ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ 2023-24 ನೇ ಸಾಲಿನ ತೋಟಗಾರಿಕೆ ಬೆಳೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ..!

  ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ 2023-24 ನೇ ಸಾಲಿನ ತೋಟಗಾರಿಕೆ ಬೆಳೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ..!


ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ 2023-24 ನೇ ಸಾಲಿಗೆ ತೋಟಗಾರಿಕೆ ಚಟುವಟಿಕೆಗಳಾದ ವಿವಿಧ ತೋಟಗಾರಿಕೆ ಬೆಳೆಗಳ ಪ್ರದೇಶ ವಿಸ್ತರಣೆ ಕೈಗೊಳ್ಳಲು ಕೂಲಿ ಮತ್ತು ಸಾಮಗ್ರಿ ವೆಚ್ಚವನ್ನು ನೀಡಲಾಗುತ್ತಿದೆ. ಈ ಯೋಜನೆಯಡಿ ದ್ರಾಕ್ಷಿ, ಬಾಳೆ, ದಾಳಿಂಬೆ, ಮಾವು, ಸೀಬೆ, ಚಿಕ್ಕು, ನಿಂಬೆ, ಡ್ರ್ಯಾಗನ್, ಕರಿಬೇವು, ಗುಲಾಬಿ, ನುಗ್ಗೆ, ಜಾಮೂನು, ಹುಣಸೆ, ಸೀತಾಫಲ, ಗೇರು, ತೆಂಗು, ಅಡಿಕೆ, ತಾಳೆ, ಪಪ್ಪಾಯಿ, ಕೊಕೊ, ಹಲಸು, ಕಾಫಿ, ಹಾಗೂ ಅಪ್ರಧಾನ ಹಣ್ಣಿನ ಬೆಳೆಗಳಾದ ನೇರಳೆ, ನೆಲ್ಲಿ, ಬೆಣ್ಣೆ  ಹಣ್ಣು,ರಾಮಬುತಾನ. ಅಪ್ಟೆಮಿಡಿ ಬೆಳೆಗಳು ಮತ್ತು ಸಾಂಬಾರು ಬೆಳೆಗಳಾದ ದಾಲಚಿನ್ನಿ, ಲವಂಗ, ಕಾಳುಮೆಣಸು, ಜಾಯಿಕಾಯಿ, ಸರ್ವಸಾಂಬಾರಾ ಬೆಳೆಗಳ ಹೊಸ ತೋಟಗಳನ್ನು ಅಭಿವೃದ್ಧಿ ಪಡಿಸಲು ಹಾಗೂ ವಿವಿಧ ತೋಟಗಾರಿಕೆ ಬೆಳೆಗಳಾದ ಮಾವು, ಚಿಕ್ಕು, ತೆಂಗು, ನಿಂಬೆ, ಅಡಿಕೆ, ತಾಳೆ ಮತ್ತು ಗೋಡಂಬಿ ಬೆಳೆಗಳ ಪುನಃಶ್ಚೇತನ ಕಾಮಗಾರಿಗಳನ್ನು ಸಹ ಯೋಜನೆಯಲ್ಲಿ ತೆಗೆದುಕೊಳ್ಳಲು ಒಂದು ಒಳ್ಳೆಯ ಸದಾವಕಾಶವಿರುತ್ತದೆ.

ಸದರಿ ತೋಟಗಳಿಗೆ ನೀರಾವರಿ ಅನುಕೂಲಕ್ಕಾಗಿ ಹನಿ ನೀರಾವರಿ ವ್ಯವಸ್ಥೆಯನ್ನು ಅಳವಡಿಸಲು ಸಹ ಇಲಾಖೆಯ ಪಿ.ಎಂ.ಕೆ.ಎಸ್.ವೈ.ಯೋಜನೆಯಡಿ ಸಹಾಯಧನವನ್ನು ನೀಡಲಾಗುವುದು. ಆಸಕ್ತ ರೈತರು ಹೆಚ್ಚಿನ ಮಾಹಿತಿ ಹಾಗೂ ಅರ್ಹತಾ ಮಾನದಂಡದ ಮಾಹಿತಿಗಾಗಿ ತೋಟಗಾರಿಕೆ ಇಲಾಖೆಯ ತಾಲೂಕಿನ ಕಚೇರಿಯನ್ನು ಹಾಗೂ ರೈತ ಸಂಪರ್ಕ ಕೇಂದ್ರ ಅಧಿಕಾರಿಗಳನ್ನು ಸಂಪರ್ಕಿಸಿ ಅರ್ಜಿ ಸಲ್ಲಿಸಬಹುದು ಎಂದು ತೋಟಗಾರಿಕೆ ಉಪನಿರ್ದೇಶಕರು (ಜಿ.ಪಂ.) ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

1 ಕಾಮೆಂಟ್‌ಗಳು

ನವೀನ ಹಳೆಯದು