ಪ್ರಧಾನಮಂತ್ರಿ ಜನ-ಧನ ಯೋಜನೆ ಖಾತೆ

 ಪ್ರಧಾನಮಂತ್ರಿ ಜನ-ಧನ ಯೋಜನೆ ಖಾತೆ 


ಪ್ರಧಾನ ಮಂತ್ರಿ ಜನ್-ಧನ್ ಯೋಜನೆ ( ಪಿ ಎಂ ಜೆ ಡಿ ವೈ ) ಹಣಕಾಸು ಸೇವೆಗಳಿಗೆ ಖಚಿತವಾಗಿ ಪ್ರವೇಶ ನೀಡಲು ಅಂದರೆ, ಕೈಗೆಟಗುವ ರೀತಿಯಲ್ಲಿ ಮೂಲ ಉಳಿತಾಯ ಜಮೆ ( ಬಿ ಎಸ್ ಬಿ ಡಿ ) ಖಾತೆ, ಹಣ ರವಾನೆ, ಉದರಿ, ವಿಮೆ, ಪಿಂಚಣಿಯಂತಹ ಹಣಕಾಸು ಸೇರ್ಪಡೆ ರಾಷ್ಟ್ರೀಯ ಗುರಿಯಾಗಿದೆ. ಯೋಜನೆಯಡಿಯಲ್ಲಿ ಬೇಸಿಕ್ ಸೇವಿಂಗ್ ಬ್ಯಾಂಕ್ ಡೆಪಾಸಿಟ್ (ಬಿಎಸ್ ಬಿ ಡಿ )ಖಾತೆಯನ್ನು ಯಾವುದೇ ಬ್ಯಾಂಕ್ ಖಾತೆ ಅಥವಾ ಸಿಎಸ್ ಪಿ ಮೂಲಕ ಬೇರೆಯಾವುದೇ ಖಾತೆಯನ್ನು ಹೊಂದಿರದ ವ್ಯಕ್ತಿಗಳು ತೆರೆಯಬಹುದು. ಇದಲ್ಲದೆ, ಫಲಾನುಭವಿಗಳು 1 ಲಕ್ಷ ರೂ. ಗಳ ಅಂತರ್ನಿರ್ಮಿತ ಅಪಘಾತ ವಿಮಾರಕ್ಷಣೆಯನ್ನು ಹೊಂದಿರುವವವರು ಪೇ ಡೆಬಿಟ್ ಕಾರ್ಡ್ ಅನ್ನು  ಪಡೆಯುತ್ತಾರೆ.( 28-08-2018 ) ರ ನಂತರ ತೆರೆಯಲಾದ ಖಾತೆಗಳಿಗೆ ವಿಮ ಮೊತ್ತವನ್ನು 2 ಲಕ್ಷ ರೂ. ಗೆ ಪರಿಷ್ಕರಿಸಲಾಗಿದೆ. ದಿನಾಂಕ 01-08-2014 ರಂದು ಅಥವಾ ನಂತರ ತೆರೆಯಲಾದ ಎಲ್ಲಾ ಬಿಎಸ್ ಬಿಡಿ ಖಾತೆಗಳನ್ನು ಪಿಎಂ ಜೆ ಡಿ ವೈ ಖಾತೆಗಳು ಎಂದು ಹೆಸರಿಸಲಾಗಿದೆ.

ಯೋಜನೆಯ ವೈಶಿಷ್ಟ್ಯಗಳು :

(ಎ) ಸಂಪೂರ್ಣ ಕೆವೈಸಿ ಖಾತೆ : ಮೂಲ ಉಳಿತಾಯ ಬ್ಯಾಂಕ್ ಠೇವಣಿ ಖಾತೆಗಳು 

👉 ಖಾತೆಯ ಕೆವೈಸಿಯನ್ನು ಅನುಸರಿಸುತ್ತದೆ.

👉 ಉತ್ಪನ್ನಕ್ಕೆ ಕನಿಷ್ಠ ಬಾಕಿಯ ಅಗತ್ಯವಿರುವುದಿಲ್ಲ.

👉 ಒಂದು ತಿಂಗಳಲ್ಲಿ ಮಾಡಬಹುದಾದ ಠೇವಣಿಗಳ ಸಂಖ್ಯೆ ಮತ್ತು ಮೌಲ್ಯಕ್ಕೆ ಯಾವುದೇ ಮಿತಿ ಇಲ್ಲ.

👉 ಉಚಿತವಾಗಿ ಬೇಸಿಕ್ ರುಪೆ ಕಾರ್ಡ್ ನೀಡಲಾಗುವುದು.



(ಬಿ) ಬಿಎಸ್ ಬಿಡಿಎ - ಸಣ್ಣ ಖಾತೆಗಳು ( ಅತಿ ಸಣ್ಣ ಖಾತೆಗಳು )

👉 ಈ ಖಾತೆಗಳು ಮೂಲ ಉಳಿತಾಯ ಬ್ಯಾಂಕ್ ಠೇವಣಿ ಖಾತೆ ( ಬಿಎಸ್ ಬಿಡಿಎ ) ಯಂತೆಯೇ ಇರುತ್ತದೆ ಆದರೆ ಗ್ರಾಹಕರು ಪೂರ್ಣ ಕೆವೈಸಿಗೆ ಯಾವುದೇ ಅಧಿಕೃತ ಮಾನ್ಯ ದಾಖಲೆಯನ್ನು (ಒವಿಡಿ) ಒದಗಿಸಿದ್ದಾಗ ತೆರೆಯಲಾಗುತ್ತದೆ.
👉 ಒಂದು ಹಣಕಾಸು ವರ್ಷದಲ್ಲಿ ಎಲ್ಲಾ ಜಮೆಯ ಒಟ್ಟು ಮೊತ್ತವು 1 ಲಕ್ಷ ರೂಪಾಯಿಗಳನ್ನು ಮೀರಬಾರದು.
👉 ಒಂದು ತಿಂಗಳಲ್ಲಿ ಎಲ್ಲಾ ಹಿಂಪಡೆಯುವಿಕೆ ಮತ್ತು ವರ್ಗಾವಣೆಗಳ ಒಟ್ಟು ಮೊತ್ತವು ರೂ.10,000 ಮೀರುವಂತಿಲ್ಲ.
👉 ಯಾವುದೇ ಸಂಧರ್ಭದಲ್ಲೂ ಶೇಷ ರೂ. ೫೦,೦೦೦ ಮೀರುವಂತಿಲ್ಲ. ಈ ಖಾತೆಗಳು ಪ್ರಾರಂಭದಲ್ಲಿ ಕೇವಲ 12 ತಿಂಗಳಿನವರೆಗೂ ಮಾತ್ರ ಮಾನ್ಯವಾಗಿರುತ್ತದೆ. ಗ್ರಾಹಕರು ಕೆವೈಸಿ ದಾಖಲೆಗಳನ್ನು ಅಥವಾ ಕೆವೈಸಿ ದಾಖಲೆಗಳಿಗೆ ಅರ್ಜಿ ಸಲ್ಲಿಸಿದ ಪುರಾವೆಗಳನ್ನು ಸಲ್ಲಿಸಿದರೆ ಖಾತೆಯನ್ನು ತೆರೆದ ದಿನಾಂಕದಿಂದ ಒಟ್ಟು ೨೪ ತಿಂಗಳ ಅವಧಿಗೆ ಖಾತೆಯನ್ನು ಮುಂದುವರೆಸಲು ಅನುಮತಿಸಲಾಗುತ್ತದೆ. ಗ್ರಾಹಕರು ಕೆವೈಸಿ ದಾಖಲೆಗಳನ್ನು ಸಲ್ಲಿಸಿದರೆ, ಗ್ರಾಹಕರ ವಿವೇಚನೆಯ ಮೇರೆಗೆ ಖಾತೆಯನ್ನು ಬಿಎಸ್ ಬಿಡಿ / ನಿಯಮಿತ ಉಳಿತಾಯ ಬ್ಯಾಂಕ್ ಖಾತೆಗೆ ಪರಿವರ್ತಿಸಬೇಕು.
👉 ಗ್ರಾಹಕರು ಕೆವೈಸಿ ದಾಖಲೆಗಳನ್ನು ಸಲ್ಲಿಸಲು ವಿಫಲವಾದರೆ ಖಾತೆಯನ್ನು ತೆರೆದ ೨೪ ತಿಂಗಳ ನಂತರ ಯಾವುದೇ ವಹಿವಾಟನ್ನು ಅನುಮತಿಸಲಾಗುವುದಿಲ್ಲ.
👉 ಹೊಸ ಖಾತೆ ತೆರೆಯುವ ನಮೂನೆಯೊಂದಿಗೆ ಕೆವೈಸಿ ದಾಖಲೆಗಳನ್ನು ಸಲ್ಲಿಸಿದ ನಂತರ ಈ ಖಾತೆಗಳನ್ನು ಬಿಎಸ್ ಬಿಡಿ / ನಿಯಮಿತ ಉಳಿತಾಯ ಬ್ಯಾಂಕ್ ಖಾತೆಗೆ ಪರಿವರ್ತಿಸಬಹುದು. ಮತ್ತು ಕೆವೈಸಿ ದಾಖಲೆಗಳೊಂದಿಗೆ ಖಾತೆ ತೆರೆಯುವ ಫಾರ್ಮ್ ಅನ್ನು ಎಲ್ ಸಿಪಿಸಿ ಗೆ ರವಾನಿಸಬೇಕು.
👉 ಅಂತಹ ಖಾತೆಗಳಿಗೆ ವಿದೇಶಿ ಹಣ ರವಾನೆಯನ್ನು ಅನುಮತಿಸಲಾಗುವುದಿಲ್ಲ.
👉 ನಾಮ ನಿರ್ದೇಶನ ಸೌಲಭ್ಯವು ಪಿಎಂ ಜೆಡಿವೈ ಖಾತೆಗಳಲ್ಲಿ ಲಭ್ಯವಿದೆ ಮತ್ತು ಅನಿರೀಕ್ಷಿತ ಸಂಧರ್ಭಗಳಲ್ಲಿ ಕಾನೂನು ಬದ್ಧ ವಾರಸುದಾರರ ಹಕ್ಕಿನ ಹಣವನ್ನು ಸುಗಮವಾಗಿ ಇತ್ಯರ್ಥ ಪಡಿಸಲು ಖಾತೆದಾರರಿಗೆ ಈ ಸೌಲಭ್ಯವನ್ನು ಪಡೆಯಲು ಸಲಹೆ ನೀಡಲಾಗುತ್ತದೆ.
👉 ನಾಮ ನಿರ್ದೇಶನವನ್ನು ಕೇವಲ ಒಬ್ಬ ನಾಮನಿರ್ದೇಶಿತನ ಪರವಾಗಿ ಮಾಡಬಹುದು ಮತ್ತು ವ್ಯಕ್ತಿಗಳ ಪರವಾಗಿ ಸಲಹೆ ನೀಡಲಾಗುತ್ತದೆ.
👉 ತೆರೆಯಲಾದ ಎಲ್ಲ ಹೊಸ ಖಾತೆಗಳು ಯಾವಾಗಲೂ ನಾಮ ನಿರ್ದೇಶನವನ್ನು ಹೊಂದಿರಬೇಕು. ಮತ್ತು ಇಲ್ಲಿಯವರೆಗೆ ಯಾವುದೇ ವ್ಯಕ್ತಿಯನ್ನು ನಾಮ್ ನಿರ್ದೇಶನ ಮಾಡದ ಖಾತೆದಾರರನ್ನು ಆದ್ಯತೆಯ ಆಧಾರದ ಮೇಲೆ ಸಂಪರ್ಕಿಸಲು ಪ್ರಯತ್ನಿಸಬೇಕು.








ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು