14 ನೇ ಕಂತಿನ ಹಣ ನಿಮ್ಮ ಖಾತೆಗೆ ಯಾವಾಗ ಜಮೆ ಆಗುತ್ತಿದೆ ಅನ್ನುವುದರ ಸಂಪೂರ್ಣ ಮಾಹಿತಿ ಇಲ್ಲಿದೆ.
ಪಿ ಎಂ ಕಿಸಾನ್ ಯೋಜನೆಯ 14 ನೇ ಕಂತು
ಕೇಂದ್ರ ಸರ್ಕಾರ ರೈತರ ಬ್ಯಾಂಕ್ ಖಾತೆಗಳಿಗೆ ಪಿಎಂ ಕಿಸಾನ್ ಸಮ್ಮಾನ್ ನಿಧಿಯ ೧೩ ನೇ ಕಂತನ್ನು ಜಮಾ ಮಾಡಿದೆ, ಫೆಬ್ರುವರಿ 27 ರಂದು ಪ್ರಧಾನಿ ನರೇಂದ್ರ ಮೋದಿ ಅವರು 8 ಕೋಟಿ ರೈತರಿಗೆ 2 ಸಾವಿರದಂತೆ ರೈತರ ಖಾತೆಗಳಿಗೆ ಯೋಜನೆಯ 16,800 ಕೋಟಿ ರೂಪಾಯಿ ಜಮಾ ಮಾಡಿದ್ದಾರೆ.
ಲಕ್ಷಾಂತರ ರೈತರು ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 14ನೇ ಕಂತನ್ನು ಶೀಘ್ರದಲ್ಲೇ ಸ್ವೀಕರಿಸಲಿದ್ದಾರೆ. 14 ನೇ ಕಂತಿನ ಹಣ ಯಾವಾಗ ಬರುತ್ತೆ ದಿನಾಂಕ ಕನ್ಫರ್ಮ್ ಇಲ್ಲ.
ಪಿ ಎಂ ಕಿಸಾನ್ ಯೋಜನೆಯಡಿಯಲ್ಲಿ ಪ್ರತಿ ವರ್ಷಕ್ಕೆ 6,000 ರೂ. ಮೊತ್ತವನ್ನು ಮೂರೂ ಮಾಸಿಕ ಕಂತುಗಳಲ್ಲಿ ತಲಾ 2,000 ರೂ ನಂತೆ ನೇರವಾಗಿ ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ಬಿಡುಗಡೆ ಮಾಡಲಾಗುತ್ತದೆ.
ಈಗಿನ ನಿಮ್ಮ್ ಪಿ ಎಂ ಕಿಸಾನ್ ನ ಸ್ಟೇಟಸ್ ಪರಿಶೀಲನೆ :
ಪಿಎಂ ಕಿಸಾನ್ ಅಧಿಕೃತ ವೆಬ್ ಸೈಟ್ pmkisan.gov.in ಗೆ ಹೋಗಿ ಇಲ್ಲಿ ನೀವು ಫಾರ್ಮರ್ ಕಾರ್ನರ್ ಎಂದು ಬರೆದಿರುವುದನ್ನು ಕಾಣುತ್ತೀರಿ.
ಅದರ ಮೇಲೆ ಕ್ಲಿಕ್ ಮಾಡಿ ಇಲ್ಲಿ ಆಧಾರ್ ಸಂಖ್ಯೆ ಖಾತೆ ಸಂಖ್ಯೆ ಅಥವಾ ಫೋನ್ ಸಂಖ್ಯೆಯನ್ನು ನಮೂದಿಸಿ ನಂತರ ಕ್ಯಾಪ್ಚ್ಯಾ ನಮೂದಿಸಿ.
ನೀವು ಇದನ್ನು ಮಡಿದ ತಕ್ಷಣ ನಿಮ್ಮ ಖಾತೆಯ ಸಂಪೂರ್ಣ ಮಾಹಿತಿಯು ನಿಮ್ಮ ಮುಂದೆ ಕಾಣಿಸಿಕೊಳ್ಳುತ್ತದೆ.ನಿಮ್ಮದಾಖಲೆ ಗಳು ಮತ್ತು ವಿವರಗಳನ್ನು ಇಲ್ಲಿ ಪರಿಶೀಲಿಸಿ. ಯಾವುದೇ ಮಾಹಿತಿಯು ತಪ್ಪಾಗಿದ್ದರೆ. ಅದನ್ನು ಸರಿಪಡಿಸಿ. ಯಾವುದೇ ದಾಖಲೆಯ ಕಾರಣದಿಂದಾಗಿ ಅರ್ಜಿಯು ಸ್ಥಗಿತಗೊಂಡಿದ್ದರೆ, ಆ ದಾಖಲೆಯನ್ನು ಆನ್ಲೈನ್ ನಲ್ಲಿಯೂ ಅಪ್ಲೋಡ್ ಮಾಡಬಹುದು.
ಹಣ ಲಭ್ಯವಿಲ್ಲದಿದ್ದರೆ, ಈ ಪೋರ್ಟಲ್ ಹೊರತುಪಡಿಸಿ, ನೀವು ಪಿಎಂ ಕಿಸಾನ್ ಸಹ್ಯವಾಣಿ ಸಂಖ್ಯೆಗೆ ಕರೆ ಮಾಡುವ ಮೂಲಕ ಸಹಾಯ ಪಡೆಯಬಹುದು.
ಹೆಚ್ಚಿನ ಮಾಹಿತಿಗಾಗಿ ಕೆಳಗಿರುವ ವಾಟ್ಸಪ್ಪ್ ಗ್ರೂಪ್ ಸೇರ್ಪಡೆಗೊಳ್ಳಿ
@@@@@@@@@@@@@@@@@@@@@@@@@
Tags
Govt.scheme