10 ವರ್ಷಗಳ ಹಿಂದೆ ವಿತರಣೆಯಾದ ಆಧಾರ್ ಸಂಖ್ಯೆಗಳ ದಾಖಲೆ ನವೀಕರಣ

10 ವರ್ಷಗಳ ಹಿಂದೆ ವಿತರಣೆಯಾದ ಆಧಾರ್ ಸಂಖ್ಯೆಗಳ ದಾಖಲೆ ನವೀಕರಣ 


ಕಳೆದ 10 ವರ್ಷಗಳಿಗೂ ಹಿಂದೆ ವಿಶಿಷ್ಠ ಗುರುತಿನ ಸಂಖ್ಯೆ ಪಡೆದ ಆಧಾರ್ ನೋಂದಣಿದಾರರು ತಮ್ಮ ದಾಖಲಾತಿಗಳ ನವೀಕರಣ ಮಾಡಿಕೊUಳ್ಳಬೇಕು ಎಂದು ಭಾರತೀಯ ವಿಶಿಷ್ಟ ಗುರುತು ಪ್ರಾಧಿಕಾರವು (ಯುಐಡಿಎಐ)ಮಂಗಳವಾರ ಸೂಚಿಸಿದೆ.

ಈ ಕುರಿತು ಪ್ರಕಟಣೆ ಹೊರಡಿಸಿರುವ ಯುಐಡಿಎಐ ಆಧಾರ್ ಕಾರ್ಡ್ ಗೆ ನೀಡಲಾದ ಪ್ರಮುಖ ದಾಖಲೆಗಳಾದ ನಿವಾಸದ ವಿಳಾಸ ಧೃಡೀಕರಣ ಪತ್ರ, ವ್ಯಕ್ತಿಯ ಗುರುತಿನ ದಾಖಲೆಗಳ ಜೊತೆಗೆ ಇತರ ಪ್ರಮುಖ ಮಾಹಿತಿಗಳನ್ನು ಸದ್ಯದ ದಾಖಲೆಗಳಿಗೆ ಅನುಗುಣವಾಗಿ ತಿದ್ದುಪಡಿ ಮಾಡಿಕೊಳ್ಳಬೇಕು. ಒಟ್ಟಿನಲ್ಲಿ ಎಲ್ಲ ಹಳೆಯ ಆಧಾರ್ ನೋಂದಣಿದಾರರು ತಮ್ಮ ದಾಖಲೆಗಳಲ್ಲಿನ ವಿವರಗಳು ' ಲೇಟೆಸ್ಟ್ ' ಆಗಿರುವಂತೆ ನಿಗಾವಹಿಸಲು ತಿಳಿಸಲಾಗಿದೆ.


10 ವರ್ಷಗಳ ಮುನ್ನ ಆಧಾರ್ ಪಡೆದವರು, ಒಂದು ವೇಳೆ ಮಧ್ಯದಲ್ಲಿ ದಾಖಲೆಗಳ ನವೀಕರಣ ಅಥವಾ ಪೂರಕ ಮಾಹಿತಿಗಳ ಪರಿಷ್ಕರಣೆ ಮಾಡಿಸಿದ್ದಲ್ಲಿ ಪುನಃ ನವೀಕರಣಕ್ಕೆ ಮುಂದಾಗುವ ಅಗತ್ಯವಿಲ್ಲ. ಒಂದು ಬಾರಿಯೂ ಕೂಡ ದಾಖಲೆ/ಮಾಹಿತಿ ತಿದ್ದುಪಡಿ ಮಾಡಿಸಿದವರು ಮಾತ್ರ ಶೀಘ್ರದಲ್ಲಿ ಸಮೀಪದ ಆಧಾರ್ ನೋಂದಣಿ ಕೇಂದ್ರಗಳಿಗೆ ಭೇಟಿ ನೀಡಬೇಕು. ದಾಖಲೆಗಳ ನವೀಕರಣ ನಿಗದಿತ ಶುಲ್ಕವನ್ನು ಕೂಡ ಪಾವತಿಸಬೇಕು ಎಂದು ತಿಳಿಸಲಾಗಿದೆ.


ಕಳೆದ 10 ವರ್ಷಗಳಿಂದ ಸರ್ಕಾರಿ ಸೌಲಭ್ಯಗಳನ್ನು ಪಡೆಯುವಲ್ಲಿ ಆಧಾರ್ ಸಂಖ್ಯೆಯು ಪ್ರಮುಖ ಪಾತ್ರ ವಹಿಸುತ್ತದೆ. ಆಧಾರ್ ಸಂಖ್ಯೆಗೆ ಬ್ಯಾಂಕ್ ಖಾತೆಯ ಜೋಡಣೆಯೊಂದಿಗೆ ವಿವಿಧ ಯೋಜನೆಗಳ ಸಹಾಯಧನವು ನೇರವಾಗಿ ಫಲಾನುಭವಿಗಳಿಗೆ ಬ್ಯಾಂಕ್ ಖಾತೆಗೆ ವರ್ಗಾವಣೆ (ಡಿಬಿಟಿ) ಕೂಡ ಸುಲಭವಾಗಿ ಸಾಧ್ಯವಾಗುತ್ತಿದೆ.

ಆತ್ಮೀಯ ಆಧಾರ್ ಕಾರ್ಡ್ ಹೊಂದಿರುವ ಗ್ರಾಹಕರೇ 2009 ರಿಂದ 2015 ರಲ್ಲಿ ಆಧಾರ್ ಕಾರ್ಡ್ ಮಾಡಿಸಿಕೊಂಡಿರುವ ಎಲ್ಲರು ತಮ್ಮ ಹತ್ತಿರ ಈಗ ಇರುವ ಆಧಾರ್ ಕಾರ್ಡ್ ಗೆ ತಮ್ಮಲ್ಲಿರುವ ಡಾಕ್ಯೂಮೆಂಟ್ಸ್ ( ವೋಟರ್ ಐಡಿ, ರೇಷನ್ ಕಾರ್ಡ್, ಬ್ಯಾಂಕ್ ಪಾಸ್ ಬುಕ್, ಡ್ರೈವಿಂಗ್ ಲೈಸೆನ್ಸ್, ಪಾಸ್ ಪೋರ್ಟ್.... ಇತ್ಯಾದಿ ) ತಂದು ಕಡ್ಡಾಯವಾಗಿ ಅಪಡೇಟ್ ಮಾಡಿಕೊಳ್ಳಬೇಕು. ಒಂದು ವೇಳೆ ಅಪಡೇಟ್ ಮಾಡದಿದ್ದಲ್ಲಿ ತಮ್ಮ ಆಧಾರ್ ಕಾರ್ಡ್ ನಿಷ್ಕ್ರಿಯಗೊಳ್ಳುತ್ತದೆ. ( ಆಧಾರ್ ಕಾರ್ಡ್ ಬಂದ್ ಆಗುವ ಸಾಧ್ಯತೆ ಇರುತ್ತದೆ ). ಆದ ಕಾರಣ  ಈ ಮೇಲೆ ತಿಳಿಸಿರುವ ದಾಖಲೆಗಳನ್ನು ತಂದು ತಮ್ಮ ಆಧಾರ್ ಕಾರ್ಡ್ ಅಪಡೇಟ್ ಮಾಡಿಕೊಳ್ಳಿ.






ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು