ರಾಜ್ಯ ಸರ್ಕಾರದ ಷರತ್ತಿನ ಪ್ರಕಾರ FCI ನಿಗದಿಪಡಿಸಿದ ದರಕ್ಕೆ ಅಕ್ಕಿ ಪೂರೈಸಲು ಆಂಧ್ರಪ್ರದೇಶ ಸರ್ಕಾರ ಮುಂದೆ ಬಂದಿದೆ ಎನ್ನಲಾಗಿದ್ದು, ಅನ್ನಭಾಗ್ಯ ಯೋಜನೆಯಡಿ ಹೆಚ್ಚುವರಿ ತಲಾ ಐದು ಕೆಜಿ ವಿತರಣೆ ಸಮಸ್ಯೆ ಬೇಗ ಬಗೆಹರಿಯುವ ಲಕ್ಷಣಗಳು ಗೋಚರಿಸಿವೆ.
ರಾಜ್ಯದ ಆಹಾರ ಮತ್ತು ನಾಗರೀಕ ಪೂರೈಕೆ ಖಾತೆ ಸಚಿವ ಕೆ ಎಚ್ ಮುನಿಯಪ್ಪ ಅವರಿಗೆ ಆಂಧ್ರದ ಆಹಾರ ಮತ್ತು ನಾಗರೀಕ ಸರಬರಾಜಿ ಸಚಿವ ಕಾರುಮುರಿ ವೆಂಕಟನಾಗೇಶ್ವರರಾವ್ ನೇತೃತ್ವದ ನಿಯೋಗ ಶುಕ್ರವಾರ ಬೆಂಗಳೂರಿನಲ್ಲಿ ಭೇಟಿ ಮಾಡಿ ಮಾತುಕತೆ ನಡೆಸಿ, ಪೂರೈಸಲಿರುವ ಅಕ್ಕಿ ನಮೂನೆಯನ್ನು ತೋರಿಸಿತು. FCI ದರದಲ್ಲಿ ಅಕ್ಕಿ ಪೂರೈಸಲು ಅವಕಾಶ ನೀಡಬೇಕು. ಜತೆಗೆ ನಿರ್ದಿಷ್ಟ ಪ್ರಮಾಣವನ್ನು ತಿಳಿಸಬೇಕು. ಸಾಧ್ಯವಾದಷ್ಟು ಬೇಗ ಅನುಮತಿ ನೀಡಿದರೇ ಪೂರಕ ಸಿದ್ಧತೆಗೆ ಅನುಕೂಲವಾಗುತ್ತದೆ ಎಂದು ನಿಯೋಗ ಮನವಿ ಮಾಡಿಕೊಂಡಿದೆ.
ಮಾತುಕತೆ ವಿವರಗಳನ್ನು ಮುಖ್ಯಮಂತ್ರಿ ಗಮನಕ್ಕೆ ತಂದು ಅವರ ಒಪ್ಪಿಗೆ ಪಡೆದು ನಂತರ ಮಾಹಿತಿ ನೀಡುವುದಾಗಿ ನಿಯೋಗಕ್ಕೆ ಕೆ ಎಚ್ ಮುನಿಯಪ್ಪ ಭರವಸೆ ನೀಡಿದರು ಎಂದು ಮೂಲಗಳು ತಿಳಿಸಿವೆ.
ಆಂಧ್ರಪ್ರದೇಶ ಜತೆಗೆ ತೆಲಂಗಾಣ ಸರ್ಕಾರವು ಅನ್ನಭಾಗ್ಯ ಯೋಜನೆಗೆ ಬೇಕಾದ ಅಕ್ಕಿ ಪೂರೈಸಲು ಕಳೆದ ವಾರ ಸಂಪರ್ಕಿಸಿ ಆಸಕ್ತಿ ವ್ಯಕ್ತಪಡಿಸಿದ್ದವು. FCI ನಿಗದಿತ ದರಕೆ ಪೂರೈಸಲು ಒಂದು ವಾರದೊಳಗೆ ಒಪ್ಪಿಗೆ ಸೂಚಿಸಿದರೆ ಮುಂದಿನ ಕ್ರಮವಹಿಸಿಯಾಲಗುವುದು ಎಂದು ಉಭಯ ಸರ್ಕಾರಗಳಿಗೆ ಮುನಿಯಪ್ಪ ತಿಳಿಸಿದ್ದರು.
ಆಂಧ್ರ ತ್ವರಿತ ಸ್ಪಂದನೆ :
ತೆಲಂಗಾಣಕ್ಕಿಂತ ಮುಂಚೆಯೇ ಆಂಧ್ರಪ್ರದೇಶದ ಜಗನ್ ಮೋಹನ್ ರೆಡ್ಡಿ ನೇತೃತ್ವದ ಸರ್ಕಾರ ಸ್ಪಂದಿಸಿ, FCI ದರಕ್ಕೆ ಒಪ್ಪಿಕೊಂಡಿರುವುದನ್ನು ರಾಜ್ಯ ಸರ್ಕಾರಕ್ಕೆ ತಿಳಿಸಲು ಸಂಬಂಧಿಸಿದ ಇಲಾಖೆ ಸಚಿವರ ನೇತೃತ್ವದ ನಿಯೋಗವನ್ನೇ ಬೆಂಗಳೂರಿಗೆ ಕಳುಹಿಸಿದೆ.. ಆಂಧ್ರಪ್ರದೇಶ ಸಚಿವರ ನೇತೃತ್ವದ ನಿಯೋಗ ಭೇಟಿಯಾಗಿ ಮಾತುಕತೆ ನಡೆಸಿರುವುದನ್ನು ಸಚಿವ ಕೆ ಎಚ್ ಮುನಿಯಪ್ಪ ಅವರ ಕಚೇರಿ ಮೂಲಗಳು ಖಚಿತಪಡಿಸಿದ್ದು, ಪೂರೈಕೆ ಪ್ರಮಾಣ, ನಿಗದಿತ ದರ ಇತ್ಯಾದಿ ವಿವರಗಳನ್ನು ಹಂಚಿಕೊಂಡಿಲ್ಲ. FCI ಪ್ರತಿ ಕ್ವಿನ್ಟ್ಯಾಲ್ ಗೆ 34 ರೂ ದರ ನಿಗದಿಪಡಿಸಿದೆ. ಹೆಚ್ಚುವರಿ ಐದು ಕೆಜಿ ಅಕ್ಕಿ ವಿತರಿಸಲು ಮಾಸಿಕ 2.40 ಲಕ್ಷ ಟನ್ ಸೆಪ್ಟೆಂಬರ್ ನಲ್ಲಿ ಫಲಾನುಭವಿಗಳಿಗೆ ನಗದು ಮೊತ್ತದ ಬದಲು ಅಕ್ಕಿ ಪೂರೈಕೆ ಸಾಧ್ಯತೆಗಳಿವೆ.
Tags
Govt.scheme