆಗೆ ಡೆಡ್ ಲೈನ್ ವಿಸ್ತರಣೆ

 ವೋಟರ್ ಐಡಿ-ಆಧಾರ್ ಸಂಖ್ಯೆ ಜೋಡಣೆಗೆ ಡೆಡ್ ಲೈನ್ ವಿಸ್ತರಣೆ 


ವೀಕೆಂಡ್ ವಿಥ್ ರಮೇಶ್ ರವರ ಸಂಭಾವನೆ ಕೇಳಿದ್ರೆ ಆಶ್ಚರ್ಯ ಪಡುತ್ತೀರಾ!

ವೋಟರ್ ಐಡಿ ಮತ್ತು ಆಧಾರ್ ಜೋಡಿಸುವುದಕ್ಕೆ ಇದ್ದ ಅಂತಿಮ ಗಡುವನ್ನು ಒಂದು ವರ್ಷದ ಅವಧಿಗೆ ವಿಸ್ತರಿಸಲಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಇದರಂತೆ ಈ ವರ್ಷ ಏಪ್ರಿಲ್ 1 ಕ್ಕೆ ಇದ್ದ ಕೊನೆ ದಿನ 2024 ಮಾರ್ಚ್ 31 ರ ತನಕ ವಿಸ್ತರಣೆ ಆಗಿದೆ. ಮತದಾರರು ಈ ಅವಧಿಯನ್ನು ಸದುಪಯೋಗ ಮಾಡಿಕೊಂಡು ತಮ್ಮ ಮತದಾರರ ಚೀಟಿ ಮತ್ತು ಆಧಾರ್ ಜೋಡಿಸುವ ಕೆಲಸವನ್ನು ಮಾಡಬೇಕು ಎಂದು ಸರ್ಕಾರ ಕೇಳಿಕೊಂಡಿದೆ.

ಬಳಕೆದಾರರು ತಮ್ಮ ಆಧಾರ್ ಜೊತೆಗೆ ವೋಟರ್ ಐಡಿ ಜೋಡಿಸುವ ಕೆಲಸವನ್ನು ಆನ್ ಲೈನ್ ಮೂಲಕ ಅಥವಾ ಎಸ್ ಎಂ ಎಸ್ ಮೂಲಕ 2024 ರ ಮಾರ್ಚ್ 31 ರ ಒಳಗೆ ಪೂರ್ಣಗೊಳಿಸಬೇಕು. ಆಧಾರ್ ಜೊತೆ ವೋಟರ್ ಐಡಿ ಜೋಡಿಸುವ ಕೆಲಸ ಕಡ್ಡಾಯ ಅಲ್ಲದೆ ಹೋದರೂ ಒಂದಕ್ಕಿಂತ ಹೆಚ್ಚು ಕ್ಷೇತ್ರಗಳ ಮತದಾರರ ಪಟ್ಟಿಯಲ್ಲಿ ಮತದಾರರ ಹೆಸರು ಇದ್ದರೆ ಅದನ್ನು ರದ್ದುಗೊಳಿಸುವುದಕ್ಕೆ ಇದು ನೆರವಾಗಲಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.

 

Aadhar in Death Certificate : ಆಧಾರ್ ಬಳಕೆದಾರ ಮೃತನಾದರೆ, ಅವರ ಜೊತೆಗೆ ಆಧಾರ್ ಸಂಖ್ಯೆ ಕೂಡ ಸಾಯಲಿದೆ!

"ಕೇಂದ್ರ ಸರ್ಕಾರವು ಈ ಮೂಲಕ ಕಾನೂನು ಮತ್ತು ನ್ಯಾಯ ಸ್ಜ್ಚಿವಾಲಯ (ಶಾಸಕಾಂಗ ಇಲಾಖೆ), ಸಂಖ್ಯೆ S.O.2893(E), ದಿನಾಂಕ 17 ನೇ ಜೂನ್, 2022 ರಲ್ಲಿ ಭಾರತ ಸರ್ಕಾರದ ಅಧಿಸೂಚನೆಯಲ್ಲಿ ಈ ಕೆಳಗಿನ ತಿದ್ದುಪಡಿಯನ್ನು  ಮಾಡುತ್ತದೆ.ಅವುಗಳೆಂದರೆ : ಈ ಅಧಿಸೂಚನೆಯಲ್ಲಿ ಪದಗಳು ಮತ್ತು ಅಂಕಿಅಂಶಗಳು, " 1 ನೇ ಏಪ್ರಿಲ್ 2023 " ಪದಗಳು ಮತ್ತು ಅಂಕಿಅಂಶಗಳಿಗೆ, " 31 ಮಾರ್ಚ್ 2024 " ಅನ್ನು ಬದಲಿಸಲಾಗುತ್ತದೆ. " ಎಂದು ಕಾನೂನು ಮತ್ತು ನ್ಯಾಯ ಸಚಿವಾಲಯ ಅಧಿಸೂಚನೆಯಲ್ಲಿ ತಿಳಿಸಿದೆ. 


