ಕೆರೆ ಹಾವು ಹಾರುವ ಹಾವೇ???? ಇಲ್ಲಿದೆ ಸಂಪೂರ್ಣ ವಿವರ........

ಫ್ಯಾಕ್ಟ್ ಚೆಕ್ : ಕೆರೆ ಹಾವನ್ನು ಹಾರುವ ಹಾವು ಎಂದು ತಪ್ಪಾದ ಹಂಚಿಕೆ?


ವೋಟರ್ ಐಡಿ-ಆಧಾರ್ ಸಂಖ್ಯೆ ಜೋಡಣೆಗೆ ಡೆಡ್ ಲೈನ್ ವಿಸ್ತರಣೆ

        ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೋ ಒಂದು ವೈರಲ್ ಆಗಿದ್ದು "ಮೊಬೈಲ್ ನಲ್ಲಿ ಸೆರೆಯಾಯ್ತು ಹಾರುವ ವಿಚಿತ್ರ ಹಾವು " ಎಂಬ ಶೀರ್ಷಿಕೆಯೊಂದಿಗೆ ಹಂಚಿಕೊಳ್ಳಲಾಗಿದೆ. ಸಾಮಾನ್ಯವಾಗಿ ಹಾವುಗಳು ಅಂದ್ರೆ ತೆವಳು ವೇಗವಾಗಿ ಹೋಗುತ್ತವೆ. ಅನ್ನೋದು ಎಲ್ಲರಿಗು ಗೊತ್ತಿರೋ ಸಂಗತಿ. ಆದರೆ ವಿಡಿಯೋದಲ್ಲಿ ಸೆರೆಯಾಗಿರುವ ಈ ಹಾವು ಎಲ್ಲರ ಗಮನ ಸೆಳೆಯುತ್ತಿದೆ. ರಸ್ತೆಯಲ್ಲಿದ್ದ ಈ ಹಾವು ವ್ಯಕ್ತಿಯೊಬ್ಬ ಹತ್ತಿರ ಹೋದಾಗ ಚಂಗನೆ ಹಾರಿ ಗುಡ್ಡದ ಕಡೆ ಹೋಗಿದೆ. ಇದೊಂದು ಹಾರುವ ವಿಚಿತ್ರ ಹಾವು ಎಂಬ ಪ್ರತಿಪಾದನೆಯೊಂದಿಗೆ ವಿಡಿಯೋವನ್ನು ಪ್ರಸಾರ ಮಾಡಲಾಗಿದೆ.

ಭಾರತದಲ್ಲಿ ಒಟ್ಟು ಇನ್ನೂರಾ ಎಪ್ಪತ್ತೈದಕ್ಕೂ ಹೆಚ್ಚು ಪ್ರಭೇದದ ಹಾವುಗಳಿವೆ. ಅದರಲ್ಲಿ ನಾಗರಹಾವು, ಮಂಡಲಹಾವು, ರಕ್ತಮಂಡಲ, ಕಟ್ಟು ಹಾವು, ಕಾಳಿಂಗ ಸರ್ಪ ಹಾಗೂ ಸೀ ಸ್ನೇಕ್ ಸೇರಿವೆ. ಇವು ಕಚ್ಚಿದರೆ ವಿಷಚಿನಿಂದ ಮನುಷ್ಯರು ಸಾಯುವ ಸಾಧ್ಯತೆಗಳು ಹೆಚ್ಚು, " ಎಂದು ಅವರು ಹೇಳುತ್ತಾರೆ.

ಸ್ವಯಂ ಉದ್ಯೋಗದಲ್ಲಿ ಆಸಕ್ತಿಯಿದೆಯೇ ? ಹಾಗಿದ್ರೆ ಇಲ್ಲಿದೆ ನೋಡಿ ಸುವರ್ಣಾವಕಾಶ :

ಹಾಗಿದ್ದರೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಹಾವು ನಿಜವಾಗಿಯೂ ಹಾರುವ ಹಾವೇ?

ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ಹಾರುವ ಹಾವಿನ ವಿಡಿಯೋವನ್ನು ಪರಿಶೀಲಿಸಲು ಗೂಗಲ್ ಸರ್ಚ್ ಮಾಡಿದಾಗ, ಇಂತಹದ್ದೇ ವಿಡಿಯೋ ಡಿಸ್ಕವರಿ UK ಎಂಬ ಯೂಟ್ಯೂಬ್ ಚಾನಲ್ ನಲ್ಲಿ ೫ ವರ್ಶಗಳ ಹಿಂದೆ ಪ್ರಕಟವಾಗಿರುವುದು ಕಂಡು ಬಂದಿದೆ.

  ಹಾರುವ ಹಾವು ಎಂದು ಪ್ರತಿಪಾದಿಸಿ ಹಂಚಿಕೊಂಡಿರುವ ವಿಡಿಯೋದಲ್ಲಿ ಕಂಡುಬರುವ ಹಾವಿನ ಹೆಸರು ಗೋಲ್ಡನ್ ಟ್ರೀ ಸ್ನೇಕ್. ಆದರೆ ಇದು ಹಾರುವುದಿಲ್ಲ. ಬದಲಿಗೆ ಒಂದು ಮರದಿಂದ ಮತ್ತೊಂದು ಮರಕ್ಕೆ  ನೆಗೆಯುತ್ತದೆ. ಅಂದರೆ ಎತ್ತರದ ಮರವೊಂದರಿಂದ ಅದಕ್ಕಿಂತ ಕಡಿಮೆ ಎತ್ತರದಲ್ಲಿ ಇರುವ ಮತ್ತೊಂದು ಮರಕ್ಕೆ ಗಾಳಿಯಲ್ಲಿ ಜಿಗಿಯುತ್ತದೆ. ಹಸಿರು, ಹಳದಿ, ಕಪ್ಪು, ಕೇಸರಿ ಹೀಗೆ ಬಣ್ಣ-ಬಣ್ಣವಾಗಿ ಇರುವಂಥ ಬಹಳ ಸುಂದರವಾದ, ವಿಶಾರಹಿತವಾದ ಹಾವು ಇದು. ನೆಲದಿಂದ ಎತ್ತರಕ್ಕೆ ಹಾರುವಂಥದ್ದಲ್ಲ. ಬದಲಿಗೆ ಎತ್ತರದ ಮರವೊಂದರಿಂದ ಮತ್ತೊಂದು ಕಡಿಮೆ ಎತ್ತರ ಇರುವ ಮರಕ್ಕೆ ಜಿಗುತ್ತದೆ ಎಂದು ಉರಗ ತಜ್ಞರು ಹೇಳುತ್ತಾರೆ.

ಒಟ್ಟಾರೆಯಾಗಿ ಹೇಳುವುದಾದರೆ, ಮರದಿಂದ ಮರಕ್ಕೆ ನೆಗೆಯುವ ಹಾವು ಇರುವುದು ಹೌದು. ಅದರ ಹೆಸರು ಗೋಲ್ಡನ್ ಟ್ರೀ ಸ್ನೇಕ್. ಕರ್ನಾಟಕದ ಪಶ್ಚಿಮ ಘಟ್ಟ ಬಿಹಾರ, ಒಡಿಶಾ, ಪಶ್ಚಿಮ ಬಂಗಾಲ, ಉತ್ತರ ಪ್ರದೇಶ, ಈಶಾನ್ಯ ಭಾರತದಲ್ಲಿ ಕಂಡುಬರುವ ಹಾವು ಕೆರೆ ಹಾವು. ವಾಸ್ತವವಾಗಿ ಆ ಹಾವು ಹಾರುವುದಿಲ್ಲ ಬದಲಿಗೆ ಸ್ವಲ್ಪ ದೂರಕ್ಕೆ ನೆಗೆಯುತ್ತದೆ. ಆದರೆ ಇದನ್ನೇ ಹಾರುವ ಹಾವು ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ. ಹಾಗಾಗಿ ಪೋಸ್ಟ್ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ.





ಹೆಚ್ಚಿನ ಮಾಹಿತಿಗಾಗಿ ಕೆಳಗಿರುವ ವಾಟ್ಸಪ್ಪ್ ಗ್ರೂಪ್ ಸೇರ್ಪಡೆಗೊಳ್ಳಿ




@@@@@@@@@@@@@@@@@@@@@@@@@






ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು