ಕರ್ನಾಟಕ ಸ್ವರ ಸುಗ್ಗಿ-2023 ಕನ್ನಡಿಗರ ಗಾನಾಭಿಷೇಕ "ಸಂಗೀತಕ್ಕೆ ಕರುಣೆಯಿಲ್ಲ, ಅದು ಬೇಡುವುದು ಸಾಧನೆಯನ್ನು ಮಾತ್ರ"

 

ಕರ್ನಾಟಕ ಸ್ವರ ಸುಗ್ಗಿ-2023

ಕನ್ನಡಿಗರ ಗಾನಾಭಿಷೇಕ "ಸಂಗೀತಕ್ಕೆ ಕರುಣೆಯಿಲ್ಲ, ಅದು ಬೇಡುವುದು ಸಾಧನೆಯನ್ನು ಮಾತ್ರ"




ಹಾಡುವುದು ಪ್ರತಿಯೊಬ್ಬರ ಖಯಾಲಿ, ಹಾಡಲು ಬರದವರು ಗುನುಗುತ್ತಾ ತಮ್ಮ ಸಂಗೀತ ಪ್ರೇಮವನ್ನು ವ್ಯಕ್ತಪಡಿಸುತ್ತಾರೆ. ಸಂಗೀತ ಸರಸ್ವತಿಯನ್ನು ಓಲೈಸಿಕೊಳ್ಳಲು ತಮ್ಮ ಜೀವನವನ್ನೇ ಮುಡುಪಾಗಿಟ್ಟವರು ಬಹಳಷ್ಟು ಜನ. ಸತತ ಪ್ರಯತ್ನದಿಂದ ಸಂಗೀತ ಹಾಗೂ ಗಾಯನದಲ್ಲಿ ಒಂದು ನವಿರಾದ ಲಯ ಕಂಡುಕೊಂಡವರಿಗೆ ವೇದಿಕೆಗಳ ಅಭಾವದಿಂದಲೋ ಅಥವಾ ಸಲ್ಲಬೇಕಾದ ಪ್ರೋತ್ಸಾಹದಿಂದಲೋ ವಂಚಿತರಾಗಿ, ತಮ್ಮಲಿರುವ ಜ್ಞಾನ ಹಾಗೂ ಸಾಮರ್ಥ್ಯವನ್ನು ಕಲಾಕಾಂಕ್ಷಿಗಳು ಮೂಲೆಗುಂಪಾಗಿಸುವುದು ಸರ್ವೇಸಾಮಾನ್ಯ.

          ವೇದಿಕೆ, ಅವಕಾಶ, ಪ್ರೋತ್ಸಾಹ ಹಾಗೂ ಸಾಮರ್ಥ್ಯ ಗುರುತಿಸುವಿಕೆಯ ಅಭಾವವನ್ನು ಮನಗಂಡ ನಮ್ಮ ಇನ್ಸ್ ಪೈರ್ ಫಿಲಂ ಇನ್ಸ್ಟಿಟ್ಯೂಟ್ ಸಂಸ್ಥೆಯು ಕನ್ನಡಿಗರ ಗಾನಾಭಿಷೇಕಕ್ಕೆ ಒಂದು ವೇದಿಕೆಯನ್ನು ಕಲ್ಪಿಸಿ, ಕಲಾಕಾಂಕ್ಷಿಗಳ ಸ್ವರ ಸಾಮರ್ಥ್ಯ ಹಾಗೂ ತಮ್ಮಲ್ಲಿರುವ ಪ್ರತಿಭೆಯನ್ನು ಹೊರತೆಗೆಯುವ ನಿಟ್ಟಿನಲ್ಲಿ ಕರ್ನಾಟಕ ಸ್ವರ ಸುಗ್ಗಿ ಎಂಬ ವಿನೂತನ ಗಾಯನ ಸ್ಪರ್ಧೆಯನ್ನು ಆಯೋಜಿಸುತ್ತಿದೆ.

ಮನೆಯಲ್ಲಿ ಪೆನ್ ತಯಾರಿಸುವ ಬ್ಯುಸಿನೆಸ್ 20 ರಿಂದ 30 ಸಾವಿರ ಲಾಭ !

ಇನ್ಸ್ ಪೈರ್ ಫಿಲಂ ಇನ್ಸ್ಟಿಟ್ಯೂಟ್ ಸಂಸ್ಥೆಯು, ಒಂದು ಚಲನಚಿತ್ರ ತರಬೇತಿ ಸಂಸ್ಥೆಯಾಗಿದ್ದರೂ ಸಹ, ಸಮಾಜಮುಖಿ ಕಾರ್ಯಕ್ರಮಗಳನ್ನು ಆಯೋಜಿಸಿ ಪ್ರತಿಭಾವಂತರನ್ನು ಗುರುತಿಸುವ ಕಾರ್ಯವನ್ನು ನಿರಂತರವಾಗಿ ಮುನ್ನಡೆಸಿಕೊಂಡು ಬಂದಿದೆ. ಇದಕ್ಕೆ ಪುಷ್ಟಿ ನೀಡುವಂತೆ ಕರ್ನಾಟಕ ವಿದ್ಯಾ ಸ್ಫೂರ್ತಿ ಕಾರ್ಯಕ್ರಮವು ಒಡನು ಉತ್ತಮ ಉದಾಹರಣೆಯಾಗಿದೆ. ಪ್ರೌಢಶಾಲೆಯಿಂದ ಹಿಡಿದು ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳ ಬರವಣಿಗೆಯ ಪ್ರೌಢಿಮೆಯನ್ನು ಪ್ರಬಂಧ ಮಂಡನೆಯಿಂದ ಗುರುತಿಸಿ, ಆಯ್ಕೆಯಾದ ಹಲವು ಅಭ್ಯರ್ಥಿಗಳಿಗೆ ಸನ್ಮಾನ, ಪಾರಿಶೋತಕ ಹಾಗೂ ಗೌರವ ಧನವನ್ನು ನೀಡಿ ನಮ್ಮ ಸಂಸ್ಥೆಯು ಗೌರವಿಸಿದೆ. ಅಂತಯೇ ಬರವಣಿಗೆಯಲ್ಲಿ ಪಾರುಪತ್ಯ ಸಾಧಿಸಿದವರಿಗೆ ಸಾಹಿತ್ಯ ಲೋಕಕ್ಕೂ ಪರಿಚಯ ಮಾಡಿಕೊಟ್ಟಿದೆ. ನಮ್ಮ ಸಂಸ್ಥೆಯ ಸಾಮಾಜಿಕ ಸೇವೆಯು ಶಿಕ್ಷಣಕ್ಕೆ ಮಾತ್ರ ಸೀಮಿತವಿರದೆ, ನಾವು ಆಯೋಜಿಸುವ ಕಾರ್ಯಕ್ರಮಗಳು ಕರುನಾಡಿನ ಪ್ರತಿಯೊಬ್ಬ ಕನ್ನಡಿಗನಿಗೂ ವೇದಿಕೆಯಾಗಲಿ ಎಂಬ ಮಹತ್ವಾಕಾಂಕ್ಷೆಯಿಂದ ಸಂಸ್ಥೆಯು ಹಲವು ಕಾರ್ಯಕ್ರಮಗಳನ್ನು ಹಾಗೂ ಅವಕಾಶಗಳನ್ನು ಮುಂಬರುವ ದಿನಗಳಲ್ಲಿ ಮುನ್ನೆಲೆಗೆ ತರುವಂತಹ ಅಶಾಂತಹ ಆಶಾಭಾವನೆಯನ್ನು ಹೊಂದಿದ್ದು, ಕರ್ನಾಟಕ ಸ್ವರ ಸುಗ್ಗಿ- 2023 ಎಂಬ ಕಾರ್ಯಕ್ರಮವನ್ನು ಹೆಮ್ಮೆಯಿಂದ ಆಯೋಜಿಸಿದೆ.

ಕರ್ನಾಟಕ ಸ್ವರ ಸುಗ್ಗಿ ಕಾರ್ಯಕ್ರಮವು, ಪತಿಭಾನ್ವೇಷಣೆಯ ಒಂದು ಭಾಗವೆಂದರೆ ಬಹುಶಃ ತಪ್ಪಾಗಲಾರದು. ಜಾನಪದ ಲೋಕವನ್ನು ಆಳಿದ ಅದೆಷ್ಟೋ ಸಾಧಕರು ಸಂಗೀತವನ್ನು ಕಲಿತವರಲ್ಲ. ಪದಗಳ ಕಟ್ಟುವಿಕೆ ಹಾಗೂ ತಮಗರಿವಿಲ್ಲದಂತೆ ರಾಗವನ್ನು ಹೊಂದಿಸಿ ಹಾಡುತ್ತಾ, ಸಂಗೀತ ಲೋಕಕ್ಕೆ ಹೊಸ ಭಾಷ್ಯವನ್ನು ಬರೆದವರು ಇಂದಿಗೂ ನಮ್ಮ ಗ್ರಾಮೀಣ ಭಾಗಗಳಲ್ಲಿ ಜೀವಂತ ಸಾಕ್ಷಿಯಾಗಿ ಉಳಿದಿದ್ದಾರೆ. ಸಂಗೀತವು ಪ್ರತಿಯೊಬ್ಬರಿಗೂ ಸಲ್ಲುವ ಒಂದು ಸ್ವಂತಂತ್ರ ಜ್ಞಾನವಾಗಿದೆ. ಗದ್ದೆಯಲ್ಲಿ ನಾಟಿ ಮಾಡುವುದರಿಂದ ಹಿಡಿದು ಕುರಿಗಾಹಿಯ ಕಾಯಕದವರೆಗೂ, ಹೃದಯದ ಬಡಿತದಿಂದ ಹಿಡಿದು ಆಳುವ ಭಾವನೆವರೆಗೂ ಪ್ರತಿಯೊಂದು ವಿಷಯದಲ್ಲೂ ಸಂಗೀತವು ಲಯದ ಮುಖವಾಡವನ್ನು ಹೊತ್ತು ಅಡಗಿ ಕುಳಿತಿದೆ.

ಷರತ್ತು ಮತ್ತು ನಿಯಮಗಳು :

⭐ಕರ್ನಾಟಕ ಕನ್ನಡ ಮತ್ತು ಪ್ರಾದೇಶಿಕ (ತುಳು,ಕೊಂಕಣಿ,ಹಾಗೂ ಕೊಡವ) ಭಾಷೆಗಳ ಯಾವುದೇ ಪ್ರಕಾರದ (ಚಿತ್ರಗೀತೆ,ದೇಶಭಕ್ತಿ ಗೀತೆ, ಜಾನಪದ, ಭಕ್ತಿ ಗೀತೆ, ಗೀಗಿ ಪದ, ಲಾವಣಿ ಪದ, ದಾಸ ಪದ, ಕೀರ್ತನೆಗಳು, ಭಜನೆ, ಮಜಲುಗಳು, ಸೋಬಾನೆ ಪದಗಳು, ಕಂಸಾಳೆ ಪದ, ಡೊಳ್ಳು ಪದ, ರಂಗಗೀತೆ, ಮಕ್ಕಳ ಗೀತೆಗಳು, ಲಾಲಿ ಹಾಡುಗಳು, ಹಾಗೂ ಇತರ ಇನ್ನಾವುದೇ ಸ್ವರಾಜಿತ ಹಾಗೂ ವಿರಚಿತ) ಗೀತೆಗಳನ್ನು ಅಭ್ಯರ್ಥಿಯು ಆಯ್ಕೆ ಮಾಡಿಕೊಳ್ಳಬಹುದಾಗಿದೆ. ಹಾಡಿನ ಅವಧಿ 3 ನಿಮಿಷಗಳು ಮಾತ್ರ ಎಂದು ಮನಗಾಣಿರಿ.

⭐ಹಾಡಿನ ರೆಕಾರ್ಡಿಂಗ್ ಪೂರ್ವದಲ್ಲಿ ಅಭ್ಯರ್ಥಿಗೆ ನೀಡಲಾದ ಗುರುತಿನ ಪಾತ್ರವನ್ನು ತೋರಿಸಿ, ಅಭ್ಯರ್ಥಿಯ ಹೆಸರು, ಊರು ಹಾಗೂ ಹಾಡುವ ಹಾಡಿನ ಸಾಹಿತ್ಯಕಾರರ ಹೆಸರು, (ಜಾನಪದ ಗೀತೆಯನ್ನು ಹೊರತುಪಡಿಸಿ) ಅಂತೆಯೇ ಚಿತ್ರದ ಶೀರ್ಷಿಕೆಯನ್ನು ಹೇಳಿ ಹಾಡಿನ ಚಿತ್ರಣದ ರೆಕಾರ್ಡಿಂಗ್ ಮಾಡುವುದು. ಅಭ್ಯರ್ಥಿಯು ಬಯಸಿದಲ್ಲಿ ತಾನು ಸ್ವಂತ ರಚಿಸಿದ ಹಾಡನ್ನು ಕೂಡ ಹಾಡಬಹುದಾಗಿದೆ. 

