ನಿಮ್ಮ ಮನೆಯ ಆಸ್ತಿ ತೆರಿಗೆ ಆನ್ ಲೈನ್ ನಲ್ಲೆ ಚೆಕ್ ಮಾಡುವ ವಿಧಾನ ಇಲ್ಲಿದೆ.

 ನಿಮ್ಮ ಮನೆ ಅಥವಾ ಆಸ್ತಿ ತೆರಿಗೆ ಎಷ್ಟು ಬಾಕಿ ಇದೆ ಎಂಬುದನ್ನು ಕೇವಲ 1 ನಿಮಿಷದಲ್ಲಿ ಚೆಕ್ ಮಾಡುವ ವಿಧಾನ 

ದಿನದಿಂದ ದಿನಕ್ಕೆ ಆಧುನಿಕ ತಂತ್ರಜ್ಞಾನದ ಬಳಕೆ ನಮ್ಮ ಜೀವನದಲ್ಲಿ ಹೆಚ್ಚಿನ ಪ್ರಾಮುಖ್ಯತೆಯನ್ನು ಪಡೆದುಕೊಳ್ಳುತ್ತಲಿದೆ. ಸ್ಮಾರ್ಟ್ ಫೋನ್ ಒಂದು ಇದ್ದರೆ ಸಾಕು ಎಲ್ಲವನ್ನು ಕುಳಿತಲ್ಲಿಯೇ ಎಲ್ಲಾ ಮಾಹಿತಿಯನ್ನು ಪಡೆದುಕೊಳ್ಳಬಹುದು. ಬ್ಯಾಂಕ್ ವ್ಯವಹಾರಗಳನ್ನು ಮಾಡಬಹುದು, ವಸ್ತುಗಳನ್ನು ಖರೀದಿಸಬಹುದು, ಸರ್ಕಾರಿ ಸೌಲಭ್ಯಗಳ ಬಗ್ಗೆ ತಿಳಿದುಕೊಳ್ಳಬಹುದು ಹಾಗೂ ಅರ್ಜಿ ಸಲ್ಲಿಸಬಹುದು. ಹೀಗೆ ಹಲವಾರು ಕೆಲಸಗಳನ್ನು ಮೊಬೈಲ್ ನಿಂದಲೇ ಕುಳಿತಲ್ಲಿಯೇ ನಿಭಾಯಿಸಬಹುದಾಗಿದೆ.

ಕರ್ನಾಟಕ ಒನ್ ಕೇಂದ್ರಗಳ ಸ್ಥಾಪನೆಗೆ ಅರ್ಜಿ ಅಹ್ವಾನಿಸಲಾಗಿದೆ.

ಅಲ್ಲದೆ ಸರ್ಕಾರವು ರೈತರಿಗೆ ಹಾಗೂ ಜನಸಾಮಾನ್ಯರಿಗೆ ಇರುವಂತಹ ಯೋಜನೆಗಳ ಸೌಲಭ್ಯವನ್ನು ಪಡೆಯಲು ಮಧ್ಯವರ್ತಿಗಳ ಹಾವಳಿಯನ್ನು ತಪ್ಪಿಸುವ ಸಲುವಾಗಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸುವ ಮಾರ್ಗವನ್ನು ಜಾರಿಗೆ ತಂದಿದೆ. ಅದರಂತೆ ನಿಮ್ಮ ಮನೆಯ ತೆರಿಗೆ ಎಷ್ಟು? ಎಷ್ಟು ಬಾಕಿ ತೆರಿಗೆ ಪಾವತಿಸಬೇಕು ಎಂಬ ಎಲ್ಲ ಮಾಹಿತಿಯನ್ನು ಒಂದೇ ನಿಮಿಷದಲ್ಲಿ ಕುಳಿತ ಜಾಗದಲ್ಲಿಯೇ ನಿಮ್ಮ ಮೊಬೈಲ್ ಫೋನ್ ಬಳಸಿ ಆನ್ ಲೈನ್ ಮೂಲಕ ತಿಳಿದುಕೊಳ್ಳಬಹುದಾಗಿದೆ. ತಿಳಿಯುವ ವಿಧಾನವನ್ನು ಈ ಕೆಳಗೆ ವಿವರಿಸಲಾಗಿದೆ.

ಮನೆಯ ತೆರಿಗೆ (House Property Tax 2023)

ಮೊದಲನೆಯದಾಗಿ ಸರಕಾರದ ಮಾಹಿತಿ ಕಣಜ ಎಂಬ ವೆಬ್ ಸೈಟ್ ಅನ್ನು ತೆರೆಯಿರಿ. ಇದರಲ್ಲಿ ಹಲವಾರು ಸರ್ಕಾರದ ಸೌಲಭ್ಯ ಒದಗಿಸಲಾಗಿದೆ. ಮಾಹಿತಿ ಕಣಜ ವೆಬ್ ಪೇಜ್ ಓಪನ್ ಆದಾಗ ಇದರಲ್ಲಿ ಇಲಾಖೆಗಳು ಎಂಬುದರ  ಕ್ಲಿಕ್ ಮಾಡಿ ನಂತರ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯನ್ನು ಆಯ್ಕೆ ಮಾಡಬೇಕು. ನಂತರ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸೇವೆಗಳು ಎಂಬುದನ್ನು ಆಯ್ಕೆ ಮಾಡಿ ಅಲ್ಲಿ ಮನೆ ತೆರಿಗೆ ಸಂಗ್ರಹ ಮತ್ತು ಉಳಿತಾಯ ಆಯ್ಕೆ ಮೇಲೆ ಕ್ಲಿಕ್ ಮಾಡಿದಾಗ ಒಂದು ಬೇರೆ ಪೇಜ್ ಓಪನ್ ಆಗುತ್ತದೆ. 

ರಾಜ್ಯದಲ್ಲಿ 2007 ಗ್ರಾಮ ಲೆಕ್ಕಾಧಿಕಾರಿ ಹುದ್ದೆಗೆ ಅರ್ಜಿ ಆಹ್ವಾನ : ಇಲ್ಲಿದೆ ಸಂಪೂರ್ಣ ಮಾಹಿತಿ..........

ಅಲ್ಲಿ ನಿಮ್ಮ ಜಿಲ್ಲೆ, ತಾಲೂಕು, ಗ್ರಾಮ ಪಂಚಾಯಿತಿ, ಗ್ರಾಮ ಯಾವುದು ಎಂದು ಆಯ್ಕೆ ಮಾಡಿಕೊಳ್ಳಿ ನಂತರ ಸಲ್ಲಿಸಿ ಬಟನ್ ಮೇಲೆ ಕ್ಲಿಕ್ ಮಾಡಿದಾಗ ನೀವು ಆಯ್ಕೆ ಮಾಡಿರುವ ಜಿಲ್ಲೆ, ತಾಲೂಕು, ಗ್ರಾಮ ಪಂಚಾಯಿತಿ, ಗ್ರಾಮದಲ್ಲಿ ಎಷ್ಟು ಮನೆಗಳಿವೆ ಆ ಎಲ್ಲ ಮನೆಯ ಮಾಲೀಕರ ಹೆಸರು, ಸಂಖ್ಯೆ, ಆಸ್ತಿಯ ವಿವರ, ಆಸ್ತಿಯ ಐಡಿಯ ಕೊನೆಯ ನಾಲ್ಕು ಅಂಕಿಗಳು, ಯಾವ ವರ್ಷದ ಹಣ ಪಾವತಿಸಬೇಕು, ಎಷ್ಟು ಹಣ ಪಾವತಿಸಬೇಕಿದೆ, ಎಷ್ಟು ಬಾಕಿ ಇದೆ ಎಂಬುದನ್ನು ನೀವು ಇಲ್ಲಿ ತಿಳಿದುಕೊಳ್ಳಬಹುದು.

ನಿಮ್ಮ ಮನೆಯ ಮಾಲೀಕರ ಹೆಸರು, ಸಂಖ್ಯೆಯನ್ನು ಖಾತರಿ ಮಾಡಿಕೊಳ್ಳಿ ನಂತರ ಯಾವ ವರ್ಷದ ತೆರಿಗೆ ಹಣ ಪಾವತಿಸಬೇಕು ಎಷ್ಟು ಹಣ ಪಾವತಿಸಬೇಕು ಎಂಬುದರ ಬಗ್ಗೆ ನೀವು ಕುಳಿತಲ್ಲಿಯೇ ಮಾಹಿತಿ ತಿಳಿದುಕೊಂಡು ಸಂಬಂಧಿಸಿದ ತೆರಿಗೆ ಹಣ ಪಾವತಿಸಬಹುದಾಗಿದೆ. ಹೇಗೆ ಮೊಬೈಲ್ ಮೂಲಕ ಮಾಹಿತಿ ಪಡೆಯುವದರಿಂದ ಮಧ್ಯವರ್ತಿಗಳ ಹಾವಳಿಯಿಂದ ತಪ್ಪಿಸಿಕೊಳ್ಳಬಹುದು ಹಾಗೂ ಇಲಾಖೆಗೆ ಹೋಗಿ ಮಾಹಿತಿ ಪಡೆಯುವ ಕಷ್ಟ ತಪ್ಪಿದಂತಾಗಿದೆ.







ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು