ಅರ್ಜಿಗೆ ಶುಲ್ಕ ಪಡೆದರೆ ಹುಷಾರ್ !!

ಅರ್ಜಿಗೆ ಶುಲ್ಕ ಪಡೆದರೆ ಹುಷಾರ್ !!




        ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಗಳಿಗೆ ಅರ್ಜಿ ಸಲ್ಲಿಸಲು ಸಾರ್ವಜನಿಕರಿಂದ ಹಣ ಪಡೆಯುವಂತಿಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಪ್ರಮಾಣ  ಹೊರಡಿಸಿದ್ದಾರೆ. ಯಾರಾದರೂ ಅರ್ಜಿ ಸಲ್ಲಿಕೆಗೆ ಹಣ ಪಡೆದುಕೊಂಡ ಬಗ್ಗೆ ದೂರು ಬಂದರೆ ಏಜೆನ್ಸಿ ಲೈಸನ್ಸ್ ರದ್ದು ಮಾಡಲಾಗುತ್ತದೆ ಎಂದು ಎಚ್ಚರಿಸಿದ್ದಾರೆ. 

ರಾಜ್ಯದ ಕಾಂಗ್ರೆಸ್ ಸರ್ಕಾರ ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಿಸಲಾದ ಐದು ಗ್ಯಾರಂಟಿ ಯೋಜನೆಯಡಿ ಗೃಹಜ್ಯೋತಿ ಕಾರ್ಡ್ ನೋಂದಣಿಗೆ ಗ್ರಾಂ ಒನ್ ಮತ್ತು ಸೇವಾಸಿಂಧುಗಳಿಗೆ ನೀಡುವ ಮೂಲಕ ಉಚಿತ ನೋಂದಣಿಯೆಂದು ಹೇಳಲಾಗಿದ್ದರೂ ಗ್ರಾಂ ಒನ್ ಅಲ್ಲಿ 20 ರೂ. ಶುಲ್ಕ ಪಡೆಯಬೇಕೆಂಬ ನಿಯಮವಿದ್ದರೂ ತಾಲೂಕಿನ ಕೆಲವು ಸೇವಾಸಿಂಧು ಮತ್ತು ಗ್ರಾಮ್ ಒನ್ ಕೇಂದ್ರದಲ್ಲಿ ಮನಬಂದಂತೆ ವಸೂಲಿಗಿಳಿದಿದ್ದಾರೆ.



ಕಾಂಗ್ರೆಸ್ ಸರ್ಕಾರ ಕೊಟ್ಟ ಮಾತಿನಂತೆ ಐದು ಗ್ಯಾರಂಟಿಗಳನ್ನು ಜಾರಿ ಮಾಡಿದೆ. ಗೃಹ ಜ್ಯೋತಿ, ಗೃಹ ಲಕ್ಷ್ಮಿ, ಶಕ್ತಿ ಯೋಜನೆ, ಅನ್ನಭಾಗ್ಯ,  ಯುವನಿಧಿ  ಯೋಜನೆ,  ಆರಂಭವಾಗುತ್ತಿವೆ. ಇದಕ್ಕಾಗಿ ಫಲಾನುಭವಿಗಳು ಅರ್ಜಿ ಸಲ್ಲಿಕೆಗೆ ಮುಗಿಬಿದ್ದಿದ್ದಾರೆ. ಇದನ್ನೇ ಬಂಡವಾಳ ಮಾಡಿಕೊಂಡು, ಸೇವಾಸಿಂಧು,  ಬೆಂಗಳೂರು ಒನ್,  ಸೇರಿದಂತೆ ಹಲವು ಕೇಂದ್ರಗಳಲ್ಲಿ ಪ್ರತಿ ಅರ್ಜಿ ಸಲ್ಲಿಕೆಗೆ 50 ರೂ ಯಿಂದ 100 ರೂ ವರೆಗೆ ಹಣ ವಸೂಲಿ ಮಾಡುತ್ತಿರುವ ದೂರು ಕೇಳಿಬರುತ್ತಿವೆ.  ಇದು ಡಿಕೆ ಶಿವಕುಮಾರ್ ಗಮನಕ್ಕೆ ಬಂದಿದ್ದು, ಗ್ಯಾರಂಟಿ ಯೋಜನೆಗಳ ಅರ್ಜಿ ಸಲ್ಲಿಕೆಗೆ ಜನರಿಂದ ಹಣ ಪಡೆಯುವಂತಿಲ್ಲ ಎಂದು ಖಡಕ್ ಸೂಚನೆ ನೀಡಿದ್ದಾರೆ.

ಜಿಲ್ಲೆಯಲ್ಲಿ 115 ಗ್ರಾಮ್ ಒನ್ ಕೇಂದ್ರಗಳಿದ್ದು, ಚಾಮರಾಜನಗರದಲ್ಲಿ 40 , ಗುಂಡ್ಲುಪೇಟೆಯಲ್ಲಿ 27, ಹನೂರಿನಲ್ಲಿ 25, ಕೊಳ್ಳೇಗಾಲದಲ್ಲಿ 15, ಯಳಂದೂರಿನಲ್ಲಿ 8 ಕೇಂದ್ರಗಳು ಸೇರಿದೆ.

ಅರ್ಜಿ ಹಾಕಲು ಫಲಾನುಭವಿಗಳಿಂದ ಮನಸ್ಸಿಗೆ ಬಂದಂತೆ 50, 20, 100 ರೂಪಾಯಿಗಳನ್ನು ಸುಲಿಗೆ ಮಾಡುತ್ತಿದ್ದಾರೆಂದು ಸಾರ್ವಜನಿಕರು ಆರೋಪಿಸುತ್ತಿದ್ದಾರೆ.




ಗ್ಯಾರಂಟಿ ಯೋಜನೆಗಳ ಅರ್ಜಿ ಸಲ್ಲಿಕೆಗೆ ಜನ ಹಣ ನೀಡುವಂತಿಲ್ಲ. ಸೇವಾಸಿಂಧು ಸೇರಿ ಹಲವು ಕೇಂದ್ರಗಳಲ್ಲಿ ಹಣ ಪಡೆಯುವ ದೂರು ಬಂದಿವೆ. ಯಾರು ಕೂಡ ಸಾರ್ವಜನಿಕರಿಂದ ಹಣ ಪಡೆಯುವಂತಿಲ್ಲ. ಒಂದು ವೇಳೆ ಹಣ ಪಡೆದರೆ ಅಂತಹ ಏಜೆನ್ಸಿ ಲೈಸನ್ಸ್ ರದ್ದುಗೊಳಿಸುತ್ತೇವೆ ಎಂದು ಖಡಕ್ ಸೂಚನೆ ಕೊಟ್ಟರು.





200 ಯೂನಿಟ್ ಉಚಿತ ವಿದ್ಯುತ್ ಕಲ್ಪಿಸುವ ಗೃಹಜ್ಯೋತಿ ಯೋಜನೆಗೆ ನಿಮ್ಮ ಸ್ಮಾರ್ಟ್ ಫೋನ್, ಕಂಪ್ಯೂಟರ್/ ಲ್ಯಾಪ್ಟಾಪ್ ಗಳಿಂದ ನೋಂದಾಯಿಸುವ ಸುಲಭ ಮಾರ್ಗ ಇದು, ಯಾವುದೇ ದಾಖಲೆ ಅಪ್ಲೋಡ್ ಮಾಡುವ ಅವಶ್ಯಕತೆ ಇಲ್ಲ. ಇನ್ನು ಈ ಸೌಲಭ್ಯಗಳಿಲ್ಲದವರು ಕರೆಂಟ್ ಬಿಲ್,  ಆಧಾರ್ ಕಾರ್ಡ್,  ಹಾಗೂ ಆಧಾರ್ ಕಾರ್ಡ್ ಗೆ ಲಿಂಕ್ ಆಗಿರುವ ಮೊಬೈಲ್ ನಂಬರ್ ನೊಂದಿಗೆ ಹತ್ತಿರದ ಗ್ರಾಮ ಒನ್, ಬೆಂಗಳೂರು ಒನ್,  ಸೇವಾಸಿಂಧು ಸೇರಿದಂತೆ ಸೇರಿದಂತೆ ಸರ್ಕಾರ ತಿಳಿಸಿರುವ ಕೇಂದ್ರಗಳಿಗೆ ಅರ್ಜಿ ಹೋಗಿ ಅರ್ಜಿಸಲ್ಲಿಸಬಹುದಾಗಿದೆ. ರಾಜ್ಯಾದ್ಯಂತ ಬಹಳಷ್ಟು ಜನರು ಒಟ್ಟಿಗೆ ಅರ್ಜಿ ಸಲ್ಲಿಕೆ ಮಾಡುತ್ತಿರುವುದರಿಂದ ಬಹುತೇಕ ಕಡೆಗಳಲ್ಲಿ ಸರ್ವರ್ ಸಮಸ್ಯೆ ಎದುರಾಗುತ್ತಿದೆ. ಅರ್ಜಿ ನೋಂದಾಯಿಸಲು ಕೊನೆಯ ದಿನಾಂಕ ಇಲ್ಲ. ಅವಸರ ಮಾಡುವುದು ಬೇಡ. ಅರ್ಜಿ ಸಲ್ಲಿಸಿದ ಎಲ್ಲ ಅರ್ಹರಿಗೂ ಯೋಜನೆ ಲಭಿಸಿದೆ ಎಂದು ಹೇಳಿದರು.


ಒಂದು ಕಡೆಯಲ್ಲಿ ಸರ್ವರ್ ಸಮಸ್ಯೆ ಇನ್ನೊಂದು ಕಡೆಯಲ್ಲಿ ಸರ್ಕಾರದ ಐದು ಗ್ಯಾರಂಟಿ ಯೋಜನೆಯಡಿಯಲ್ಲಿ ಫಲಾನುಭವಿಗಳಿಂದ ಭರ್ಜರಿ ಸುಲಿಗೆ ಒಂದು ಗ್ಯಾರಂಟಿ ಯೋಜನೆಗೆ ಬರೋಬರಿ 50 ರಿಂದ 100 ಹಣ ವಸೂಲಾತಿ ನಡೆಯುತ್ತಿದ್ದರೂ ಕೂಡ ತಾಲೂಕ ಮಟ್ಟದ ಅಧಿಕಾರಿ ವರ್ಗ ಕಣ್ಣಿದ್ದು ಜಾಣ ಕುರುಡರಂತಾಗಿ ಮೌನಕ್ಕೆ ಶರಣಾಗಿದ್ದಾರೆ. ಕೆಲ ಗ್ರಾಮ ಒನ್ ಗಳಲ್ಲಿ 20 ರೂ. ಶುಲ್ಕ ಪಡೆದರೆ ಖಾಸಗಿ ಅನುಮತಿ ರಹಿತ ಸೈಬರ್ ಸೆಂಟರ್ ಗಳಲ್ಲಿ ಕೂಡ ಹಗಲು ದರೋಡೆಗಿಳಿದಿದ್ದಾರೆ.

ಒಟ್ಟಾರೆಯಾಗಿ ಸರ್ಕಾರದ ಇಂತಹ ಜನಸಹಿತ ಕಾರ್ಯಕ್ರಮಗಳ ಹೆಸರಿನಲ್ಲಿ' ಹುಚ್ಚನ ಮುಂಡೆ  ಮದುವೆಯಲ್ಲಿ ಉಂಡವನೇ ಜಾಣ ' ಎಂಬಂತೆ ಮಧ್ಯವರ್ತಿಗಳ ಜೊತೆ ಹೋದರೆ 50 ರೂ ನೇರವಾಗಿ ಹೋದ ಫಲಾನುಭವಿಗೆ 100 ರೂ ಹೀಗೆ ಬ್ರೇಕರ್ ಗಳಿಗೂ ಶುಕ್ರದೆಸೆ ಆರಂಭವಾದಂತಾಗಿದೆ ಎನ್ನಲಾಗಿದೆ. 

ಜಿಲ್ಲೆಯ ಜನಪ್ರತಿನಿಧಿಗಳು ಮತ್ತ್ತು ಜಿಲ್ಲಾಧಿಕಾರಿಗಳು ಮತ್ತು ಉಪವಿಭಾಗಾಧಿಕಾರಿಗಳು ತಹಶೀಲ್ದಾರ್ ಉಪತಹಶೀಲ್ದಾರ್  ಇವರು ತಾಲೂಕು ವ್ಯಾಪ್ತಿಯಲ್ಲಿನ ಗ್ರಾಮ್ ಒನ್ ಮತ್ತು ಸೇವಾಸಿಂಧು ಕೇಂದ್ರದಲ್ಲಿ ನಡೆಯುತ್ತಿರುವ ಸುಲಿಗೆ ದಂದೆಗೆ ಕಡಿವಾಣ ಹಾಕುವರೇ ಕಾದು ನೋಡಬೇಕಾಗಿದೆ.






1 ಕಾಮೆಂಟ್‌ಗಳು

  1. ಎಲ್ಲ ಕಡೆ ಹಣ ವಸೂಲಿ ಮಾಡ್ತಾ ಇದ್ದಾರೆ ಕೆಲವು ಕಡೆ 5% ಮಾತ್ರ ಶುಲ್ಕ ವಸೂಲಿ ಮಾಡ್ತಾ ಇಲ್ಲ

    ಪ್ರತ್ಯುತ್ತರಅಳಿಸಿ
ನವೀನ ಹಳೆಯದು