ರಾಜ್ಯದ ಅಂತಿಮ ಮತದಾರರ ಪಟ್ಟಿ ಬಿಡುಗಡೆ ಮಾಡಿದ ಚುನಾವಣಾ ಆಯೋಗ ; ಒಟ್ಟು ಮತದಾರರು ಎಷ್ಟು? ಜಿಲ್ಲಾವಾರು ಮಾಹಿತಿ ಇಲ್ಲಿದೆ ನೋಡಿ.... ಕರ್ನಾಟಕ ಎಲೆಕ್ಷನ್ ವೋಟರ್ ಲಿಸ್ಟ್
byNammaTubeChannel-
3
ರಾಜ್ಯದ ಅಂತಿಮ ಮತದಾರರ ಪಟ್ಟಿ ಬಿಡುಗಡೆ ಮಾಡಿದ ಚುನಾವಣಾ ಆಯೋಗ ; ಒಟ್ಟು ಮತದಾರರು ಎಷ್ಟು? ಜಿಲ್ಲಾವಾರು ಮಾಹಿತಿ ಇಲ್ಲಿದೆ ನೋಡಿ.... ಕರ್ನಾಟಕ ಎಲೆಕ್ಷನ್ ವೋಟರ್ ಲಿಸ್ಟ್
ಈ ಬಾರಿಯ ಕರ್ನಾಟಕ ವಿಧಾನಸಭಾ ಚುನಾವಣೆ ಅಂತಿಮ ಮತದಾರರ ಪಟ್ಟಿ ಹೊರಬಿದ್ದಿದೆ. ರಾಜ್ಯದಲ್ಲಿ ಒಟ್ಟಾರೆ 5.3 ಕೋಟಿ ಮತದಾರರಿದ್ದಾರೆ. ಕಳೆದ ಮೂರೂ ತಿಂಗಳಲ್ಲಿ ನಡೆದ ಕ್ಷಿಪ್ರ ಮತದಾರರ ನೋಂದಣಿ ಕಾರ್ಯದಲ್ಲಿ 11 ಲಕ್ಷ ಮಂದಿ ಹೊಸ ಮತದಾರರು ಸೇರ್ಪಡೆಯಾಗಿದ್ದಾರೆ. ಜಿಲ್ಲಾವಾರು ಮತದಾರರ ಪಟ್ಟಿಯ ಮಾಹಿತಿ ಇಲ್ಲಿದೆ.
ಈ ಬಾರಿಯ ಕರ್ನಾಟಕ ವಿಧಾನಸಭಾ ಚುನಾವಣೆಗೆ ರಾಜ್ಯ ಚುನಾವಣೆ ಆಯೋಗವು ಅಂತಿಮ ಮತದಾರರ ಪಟ್ಟಿಯನ್ನು ಬುಧವಾರ ಬಿಡುಗಡೆ ಮಾಡಿದೆ. ಈ ಪ್ರಕಾರ ರಾಜ್ಯದಲ್ಲಿ ಒಟ್ಟಾರೆ 5,30,85,566 ಮಂದಿ ಮತದಾರರು ಇದ್ದಾರೆ.
ಒಟ್ಟಾರೆ ಮತದಾರರ ಪೈಕಿ 2,66,82,156 ಮಂದಿ ಪುರುಷ ಮತದಾರರು,2,63,98,438 ಮಂದಿ ಮಹಿಳಾ ಮತದಾರರು ಹಾಗೂ 4,927 ಮಂದಿ ತೃತೀಯ ಲಿಂಗಿ ಮತದಾರರು ಇದ್ದಾರೆ.
ರಾಜ್ಯ ಚುನಾವಣಾ ಆಯೋಗವು 2023 ಜನವರಿಯಲ್ಲಿ ಬಿಡುಗಡೆ ಮಾಡಿದ್ದ ಮತದಾರರ ಪಟ್ಟಿಯಲ್ಲಿ ರಾಜ್ಯದಲ್ಲಿ 5.05,48,533 ಮಂದಿ ಮತದಾರರಿದ್ದರು. ಸದ್ಯ 224 ಕ್ಷೇತ್ರಗಳ ಜಿಲ್ಲಾವಾರು ವಿಭಾಗಿಸಿ 36 ಜಿಲ್ಲೆಗಳಾಗಿ ವಿಂಗಡಿಸಿದ್ದು, ಸದ್ಯ ಮತದಾರರ ಸಂಖ್ಯೆ 5,30,85,566 ಕ್ಕೆ ಏರಿಕೆಯಾಗಿದೆ.
ಚುನಾವಣಾ ಆಯೋಗವು ಕಳೆದ ಏಪ್ರಿಲ್ 3 ವರೆಗೂ ಮತದಾರರ ಪಟ್ಟಿಗೆ ಹೆಸರು ಮಾಡಲು ಅವಕಾಶ ನೀಡಿತ್ತು. ಈ ಸಂದರ್ಭದಲ್ಲಿ ಲಕ್ಷಾಂತರ ಮತದಾರರು ಹೊಸದಾಗಿ ಸೇರ್ಪಡೆಯಾಗಿದ್ದಾರೆ. ಚುನಾವಣಾ ಆಯೋಗದ ಮಾಹಿತಿ ಪ್ರಕಾರ ಒಟ್ಟು 11,71,558 ಯುವ ಮತದಾರರು ಈ ಬಾರಿ ಸೇರ್ಪಡೆಯಾಗಿದ್ದಾರೆ.
ಬೆಳಗಾವಿ ಜಿಲ್ಲೆಯಲ್ಲಿ ಹೆಚ್ಚು ಮತದಾರರು?
ರಾಜ್ಯದ ಎಲ್ಲಾ ಜಿಲ್ಲೆಗಳಿಗೆ ಹೋಲಿಸಿದರೆ ಬೆಳಗಾವಿಯಲ್ಲಿ ಅತಿ ಹೆಚ್ಚು 39.47 ಲಕ್ಷ ಮಂದಿ ಮತದಾರರಿದ್ದಾರೆ. ಎರಡನೇ ಸ್ಥಾನದಲ್ಲಿ ಬೆಂಗಳೂರು ನಗರ ಜಿಲ್ಲೆ ಇದ್ದು, ಇಲ್ಲಿ 36.74 ಲಕ್ಷ ಮತದಾರರಿದ್ದಾರೆ. ಉಳಿದಂತೆ ಬೆಂಗಳೂರು ನಗರದಲ್ಲಿ ಅತಿ ಹೆಚ್ಚು ತೃತೀಯ ಲಿಂಗಿ ಮತದಾರರು 674 ಮಂದಿ ಇದ್ದಾರೆ.
Vote From Home :
ದೇಶದಲ್ಲೇ ಮೊದಲು! ಹಿರಿಯ ನಾಗರಿಕರು, ವಿಶೇಷ ಚೇತನರಿಗೆ ಈ ಬಾರಿ ಮನೆಯಿಂದ ಮತದಾನಕ್ಕೆ ಅವಕಾಶ....
ಕೊಡಗು ಜಿಲ್ಲೆಯಲ್ಲಿ ಅತಿ ಕಡಿಮೆ
ರಾಜ್ಯದಲ್ಲಿ ಕೊಡಗು ಜಿಲ್ಲೆಯಲ್ಲಿ ಅತಿ ಕಡಿಮೆ ಅಂದರೆ 4.56 ಲಕ್ಷ ಮತದಾರರಿದ್ದಾರೆ. ಆ ನಂತರ ಚಾಮರಾಜನಗರ 8.61 ಲಕ್ಷ ಮತದಾರರನ್ನು ಹೊಂದಿದ್ದು, ಕೋಣೆಯಿಂದ ಎರಡನೇ ಸ್ಥಾನದಲ್ಲಿದೆ. ಉತ್ತರ ಕನ್ನಡದಲ್ಲಿ ಕೇವಲ 7 ಮಂದಿ ತೃತೀಯ ಲಿಂಗಿ ಮತದಾರರಿದ್ದಾರೆ.
198
ಪ್ರತ್ಯುತ್ತರಅಳಿಸಿ198
ಪ್ರತ್ಯುತ್ತರಅಳಿಸಿVhh
ಪ್ರತ್ಯುತ್ತರಅಳಿಸಿ