ರೈತರ ತೋಟದಿಂದ ಅಂಚೆ ಮೂಲಕ ಮನೆ ಬಾಗಿಲಿಗೆ ಬರಲಿವೆ ಮಾವಿನ ಹಣ್ಣು ! ಮೇ 3 ರಿಂದ ಸೇವೆ ಆರಂಭ ; ಬುಕ್ಕಿಂಗ್ ಮಾಹಿತಿ ಇಲ್ಲಿದೆ.

ರೈತರ ತೋಟದಿಂದ ಅಂಚೆ ಮೂಲಕ ಮನೆ ಬಾಗಿಲಿಗೆ ಬರಲಿವೆ ಮಾವಿನ ಹಣ್ಣು ! ಮೇ 3 ರಿಂದ ಸೇವೆ ಆರಂಭ ; ಬುಕ್ಕಿಂಗ್ ಮಾಹಿತಿ ಇಲ್ಲಿದೆ.








ಪ್ರತಿ ವರ್ಷದಂತೆ ಈ ಬಾರಿಯೂ ಅಂಚೆ ಇಲಾಖೆ ಹಾಗೂ ಮಾವು ಮಂಡಳಿ ಒಪ್ಪಂದದೊಂದಿಗೆ ರೈತರ ತೋಟದಿಂದಲೇ ನೇರವಾಗಿ ಮನೆ ಬಾಗಿಲಿಗೆ ಮಾವಿನಹಣ್ಣು ಪೂರೈಸಲಾಗುತ್ತಿದೆ. ಮೇ 3ಕ್ಕೆ ಅಂಚೆಯಲ್ಲಿ ಮಾವು ಸೇವೆ ಆರಂಭವಾಗುತ್ತಿದ್ದು, ಬುಕ್ಕಿಂಗ್ ವಿವರ ಇಲ್ಲಿದೆ...


     ಅಂಚೆಯಣ್ಣ ಮನೆಬಾಗಿಲಿಗೆ ಮಾವು ಹೊತ್ತು ತರಲು ಈ ಬಾರಿಯೂ ಸಿದ್ಧವಾಗಿದ್ದಾನೆ! ಅಂಚೆಪತ್ರಗಳನ್ನು ಹೊತ್ತು ತರುತ್ತಿದ್ದ ಅಂಚೆಯಣ್ಣ ಮನೆ ಬಾಗಿಲಿಗೆ ಮಾವಿನ ಹಣ್ಣನ್ನು ಹೊತ್ತು ಬರಲಿದ್ದಾನೆ.

ಒಂದು ಅಥವಾ ಎರಡು ದಿನಗಳಲ್ಲಿ ಹಣ್ಣು ಮನೆ ಬಾಗಿಲಿಗೆ ...

ಬುಕ್ ಮಾಡಿದ ಒಂದು ಅಥವಾ ಎರಡು ದಿನಗಳಲ್ಲಿ ಅಂಚೆಯಣ್ಣನು ಮನೆ ಬಾಗಿಲಿಗೆ ಹಣ್ಣು ತರಲಿದ್ದಾನೆ. ಕರ್ನಾಟಕದ ಮಾವಿನ ಹಣ್ಣನ್ನು ಸ್ಥಳೀಯವಾಗಿ ಮತ್ತು ಹೊರದೇಶಗಳಲ್ಲಿ ಗುರುತಿಸಲು 'ಕರ್ ಸಿರಿ' ಟ್ರೇಡ್ ಮಾರ್ಕ್ ನೋಂದಾಯಿತ ಬ್ರಾಂಡ್ ನ ಮೂಲಕ ಪರಿಚಯಿಸಲಾಗುತ್ತಿದೆ. ಬೆಂಗಳೂರು ನಗರ ವಾಸಿಗಳಿಗೆ ರೈತರಿಂದ ನೇರವಾಗಿ  ನಾನಾ ತಾಜಾ ಮಾವಿನ ಹಣ್ಣುಗಳನ್ನು ಅಂಚೆ ಇಲಾಖೆ ಮೂಲಕ ತಲುಪಿಸುವ ವ್ಯವಸ್ಥೆ ಕಳೆದ ನಾಲ್ಕು ವರ್ಷಗಳಿಂದ ನಡೆಸಲಾಗುತ್ತಿದೆ ಎಂದು ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮದ ವ್ಯವಸ್ಥಾಪಕ ನಿರ್ದೇಶಕ ಸಿ.ಜಿ ನಾಗರಾಜ್ ತಿಳಿಸಿದರು.


ಮಾವು ಮಾರಾಟಕ್ಕೆ ವೆಬ್ ಪೋರ್ಟಲ್ ರಚಿಸಲಾಗಿದೆ. ರೈತರು ತಮಮ್ ಜಮೀನುಗಳಲ್ಲಿ ಬೆಳೆದಿರುವ ಮಾವಿನ ತಳಿಗಳು, ಬೆಲೆ ಮತ್ತು ಮೊಬೈಲ್ ಸಂಖ್ಯೆಯ ವಿವರಗಳನ್ನು ವೆಬ್ಸೈಟ್ ನಲ್ಲಿ ದಾಖಲಿಸಿದ್ದಾರೆ. ಗ್ರಾಹಕರು ಆನ್ಲೈನ್ ನಲ್ಲಿ ಬುಕ್ ಮಾಡಿದರೆ, ರೈತರ ತೋಟದಿಂದ ನೇರವಾಗಿ ಗ್ರಾಹಕರ ಮನೆ ಬಾಗಿಲಿಗೆ ಬರಲಿದೆ. 

ಆನ್ಲೈನ್ ನಲ್ಲಿ ಮಾವಿನ ಹಣ್ಣು ಬುಕ್ ಮಾಡಿದರೆ ಅಂಚೆ ಸಿಬ್ಬಂಧಿ ಮನೆಗೆ ಡೆಲಿವೆರಿ ಕೊಡಲಿದ್ದಾರೆ. ಈ ಸಂಬಂಧ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮವು ಅಂಚೆ ಇಲಾಖೆಯೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಈ ಬಾರಿ ಅಂಚೆ ಮೂಲಕ ಗುಣಮಟ್ಟದ ಮಾವಿನ ಹಣ್ಣುಗಳನ್ನು ನೇರವಾಗಿ ಮನೆ ಬಾಗಿಲಿಗೆ ತರಿಸಿಕೊಳ್ಳಲು ಅನುಕೂಲವಾಗುವಂತೆ ಕರ್ ಸಿರಿ' ಆನ್ಲೈನ್ ಪೋರ್ಟಲ್ ಅನ್ನು ಮೇ ೩ರಿಂದ ಆರಂಭಿಸಲಾಗುತ್ತಿದೆ.





ಅಂಚೆಯಲ್ಲಿ ಮಾವಿನ ಹಣ್ಣು ಬುಕ್ ಮಾಡುವುದು ಹೇಗೆ ?

"ಗ್ರಾಹಕರು ಕರ್ನಾಟಕದ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮದ ವೆಬ್ ಸೈಟ್ ಗೆ ಹೋದರೆ ಅಲ್ಲಿ ನೋಂದಾಯಿತ ರೈತರ ವಿಭಾಗಗಳು ತೆರೆದುಕೊಳ್ಳುತ್ತದೆ. ತಮಗೆ ಬೇಕಾದ ರೈತರ ಹೆಸರಿನ ವಿಭಾಗಕ್ಕೆ ಹೋದರೆ ಮಾವಿನ ಹಣ್ಣಿನ ಫೋಟೋಗಳು, ಆಯಾ ತಳಿಯ ಹೆಸರು ಹಾಗೂ ದರದೊಂದಿಗೆ ಪ್ರದರ್ಶನಗೊಂಡಿರುತ್ತದೆ. ಗ್ರಾಹಕರು ತಮಗೆ ಬೇಕಾದ ತಳಿಯ ಮಾವಿನ ಹಣ್ಣಿನ ಮೇಲೆ ಕ್ಲಿಕ್ ಮಾಡಿ, ಆನ್ಲೈನ್ ನಲ್ಲೆ ಹಣ ಪಾವತಿಸಬೇಕು. ಬುಕ್ ಆದ ಕೂಡಲೇ ಇ-ಮೇಲ್ ಮಾತು ಮೊಬೈಲ್ ಮೂಲಕ ಅಂಚೆ ಇಲಾಖೆ ಹಾಗೂ ರೈತರಿಗೆ ಸಂದೇಶ ರವಾನೆಯಾಗುತ್ತದೆ. ಒಬ್ಬರು ಕನಿಷ್ಠ ೩ ಕೆ.ಜಿ ಹಣ್ಣು ಖರೀದಿಸಬೇಕಾಗುತ್ತದೆ ಎಂದು ತಿಳಿಸಿದರು.


          ಈ ಬಾರಿ ಮಾವು ಮೇಳ ಇಲ್ಲ ! 
ಪ್ರತಿ ವರ್ಷ ರಾಜಧಾನಿ ಬೆಂಗಳೂರಿನ ಲಾಲ್ ಬಾಗ್ ನಲ್ಲಿ ಬೃಹತ್ ಮಾವು ಮೇಳವನ್ನು ತೋಟಗರಿಕೆ ಇಲಾಖೆ ಹಾಗೂ ಮಾವು ನಿಗಮ ಆಯೋಜಿಸುತ್ತಿದ್ದವು. ರೈತರೇ ನೇರವಾಗಿ ಬಂದು ಮಾರಾಟ ಮಾಡುತ್ತಿದ್ದು, ಉತ್ತಮ ಹಣ್ಣುಗಳು ಸಿಗುತ್ತಿದ್ದವು. ಈ ಬಾರಿ ಚುನಾವಣೆ ಹಿನ್ನಲೆ ಈವರೆಗೂ ಮಾವು ಮೇಳ ಆಯೋಜನೆಯಾಗಿಲ್ಲ.





ಹೆಚ್ಚಿನ ಮಾಹಿತಿಗಾಗಿ ಕೆಳಗಿರುವ ವಾಟ್ಸಪ್ಪ್ ಗ್ರೂಪ್ ಸೇರ್ಪಡೆಗೊಳ್ಳಿ




@@@@@@@@@@@@@@@@@@@@@@@@@












ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು