Dr. Bro ಗೆ ಪ್ಲೆ ಬಟನ್ : ಚಿನ್ನನೇ ಅಲ್ಲ ಗುರು ಎಂದು ಅಸಲಿ ಸತ್ಯ ಬಿಚ್ಚಿಟ್ಟ ಗಗನ್
'ನಮಸ್ಕಾರ ದೇವ್ರು' ಎಂದು ಸೋಷಿಯಲ್ ಮೀಡಿಯಾ ಮೂಲಕ ಜನರಿಗೆ ದೇಶ, ವಿದೇಶ ಪರಿಚಯ ಮಾಡಿಸುವ ಗಗನ್ ಶ್ರೀನಿವಾಸ್ ಉರ್ಫ್ ಡಾಕ್ಟರ್ ಬ್ರೋ ಗೆ ಯೂಟ್ಯೂಬ್ ಸಂಸ್ಥೆ ಗೋಲ್ದನ್ ಪ್ಲೇ ಬಟನ್ ಕೊಟ್ಟಿದೆ. ಒಂದು ಲಕ್ಷ ಫಾಲೋವರ್ಸ್ ಆಗಿದ್ದಕ್ಕೆ ಸಿಲ್ವರ್ ಬಟನ್ ಕೊಟ್ಟರು ಈಗ 10 ಲಕ್ಷ ಫಾಲೋವರ್ಸ್ ಆಗಿರುವದಕ್ಕೆ ಗೋಲ್ಡನ್ ಬಟನ್ ಕೊಟ್ಟಿದ್ದಾರೆ. ಗೋಲ್ಡನ್ ಬಟನ್ ಅಂದ್ರೆ 22 ಅಥವಾ 24 ಕ್ಯಾರೆಟ್ ಗೋಲ್ಡ್ ಇರಬೇಕು ಎಂದು ಜನರು ಕಲ್ಪನೆ ಮಾಡಿಕೊಳ್ಳುತ್ತಾರೆ. ಹೀಗಾಗಿ ಇದು ನಿಜಕ್ಕೂ ಗೋಲ್ಡಾ ಅಥವಾ ಬೇರೆ ಲೋಹದ ಮೇಲೆ ಚಿನ್ನದ ನೀರು ಬಿಟ್ಟಿರುವುದಾ? ಎಂದು ವಿಡಿಯೋ ಮಾಡಿದ್ದಾರೆ.
ವೀಕೆಂಡ್ ವಿಥ್ ರಮೇಶ್ ರವರ ಸಂಭಾವನೆ ಕೇಳಿದ್ರೆ ಆಶ್ಚರ್ಯ ಪಡುತ್ತೀರಾ!
ಹಿಂದಿಯಲ್ಲಿ ಸಿಕ್ಕಾಪಟ್ಟೆ ಜನರು ಗೋಲ್ಡನ್ ಬಟನ್ ಹೊಂದಿದ್ದಾರೆ.
'ಕನ್ನಡದವರು ಈ ಗೌರವ ಪಡೆದಿದ್ದು ಕಡಿಮೆ. ಫೇಸ್ ಬುಕ್ ನಲ್ಲಿ ೧ ಮಿಲಿಯನ್ ಆಗಿದೆ. ಆದರೆ, ಅವರು ಏನೂ ಕೊಟ್ಟಿಲ್ಲ.ಯೂಟ್ಯೂಬ್ ಕೊಟ್ಟಿರುವುದಕ್ಕೆ ಓಪನ್ ಮಾಡುತ್ತಿರುವುದು. ನನಗೆ ಬಹುಮಾನ ಪ್ರಶಸ್ತಿಗಳ ಮೇಲೆ ಅಷ್ಟಾಗಿ ಆಸಕ್ತಿ ಇಲ್ಲ'. ಎಂದು ಗಗನ್ ಗೋಲ್ಡನ್ ಬಟನ್ ಓಪನ್ ಮಾಡಿದ್ದಾರೆ. ಯೂಟ್ಯೂಬ್ ಸಿಇಓ ಸಹಿ ಮಾಡಿರುವ ರೇಟರ್ ಸಹ ಇದೆ. ನೀವು ಒಂದು ಗುರಿ ಇಟ್ಟುಕೊಂಡು ಒಂದು ಮಿಲಿಯನ್ ಫಾಲೋವರ್ಸ್ ಹೊಂದಿರುವುದಕ್ಕೆ ಈ ಪ್ರಶಸ್ತಿ ಎಂದು ಬರೆದಿದ್ದಾರೆ. ಎಂದು ಮಾತನಾಡಿದ್ದಾರೆ.
ಯೂಟ್ಯೂಬ್ ನವರು ಅಮೇರಿಕಾದಿಂದ ಬಂಗಾರದ ಪ್ಲೆ ಬಟನ್ ಕಳುಹಿಸಿದ್ದಾರೆ. ಕನ್ನಡ 6-7 ವ್ಯಯಕ್ತಿಕ ಚಾನೆಲ್ ಹೊಂದಿರುವವರು ಮಾತ್ರ ಈ ಗೋಲ್ದನ್ ಬಟನ್ ಪಡೆದು ಕೊಂಡಿದ್ದಾರೆ. ಒಂದು ಮಿಲಿಯನ್ ಫಾಲೋವರ್ಸ್ ಅಥವಾ ಸಬ್ ಸ್ಕ್ರೈಬರ್ಸ್ ಮಾಡಿದವರಿಗೆ ಮಾತ್ರ ಈ ಗೋಲ್ದನ್ ಬಟನ್ ಸಿಗುತ್ತದೆ. ಯಾಕೆ ಅಮೆರಿಕದಿಂದ ಬರುವುದು ಅಂದ್ರೆ ಯೂಟ್ಯೂಬ್, ಫೇಸ್ ಬುಕ್ ಮತ್ತು ಇನ್ಸ್ಟಾಗ್ರಾಮ್ ಎಲ್ಲ ಅಮೇರಿಕ ಕಂಪನಿಗಳು. ಸಪ್ತಸಾಗರ ಆಚೆಯಿಂದ ಬಂದಿರುವ ಬಂಗಾರದ ಬಟನ್ ನಿಮ್ಮ ಮುಂದೆ ಓಪನ್ ಮಾಡುತ್ತೀನಿ. ನಾಮಾಕಾವಸ್ತೆಗೆ ಯೂಟ್ಯೂಬ್ ಅವರು ಗೋಲ್ಡನ್ ಬಟನ್ ಕೊಟ್ಟಿದ್ದಾರಾ ಅಥವಾ ನಿಜವಾದ ಬಂಗಾರವೇ ನೋಡೋಣ. ಎಂದು ಹೇಳುವ ಮೂಲಕ ಡಾಕ್ಟರ್ ಬ್ರೋ ವಿಡಿಯೋ ಆರಂಭಿಸಿದ್ದಾರೆ.
ವಿಡಿಯೋ
'ಇದು ನಿಜವಾದ ಚಿನ್ನವೋ ಅಥವಾ ನಕಲಿ ಚಿನ್ನವೋ '
ಇದು ನಿಜವಾದ ಚಿನ್ನವೋ ಅಥವಾ ನಕಲಿ ಚಿನ್ನ ಅನ್ನೋ ಚೆಕ್ ಮಾಡಲು ಸ್ಯಾಂಡ್ ಪೇಪರ್ ಮತ್ತು ಆಸಿಡ್ ಬಳಸುತ್ತಿರುವೆ. ಸಾಮಾನ್ಯವಾಗಿ ಬಂಗಾರದ ಅಂಗಡಿ ಅವರ ಚಿನ್ನ ಚೆಕ್ ಮಾಡಲು ನೈಟ್ರಿಕ್ ಆಸಿಡ್ ಬಳಸುತ್ತಾರೆ. ನಮ್ಮೂರಿನಲ್ಲಿ ಅದೆಲ್ಲಾ ಸಿಗದ ಕಾರಣ ನಾನು ಬಾತ್ ರೂಮ್ ಕ್ವೀನರ್ ಬಳಸುತ್ತಿರುವೆ. ಎಂದು ಬ್ರೋ ಚೆಕ್ ಮಾಡಲು ಶುರು ಮಾಡುತ್ತಾರೆ. ಉಜ್ಜಿ ಉಜ್ಜಿ ನೋಡಿದಾಗ ಚಿನ್ನದ ಬಣ್ಣ ಹೋಗಿದ್ದು ಬಿಳಿ ಲೋಹ ಕಾಣಿಸಿಕೊಂಡಿದೆ. ಲೋಹದ ಮೇಲೆ ಚಿನ್ನ ಪೇಂಟ್ ಮಾಡಿದ್ದಾರೆ. ಅಸಲಿ ಚಿನ್ನ ಅಲ್ಲ, ನಕಲಿಯೋ ಅಸಲಿಯೋ ಅನ್ನೋದಕ್ಕಿಂತ ಪ್ರಶಸ್ತಿ ಅಷ್ಟೇ . ಒಂದು ಲಕ್ಷ ಬಂದಾಗ ಕಳುಹಿಸಿದ ಪ್ರಶಸ್ತಿಯನ್ನು ಕೂಡ ಓಪನ್ ಮಾಡಿ ತೋರಿಸುವೆ. ಎಂದು ಹೇಳಿದ್ದಾರೆ.
ಯೂಟ್ಯೂಬ್ ಕೊಟ್ಟಿರುವ ಪ್ರಶಸ್ತಿಗಿಂತ, ನೀವು ಕೊಟ್ಟಿರುವ ಪ್ರಶಸ್ತಿನೆ ನನಗೆ ದೊಡ್ಡದು. ಇವೆಲ್ಲಾ ವಸ್ತುಗಳು ಅಷ್ಟೇ ಇವತ್ತು ಬರುತ್ತೆ ನಾಳೆ ಹೋಗುತ್ತೆ. ಆದರೆ ಸರ್ವ ಕಾಲಕ್ಕೂ ಶ್ರೇಷ್ಠವಾಗಿ ಉಳಿದುಕೊಳ್ಳುವುದು ನಿಮ್ಮ ಪ್ರೀತಿ ಮತ್ತು ಸಪೋರ್ಟ್. ದೇವ್ರು ಎಲ್ಲರಿಗು ಥ್ಯಾಂಕ್ಸ್ ಎಂದಿದ್ದಾರೆ ಗಗನ್.
ಹೆಚ್ಚಿನ ಮಾಹಿತಿಗಾಗಿ ಕೆಳಗಿರುವ ವಾಟ್ಸಪ್ಪ್ ಗ್ರೂಪ್ ಸೇರ್ಪಡೆಗೊಳ್ಳಿ
@@@@@@@@@@@@@@@@@@@@@@@@@
Tags
VIRAL VIDEO