ಬಂಗಾರವನ್ನೂ ಮೀರಿಸಿದ ಕೆಂಪು ಸುಂದರಿ ಟೊಮೇಟೊ

ಬಂಗಾರವನ್ನೂ ಮೀರಿಸಿದ ಕೆಂಪು ಸುಂದರಿ ಟೊಮೇಟೊ 

    

ಧಾರಣೆ ನೋಡಿ ಬೆಲೆ ಬೆಳೆದರೆ ಹನಿ ಕಟ್ಟಿಟ್ಟ ಬುತ್ತಿ. ನಾಲ್ಕೈದು ವರ್ಷ ಕೈಕೊಟ್ಟಿದ್ದ ಟೊಮೆಟೊ ಇದೀಗ ಅನುಕೂಲವಾಗಿದೆ. ಸಾವಿರಾರು ರೈತರ ಮಧ್ಯೆ ಏಕೈಕ ವ್ಯಕ್ತಿಗೆ ಅದೃಷ್ಟ ಒಲಿದಿದೆ.            
              
             ಸದ್ಯ ಮಾರುಕಟ್ಟೆಯಲ್ಲಿ ದರ ವಿಚಾರದಲ್ಲಿ ಹೆಚ್ಚು ಸಂಚಲನ ಸೃಷ್ಟಿಸಿರುವ ತರಕಾರಿ ಈ ಕೆಂಪು ಸುಂದರಿ ಟೊಮೇಟೊಗೆ ಎಲ್ಲಿಲ್ಲದ ಬೇಡಿಕೆ ಸೃಷ್ಟಿಸಿದೆ. ಅನೇಕ ದಿನಗಳಿಂದ ಟೊಮೆಟೊ ಬೆಳೆದು ನಷ್ಟ ಅನುಭವಿಸಿದ ರೈತರಿಗೆ ಈ ಭಾರಿ ಉತ್ತಮ ಆದಾಯ  ದೊರಕುತ್ತಿದೆ. ಈ ಹಿಂದೆ ಎಂದೂ ಸಿಗದ ಬೆಲೆ ಈಗ ಮಡುಕಟ್ಟೆಯಲ್ಲಿ ಟೊಮೇಟೊಗೆ ಸಿಗುತ್ತಿದೆ. 
ಬಾಗಲಕೋಟೆ ಜಿಲ್ಲೆಯ ರಬಕವಿ-ಬನ್ನಟ್ಟಿ ತಾಲೂಕಿನ ನವಳಾಗಿ ಗ್ರಾಮದ ರೈತ ಮಲ್ಲಪ್ಪ ಮಗದುಮ್, ಬೇರೊಬ್ಬರ ಭೂಮಿ ಊಳುತ್ತಾ ಎರಡೂವರೆ ಎಕರೆಯಲ್ಲಿ ಬೆಳೆದ ಟೊಮೆಟೊ ಈಗ ಬಂಗಾರದ ಬೆಲೆ ಬಂದಿದೆ.

ಕಳೆದ 2-3 ತಿಂಗಳ ಹಿಂದೆ ಕೆಜಿಗೆ 2-3 ರೂಪಾಯಿ ಆದರೆ ಈಗ ಕೆಜಿ ಟೊಮೆಟೊ ಬೆಲೆ 150 ರೂ ಗಡಿ ದಾಟಿದೆ. ಹೀಗಾಗಿ ಸದ್ಯ ರೈತರಿಗೆ ಒಳ್ಳೆಯ ಲಾಭ ದೊರೆಯುತ್ತಿದೆ. ಈ ರೈತ ಎರಡು ವರೆ ಎಕರೆಯಷ್ಟು ಜಗದಲ್ಲಿ ಸವೋ ತಳಿಯ 15 ಸಾವಿರ ಸಸಿಗಳನ್ನು ಸ್ಥಳೀಯ ನರ್ಸರಿಯಿಂದ ತೆಗೆದುಕೊಂಡು ಬಂದು ನಾಟಿ ಮಾಡಿದ್ದಾರೆ. ಇಲ್ಲಿಯವರೆಗೆ 14-15 ಬಾರಿ ಕೊಯ್ಲು ಮಾಡಿದ್ದು ಸರಿ ಸುಮಾರು 15 ಲಕ್ಷ ಆದಾಯ ದೊರೆತಿದೆ ಎನ್ನುತ್ತಾರೆ ಯುವ ರೈತ ಕುಮಾರ ಮಗದುಮ್....

ನಿರ್ಲಕ್ಷ್ಯ ಮಾಡಿದ್ದೆವು:

ಎರಡು ತಿಂಗಳ ಹಿಂದೆ ಇದರ ಬೆಲೆ 2 ರೂಪಾಯಿ ಕೇಳುವವರೂ ಇಲ್ಲದಾಗ ಇಡೀ ಎರಡೂವರೆ ಎಕರೆಯಷ್ಟು ಬೆಳೆಯನ್ನು ಸಂಪೂರ್ಣ ನಿರ್ಲಕ್ಷ್ಯ ಮಾಡಿದ್ದೆವು, ನಮ್ಮ ಭೂಮಿಯಲ್ಲಿನ ಬೆಳೆ ಕಟಾವಿಗೆ ಬರುವ ಸಂದರ್ಭ 40 ರೂ ಗೆ ಕೇಜಿಯಿತ್ತು. ಆಗ ಇದಕ್ಕೆ ಮತ್ತೆ ಗಮನದಲ್ಲಿಟ್ಟು ಬೆಳೆದು ಉತ್ತಮ ಗೊಬ್ಬರಂ ನೀರಿನೊಂದಿಗೆ ಜೋಪಾನ ಮಾಡಿಕೊಂಡಿದ್ದಾರೆ ಪರಿಣಾಮ ಇಷ್ಟೊಂದು ಆದಾಯ ಬರುವಲ್ಲಿ ಕಾರಣವಾಗಿದ್ದು, ಇನ್ನೂ10 ರಿಂದ 12 ಕಟಾವು ಬರುವ ನಿರೀಕ್ಷೆಯಿದೆ. ಇನ್ನೂ 15 ಲಕ್ಷ ರೂಗಳ ಆದಾಯದ ನಿರೀಕ್ಷೆಯಲ್ಲಿದ್ದೇವೆ ಎನ್ನುತ್ತಾರೆ. 
         ಮಾರುಕಟ್ಟೆಗೆ ತೆರಳಲು ಭಯ : ಕೆಲವೆಡೆ ಟೊಮೆಟೊ ಕಳ್ಳತನದ ಪ್ರಕರಣ ಕೇಳಿ ನಾವೂ ಸಹಿತ ವಾಹನದೊಂದಿಗೆ ಸಂಚಾರ ನಡೆಸುವಲ್ಲಿ ಭಯ ಪಡುವಂತಾಗಿದೆ. ದಿನ ಬಿಟ್ಟು  ಮಾರುಕಟ್ಟೆಗೆ ತೆರಳುತ್ತಿದ್ದೇವೆ ಎನ್ನುತ್ತಾರೆ.






ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು