ನಾಳೆಯಿಂದ ಪೇಮೆಂಟ್ ಗೆ ನಿರ್ಬಂಧ; ನಿಮ್ಮ ಆಪ್ ನಲ್ಲಿ ಏನಿರುತ್ತೆ? ಏನಿರಲ್ಲ?

ನಾಳೆಯಿಂದ ಪೇಮೆಂಟ್ ಗೆ ನಿರ್ಬಂಧ; ನಿಮ್ಮ ಆಪ್ ನಲ್ಲಿ ಏನಿರುತ್ತೆ? ಏನಿರಲ್ಲ?





ನವದೆಹಲಿ : ಪೆಟಿಎಂ ಪೇಮೆಂಟ್ಸ್ ಬೈಂಕ್ ಗೆ ಆರ್ಬಿಐ ನಿರ್ಬಂದ್ ಹೇರಿದ್ದು ಶುಕ್ರವಾರದಿಂದಲೇ ನಿರ್ಬಂಧ ಜಾರಿಗೆ ಬರಲಿದೆ ನಿರ್ಬಂಧದಿಂದಾಗಿ ಪೆಟಿಎಂ ಸಂಕಷ್ಟಕ್ಕೆ ಸಿಲುಕಿದ್ದು, ಸಾವಿರಾರು ಕೋಟಿ ರೂ ನಷ್ಟ ಅನುಭವಿಸಿದೆ. ಇನ್ನು ಶುಕ್ರವಾರದಿಂದ ನಿರ್ಬಂಧ ಜಾರಿಯಾದರೆ ಪೆಟಿಎಂ ಗ್ರಾಹಕರಿಗೆ ಫಸ್ಟ್ ಟ್ಯಾಗ್  ಅಳವಡಿಸಿಕೊಂಡಿರುವವರಿಗೆ ಸೇವೆಯಲ್ಲಿ ವ್ಯತ್ಯಾಸವಾಗಲಿದೆ. ಹಾಗಾದರೆ ಪೆಟಿಎಂ ಆಪ್ ಹೊಂದಿರುವವರಿಗೆ ಯಾವೆಲ್ಲ ಸೇವೆ ಲಭ್ಯವಿರುವುದಿಲ್ಲ? ಯಾವೆಲ್ಲ ಸೌಲಭ್ಯಗಳು ಸಿಗಲಿವೆ ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ. 


whatss


ಸೇವಿಂಗ್ಸ್ ಖಾತೆಯಲ್ಲಿರುವ ಹಣದ ಗತಿ ಏನು ?

ಪೆಟಿಎಂ ಪೇಮೆಂಟ್ಸ್ ಬೈಂಕ್ ಖಾತೆದಾರರು ತಮ್ಮ ಖಾತೆಯಲ್ಲಿ ಹಣ ಉಳಿದಿದ್ದರೆ ಮಾರ್ಚ್ 15 ರ ನಂತರವೂ ಹಲವು ರೀತಿಯಲ್ಲಿ ಆ ಹಣವನ್ನು ಬಳಬಹುದಾಗಿದೆ. ಫಾಸ್ಟ್ ಟ್ಯಾಗ್ ನ್ಯಾಷನಲ್ ಕಾಮನ್ ಮೊಬಿಲಿಟಿ ಕಾರ್ಡ್ ಖಾತೆಗಳ ವ್ಯಾಲಿಡಿಟ್ ಗಳ ಮೂಲಕ ಸೇವಿಂಗ್ಸ್ ಖಾತೆಯಲ್ಲಿ ಉಳಿದಿರುವ ಹಣವನ್ನು ವ್ಯಯಿಸಬಹುದಾಗಿದೆ. 

ನಿಮ್ಮ ಎಲ್ಲ ಪ್ರಶ್ನೆಗಳಿಗೆ ಇಲ್ಲಿವೆ ಉತ್ತರಗಳು :

ಗ್ರಾಹಕರು ಪೆಟಾಯ್ಮ್ ಪೇಮೆಂಟ್ಸ್ ಬ್ಯಾಂಕ್ ಖಾತೆಗಳಿಗೆ ಹಣ ಜಮೆ ಮಾಡಲು ಆಗಲ್ಲ. ಆದರೆ, ಮಾರ್ಚ್ ೧೫ ರ ನಂತರ ವಿಥ್ ಡ್ರಾ ಅಥವಾ ಟ್ರಾನ್ಸಫರ್ ಮಾಡಬಹುದು ಪೆಟಿಎಂ ಪೇಮೆಂಟ್ಸ್ ಬ್ಯಾಂಕ್ ಖಾತೆಗಳಿಗೆ ಸ್ಯಾಲರಿ ಕ್ರೆಡಿಟ್ ಆಗುವುದಿಲ್ಲ, ಸರ್ಕಾರದ ಹಣ ಜಮೆಯಾಗುವುದಿಲ್ಲ. ಆದರೆ, ಕ್ಯಾಶ್ ಬ್ಯಾಕ್, ರಿಫಂಡ್ ಆಗಲಿದೆ ಮಾರ್ಚ್ 15 ರ ನಂತರ ಗೇಹಕರು ಅವರ ವ್ಯಾಲೆಟ್ ಗಳಿಗೆ ಹಣ ಜಮೆ ಮಾಡಿಕೊಳ್ಳಲು ಸಾದ್ಯವಿಲ್ಲ. ಆದರೂ,ಉಳಿದಿರುವ ಹಣವನ್ನು ವ್ಯಯಿಸಬಹುದು. 

ಪೆಟಿಎಂ ಪೇಮೆಂಟ್ಸ್ ಬ್ಯಾಂಕ್ ಮೂಲಕ ಫಾಸ್ಟ್ ಟ್ಯಾಗ್ ರಿಚಾರ್ಜ್ ಮಾಡಿಕೊಳ್ಳಲು ಆಗಲ್ಲ. ಆದರೆ ಫಾಸ್ಟ್ಯಾಗ್ ಗಳಲ್ಲಿನ ಉಳಿದ ಮೊತ್ತವನ್ನು ವ್ಯಯಿಸಬಹುದಾಗಿದೆ. ಮಾರ್ಚ್ 15 ರ್ ನಂತರವು ಪೆಟಿಎಂ ಆಪ್ ಮೂಲಕ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ಹಣ ಪಾವತಿಸಬಹುದಾಗಿದೆ. ಕ್ರೆಡಿಟ್ ಕಾರ್ಡ್ ಮೂಲಕ ವ್ಯಾಲೀಟ್ ಗೆ ಹಣ  ಜಮೆ ಮಾಡಿಕೊಳ್ಳಲು ಆಗುವುದಿಲ್ಲ. 



ಆರ್ಬಿಐ ನಿರ್ಬಂಧ ಏಕೆ :

ನಿಯಮಗಳನ್ನು ಪಾಲಿಸಿದ ಹಿನ್ನೆಲೆಯಲ್ಲಿ ಆರ್ಬಿಐ ನಿರ್ಬಂಧ ಹೇರಿದೆ. ಒಂದೇ ಒಂದು ಪರ್ಮನೆಂಟ್ ಅಕೌಂಟ್ ನಂಬರ್ ಮೂಲಕ 1000 ಕ್ಕೂ ಹೆಚ್ಚು ಖಾತೆಗಳನ್ನು ಲಿಂಕ್ ಮಾಡಿರುವುದು ಕಂಡಿಬಂದಿದೆ. ಆರ್ಬಿಐ ಮತ್ತು ಲೆಕ್ಕ ಪರಿಶೋದಕರೂ ನಡೆಸಿದ ಪರಿಶೀಲನಾ ಪ್ರಕ್ರಿಯೆಗಳಲ್ಲಿ ಬ್ಯಾಂಕ್ ಸಲ್ಲಿಸಿದ ಮಾಹಿತಿ ತಪ್ಪಾಗಿದೆ ಎಂದು ತಿಳಿದು ಬಂದಿತ್ತು. ಕೆಲವು ಖಾತೆಗಳನ್ನು ಅಕ್ರಮ ಹಣ ವರ್ಗಾವಣೆಗೆ ಬಳಸಿರಬಹುದು ಎಂದು ಆರ್ಬಿಐ ಕಾಲಾವಳ ವ್ಯಕ್ತಪಡಿಸಿದೆ ಎಂದು ಮೂಲಗಳು ತಿಳಿಸಿದೆ. ಜರಿ ನಿರ್ದೇಶನಾಲಯಕ್ಕೆ ಮಾಹಿತಿ ನೀಡುವುದರ ಜೊತೆಗೆ, ಆರ್ಬಿಐ ತನ್ನ ಸಂಶೋಧನೆಗಳನ್ನು ಗೃಹ ಸಚಿವಾಲಯ ಮತ್ತು ಪ್ರಧಾನಿ ಕಚೇರಿ ಕಳುಹಸಿದೆ. ಇದಾದ ಬಲಿಕ ವಹಿವಾಟಿಗೆ ನಿರ್ಬಂಧ ಹೇರಿದೆ. 





   

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು