ಪ್ಯಾನ್ ಕಾರ್ಡ್ ಮತ್ತು ಆಧಾರ್ ಕಾರ್ಡ್ ಲಿಂಕ್ ಮಾಡಲು ಕೊನೆಯ 3೦ ದಿನಗಳು ಮಾತ್ರ ಅವಕಾಶ, ಆದ್ರೆ ಈ ತಪ್ಪು ಮಾಡಿದರೆ 10,000 ದಂಡ ಪಕ್ಕ ಎಚ್ಚರ !
ಹೊಸ ಸಂಸತ್ ಕಟ್ಟಡದ ನೆನಪಿಗಾಗಿ 75 ರೂಪಾಯಿ ನಾಣ್ಯವನ್ನು ಬಿಡುಗಡೆ ಮಾಡಲಾಗುವುದು
ದೇಶದಲ್ಲಿ ಕೆಲವು ದಿನಗಳ ಹಿಂದೆ ಅತಿ ಹೆಚ್ಚು ಸದ್ದು ಮಾಡಿದ ವಿಷಯವೆಂದರೆ ಅದು ಪ್ಯಾನ್ ಕಾರ್ಡ್ ಮತ್ತು ಆಧಾರ್ ಕಾರ್ಡ್ ಲಿಂಕ್ ಆದೇಶ ಇದನ್ನು ದೇಶದ ಆದಾಯ ತೆರಿಗೆ ಇಲಾಖೆಯಿಂದ ಪ್ರತಿಯೊಬ್ಬರ ಪ್ಯಾನ್ ಕಾರ್ಡ್ ಗಳಿಗೂ ಆಧಾರ್ ಕಾರ್ಡ್ ಲಿಂಕ್ ಮಾಡುವುದು ಕಡ್ಡಾಯ ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ನೀವು ದಂಡ ತೆರಬೇಕಾಗುತ್ತದೆ ಅಥವಾ ನಿಮ್ಮ ಪ್ಯಾನ್ ಕಾರ್ಡ್ ಗಳನ್ನೂ ನಿಷ್ಕ್ರಿಯಗೊಳಿಸಲಾಗುತ್ತದೆ ಎಂಬ ನಿಯಮವನ್ನು ಜಾರಿ ಮಾಡಲಾಗಿತ್ತು.
ಅಲ್ಲದೆ ಈ ಬಗ್ಗೆ ಆದಾಯ ತೆರಿಗೆ ಇಲಾಖೆ 2022 ರಲ್ಲಿ ಲಿಂಕ್ ಮಾಡಲು ಆದೇಶ ಹೊರಡಿಸಿದ್ದು ಆ ಸಮಯದಲ್ಲಿ ಯಾವುದೇ ಹೆಚ್ಚು ಪ್ಯಾನ್ ಕಾರ್ಡ್ ಗಳು ಆಧಾರ್ ಕಾರ್ಡ್ ಗೆ ಲಿಂಕ್ ಆಗದೆ ಇರುವ ಕಾರಣ 2023ರಲ್ಲಿ ಮತ್ತೆ ಹೊಸ ಬದಲಾವಣೆಯೊಂದಿಗೆ ಕೆಲವು ನಿಯಮಗಳೊಂದಿಗೆ ಅಂದರೆ ಪ್ಯಾನ್ ಕಾರ್ಡ್ ಗೆ ಆಧಾರ್ ಕಾರ್ಡ್ ಲಿಂಕ್ ಆದೇಶವನ್ನು ಮಾಡಲಾಗಿತ್ತು. ಆದರೆ ಇದರಲ್ಲೂ ಕೆಲವು ಸಮಸ್ಯೆಗಳು ಜನರಿಗೆ ಎದುರಾದ ಕಾರಣ ಆದಾಯ ತೆರಿಗೆ ಇಲಾಖೆ ಮೊದಲು ನಿಗದಿ ಮಾಡಿದ್ದ ಮಾರ್ಚ್ 30 ನೇ ದಿನಾಂಕವನ್ನು ಕೇಂದ್ರ ಸರ್ಕಾರವು ಮುಂದೂಡಲು ತಿಳಿಸಿದ್ದು ನಂತರದಲ್ಲಿ ಮತ್ತೆ ಆಧಾರ್ ಕಾರ್ಡ್ ಲಿಂಕ್ ಮಾಡಲು ಕೆಲವು ದಿನಗಳ ಅವಕಾಶ ನೀಡಿದೆ.