Pan-Aadhar Link : ಪ್ಯಾನ್ ಮತ್ತು ಆಧಾರ್ ಲಿಂಕ್ ಆಗಿದಿಯಾ - ಇಲ್ವಾ ಎಂಬ ಡೌಟ್ ಕಾಡ್ತಾ ಇದಿಯಾ? ಹಾಗಿದ್ರೆ ಈ ಸ್ಟೆಪ್ಸ್ ಫಾಲ್ಲೋ ಮಾಡಿ..  


ಲೋಕಸಭೆಯಲ್ಲಿ 2021 ರ ಡಿಸೇಂಬರ್ ನಲ್ಲಿ ಚುನಾವಣಾ ಕಾನೂನುಗಳ ( ತಿದ್ದುಪಡಿ ) ಮಸೂದೆಯನ್ನು ಅಂಗೀಕರಿಸಿದ ನಂತರ ಮತದಾರರ ಗುರುತಿನ  ಚೀಟಿಗಳೊಂದಿಗೆ ಆಧಾರ್ ಅನ್ನು ಲಿಂಕ್ ಮಾಡುವುದನ್ನು ಅಧಿಕೃತಗೊಳಿಸಲಾಗಿದೆ. 

ಆನ್ ಲೈನ್ ನಲ್ಲಿ ಮತದಾರರ ಗುರುತಿನ ಚೀಟಿಯೊಂದಿಗೆ ಆಧಾರ್ ಕಾರ್ಡ್ ಅನ್ನು ಲಿಂಕ್ ಮಾಡುವ ಪ್ರಕ್ರಿಯೆಯ ನೋಟ ಇಲ್ಲಿದೆ.

➨ ನ್ಯಾಷನಲ್ ವೋಟರ್ಸ್ ಸರ್ವಿಸ್ ಪೋರ್ಟಲ್ ( ಎನ್ ವಿ ಎಸ್ ಪಿ ) ಯಾ ಅಧಿಕೃತ ವೆಬ್ ಸೈಟ್ ಗೆ ಭೇಟಿ ಕೊಡಿ. ಅದಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ.
➨ ಆ ಪೋರ್ಟಲ್ ಗೆ ಲಾಗ್ ಇನ್ ಆಗಿ 
( Update Aadhara Card for free ) : ಆನ್ ಲೈನ್ ನಲ್ಲಿ ಆಧಾರ್ ವಿವರ ಫ್ರಿ ಆಗಿ ಅಪ್ಡೇಟ್ ಮಾಡಿ. ಜೂನ್ ೧೪ ರ ತನಕ ಮಾತ್ರ ಇದು ಪ್ರೀ 
➨ " ಸರ್ಚ್ ಇನ್ ಇಲೆಕ್ಟೊರಲ್ ರೋಲ್ " ಆಪ್ಶನ್ ಗೆ ಹೋಗಿ.
➨ ಅಲ್ಲಿ ವಿವರ ತುಂಬಿ ಮತ್ತು ಆಧಾರ್ ನಂಬರ್ ಎಂಟರ್ ಮಾಡಿ.
➨ ಆಗ ಬಳಕೆದಾರರ ನೋಂದಾಯಿತ ಮೊಬೈಲ್ ಗೆ ಅಥವಾ ನೋಂದಾಯಿತ ಇಮೇಲ್ ಗೆ ಒಂದು ಒಟಿಪಿ ಬರುತ್ತದೆ. ಇದನ್ನು ಉಪಯೋಗಿಸಿಕೊಂಡು ಖಾತೆ ಧೃಡೀಕರಣ ಮಾಡಬೇಕು.
➨ ಒಟಿಪಿ ಇಂಟರ್ ಮಾಡಿ, ಇದರೊಂದಿಗೆ ನಿಮ್ಮ ವೋಟರ್ ಐಡಿ ಮತ್ತು ಆಧಾರ್ ಸಂಖ್ಯೆ ಜೋಡಣೆ ಪ್ರಕ್ರಿಯೆ ಪೂರ್ತಿಯಾಗುತ್ತದೆ.



ಹೆಚ್ಚಿನ ಮಾಹಿತಿಗಾಗಿ ಕೆಳಗಿರುವ ವಾಟ್ಸಪ್ಪ್ ಗ್ರೂಪ್ ಸೇರ್ಪಡೆಗೊಳ್ಳಿ




@@@@@@@@@@@@@@@@@@@@@@@@@








ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು