ಬಾನಿಗೆ ಏರಿದ ದಿನಸಿ ದರ - ಜನಸಾಮಾನ್ಯರ ಜೇಬಿಗೆ ಭಾರ
ಬಿಟ್ಟಿ ಭಾಗ್ಯಗಳ ನಡುವೆ ಅಗತ್ಯವಸ್ತು, ಸೇವೆ ತುಟ್ಟಿ
ಬಿಟ್ಟಿ ಭಾಗ್ಯಗಳ ನಡುವೆ ಅಗತ್ಯವಸ್ತು, ಸೇವೆ ತುಟ್ಟಿ
ಒಂದೆಡೆ ರಾಜ್ಯ ಸರ್ಕಾರ ತನ್ನ ಗ್ಯಾರಂಟಿಗಳ ಅನುಷ್ಠಾನದ ಬಗ್ಗೆ ತಲೆ ಕೆಡಿಸಿಕೊಂಡಿದ್ದರೆ ಇನ್ನೊಂದೆಡೆ ಗ್ಯಾರಂಟಿಗಳಿಂದಾಗಿರುವ ಬೆಲೆ ಏರಿಕೆಯಿಂದಾಗಿ ಶ್ರೀಸಾಮಾನ್ಯ ತತ್ತರಿಸಿಟ್ಟಿದ್ದಾನೆ. ವಿದ್ಯುತ್ ಏರಿಕೆ, ಅಕ್ಕಿ-ಬೇಳೆಕಾಳುಗಳು, ಬೆಲ್ಲದ ದರಗಳು ಗಗನಕ್ಕೆ ಏರಿವೆ. ತಿಂಡಿ ದರವನ್ನು ಹೆಚ್ಚಿಸಲು ಹೋಟೆಲ್ ಮಾಲೀಕರು ನಿರ್ಧರಿಸುತ್ತಿದ್ದಾರೆ. ತರಕಾರಿ ದರಗಳನ್ನು ಕೇಳಿದರೆ ತಲೆ ತಿರುಗುತ್ತದೆ. ಮಧ್ಯದ ದರವನ್ನು ಏರಿಸಿವುದರ ಮೂಲಕ ಮದ್ಯಪ್ರಿಯರಿಗೆ ಶಾಕ್ ನೀಡಲಾಗಿದೆ. ವಿದ್ಯುತ್ ದರ ಏರಿಕೆಯಿಂದಾಗಿ ಅಕ್ಕಿ ದರ ಏರಿಸುವುದು ಅನಿವಾರ್ಯ ಎಂದು ಅಕ್ಕಿಗಿರಣಿ ಮಾಲೀಕರು ಹೇಳುತ್ತಿದ್ದಾರೆ. ಒಟ್ಟಾರೆ ದುಬಾರಿ ದುನಿಯಾದಿಂದಾಗಿ ಜನಸಾಮಾನ್ಯರು ಬಸವಳಿಯುವಂತಾಗಿದೆ.
ಕಿಕ್ ಪ್ರಿಯರಿಗೆ ಕಿರಿಕ್
ಗ್ಯಾರಂಟಿಗಳ ಅನುಷ್ಠಾನಕ್ಕೆ ಹಣಕಾಸು ಹೊಂದಾಣಿಕೆ ಮಾಡುವ ಹಿನ್ನೆಲೆಯಲ್ಲಿ ಮದ್ಯದ ದರವನ್ನು ಹೆಚ್ಚಿಸಲಾಗಿದೆ. ಬಿಯರ್ 10 ರಿಂದ 20 ರೂಪಾಯಿ ತುಟ್ಟಿಯಾಗಿದೆ. ಉಳಿದ ಮದ್ಯಗಳ ದರವು ಶೇ. 20 ರಷ್ಟು ಹೆಚ್ಚಾಗಿದೆ.
ತಿಂಡಿ-ತಿನಿಸುಗಳ ದರ ಹೆಚ್ಚು
ಒಂದೆಡೆ ಹೆಚ್ಚಿಗೆ ಬಂದಿರುವ ವಿದ್ಯುತ್ ಬಿಲ್, ಇನ್ನೊಂದೆಡೆ ದಿನಸಿ ಸೇರಿದಂತೆ ತರಕಾರಿ ದರಗಳು ಗಗನಕ್ಕೆ ಏರಿವೆ. ಹೀಗಾಗಿ ಹೋಟೆಲ್ ತಿಂಡಿ ದರ ಹೆಚ್ಚಳವಾಗಿದೆ. ಕೊರೊನ ಸಂಕಷ್ಟದಿಂದ ನಮ್ಮ ಉದ್ಯಮ ಇದೀಗ ಚೇತರಿಸಿಕೊಳ್ಳುತ್ತಿದೆ. ಎಲ್ಲವುಗಳ ದರ ಹೆಚ್ಚಾಗಿರುವುದರಿಂದ ಅನಿವಾರ್ಯವಾಗಿ ನಾವು ತಿಂಡಿಗಳ ದರವನ್ನು ಹೆಚ್ಚಳ ಮಾಡಬೇಕಾಗಿದೆ.ಇಲ್ಲವಾದರೆ ನಮ್ಮ ಉದ್ಯಮವನ್ನು ಬಿಡಬೇಕಾಗುತ್ತದೆ. ಬಿಲ್ ಹೆಚ್ಚಿಸದಿದ್ದರೆ ನಮಗೆ ಉಳಿಗಾಲವಿಲ್ಲವೆಂದು ,ಮಾಲೀಕರ ಸಂಘ ಹೇಳಿದೆ.
ದಿನಸಿ ಬೆಲೆ ಬಿಸಿ
ಕಳೆದ ತಿಂಗಳು 53 ರೂ ಗೆ ಒಂದು ಕೆಜಿ ಇದ್ದ ಸೋನಾಮಸೂರಿ ಅಕ್ಕಿ ದರ ಇದೀಗ 65 ರೂ ಏರಿಕೆಯಾಗಿದೆ. ಇದಲ್ಲದೆ ಎಲ್ಲ ಅಕ್ಕಿ ದರಗಳು ಗಗನಕ್ಕೆ ಏರಿಕೆಯಾಗಿವೆ. ತೊಗರಿಬೇಳೆ 130 ರೂ ಇತ್ತು. ಈಗ 150 ರಿಂದ 160 ರೂ ಹೆಚ್ಚಾಗಿದೆ. ಇದಲ್ಲದೆ, ಉದ್ದಿನಬೇಳೆ, ಬೆಲ್ಲ, ಇಡ್ಲಿ ಅಕ್ಕಿ, ತುಪ್ಪ ಸೇರಿದಂತೆ ಎಲ್ಲ ದಿನಸಿಗಳು ಶೇ 5 ರಿಂದ 10ರಷ್ಟು ಏರಿಕೆಯಾಗಿದೆ. ಈ ಬಾರಿ ಮುಂಗಾರು ಮಳೆ ತಡವಾಗುತ್ತದೆ. ಜಲಾಶಯಗಳು, ಕೆರೆಕಟ್ಟೆ, ಹಳ್ಳಕೊಳ್ಳಗಳು ಬತ್ತಿ ಹೋಗಿವೆ.ಅಂತರ್ಜಲವು ಕುಸಿತಗೊಂಡಿದೆ.ಹೀಗಾಗಿ ಅಕ್ಕಿ ದಾಸ್ತಾನು ಇದ್ದರೂ ಅದನ್ನು ಹೊರಗೆ ಬಿಡುತ್ತಿಲ್ಲ. ಹೊರ ರಾಜ್ಯಗಳಿಂದ ಅಕ್ಕಿ ತರಿಸಿಕೊಳ್ಳಲು ಮಾಲೀಕರಿಗೆ ಹೆಚ್ಚು ಖರ್ಚು ಬರುತ್ತದೆ. ಹೀಗಾಗಿ ಅಕ್ಕಿ ಇತರೆ ಬೇಳೆ ಕಾಲುಗಳ ದರ ಏರಿಕೆ ಕಂಡುಬಂದಿದೆ.
ತರಕಾರಿ ದುಬಾರಿ
ತರಕಾರಿ ದಾರವಂತೂ ಮಾತನಾಡುವಂತಿಲ್ಲ. ಕಳೆದ ತಿಂಗಳು 15ರೂ ಗೆ ಒಂದು ಕೆಜಿ ಇದ್ದ ಟೊಮ್ಯಾಟೋ ಈಗ 60ರೂ ಆಗಿದೆ. ಬೀನ್ಸ್ 50 ರೂ ಇದ್ದದ್ದು 120 ರೂ ಗೆ .ಇದಲ್ಲದೆ ಕ್ಯಾರೆಟ್, ಶುಂಠಿ ಕೆಜಿಗೆ ನೂರು ಇತ್ತು. ಇದೀಗ ಅದರ ದರ 60 ರೂ ಗೆಹೆಚ್ಚಿದೆ . ಕೈ ಕೊಟ್ಟ ಮುಂಗಾರಿನಿಂದ ತರಕಾರಿ ಬೆಳೆಯುವುದು ದುರಸ್ತವಾಗಿದೆ. ಬೇರೆ,ಬೇರೆ ಕಡೆಯಿಂದ ತರಿಸಿಕೊಳ್ಳಬೇಕೇದರೆ ಸಾರಿಗೆ ವೆಚ್ಚ ಅಧಿಕವಾಗುತ್ತಿದೆ. ಅಲ್ಲದೆ ವಿದ್ಯುತ್ ನಿಂದ ಹಿಡಿದು ಎಲ್ಲವನ್ನು ನಾವು ಭರಿಸಬೇಕಾಗುತ್ತದೆ. ಸಗಟು ವ್ಯಾಪಾರದಲ್ಲಿ ಹೆಚ್ಚಳ ಕಂಡುಬಂದಿರುವುದರಿಂದ ತರಕಾರಿ ದರ ಏರಿಕೆಯಾಗಿದೆ ಎಂದು ತರಕಾರಿ ಅಂಗಡಿಗಳ ಮಾಲೀಕರು ಹೇಳುತ್ತಿದ್ದಾರೆ.