ಪ್ರಗತಿ ಬಡಿಗೇರ್ ಹಾಡಿದ ' ನೀನೇ ಮೊದಲು ನೀನೇ ಕೊನೆ ' ಹಾಡಿಗೆ ಮೌನರಾಗಿ ಕುಳಿತ ಜಡ್ಜ್ ಗಳು....

 ಪ್ರಗತಿ ಬಡಿಗೇರ್ ಹಾಡಿದ ' ನೀನೇ ಮೊದಲು ನೀನೇ ಕೊನೆ ' ಹಾಡಿಗೆ ಮೌನರಾಗಿ ಕುಳಿತ ಜಡ್ಜ್ ಗಳು.... 



ಕಿರುತೆರೆ ಲೋಕದಲ್ಲಿ ಈಗಾಗಲೇ ಸಾಕಷ್ಟು ರಿಯಾಲಿಟಿ ಶೋಗಳು ಪ್ರಸಾರವಾಗಿ ಅನೇಕ ಪ್ರತಿಭೆಗಳಿಗೆ ವೇಧಿಕೆಯಾಗಿದೆ. ಹೌದು, ಅಂದಹಾಗೆ ಶೋಗಳಾದ ಹಾಡು, ಡ್ಯಾನ್ಸ್, ಗೇಮ್ ಹಾಗೂ ಕುಕಿಂಗ್ ಶೋಗಳು ವಾಹಿನಿಗೆ ಟಿ ಆರ್ ಪಿ ಹೆಚ್ಚಿಸುತ್ತಿದೆ ಎನ್ನುವುದರಲ್ಲಿ ಯಾವುದೇ ಸಂದೇಹವಿಲ್ಲ. ಅಷ್ಟೇ ಅಲ್ಲದೆ, ಪ್ರತಿಭೆಯಿದ್ದು ಅವಕಾಶಕ್ಕಾಗಿ ಕಾಯುವ ಅನೇಕ ಹಳ್ಳಿ ಪ್ರತಿಭೆಯನ್ನು ಗುರುತಿಸಿ ಒಂದೊಳ್ಳೆ ವೇಧಿಕೆಯನ್ನು ಕಲ್ಪಿಸಿಕೊಡುವಲ್ಲಿ ಶೋಗಳ ಪಾತ್ರ ಅಗಾಧವಾಗಿದೆ.

ನಿಮ್ಮ ಮನೆಯ ಆಸ್ತಿ ತೆರಿಗೆ ಆನ್ ಲೈನ್ ನಲ್ಲೆ ಚೆಕ್ ಮಾಡುವ ವಿಧಾನ ಇಲ್ಲಿದೆ.

ಈ ವೇದಿಕೆಗಳು ಪ್ರತಿಭೆಗಳಿಗೆ ಹೇಗೆ ಉಪಯೋಗವಾಗಿದೆಯೋ ಅದೇ ರೀತಿ, ಕಿರುತೆರೆ ಪ್ರೇಕ್ಷಕರಿಗೂ ಮನರಂಜನೆ ನೂರಕ್ಕೆ ನೂರು ಪಟ್ಟು ಕೊಡುತ್ತದೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಅದರ ಜೊತೆಗೆ ಕಷ್ಟ ಪಟ್ಟು ಮೇಲೆ ಬಂದಿರುವ ಸ್ಪರ್ಧಿಯನ್ನು ಹೈಟ್ ಲೈಟ್ ವಾಹಿನಿಯು ಟಿ ಆರ್ ಪಿ ಹೆಚ್ಚಿಸಿಕೊಳ್ಳುವುದು ಒಂದೆಡೆಯಾದರೆ ಇನ್ನೊಂದೆಡೆ ಸ್ಪರ್ಧಿಗೆ ನೇಮ್ ಫೇಮ್ ಜೊತೆಗೆ ಇನ್ನಿತರ ಅವಕಾಶಗಳನ್ನು ತೆರೆದು ಕೊಳ್ಳುವಂತೆ ಮಾಡುತ್ತದೆ. ಪ್ರತಿಬಾರಿಯೂ ಹೊಸ ಹೊಸ ರಿಯಾಲಿಟಿ ಶೋಗಳು ಹಾಗೂ ಧಾರಾವಾಹಿಗಳ ಮೂಲಕ ಕಿರುತೆರೆ ಪ್ರೇಕ್ಷಕರ ಮನೆ ಹಾಗೂ ಮನ ತಲುಪುವ ಕೆಲಸವನ್ನು ಮಾಡುತ್ತಿದೆ.

ವಿಡಿಯೋ ನೋಡಿ 




ಈಗಾಗಲೇ ಕನ್ನಡ ಕಿರುತೆರೆ ಲೋಕದಲ್ಲಿ ಬಿಗ್ ಬಾಸ್, ಸರಿಗಮಪ, ಕಾಮಿಡಿ ಕಿಲಾಡಿಗಳು, ಡ್ರಾಮಾ ಜೂನಿಯರ್ಸ್, ಗೋಲ್ಡನ್ ಗ್ಯಾಂಗ್, ಡಿಕೇಡಿ, ಸಿಕೆಡಿ ಸೇರಿದಂತೆ ಡ್ಯಾನ್ಸ್ ಶೋಗಳು, ಟಾಕ್ ಶೋಗಳನ್ನು ಪ್ರಸಾರವಾಗಿವೆ. ಜಿ ಕನ್ನಡ ವಾಹಿನಿಯು ಕೂಡ ಮನೋರಂಜನೆಯ ವಿಚಾರದಲ್ಲಿ ಎತ್ತಿದ ಕೈ ಎನ್ನಬಹುದು. ಜಿ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಸರಿಗಮಪ ಲಿಟಲ್ ಚಾಂಪ್ಸ್ ಸೀಸನ್ 19 ಎಲ್ಲರ ಅಚ್ಚು ಮೆಚ್ಚಿನ ಶೊವಾಗಿದೆ. ಸರಿಗಮಪ ಷೋ 18 ಸೀಸನ್ ಗಳನ್ನು ಯಶಸ್ವಿಯಾಗಿ ಪೂರೈಸಿದೆ. 

ಕರ್ನಾಟಕ ಒನ್ ಕೇಂದ್ರಗಳ ಸ್ಥಾಪನೆಗೆ ಅರ್ಜಿ ಅಹ್ವಾನಿಸಲಾಗಿದೆ.

ಸದ್ಯಕ್ಕೆ 19 ನೇ  ಸೀಸನ್ ಮೂಲಕ ಮತ್ತೆ ಪ್ರೇಕ್ಷಕರ ಮುಂದೆ ಬಂದಿದ್ದು, ಪ್ರತಿ ವಾರವು ವಿಶೇಷತೆಗಳನ್ನು ಹೊತ್ತುಕೊಂಡು ಪ್ರೇಕ್ಷಕರ ಮುಂದೆ ಬರುತ್ತದೆ. ಈ ವಾರದ ಸಂಚಿಕೆ ಅಪ್ಪಟ     ಮುಗ್ದ ಹಾಗೂ ಹಳ್ಳಿ ಪ್ರತಿಭೆಯಾದ ಪ್ರಗತಿ 'ನೀನೇ ಮೊದಲು ನೀನೇ ಕೊನೆ' ಹಾಡು ಹಾಡಿ ತೀರ್ಪುಗಾರರ ಮನಸ್ಸು ಗೆದ್ದುಕೊಂಡಿದ್ದಾಳೆ. ಈ ವಿಡಿಯೋ ತುಣುಕನ್ನು ಜಿ ಕನ್ನಡ ವಾಹಿನಿಯು ತನ್ನ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಶೇರ್ ಮಾಡಿಕೊಂಡು ನೀನೇ ಮೊದಲು ನೀನೇ ಕೊನೆ ಹಾಡು ಹಾಡಿ ಮೋಡಿ ಮಾಡಿದ ಪ್ರಗತಿ ಬಡಿಗೇರ್ ಎಂದು ಬರೆದುಕೊಂಡಿದೆ.


































ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು