ಮಹಿಳಾ ಸಬಲೀಕರಣಕ್ಕೆ ಮಹಿಳಾ ಸಮ್ಮಾನ್ ಯೋಜನೆ :

ಮಹಿಳಾ ಸಬಲೀಕರಣಕ್ಕೆ ಮಹಿಳಾ ಸಮ್ಮಾನ್ ಯೋಜನೆ :







ದೊಡ್ಡ ಬ್ಯಾಂಕ್ ಗಳು ಈಗ ನೀಡುತ್ತಿರುವ ಸ್ಥಿರ ಠೇವಣಿಗಳಿಗೆ ಹೋಲಿಸಿದರೆ, ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣಪತ್ರವು ಅತ್ಯಂತ ಜನಪ್ರಿಯವಾಗಿದೆ. ಇದು ಬ್ಯಾಂಕ್ ಗಳಿಗಿಂತ ಕನಿಷ್ಠ ಶೇ, 0.50 ರಿಂದ 1 ರಷ್ಟು ಹೆಚ್ಚಿನ ಬಡ್ಡಿದರವನ್ನು ನೀಡುತ್ತದೆ. 
ಉದಾ : HDFC ಬ್ಯಾಂಕ್, ICICI ಬ್ಯಾಂಕ್, ಮತ್ತು ಕೋಟಕ್ ಮಹಿಂದ್ರಾ ಬ್ಯಾಂಕ್, ಎರಡು ವರ್ಷಗಳಲ್ಲಿ ಮುಕ್ತಾಯಗೊಳ್ಳುವ ಸ್ಥಿರ ಠೇವಣಿಗಳ ಮೇಲೆ ಶೇಕಡಾ 7 ರಷ್ಟು ಬಡ್ಡಿದರವನ್ನು ನೀಡುತ್ತವೆ. ಸಾರ್ವಜನಿಕ ವಲಯದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಶೇ 6.75 ರಷ್ಟು ಬಡ್ಡಿಯನ್ನು ನೀಡುತ್ತದೆ. ಇವುಗಳಿಗೆ ಹೋಲಿಸಿದರೆ ಮಹಿಳಾ ಸಮ್ಮಾನ್ ಯೋಜನೆ ಹೆಚ್ಚಿನ ಅಂದರೆ ಶೇ. 7.5 ರಷ್ಟು ಬಡ್ಡಿ ದರವನ್ನು ಹೊಂದಿದ್ದು ಈ ಬಡ್ಡಿಯನ್ನು ಪ್ರತಿ ಮೂರು ತಿಂಗಳಿಗೊಮ್ಮೆ ಲೆಕ್ಕಾಚಾರ ಹಾಕಿ ಖಾತೆಗೆ ವರ್ಗಾಯಿಸಲಾಗುತ್ತದೆ.


ಹೂಡಿಕೆ ಮತ್ತು ಉಳಿತಾಯದಲ್ಲಿ ಮಹಿಳೆಯರ ಭಾಗವಹಿಸುವಿಕೆಯನ್ನು ಹೆಚ್ಚಿಸಲು ಮತ್ತು ಅವರನ್ನು ಆರ್ಥಿಕವಾಗಿ ಬಲಪಡಿಸಲು ಭಾರತ ಸರ್ಕಾರವು ಸಣ್ಣ ಉಳಿತಾಯ ಯೋಜನೆಯಡಿ ಮಹಿಳಾ ಸಮ್ಮಾನ್ ಉಳಿತಾಯ ಯೋಜನೆಯನ್ನು ಪರಿಚಯಿಸಿದೆ. ಈ ಯೋಜನೆಯಲ್ಲಿ ಹೆಣ್ಣುಮಕ್ಕಳು ಮತ್ತು ಮಹಿಳೆಯರು ಮಾತ್ರ ಉಳಿತಾಯ ಮಾಡಬಹುದು. ಈ ಯೋಜನೆಯ ಮೂಲಕ ಕಡಿಮೆ ಸಮಯದಲ್ಲಿ ಹೆಚ್ಚು ಲಾಭ ಪಡೆಯಬಹುದಾಗಿದೆ.
               ಇಂದು ಮಹಿಳೆಯರು ಪುರುಷರಿಗೆ ಸರಿಸಮನಾಗಿ ಎಲ್ಲ ಕ್ಷೇತ್ರದಲ್ಲೂ ಸಾಧನೆ ಮಾಡುತ್ತಿದ್ದಾರೆ. ಮಹಿಳಾ ಸಬಲೀಕರಣದ ಜೊತೆಗೆ ಆರ್ಥಿಕ ಸ್ವಾವಲಂಬನೆ ಸಾಧಿಸಿದರೆ ಅವರು ಆಯ್ಕೆ ಮಾಡಿಕೊಂಡ ಕ್ಷೇತ್ರದಲ್ಲಿ ಯಾವುದೇ ಅಡೆತಡೆಗಳಿಲ್ಲದೆ ಯಶಸ್ವಿಯಾಗಬಹುದು. ಆದ್ದರಿಂದ ಸರ್ಕಾರ ಈ ಯೋಜನೆಯನ್ನು ಜಾರಿಗೆ ತಂದಿದೆ.





ಈ ಯೋಜನೆಯು ಎಲ್ಲ ಅಂಚೆ ಕಚೇರಿಗಳಲ್ಲಿ ಲಭ್ಯವಿದೆ. ಯೋಜನೆಯ ಅವಧಿ ಎರಡು ವರ್ಷಗಳಾಗಿದ್ದು, ಈ ಯೋಜನೆಯಲ್ಲಿ ಕನಿಷ್ಠ 1,000 ರೂಪಾಯಿಗಳಿಂದ ಗರಿಷ್ಟ 2,00,000 ದವರೆಗೂ ಹಣವನ್ನು ಠೇವಣಿ ಇಡಬಹುದು. ಒಬ್ಬರು ಎಷ್ಟು ಖಾತೆಗಳನ್ನು ಬೇಕಾದರೂ ತೆರೆಯಬಹುದಾಗಿದೆ. ಈ ಯೋಜನೆಯು ಆರಂಭವಾದ ಎರಡು ವರ್ಷಗಳ ನಂತರ ಪಕ್ಷವಾಗುತ್ತದೆ. ಖಾತೆಯನ್ನು ತೆರೆದ 6 ತಿಂಗಳ ನಂತರ ಖಾತೆಯನ್ನು ಮುಕ್ತಾಯ ಮಾಡಿಕೊಳ್ಳಲು ಅವಕಾಶವಿದೆ. ಒಂದು ವರ್ಷದ ನಂತರ ಭಾಗಶಃ ಹಣವನ್ನು ಹಿಂಪಡೆಯಲು ಅವಕಾಶವಿದ್ದು ಖಾತೆಯಲ್ಲಿ ಇರುವ ಬಾಕಿ ಮೊತ್ತದ ಶೇ 40 ರಷ್ಟು ಹಣವನ್ನು ಹಿಂಪಡೆಯಲು ಅವಕಾಶವಿದೆ.
ಈ ಯೋಜನೆಯಲ್ಲಿ ಒಮ್ಮೆ ಮಾತ್ರ ಠೇವಣಿ ಮಾಡಲು ಅವಕಾಶವಿದೆ. ಹಾಗಾಗಿ, ಎಷ್ಟು ಠೇವಣಿ ಮಾಡಬೇಕು ಎಂಬುದನ್ನು ಮೊದಲೇ ಲೆಕ್ಕಾಚಾರ ಹಾಕಿ, ಅವರವರ ಅನುಕೂಲಕ್ಕೆ ತಕ್ಕಂತೆ ಇಲ್ಲಿ ಠೇವಣಿ ಇಟ್ಟರೆ ಒಳ್ಳೆಯದು. ಖಾತೆದಾರರ ಮರಣದ ನಂತರ ಅಥವಾ ಮಾರಣಾಂತಿಕ ಕಾಯಿಲೆಗೆ ಒಳಗಾದರೆ ಖಾತೆಯನ್ನು ಮುಕ್ತಾಯಗೊಳಿಸಿಕೊಳ್ಳಲು ಅವಕಾಶವಿದೆ. ಖಾತೆಯನ್ನು ಮುಕ್ತಾಯಗೊಳಿಸಿಕೊಂಡರೆ ಅಸಲಿನ ಮೊತ್ತದ ಮೇಲಿನ ಬಡ್ಡಿಯನ್ನು ಯೋಜನೆಗೆ ಅನ್ವಯಿಸುವ ದರದಲ್ಲಿ ಪಾವತಿಸಲಾಗುತ್ತದೆ. 
ದೇಶದ ಪೌರತ್ವ ಹೊಂದಿರುವ ಯಾವುದೇ ಮಹಿಳೆಯು ಈ ಖಾತೆಯನ್ನು ತೆರೆಯಬಹುದಾಗಿದೆ. ಅಪ್ರಾಪ್ತ ಬಾಲಕಿಯರ ಹೆಸರಿನಲ್ಲಿ ಅವರ ಪೋಷಕರು ಖಾತೆ ತೆರೆಯಬಹುದು. ಆಜಾದಿ ಕಾ ಅಮೃತ್ ಮಹೋತ್ಸವದ ನೆನಪಿಗಾಗಿ ಜಾರಿಗೆ ತಂದಿರುವ ಈ ಯೋಜನೆಯು ಮಾರ್ಚ್ 2025 ರ ವರೆಗೆ ಎರಡು ವರ್ಷಗಳ ಅವಧಿಗೆ ಲಭ್ಯವಿರುತ್ತದೆ. ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣಪತ್ರದ ಅಡಿಯಲ್ಲಿ ನೀಡಲಾಗುವ ಬಡ್ಡಿ ದರವು ಉಳಿದ ಸಣ್ಣ ಉಳಿತಾಯ ಯೋಜನೆಗಲಿಗಿಂತಾ ಹೆಚ್ಚಾಗಿದ್ದು ಮಹಿಳೆಯರಿಗೆ ವರದಾನವಾಗಿದೆ. ಈ ಯೋಜನೆಗೆ ವಾರ್ಷಿಕ ಶೇ. 7.5 ರಷ್ಟು ಬಡ್ಡಿ ದರವನ್ನು ನಿಗದಿ ಮಾಡಲಾಗಿದೆ. ಈ ಬಡ್ಡಿಯನ್ನು ಪ್ರತಿ ಮೂರು ತಿಂಗಳಿಗೊಮ್ಮೆ ಲೆಕ್ಕಾಚಾರ ಹಾಕಿ ಖಾತೆಗೆ ವರ್ಗಾಯಿಸಲಾಗುತ್ತದೆ. 
ಕೆಲವು ಸಣ್ಣ ಹಣಕಾಸು ಬ್ಯಾಂಕುಗಳು ಮಹಿಳಾ ಸಮ್ಮಾನ್ ಉಳಿತಾಯ ಯೋಜನೆಯಷ್ಟೇ ಅಥವಾ ಅದಕ್ಕಿಂತ ಸ್ವಲ್ಪ ಹೆಚ್ಚಿನ ಲಾಭವನ್ನು ನೀಡಬಹುದು. ಆದರೆ ಹೂಡಿಕೆದಾರರು ಹೂಡಿಕೆ ಮಾಡುವ ಮೊದಲು ಇಂತಹ ಹಣಕಾಸು ಸಂಸ್ಥೆಗಳು ಎಷ್ಟು ಸುರಕ್ಷಿತ ಮತ್ತು ವಿಶ್ವಾಸಾರ್ಹವಾಗಿದೆ ಎಂಬುದನ್ನು ಪರಿಶೀಲಿಸಬೇಕು. ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣಪತ್ರ ಯೋಜನೆಯು ಕೇಂದ್ರ ಸರ್ಕಾರದಿಂದ ಬೆಂಬಲಿತವಾಗಿದ್ದು ಇದು ಸರ್ಕಾರೀ ಬೆಂಬಲಿತ ಯೋಜನೆಯಾಗಿದ್ದು ಅದು ಮಹಿಳೆಯರಿಗೆ ಖಾತರಿಯ ಬಡ್ಡಿದರವನ್ನು ನೀಡುತ್ತದೆ. ಆದ್ದರಿಂದ ಮಾರುಕಟ್ಟೆಯ ಏರಿಳಿತಗಳ ಬಗ್ಗೆ ಚಿಂತಿಸಬೇಕಾಗಿಲ್ಲ. ಮಹಿಳೆಯರು ಹೂಡುವ ಹಣಕ್ಕೆ ಭದ್ರತೆ ಮತ್ತು ಸುರಕ್ಷತೆಯನ್ನು ಮಹಿಳಾ ಸಮ್ಮಾನ್ ಉಳಿತಾಯ ಯೋಜನೆ ನೀಡುತ್ತದೆ. ಚಾಲ್ತಿಯಲ್ಲಿರುವ ಬಡ್ಡಿದರಗಳನ್ನು ಪರಿಗಣಿಸಿ ನೋಡಿದರೆ ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣಪತ್ರವು ಉತ್ತಮ ಹೂಡಿಕೆಯ ಆಯ್ಕೆಯಾಗಿದೆ. ಸೀಮಿತ ಉಳಿತಾಯವನ್ನು ಹೊಂದಿರುವವರು ಮತ್ತು ಅಲ್ಪಾವಧಿಯಲ್ಲಿ ಸಮಂಜಸವಾದ ಆದಾಯವನ್ನು ಬಯಸುವವರು ಬ್ಯಾಂಕ್ ಸ್ಥಿರ ಠೇವಣಿಗಳ ಬದಲಿಗೆ ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣಪತ್ರ ಯೋಜನೆಯಲ್ಲಿ ಹಣವನ್ನು ಉಳಿತಾಯ ಮಾಡಬಹುದು.
ಮಹಿಳಾ ಸಮ್ಮಾನ್ ಯೋಜನೆಯನ್ನು ಭಾರತೀಯ ಅಂಚೆ ಮೂಲಕ ಒದಗಿಸಲಾಗಿದೆ. ನಿಮ್ಮ ಹತ್ತಿರದ ಅಂಚೆ ಕಚೇರಿಗೆ ಭೇಟಿ ನೀಡಿ ಖಾತೆ ತೆರೆಯುವ ಮತ್ತು ಕೆವೈಸಿ ಅರ್ಜಿಯನ್ನು ಭರ್ತಿ ಮಾಡಿ ಖಾತೆಯನ್ನು ತೆರೆಯಬಹುದು. ಖಾತೆಯನ್ನು ತೆರೆಯುವ ಮೂಲಕ ಸಹ ಡೌನ್ಲೋಡ್ ಮಾಡಿಕೊಳ್ಳಬಹುದು. ಖಾತೆ ತೆರೆಯಲು ಆಧಾರ್ ಕಾರ್ಡ್ ಮತ್ತು ಪ್ಯಾನ್ ಕಾರ್ಡ್ ವಿಳಾಸದ ಪುರಾವೆ ನೀಡಬೇಕಾಗುತ್ತದೆ. ಹೂಡಿಕೆಯ ಹಣವನ್ನು ನಗದು ಅಥವಾ ಚೆಕ್ ರೂಪದಲ್ಲಿ ನೀಡಬಹುದು. ಖಾತೆಯನ್ನು ತೆಗೆದ ನಂತರ ಹೂಡಿಕೆದಾರರಿಗೆ ಅಂಚೆ ಇಲಾಖೆಯಿಂದ ಪಾಸ್ ಪುಸ್ತಕವನ್ನು ನೀಡಲಾಗುತ್ತದೆ.




ಹೆಚ್ಚಿನ ಮಾಹಿತಿಗಾಗಿ ಕೆಳಗಿರುವ ವಾಟ್ಸಪ್ಪ್ ಗ್ರೂಪ್ ಸೇರ್ಪಡೆಗೊಳ್ಳಿ



@@@@@@@@@@@@@@@@@@@@@@@@@














ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು