ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ.......ಇವೆಲ್ಲ ಖಚಿತ!
🌟 ಪ್ರತಿ ಕುಟುಂಬದ ವಿದ್ಯುತ್ ಬಿಲ್, ಫೋನ್ ಬಿಲ್, ವಾಟರ್ ಬಿಲ್ ಉಚಿತ
🌟 ಮಹಿಳೆಯರಿಗೆ "ಬ್ಯೂಟಿ ಭತ್ಯೆ" ಅಂತ ತಿಂಗಳಿಗೆ ಬ್ಯೂಟಿ ಪಾರ್ಲರ್ ವೆಚ್ಚಕ್ಕಾಗಿ ರೂ 6,000 ನೀಡಲಾಗುವುದು.
🌟ಕೆಲಸಕ್ಕೆ ಹೋಗುವ ಗಂಡಸರ ಕೆಲಸ ಬಿಡಿಸಿ ಅವರಿಗೆ ಪ್ರತಿ ತಿಂಗಳು 20 ಸಾವಿರ ಗೌರವ ಸಂಬಳವನ್ನು ಉಚಿತವಾಗಿ ನಮ್ಮ ಸರ್ಕಾರ ನೀಡುತ್ತದೆ.
🌟 ಸಸ್ಯಾಹಾರಿಗಳಿಗೆ ಮಾಂಸದ ವೆಚ್ಚಕ್ಕಾಗಿ ಪ್ರತಿ ತಿಂಗಳು ಒಂದು ಕುಟುಂಬಕ್ಕೆ "ಮೈ ಖಾವುಂಗಾ" ಯೋಜನೆಯ ಅಡಿಯಲ್ಲಿ ಮೂರೂ ಸಾವಿರ ರೂಪಾಯಿಗಳನ್ನು ಉಚಿತವಾಗಿ ನೀಡಲಾಗುವುದು
🌟 "ಕುಡಿಯಿರಿ ಕುಡಿಸಿರಿ" ಯೋಜನೆಯ ಅಡಿಯಲ್ಲಿ ಕುಟುಂಬದ ಯಜಮಾನನಿಗೆ ವಾರಕ್ಕೆ ಎರಡು ಬಾಟಲ್ ಉಚಿತವಾಗಿ ನೀಡಲಾಗುವುದು.
🌟 "ಭೂಖ್ ಮಿಟಾದೊ" ಯೋಜನೆಯ ಮೂಲಕ ತಿಂಗಳಿಗೊಮ್ಮೆ ಪ್ರತಿ ಕುಟುಂಬಕ್ಕೆ ಅಕ್ಕಿ ಬೇಳೆ ಎಣ್ಣೆ ಸಕ್ಕರೆ ಹಾಲು ತುಪ್ಪ ಇರುವ ಕಿಟ್ ಉಚಿತವಾಗಿ ನೀಡಲಾಗುತ್ತದೆ.
🌟 ಉದ್ಯೋಗ ಮಾಡಲು ಆಸಕ್ತಿ ಇಲ್ಲದವರನ್ನು ವಿಶೇಷವಾಗಿ ಗುರುತಿಸಿ ಅವರಿಗೆ "ಆರಾಮ್ ಕರೋ" ಯೋಜನೆಯ ಅಡಿಯಲ್ಲಿ ತಿಂಗಳಿಗೆ 7,000 ನಿರುದ್ಯೋಗ ಭತ್ಯೆ ಹಾಗೂ ತಿಂಗಳಿಗೊಮ್ಮೆ ಗೋವಾ ಪ್ರವಾಸಕ್ಕೆ ಹೋಗಲು ಉಚಿತ ಕೂಪನ್ ನೀಡಲಾಗುತ್ತದೆ.
🌟 ಮನೆಯಲ್ಲಿ ಮಲಗುವುದಕ್ಕೆ ಅನುಕೂಲ ಇಲ್ಲದವರಿಗೆ ಸರ್ಕಾರದ ವತಿಯಿಂದ ಪ್ರತಿ ಜಿಲ್ಲೆಯಲ್ಲಿ ಮೆತ್ತನೆಯ ಹಾಸಿಗೆ ಹೊಂದಿರುವ ಹತ್ತು ಸಾವಿರ "ನಿದ್ರಾ ಕೇಂದ್ರ"ಗಳನ್ನೂ ತೆರೆಯಲಾಗುತ್ತದೆ. ಅಲ್ಪಸಂಖ್ಯಾತ ಹಾಗೂ ಹಿಂದುಳಿದವರಿಗೆ ಮೀಸಲಾಗಿರುವ ನಿದ್ರಾ ಕೇಂದ್ರಗಳಲ್ಲಿ ಏ.ಸಿ ಯನ್ನು ಅಳವಡಿಸಲಾಗುತ್ತದೆ.
🌟 ಸರ್ಕಾರೀ ನೌಕರರ ಕೆಲಸದ ಒತ್ತಡವನ್ನು ಕಡಿಮೆ ಮಾಡಲು ಕೆಲಸದ ಸಮಯವನ್ನು ದಿನದಲ್ಲಿ ಕೇವಲ ನಾಲ್ಕು ಗಂಟೆಗಳಿಗೆ ಇಳಿಸಲಾಗುವುದು. ಹಾಗೂ ಪ್ರತಿದಿನ ಕಚೇರಿಗಳಲ್ಲಿ ಎರಡು ಗಂಟೆ "ಹರಟೆ ಸಮಯ" ಎಂದು ಮೀಸಲು ಇಡಲಾಗುವುದು.
🌟 ಸೋಮಾರಿತನವನ್ನು ಪ್ರೋತ್ಸಾಹಿಸುವುದಕ್ಕಾಗಿ ಪ್ರತಿ ವರ್ಷ ಸಾವಿರ ಸೋಮಾರಿಗಳನ್ನು ಆಯ್ಕೆ ಮಾಡಿ "ಸೋಮಾರಿ ನಾಗರೀಕ" ಪ್ರಶಸ್ತಿಯನ್ನು ನೀಡಲಾಗುತ್ತದೆ. ಪ್ರಶಸ್ತಿ ಸಮಾರಂಭಕ್ಕೆ ಬರುವುದಕ್ಕೂ ಸಾಧ್ಯವಾಗದ ಸೋಮಾರಿಗಳಿಗೆ ಸರ್ಕಾರವೇ ಅವರ ಮನೆ ಬಾಗಿಲಿಗೆ ಹೋಗಿ ಸನ್ಮಾನವನ್ನು ಮಾಡುವ ಸೌಲಭ್ಯವನ್ನು ಕಲ್ಪಿಸಲಾಗುತ್ತದೆ.
ಈ ಎಲ್ಲಾ ಉಚಿತ ಖಚಿತ ಸೌಲಭ್ಯಗಳನ್ನು ನೀಡುವುದಾಗಿ ಮನೆಮನೆಗೂ ಗ್ಯಾರಂಟೀ ಕಾರ್ಡ್ ಗಳನ್ನೂ ತಲುಪಿಸಲಾಗುವುದು. ಎಲ್ಲರು ನಮಗೆ ಮತ ನೀಡಿ ನಮ್ಮನ್ನು ಗೆಲ್ಲಿಸಿ, ದೇಶವನ್ನು ಮಾರಾಟ ಮಾಡುವುದಕ್ಕೆ ಸಹಕರಿಸಿ!!!
ಹಾಗೆ ಸುಮ್ಮನೆ ಕಾಮಿಡಿ ಕಾಮಿಡಿ ಕಾಮಿಡಿ ...........
ಹೆಚ್ಚಿನ ಮಾಹಿತಿಗಾಗಿ ಕೆಳಗಿರುವ ವಾಟ್ಸಪ್ಪ್ ಗ್ರೂಪ್ ಸೇರ್ಪಡೆಗೊಳ್ಳಿ
@@@@@@@@@@@@@@@@@@@@@@@@@
Tags
Govt.scheme
ಇದ್ದವರು ಕೊಟ್ಟ 15 ಲಕ್ಷ ನೇ ಮುಗಿದಿಲ್ಲ ಸ್ವಾಮಿ... ಪುನಃ ಇದ್ದವರು ಮೀಸಲಾತಿನು ಕೊಟ್ಟವ್ರೆ 🙆♂️🙆♂️
ಪ್ರತ್ಯುತ್ತರಅಳಿಸಿ