⭐ಇಲೆಕ್ಟ್ರಾನಿಕ್ ಸಂಗೀತ ಉಪಕರಣಗಳಾಗಲಿ ಅಥವಾ ಕರೆಯೋಕೆಯನ್ನಾಗಲಿ ಅಭ್ಯರ್ಥಿಯು ಹಾಡಿನ ರೆಕಾರ್ಡಿಂಗ್ ನಲ್ಲಿ ಬಳಸುವಂತಿಲ್ಲ. 









⭐ಹಾಡಿನ ರೆಕಾರ್ಡಿಂಗ್ ಮಾಡುವಾಗ ನಿಮ್ಮ ಸ್ಥಳ ಪ್ರಶಾಂತವಾಗಿರಲಿ, ಅಂತೆಯೇ ನಿಮ್ಮ ಧ್ವನಿ ಸ್ಪಷ್ಟವಾಗಿರಲಿ, ವಿಡಿಯೋ ಚಿತ್ರೀಕರಣ ಮಾಡುವಾಗ ನಿಮ್ಮ ಮುಖ ಸ್ಪಷ್ಟವಾಗಿ ಗೋಚರಿಸುವಂತೆಯೂ, ನಿಮ್ಮ ವಿಡಿಯೋ ಮಧ್ಯಭಾಗದಲ್ಲೇ ಇರುವಂತೆಯೂ ನೋಡಿಕೊಳ್ಳಿ ಹಾಗೂ ಚಿತ್ರೀಕರಣ ಮಾಡುವಾಗ ನಿಮ್ಮ ಹಿಂಬದಿ ವರ್ಣರಂಜಿತವಾಗಿರಕೂಡದು (ಮುಖ್ಯವಾಗಿ ಹಸಿರು ಹಾಗೂ ನೀಲಿ ಪರದೆಗಳನ್ನು ಬಳಸುವಂತಿಲ್ಲ) ಎಂಬುದರ ಬಗ್ಗೆ ಗಮನವಿರಲಿ.

⭐ಎಲೆಕ್ಟ್ರಾನಿಕ್ ತಾನ್ ಪುರವನ್ನು ಅಭ್ಯರ್ಥಿಯು ಅವಶ್ಯಕತೆಯೆನಿಸಿದ ಪಕ್ಷದಲ್ಲಿ ಬಳಸಬಹುದು. ಅಂತೆಯೇ ಹಾಡಿನ ರೆಕಾರ್ಡಿಂಗ್ ಮಾಡುವಾಗ ನಿಮ್ಮ ಧ್ವನಿಯನ್ನು ಎಲೆಕ್ಟ್ರಾನಿಕ್ ಡಿಜಿಟಲ್ ಮಾಧ್ಯಮವನ್ನು ಬಳಸದೆ ಹಾಡತಕ್ಕದ್ದು.

⭐ಹಾಡಿನ ರೆಕಾರ್ಡಿಂಗ್ ಮಾಡುವಾಗ ಮೊಬೈಲ್ ಅನ್ನು ಲ್ಯಾಂಡ್ ಸ್ಕೇಪ್ ಮಾದರಿಯಲ್ಲಿ ಚಿತ್ರಣ ಮಾಡತಕ್ಕದ್ದು, ಪೋರ್ಟ್ರೈಟ್ ಮಾದರಿಯಲ್ಲಿ ಚಿತ್ರೀಕರಿಸಿದ ವಿಡಿಯೋ ಕ್ಲಿಪ್ ಗಳನ್ನೂ ಪುರಸ್ಕರಿಸಲಾಗುವುದಿಲ್ಲ.

⭐ಅಭ್ಯರ್ಥಿಯು ಜೊತೆಗೆ ಯಾವುದೇ ಸಹ ಹಾಡುಗಾರರು ಹಾಡಿನ ಚಿತ್ರಣದ ರೆಕಾರ್ಡಿಂಗ್ ವೇಳೆ ಭಾಗವಹಿಸುವುದಾಗಲಿ, ಅಥವಾ ಅಭ್ಯರ್ಥಿಯನ್ನು ಹೊರತುಪಡಿಸಿ ಉಳಿದವರ ಧ್ವನಿ ಚಿತ್ರಣದಲ್ಲಿ ಮುದ್ರಣವಾಗುವುದಾಗಲಿ ನಿಯಮಗಳಿಗೆ ವಿರುದ್ಧ ಎಂದು ಭಾವಿಸಿರಿ.

⭐ಚಿತ್ರೀಕರಿಸಿದ ಹಾಡಿನ ವಿಡಿಯೋದಲ್ಲಿ ಪ್ರಾರಂಭ ಮತ್ತು ಅಂತ್ಯವನ್ನು ಹೊರತುಪಡಿಸಿ, ಹಾಡಿನ ಮಧ್ಯಭಾಗದಲ್ಲಿ ಯಾವುದೇ ಕಾರಣಕ್ಕೂ ಸಂಕಲನ (ಎಡಿಟಿಂಗ್) ಮಾಡುವಂತಿಲ್ಲ.

⭐ಅಭ್ಯರ್ಥಿಯು ಹಾಡಿದ ವಿಡಿಯೋ ಕ್ಲಿಪ್ ಅನ್ನು ನಮ್ಮ ಸಂಸ್ಥೆಯು ಅಂಚೆ ಮೂಲಕ ಕಳುಹಿಸುವ ಮಾರ್ಗಸೂಚಿಯಲ್ಲಿ ನಮೂದಿಸಲಾದ ವಾಟ್ಸ್ ಆಪ್ ಮೊಬೈಲ್ ಸಂಖ್ಯೆಗೆ ಕಳುಹಿಸತಕ್ಕದ್ದು.

⭐ಅಭ್ಯರ್ಥಿಯು ಹಾಡಿದ ಹಾಡನ್ನು ನಮ್ಮ ಪೋರ್ಟಲ್ ಗೆ ಅಪ್ಲೋಡ್ ಮಾಡುವ ಸಮಯದಲ್ಲಾಗಲಿ, ಟೆಲಿಪೋನಿಕ್ ಅಥವಾ ನೇರ ಸಂದರ್ಶನದ ಸಮಯದಲ್ಲಾಗಲೀ ಮತ್ತು ಸಂಸ್ಥೆಯೊಂದಿಗೆ ವ್ಯವಹರಿಸುವ ಸಂದರ್ಭದಲ್ಲಾಗಲಿ, ಅಭ್ಯರ್ಥಿಯು ಕಡ್ಡಾಯವಾಗಿ ಸಂಸ್ಥೆ ನೀಡಿದ ಗುರುತಿಯ ಪತ್ರವನ್ನು ಬಳಸತಕ್ಕದ್ದು. 

⭐ನಿಮ್ಮ ಗುರುತಿನ ಪತ್ರದ  ವಿವರಗಳನ್ನು ಗೌಪ್ಯತೆಯ ಕಾರಣಕ್ಕಾಗಿ ಹಾಗೂ ಬೇರೆಯವರು ನಕಲು ಮಾಡದಂತೆ, ಸ್ವಯಂ ಅಭ್ಯರ್ಥಿಯೇ ಜಾಗೃತವಹಿಸುವುದು. 

⭐ಒಬ್ಬ ಅಭ್ಯರ್ಥಿಯು ಒಂದು ಪ್ರವೇಶ ಹಾಗೂ ಒಂದು ಗುರುತಿನ ಪತ್ರವನ್ನು ಮಾತ್ರ ಹೊಂದಿರಲು ಸಾಧ್ಯ ಎಂದು ತಿಳಿಯಿರಿ. ಒಂದಕ್ಕಿಂತ ಹೆಚ್ಚು ಪ್ರವೇಶ ಪಡೆದ ಅಭ್ಯರ್ಥಿಯನ್ನು ಮಾನ್ಯಮಾಡಲಾಗುವುದಿಲ್ಲ.


ಆಯ್ಕೆ ಪ್ರಕ್ರಿಯೆ :

ಮೊದಲನೇ ಸುತ್ತು :

ಅಭ್ಯರ್ಥಿಯು 3 ನಿಮಿಷದ ಹಾಡಿನ ರೆಕಾರ್ಡಿಂಗ್ ವಿಡಿಯೋ ತುಣುಕನ್ನು ಮೇಲೆ ತಿಳಿಸಿದ ಶರತ್ತುಗಳನ್ವಯ ನಮ್ಮ ಸಂಸ್ಥೆಯು ಅಂಚೆ ಮೂಲಕ ಕಳುಹಿಸುವ ಮಾರ್ಗಸೂಚಿಯಲ್ಲಿ ನಮೂದಿಸಲಾದ ಮೊಬೈಲ್ ಸಂಖ್ಯೆಗೆ ವಾಟ್ಸ್ ಆಪ್ ಮಾಡತಕ್ಕದ್ದು. ಅಂತೆಯೇ ವಿಡಿಯೋ ಕ್ಲಿಪ್ ನ ಜೊತೆಗೆ ಸಂಸ್ಥೆಯು ನೀಡಿದ ಗುರುತಿನ ಪತ್ರ, ಮೊಬೈಲ್ ನಲ್ಲಿ ಕ್ಲಿಕ್ಕಿಸಿದ ಅಭ್ಯರ್ಥಿಯ ಇತ್ತೀಚಿನ ಭಾವಚಿತ್ರ ಹಾಗೂ ಅಭ್ಯರ್ಥಿಯ ಆಧಾರ್ ಕಾರ್ಡ್ ಪ್ರತಿಯನ್ನು ವಾಟ್ಸ್ ಆಪ್ ಹಂಚಿಕೊಳ್ಳತಕ್ಕದ್ದು.

ತಾವು ಹಾಡಿದ ಹಾಡಿನ ಅನ್ವಯ ಅಥವಾ ಗುಣಮಟ್ಟದ ಮತ್ತು ತಮ್ಮ ಹಾಡು ಯೌಟ್ಯೂಬ್ ನಲ್ಲಿ ಗಳಿಸಿದ ಲೈಕ್ಸ್, ಕಾಮೆಂಟ್ಸ್, ಒಟ್ಟು ವೀಕ್ಷಣೆ ಮತ್ತು ತೀರ್ಪುಗಾರರ ನಿರ್ಣಯದ ಮೇಲೆ ನಿಮ್ಮ ಎರಡನೇ ಸುತ್ತಿನ ಆಯ್ಕೆ ಪ್ರಕ್ರಿಯೆ ನಿರ್ಧರಿತವಾಗಿರುತ್ತದೆ.


ಎರಡನೇ ಸುತ್ತು :

ಕರ್ನಾಟಕ ರಾಜ್ಯದ ಒಟ್ಟು 31 ಜಿಲ್ಲೆಗಳಲ್ಲಿ, ಪ್ರತಿಯೊಂದು ಜಿಲ್ಲೆಯ ಜಿಲ್ಲಾವಾರು ಒಟ್ಟು ಹತ್ತು ಅಭ್ಯರ್ಥಿಗಳನ್ನು ರಾಜ್ಯಮಟ್ಟಕ್ಕೆ ಆಯ್ಕೆಮಾಡುವುದರ ಜೊತೆಗೆ ಜಿಲ್ಲಾವಾರು ಮೂರೂ ಬಹುಮಾನಗಳನ್ನು ನೀಡಲಾಗುವುದು.

ಆಯ್ಕೆಯಾದ ಜಿಲ್ಲಾವಾರು ಹತ್ತು ಅಭ್ಯರ್ಥಿಗಳು, ನೇರ ಆಡಿಯೋ ಮತ್ತು ವಿಡಿಯೋ ಸಂದರ್ಶನಗಳಲ್ಲಿ ಪಾಲ್ಗೊಳ್ಳಲಿದ್ದು, ಮೂರನೇ ಸುತ್ತಿಗೆ ಅರ್ಹತೆಯನ್ನು ಪಡೆಯಲು, ತಮ್ಮ ಅರ್ಹತೆಯನ್ನು ತೀರ್ಪುಗಾರರ ಬಳಿ ನಿರೂಪಿಸಿದ ನಂತರ, ಸ್ಟುಡಿಯೋ ರೌಂಡ್ ಹಂತಕ್ಕೆ ಕೊನೆಯ ೨೭ ಅಭ್ಯರ್ಥಿಗಳಾಗಿ ಹೊರಹೊಮ್ಮಲಿದ್ದಾರೆ.


ಮೂರನೇ ಸುತ್ತು:

ಅಭ್ಯರ್ಥಿಯು ನಮ್ಮ ಸಂಸ್ಥೆಯ ಸ್ಟುಡಿಯೋ ದಲ್ಲಿ ನೇರ ಸಂದರ್ಶನದಲ್ಲಿ ಪಾಲ್ಗೊಂಡು ತಮ್ಮ ಗಾಯನ ಸಾಮರ್ಥ್ಯವನ್ನು ಪ್ರದರ್ಶಿಸಿ, ಕೊನೆಯ ಅಂತಿಮ ಒಂಭತ್ತು ಸ್ಪರ್ಧಿಗಳಾಗಿ ಹೊರಹೊಮ್ಮಲಿದ್ದಾರೆ.


ನಾಲ್ಕನೇ ಸುತ್ತು (ಪ್ರಶಸ್ತಿ ಪ್ರಧಾನ ಸಮಾರಂಭ) :

ಸ್ಪರ್ಧೆಯ ಈ ಅಂತಿಮ ಘಟ್ಟದಲ್ಲಿ, ಈ ಸುತ್ತಿಗೆ ಆಯ್ಕೆಯಾದ ಒಂಭತ್ತು ಅಭ್ಯರ್ಥಿಗಳು, ರಂಗಮಂಚದಲ್ಲಿ ತಮಮ್ ನೇರ ಪ್ರದರ್ಶನ ನೀಡಲಿದ್ದು, ಸಂಸ್ಥೆಯು ತೀರ್ಪುಗಾರರ ಜೊತೆಗೆ ವಿಶೇಷ ತೀರ್ಪುಗಾರರ ಮನ್ನಣೆಯೊಂದಿಗೆ ಪ್ರಥಮ, ದ್ವಿತೀಯ, ಹಾಗೂ ತೃತೀಯ ಜಯಶಾಲಿಗಳಾಗಿ ಹೊರಹೊಮ್ಮಲಿದ್ದಾರೆ. 
ಅಂತೆಯೇ ಉಳಿದ 6 ಸ್ಪರ್ಧಿಗಳು ವೀರೋಚಿತ ಆಯ್ಕೆ ಪ್ರಶಸ್ತಿಗೆ ಭಾಜನರಗಳಿದ್ದರೆ. ತೀರ್ಪುಗಾರರ ತೀರ್ಮಾನವೇ ಅಂತಿಮ ತೀರ್ಮಾನ.





ಬಹುಮಾನಗಳ ವಿವರ :

ಜ್ಯುನಿಯರ್ ವಿಭಾಗ (ವಯಸ್ಸು 6-16 ವರ್ಷ)

ಪ್ರಥಮ ಬಹುಮಾನ :
ರೂ. 30,000 (ರೂಪಾಯಿ ಮೂವತ್ತು ಸಾವಿರ ಮಾತ್ರ) ನಗದು, ಪಾರಿತೋಷಕ, ಪ್ರಶಸ್ತಿ ಪತ್ರ ಹಾಗೂ ವಿಶೇಷ ಕೊಡುಗೆಗಳು.

ದ್ವಿತೀಯ ಬಹುಮಾನ :
ರೂ. 20,000 ನಗದು, ಪಾರಿತೋಷಕ, ಪ್ರಶಸ್ತಿ ಪತ್ರ ಹಾಗೂ ವಿಶೇಷ ಕೊಡುಗೆಗಳು.

ತೃತೀಯ ಬಹುಮಾನ :
ರೂ. 10,000 ನಗದು, ಪಾರಿತೋಷಕ, ಪ್ರಶಸ್ತಿ ಪತ್ರ ಹಾಗೂ ವಿಶೇಷ ಕೊಡುಗೆಗಳು.

(ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನದ ಜಯಶಾಲಿಗಳಿಗೆ, ಹೆಸರಾಂತ ಗೀತರಚನೆಕಾರರಾದ ಕವಿರತ್ನ ಡಾ।। ವಿ. ನಾಗೇಪ್ರಸಾದ್ ವಿರಚಿತ ವಿಶೇಷ ಮಕ್ಕಳ ಗೀತೆಯನ್ನು ಹಾಡುವ ಮತ್ತು ಚಿತ್ರೀಕರಣದಲ್ಲಿ ನಟಿಸುವ ಅವಕಾಶವನ್ನು ಕಲ್ಪಿಸಲಾಗುವುದು.)

ವೀರೋಚಿತ ಆಯ್ಕೆ (ಸಮಾಧಾನಕರ)
ರೂ. 2,000 ನಗದು, ಪಾರಿತೋಷಕ ಹಾಗೂ ಪ್ರಶಸ್ತಿ ಪತ್ರ. (6 ಅಂತಿಮ ಅಭ್ಯರ್ಥಿಗಳಿಗೆ)

ತೀರ್ಪುಗಾರರ ವಿಶೇಷ ಆಯ್ಕೆ : ಜಾನಪದ ಅಥವಾ ಯಾವುದೇ ವಿಶೇಷ ಪ್ರಕಾರದ ಗೀತೆಯಲ್ಲಿ ತೀರ್ಪುಗಾರರ ಗಮನ ಸೆಳೆದ 2 ಗೀತೆಗಳಿಗೆ ಸಂಬಂಧಿಸಿದಂತೆ, ಅಭ್ಯರ್ಥಿಗಳಿಗೆ ವಿಶೇಷ ಬಹುಮಾನ ನೀಡಿ ಗೌರವಿಸಲಾಗುವುದು.



ಸೀನಿಯರ್ ವಿಭಾಗ (ವಯಸ್ಸು 16 ವರ್ಷ ಮೇಲ್ಪಟ್ಟು)

ಪ್ರಥಮ ಬಹುಮಾನ :
ರೂ 50,000 (ರೂಪಾಯಿ ಐವತ್ತು ಸಾವಿರ ಮಾತ್ರ) ನಗದು, ಪಾರಿತೋಷಕ, ಪ್ರಶಸ್ತಿ ಪತ್ರ ಹಾಗೂ ವಿಶೇಷ ಕೊಡುಗೆಗಳು. 

ದ್ವಿತೀಯ ಬಹುಮಾನ :
ರೂ 25,000 ನಗದು, ಪಾರಿತೋಷಕ, ಪ್ರಶಸ್ತಿ ಪತ್ರ ಹಾಗೂ ವಿಶೇಷ ಕೊಡುಗೆಗಳು. 

ತೃತೀಯ ಬಹುಮಾನ :
ರೂ 10,000 ನಗದು, ಪಾರಿತೋಷಕ ಪ್ರಶಸ್ತಿ ಪತ್ರ ಹಾಗೂ ವಿಶೇಷ ಕೊಡುಗೆಗಳು. 

ವೀರೋಚಿತ ಆಯ್ಕೆ (ಸಮಾಧಾನಕರ):
ರೂ 2,000  ನಗದು, ಪಾರಿತೋಷಕ ಹಾಗೂ ಪ್ರಶಸ್ತಿ ಪತ್ರ.


ತೀರ್ಪುಗಾರ ವಿಶೇಷ ಆಯ್ಕೆ :
ಜಾನಪದ ಅಥವಾ ಯಾವುದೇ ವಿಶೇಷ ಪ್ರಕಾರದ ಗೀತೆಯಲ್ಲಿ ತೀರ್ಪುಗಾರರ ಗಮನ ಸೆಳೆದ 2 ಗೀತೆಗಳನ್ನು ಹಾಡಿದ ಅಭ್ಯರ್ಥಿಗಳಿಗೆ ವಿಶೇಷ ಬಹುಮಾನವನ್ನು ನೀಡಿ ಗೌರವಿಸಲಾಗುವುದು.


8 ಬ್ಯಾಂಕ್ ಗಳ ಲೈಸೆನ್ಸ್ ರದ್ದು ಮಾಡಿದ ಆರ್ ಬಿ ಐ (RBI) ಇವುಗಳಲ್ಲಿ ನಿಮ್ಮ ಖಾತೆ ಇದೆಯೇ ನೋಡಿಕೊಳ್ಳಿ.












ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು