ಚುನಾವಣೆಗೆ ಕೆಲವೇ ದಿನಗಳು ಮಾತ್ರ ಬಾಕಿ ಇದೆ. ನಿಮಗಿನ್ನೂ ಹೊಸ ವೋಟರ್ ಐಡಿ ಬಂದಿಲ್ಲ ಅಂದ್ರೆ ಏನು ಮಾಡ್ಬೇಕು? ಅದನ್ನು ಪಡೆಯುವುದೇಗೆ? ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ
ಹೊಸದಾಗಿ ವೋಟರ್ ಐಡಿಗೆ ಅಪ್ಲೈ ಮಾಡಿದರೆ ನಿಮ್ಮ ವೋಟರ್ ಐಡಿ ಅಪ್ರೂವ್ ಆಗಿದೆಯಾ ಇಲ್ಲವಾ ಎಂದು ಮನೆಯಲ್ಲಿಯೇ ನೋಡಬಹುದು. ವೋಟರ್ ಐಡಿಗೆ ಅಪ್ಲೈ ಮಾಡಿದರೆ ಅದು ಬಂದಿಲ್ಲವಾದರೆ ಏನು ಮಾಡಬೇಕು ಎನ್ನುವುದನ್ನು ನೋಡೋಣ.
ಹೆಸರು ಸೇರ್ಪಡೆಗೆ ಕಡೇ ದಿನಾಂಕ ಏಪ್ರಿಲ್ ೧೦ ರೊಳಗೆ ಅವಕಾಶವಿದೆ.
ಮೊದಲು ಅಪ್ಲೈ ಮಾಡಿದ ವೋಟರ್ ಕಾರ್ಡ್ ಆಪ್ರೂವಲ್ ಆಗಿದೆಯಾ ಎಂದು ನೋಡಲು ಅಫೀಷಿಯಲ್ ವೆಬ್ ಸೈಟ್ ಓಪನ್ ಮಾಡಿ.
* ಬಲಗಡೆ ಟ್ರ್ಯಾಕ್ ಅಪ್ಲಿಕೇಷನ್ ಸ್ಟೇಟಸ್ ಎಂಬ ಕಾಲಂ ಕೊಡಲಾಗಿದೆ. ಅದರ ಮೇಲೆ ಕ್ಲಿಕ್ ಮಾಡಿದಾಗ ಸರ್ಚ್ ಬೈ ಅಪ್ಲಿಕೇಷನ್ ನಂಬರ್ ಎಂದು ಒಂದು ಕಾಲಂ ಇರುತ್ತದೆ. * ಅದರಲ್ಲಿ ವೋಟರ್ ಕಾರ್ಡ್ ಗೆ ಅಪ್ಲೈ ಮಾಡಿದಾಗ ಅಕನೊಲೆಜ್‌ಮೆಂಟ್ ಬರುತ್ತದೆ. ಅದರಲ್ಲಿ ರೆಫರೆನ್ಸ್ ನಂಬರ್ ಇರುತ್ತದೆ. ಆ ನಂಬರ್ ಅನ್ನು ಹಾಕಿ ಟ್ರಾನ್ಸ್ ಸ್ಟೇಟಸ್ ಎಂದು ಇರುತ್ತದೆ.
* ಅದನ್ನು ಕ್ಲಿಕ್ ಮಾಡಬೇಕು ಆಗ ವೋಟರ್ ಐಡಿ ಸ್ಟೇಟಸ್ ಕಾಣಿಸುತ್ತದೆ.
ಸಬ್ ಮಿಟ್ ಆಗಿದೆಯಾ, ಬಿಎಲ್ಓ ಅಪೋಯಂಟೆಡ್ ಆಗಿದೆಯಾ, ಫೀಲ್ಡ್ ವೇರಿಫೈಡ್ ಆಗಿದೆಯಾ, ಎಕ್ಸೆಪ್ಟೆಡ್ ಆಗಿದೆಯಾ, ಎಪಿಕ್ ಜನರೇಟ್ ಆಗಿದೆಯಾ ಕಾಣಿಸುತ್ತದೆ. ಎಲ್ಲಾ ಆಪ್ಷನ್ ಗೂ ಗ್ರೀನ್ ಮಾರ್ಕ್ ಬಂದರೆ, ವೋಟರ್ ಐಡಿ ಜನರೇಟ್ ಆಗಿದೆ ಎಂದಾಗುತ್ತದೆ. ಎಪಿಕ್ ಜನರೇಟರ್ ಎಂಬ ಆಪ್ಷನ್ ಕೆಳಗೆ ಒಂದು ನಂಬರ್ ಇರುತ್ತದೆ ಅದು ನಿಮ್ಮ ವೋಟರ್ ಕಾರ್ಡ್ ನಂಬರ್ ಆಗಿರುತ್ತದೆ. ಹೀಗೆ ಬಂದರೆ, ನಿಮ್ಮ ವೋಟರ್ ಕಾರ್ಡ್ ಅಪ್ರೂವಲ್ ಆಗಿದೆ ಎಂದರ್ಥ. ವೋಟರ್ ಕಾರ್ಡ್‌ಗೆ ಅಪ್ಲೈ ಮಾಡಿದರೂ ವೋಟರ್ ಕಾರ್ಡ್ ಬರದೆ ಇದ್ದಲ್ಲಿ ಕಂಪ್ಯೂಟರ್‌ನಲ್ಲಿ ಆಫೀಷಿಯಲ್ ವೆಬ್ ಸೈಟ್‌ಗೆ ಹೋಗಿ ನೌ ಯುವರ್ ಎಂಬ ಆಪ್ಷನ್ ಕಾಣಿಸುತ್ತದೆ ಅದನ್ನು ಕ್ಲಿಕ್ ಮಾಡಬೇಕು.
ಆಗ ಎಪಿಕ್ ನಂಬರ್ ಎಂದು ಒಂದು ಕಾಲಂ ಕೇಳುತ್ತದೆ. ಅಲ್ಲಿ ಜನರೇಟ್ ಆಗಿರುವ ವೋಟರ್ ಐಡಿ ನಂಬರನ್ನು ಹಾಕಿ ಸರ್ಚ್ ಎಂದು ಕಾಣಿಸುತ್ತದೆ. ಅದನ್ನು ಕ್ಲಿಕ್ ಮಾಡಬೇಕು., ಆಗ ಕೆಳಗಡೆ ಬಿಎಲ್ಓ ಇಲೆಕ್ಟ್ರಿಕಲ್ ಆಫೀಸರ್ ಡೀಟೇಲ್ ಎಂದು ಬರುತ್ತದೆ. ಅದರಲ್ಲಿ ನಿಮ್ಮ ವಾರ್ಡ್ ಗೆ ಸಂಬಂಧಿಸಿದ ಅಧಿಕಾರಿಗಳ ಹೆಸರು ಹಾಗೂ ಮೊಬೈಲ್ ನಂಬರ್ ಇರುತ್ತದೆ. ನಿಮ್ಮ ಏರಿಯಾದ ಬಿಎಲ್ಓ ಅವರ ಹೆಸರು ಮತ್ತು ನಂಬರ್ ಬರುತ್ತದೆ ಮತ್ತು ಇಆರ್‌ಓ ಅವರ ಹೆಸರು ಹಾಗೂ ನಂಬರ್ ಬರುತ್ತದೆ ಮತ್ತು ಡಿಇಓ ಅವರ ಹೆಸರು ಹಾಗೂ ಮೊಬೈಲ್ ನಂಬರ್ ಬರುತ್ತದೆ.
18 ವರ್ಷ ಮೇಲ್ಪಟ್ಟ ಎಲ್ಲರಿಗೂ ಮತದಾರರ ಚೀಟಿ(Voter Card) ಅವಶ್ಯವಾಗಿ ಬೇಕಾಗುತ್ತದೆ. ವೋಟರ್ ಐಡಿ ಪಡೆಯಲು ಅಪ್ಲೈ ಮಾಡಬೇಕಾಗುತ್ತದೆ. ಅಪ್ಲೈ ಮಾಡಿದ ವೋಟರ್ ಕಾರ್ಡ್ ಅಪ್ರೂವಲ್ ಆಗಿದೆಯಾ ಇಲ್ಲವಾ ಎಂದು ಯಾವ ಕಚೇರಿಗೂ ಹೋಗದೇ ಮನೆಯಲ್ಲೇ ಕುಳಿತು ಕಂಪ್ಯೂಟರ್‌ನಲ್ಲಿ ನೋಡಬಹುದು. ಹಾಗಾದರೆ, ಮನೆಯಲ್ಲಿಯೇ ಕಂಪ್ಯೂಟರ್‌ನಲ್ಲಿ ವೋಟರ್ ಕಾರ್ಡ್ ಅಪ್ರೂವಲ್ ಬಗ್ಗೆ ಹಾಗೂ ವೋಟರ್ ಕಾರ್ಡ್ ಗೆ ಅಪ್ಲೈ ಮಾಡಿ ನಿಮಗೆ ತಲುಪದೆ ಇದ್ದರೆ ಏನು ಮಾಡಬೇಕು ಎಂಬ ಸಂಪೂರ್ಣ ಮಾಹಿತಿಯನ್ನು ಇಲ್ಲಿ ತಿಳಿಸಲಾಗಿದೆ. ಕೊನೆವರೆಗೂ ಈ ಸುದ್ದಿಯನ್ನು ಓದು ಮಾಹಿತಿ ಪಡೆದುಕೊಳ್ಳಿ.
ಇವರಲ್ಲಿ ಯಾರಿಗಾದರೂ ಸಂಪರ್ಕ ಮಾಡಿ ವೋಟರ್ ಕಾರ್ಡ್ ಯಾವಾಗ ಬರುತ್ತದೆ ಏನಾಗಿದೆ ಎಂಬೆಲ್ಲಾ ಸಂಪೂರ್ಣ ಮಾಹಿತಿಯ ಬಗ್ಗೆ ತಿಳಿದುಕೊಳ್ಳಬಹುದು. ಬಿಎಲ್ಓ ಅಧಿಕಾರಿಗಳನ್ನು ಕೇಳಿದಾಗ ಸರಿಯಾದ ಮಾಹಿತಿ ಗೊತ್ತಾಗದೆ ಇದ್ದಲ್ಲಿ, ಇದೇ ವೆಬ್‌ಸೈಟ್‌ನಲ್ಲಿ ಕೆಳಗಡೆ ಟೋಲ್ ಫ್ರೀ ನಂಬರ್ ಇರುತ್ತದೆ. ಅದಕ್ಕೆ ಕರೆ ಮಾಡುವ ಮೂಲಕ ಹೆಚ್ಚಿನ ಮಾಹಿತಿಯನ್ನು ಪಡೆಯಬಹುದು. ಈ ಮಾಹಿತಿಯನ್ನು ತಪ್ಪದೆ ಎಲ್ಲರಿಗೂ ತಿಳಿಸಿ, ವೋಟರ್ ಕಾರ್ಡ್ ಅಪ್ರೂವಲ್ ಬಗ್ಗೆ ತಿಳಿಯಲು ಹಣ ಖರ್ಚು ಮಾಡದೇ ಕಡಿಮೆ ಸಮಯದಲ್ಲಿ ಸುಲಭವಾಗಿ ತಿಳಿಯಬಹುದು.
Basavaraja.D
ಪ್ರತ್ಯುತ್ತರಅಳಿಸಿSurapa
ಪ್ರತ್ಯುತ್ತರಅಳಿಸಿ