ವಿಶ್ವ ಸಂಸ್ಥೆಯಲ್ಲಿ ಕಾಂತಾರ ಚಿತ್ರದ ನಟ ರಿಷಬ್ ಶೆಟ್ಟಿ ಮಾತನಾಡಿದರು.

 ಇದೊಂದು ಕಾರಣಕ್ಕೆ ವಿಶ್ವಸಂಸ್ಥೆಯಲ್ಲಿ ರಿಷಬ್ ಭಾಷಣ 12 ಸೆಕೆಂಡಿಗೆ ಸ್ಥಗಿತ.


ಲೇಬರ್ ಕಾರ್ಡ್ ತಾಯಿ-ಮಗು ಸಹಾಯಹಸ್ತ

ನಟ, ನಿರ್ದೇಶಕ ರಿಷಬ್ ಶೆಟ್ಟಿಯವರು ನಿನ್ನೆ (ಮಾರ್ಚ್ 16) ನಡೆದ ವಿಶ್ವ ಸಂಸ್ಥೆಯ (UN Anual Meeting) ವಾರ್ಷಿಕ ಸಭೆಯಲ್ಲಿ ಭಾಗವಹಿಸಿ ಪರಿಸರ ಸಂರಕ್ಷಣೆ ಕುರಿತು ಕನ್ನಡದಲ್ಲಿಯೇ ಮಾತನಾಡಿದ್ದಾರೆ. ಹೌದು ತಮ್ಮ ಭಾಷಣವನ್ನು ಟ್ವಿಟರ್ ಖಾತೆಯಲ್ಲಿಯೂ ರಿಷಬ್ ಹಂಚಿಕೊಂಡಿದ್ದಾರೆ.

ಇನ್ನು ಕಳೆದ ಕೆಲ ದಿನಗಳಿಂದ ಜಾಗತಿಕ್ ಸಮಸ್ಯೆಗಳನ್ನು ವಿಶ್ವಸಂಸ್ಥೆ ತನ್ನ ವಾರ್ಷಿಕ ಸಭೆಯಲ್ಲಿ ಚರ್ಚಿಸುತ್ತಿದ್ದು ವಿಶ್ವದ ಹತ್ತಿ ಹಲವು ದೇಶಗಳ ನಾಯಕರು ಈ ಸಭೆಯಲ್ಲಿ ಪಾಲ್ಗೊಂಡಿದ್ದಾರೆ. ಇನ್ನು ಸಮಸ್ಯೆಗಳ ಸರಮಾಲೆಯನ್ನು ಬಿಚ್ಚಿಡುತ್ತಿದ್ದು ಅದೇ ರೀತಿಯಾಗಿ ಕರ್ನಾಟಕದಿಂದ ಕಾಂತಾರ ಚಿತ್ರದ ನಿರ್ದೇಶಕ ಮತ್ತು ನಟ ರಿಷಬ್ ಶೆಟ್ಟಿ ಸಹ ಈ ವಾರ್ಷಿಕ ಸಭೆಯಲ್ಲಿ ಭಾಗವಹಿಸಿದ್ದಾರೆ. 

 

ರಿಷಬ್ ಶೆಟ್ಟಿಯ ಕನ್ನಡ ಭಾಷಣ 

ಪರಿಸರ ಸಂರಕ್ಷಣೆಗಾಗಿ ಕಳೆದ ಒಂದು ದಶಕಕ್ಕಿಂತ ಹೆಚ್ಚು ಅವಧಿಯಿಂದ ತಳಮಟ್ಟದಿಂದ ಕಾರ್ಯನಿರ್ವಹಿಸುತ್ತಿರುವ ಭಾರತದ ಏಕೋಪಾಸ್ ಪ್ರತಿನಿಧಿಯಾಗಿ ನಾನು ಬಂದಿದ್ದೇನೆ. ಪರಿಸರ ಸುಸ್ಥಿರತೆ ಕಾಪಾಡುವುದು ಸದ್ಯದ ಅಗತ್ಯ. ಒಬ್ಬ ನಟ-ನಿರ್ದೇಶಕನಾಗಿ ತಳಮಟ್ಟದಲ್ಲಿ ಪರಿಣಾಮ ಬಿರಬೇಕು ಎಂಬುದೇ ನನ್ನ ಉದ್ದೇಶ. ಪರಿಸರ ಸುಸ್ಥಿರತೆಯ ಶೋಧನೆಗೆ ಜಾಗತಿಕ ಏಜೆನ್ಸಿಗಳು ಹಾಗೂ ಸರ್ಕಾರದ ಸಂಸ್ಥೆಗಳು ಮುಂಚೂಣಿಯಲ್ಲಿವೆ.

ಜೊತೆಗೆ ಭಾರತದಲ್ಲಿ ನಾಗರೀಕ ಸಮಾಜ ಕೂಡ ಸ್ಥಳೀಯ ಪರಿಸರ ರಕ್ಷಣೆಯ ಕಾರ್ಯದಲ್ಲಿ ತೊಡಗಿದೆ. ಇಂತಹ ಪರಿಸರ ಪ್ರಜ್ಞೆಗೆ ಸಿನಿಮಾ ಎಂಬ ಮಾಧ್ಯಮವು ಕನ್ನಡಿ ಹಿಡಿಯುತ್ತದೆ ಹಾಗೂ ವಾಸ್ತವವನ್ನು ಜಗತ್ತಿಗೆ ತೋರಿಸುವ ಪ್ರಮುಖ ಪಾತ್ರ ನಿರ್ವಹಿಸುತ್ತದೆ. ಹಲವಾರು ಭಾರತೀಯ ಸಿನಿಮಾಗಳು ಕಾಲ್ಪನಿಕ ಹಾಗೂ ವಾಸ್ತವ ಕತೆಗಳ ಮೂಲಕ ಜಾಗೃತಿ ಮೂಡಿಸುವೆ ಎಂಬುದು ನಮ್ಮ ಹೆಮ್ಮೆ.

ಇನ್ನು ಇತ್ತೀಚಿನ ನನ್ನ ಕಾಂತಾರ ಸಿನಿಮಾದಲ್ಲಿ ಸಹ ನಿಸರ್ಗದ ಮಡಿಲಲ್ಲಿ ಮನುಷ್ಯನ ಜೀವನ ಜನರ ಸ್ಥಳೀಯ ನಂಬಿಕೆ ಆಚರಣೆ ಕುರಿತ ಪ್ರಮುಖ ಅಂಶಗಕು ಅಡಕವಾಗಿವೆ. ಪರಿಸರದ ಜೊತೆ ನಾವು ಹೊಂದಿರುವ ನಂಟು ಅದು ನಮ್ಮ ಮೇಲೆ ಬೀರುವ ಪರಿಣಾಮ ಸಹಬಾಳ್ವೆ ಸಾಂಸ್ಕೃತಿಕ ಹಿರಿಮೆಗಳು ಹೇಗೆ ಪರಸ್ಪರ ಅವಲಂಬಿಸಿದೆ ಎಂಬುದನ್ನು ಕಾಂತಾರ ಸಿನಿಮಾ ತೋರಿಸಿದೆ.

ಸ್ಥಳೀಯ ಪರಿಸರ ರಕ್ಷಣೆ  ಸರ್ಕಾರದ ಪಾತ್ರ ಪರಿಸರಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಸಮುದಾಯಗಳ ಪ್ರಾಮುಖ್ಯತೆಗಳನ್ನು ಸಿನಿಮಾ ಎಳೆ ಎಳೆಯಾಗಿ ಬಿಚ್ಚಿಟ್ಟಿದೆ. ಕಾಂತರಾದಂತಹ ಸಿನಿಮಾಗಳು ವಾಸ್ತವವನ್ನು ತೆರೆದಿಡುವ ಜೊತೆಗೆ ಪರಿಸರದ ಸವಾಲುಗಳನ್ನು ಎದುರಿಸಲು ಸಮಸ್ಯೆಗಳನ್ನು ಬಗೆಹರಿಸಲು ಜನರಿಗೆ ಸ್ಫೂರ್ತಿ ನೀಡುತ್ತವೆ.ಭಾವನೆಗಳನ್ನು ಜಾಗೃತಗೊಳಿಸಿ ಪರಿಸರ ರಕ್ಷಣೆಯತ್ತ ಜನ ತೆರಳುವಂತೆ ಮಾಡುತ್ತವೆ. ಇಂತಹ ಪ್ರಯತ್ನ ಪರಿಶ್ರಮವನ್ನು ಗುರುತಿಸಬೇಕು ಪ್ರೋತ್ಸಾಹಿಸಬೇಕು ಎಂಬುದಾಗಿ ಇಲ್ಲಿ ನೆರೆದಿರುವ ಎಲ್ಲರಲ್ಲೂ ಮನವಿ ಮಾಡಿಕೊಳ್ಳುತ್ತೇನೆ ಎಂದಿದ್ದಾರೆ ರಿಷಬ್.


ಆದರೆ, ಅಚ್ಚರಿ ವಿಚಾರ ಏನೆಂದರೆ, ರಿಷಬ್ ಶೆಟ್ಟಿ ಭಾಷಣವನ್ನು ವಿಶ್ವ ಸಂಸ್ಥೆ ಅರ್ಧಕ್ಕೆ ತಡ ಹಿಡಿದಿದೆ. ಅದು ಯಾಕೆ ಎಂದು ನೋಡುವುದಾದರೆ, ಸಾಮಾನ್ಯವಾಗಿ ಈ ಸಭೆಯಲ್ಲಿ ಮಾತನಾಡಲಿ ಒಬ್ಬ ವ್ಯಕ್ತಿಗೆ ಒಂದುವರೆ ನಿಮಿಷ ಅವಕಾಶ ಮಾತ್ರ ನೀಡಲಾಗುತ್ತದೆ. ಇಷ್ಟರಲ್ಲೇ ತಮ್ಮ ವಿಚಾರವನ್ನು ತಲುಪಿಸಬೇಕು. ಇಲ್ಲಿ ಯಾವುದೇ ಭಾಷೆಯಲ್ಲಿ ಕೂಡ ಮಾತನಾಡಬಹುದು. ವಿಶ್ವ ಸಂಸ್ಥೆಯ ಅನುಮೋದಿತ ಭಾಷೆಗಳಿಗೆ ಅದನ್ನು ಟ್ರಾನ್ಸ್ಲೇಟ್ ಮಾಡಲಾಗುತ್ತದೆ. 

ಇಲ್ಲಿ ಬರುವ ಬಹುತೇಕರು ಇಂಗ್ಲಿಷ್ ನಲ್ಲಿ ಮಾತನಾಡುತ್ತಾರೆ. ಆದರೆ, ರಿಷಬ್ ಕನ್ನಡದಲ್ಲಿ ಮಾತನಾಡಿ ಹೆಮ್ಮೆ ತಂದಿದ್ದಾರೆ. ಯಾವುದೇ ಭಯವಿಲ್ಲದೆ, ಭಾಷಣ ಪ್ರಾರಂಭಿಸಿದ ರಿಷಬ್ ಸಮಯ ಕಡಿಮೆ ಇರುವ ಕರಣ ವೇಗವಾಗಿ ಭಾಷಣ ಮಾಡುತ್ತಿದ್ದರು. ಆದರೆ, ಅವರು ವೇಗವಾಗಿ ಮಾತನಾಡುತ್ತಿದ್ದ ಕಾರಣ ಅವರ ಮಾತು ಬೇರೆ ಭಾಷೆಗಳಿಗೆ ಟ್ರಾನ್ಸ್ಲೇಟ್ ಆಗಲಿಲ್ಲ.
ಆದ ಕಾರಣ ಅವರ ಭಾಷಣವನ್ನು ಅರ್ಧಕ್ಕೆ ಮೊಟಕುಗೊಳಿಸಲಾಯಿತು. ನಂತರ ವಿಚಾರ ತಿಳಿದ ರಿಷಬ್ ಕ್ಷಮೆ ಕೂಡ ಕೋರುತ್ತಾರೆ. ಆದರೆ, ಟ್ರಾನ್ಸ್ಲೇಟ್ ಆಗದ ಕಾರಣ ರಿಷಬ್ ಭಾಷಣ ನಿಲ್ಲಿಸಿ ಬೇರೆ ಸ್ಪೀಕರ್ ಗೆ ಅವಕಾಶ ಮಾಡಿಕೊಡಲಾಗುತ್ತದೆ. ಆದರೆ, ಸಿಕ್ಕ ಸಮಯದಲ್ಲಿ ರಿಷಬ್ ತಮ್ಮ ವಿಚಾರವನ್ನು ತಲುಪಿಸಿ ಕನ್ನಡದಲ್ಲಿ ಮಾತನಾಡಿ ಕನ್ನಡಕ್ಕೆ ಹೆಮ್ಮೆ ತಂದಿದ್ದಾರೆ ಎನ್ನಬಹುದು.
 



ಹೆಚ್ಚಿನ ಮಾಹಿತಿಗಾಗಿ ಕೆಳಗಿರುವ ವಾಟ್ಸಪ್ಪ್ ಗ್ರೂಪ್ ಸೇರ್ಪಡೆಗೊಳ್ಳಿ




@@@@@@@@@@@@@@@@@@@@@@@@@




























ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು