ನವೆಂಬರ್ / ಡಿಸೇಂಬರ್ ಗೆ ಯುವನಿಧಿ
ನಿರುದ್ಯೋಗಿ ಎಂಜಿನಿಯರ್, ವೈದ್ಯರಿಗೂ ಭತ್ಯೆ ಕೊಟ್ಟೆ ಕೊಡ್ತೀವಿ : ಸಿದ್ಧರಾಮಯ್ಯ
ರಾಜ್ಯ ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷಿ ಗ್ಯಾರಂಟಿಗಳಲ್ಲಿ ಒಂದಾದ ' ಯುವನಿಧಿ ' ಯೋಜನೆಯನ್ನು ನವೆಂಬರ್ ಅಥವಾ ಡಿಸೇಂಬರ್ ನಲ್ಲಿ ಜಾರಿಗೆ ತರುವುದಾಗಿ ಸಿಎಂ ಸಿದ್ಧರಾಮಯ್ಯ ಅವರು ಘೋಷಿಸಿದರು.
ಈಗಾಗಲೇ ಹೇಳಿರುವಂತೆ 2022-23 ನೇ ಶೈಕ್ಷಣಿಕ ವರ್ಷದಲ್ಲಿ ಉತ್ತೀರ್ಣರಾದ ಪದವೀಧರರಿಗೆ ಆರು ತಿಂಗಳೊಳಗೆ ಕೆಲಸ ಸಿಗದಿದ್ದರೆ, ರಾಜ್ಯ ಸರ್ಕಾರ ನಿರುದ್ಯೋಗ ಭತ್ಯೆಯಾಗಿ ಪದವೀಧರರಿಗೆ ತಲಾ 3 ಸಾವಿರ ರೂ. ಮತ್ತು ಡಿಪ್ಲೊಮಾ ಮಾಡಿದವರಿಗೆ ತಲಾ 1500 ರೂ. ಗಳನ್ನು ಯುವನಿಧಿ ಯೋಜನೆಯಡಿ ಕೊಡಲಿದೆ. ನವೆಂಬರ್ ಅಥವಾ ಡಿಸೇಂಬರ್ ತಿಂಗಳಿಂದ ನೀಡುತ್ತದೆ. ಆ ಸಮಯಕ್ಕೆ ಯಾರಿಗೆ ಕೆಲಸ ಸಿಕ್ಕದಿರುವುದಿಲ್ಲವೋ ಅವರಿಗೆ ಅಂದಿನಿಂದ 24 ತಿಂಗಳವರೆಗೆ ಪ್ರತಿ ತಿಂಗಳು ನಿಗದಿತ ಹಣ ಕೊಡುತ್ತೇವೆ ಎಂದರು.
ಬಿಎ. ಬಿಎಸ್ಸಿ, ಬಿಕಾಂ, ಎಮ್ ಎ, ಎಎಸ್ಸಿ, ಎಂಕಾಂ, ಬಿಇ, ಎಂಬಿಬಿಎಸ್ ಸೇರಿದಂತೆ ತಾಂತ್ರಿಕ ಶಿಕ್ಷಣ ಪಡೆದವರಿಗೂ ಯುವನಿಧಿ ಯೋಜನೆಯಡಿ ಹಣ ಕೊಡುತ್ತೇವೆ.ಈವರೆಗೆ ನಾವು ನುಡಿದಂತೆ ನಡೆದಿದ್ದೇವೆ. ಮುಂದೆಯೂ ನಡೆಯುತ್ತೇವೆ. ಯುವನಿಧಿ ಯೋಜನೆಯಡಿ ಅರ್ಹರಾಗುವ ಯುವಜನರಿಗೆ ಹಣವನ್ನು ನಾವು ಶೇಕಡಾ ನೂರರಷ್ಟು ಕೊಟ್ಟೆ ಕೊಡುತ್ತೇವೆ ಎಂದು ಹೇಳಿದರು.
ಆಗಸ್ಟ್ ೧೬ ಕ್ಕೆ ಗೃಹಲಕ್ಷ್ಮೀ :
ಇನ್ನು ಗೃಹಲಕ್ಷ್ಮೀ ಯೋಜನೆಯನ್ನು ಆಗಸ್ಟ್ 16 ರಂದು ಜಾರಿ ಮಾಡಲು ಸಮಯ ನಿಗದಿ ಮಾಡಿದ್ದೇವೆ. ಕುಟುಂಬದ ಯಾವ ಯಜಮಾನಿಗೆ ಹಣಸಂದಾಯ ಮಾಡಬೇಕು ಎಂದು ನಿರ್ಧಾರವಾಗಲು ಸಮಯಾವಕಾಶ ಬೇಕಿದೆ. ಅರ್ಜಿ ಕರೆಯುವುದು ನೋಂದಣಿ ಮಾಡಿಕೊಳ್ಳಲು ಸಮಯ ಬೇಕು. ಆದ್ದರಿಂದ ಆಗಸ್ಟ್ 16 ರಿಂದ ಕುಟುಂಬದ ಯಜಮಾನಿಗೆ 2 ಸಾವಿರ ರೂ. ನಂತೆ ಹಣ ಕೊಡುತ್ತೇವೆ ಎಂದರು.
ಜೂನ್ 11 ರಿಂದ ಶಕ್ತಿ ಯೋಜನೆ ಜಾರಿಗೆ ಬಂದಿದೆ. ಜುಲೈ 1 ರಿಂದ ಅನ್ನಭಾಗ್ಯ ಮತ್ತು ಗೃಹಜ್ಯೋತಿ ಯೋಜನೆಗಳು ಜಾರಿಗೊಂಡಿವೆ. ಈ ಮೂಲಕ ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಹೇಳಿದಂತೆ ಕೊಟ್ಟ ಐದು ಗ್ಯಾರಂಟಿಗಳನ್ನು ಜಾರಿಗೆ ತಂದಿದೆ. ನುಡಿದಂತೆ ನಡೆದಿದೆ ಎಂದು ಹೇಳಿದರು.
Tags
Govt.scheme
Gangavv topugol
ಪ್ರತ್ಯುತ್ತರಅಳಿಸಿ