ಅಂಚೆಕಚೇರಿ ಬೆಂಗಳೂರು ಒನ್ ಗ್ರಾಮ ಒನ್, ಕರ್ನಾಟಕ ಒನ್, ನಲ್ಲಿ ನೂಕುನುಗ್ಗಲು
ಐದಾರು ಗಂಟೆ ಸರತಿ ಸಾಲಿನಲ್ಲಿ ನಿಲ್ಲುವುದು ಅನಿವಾರ್ಯ
ಸೇವಾಶುಲ್ಕ 150/- ರೂಗೆ ಏರಿಕೆ
ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಿಗೆ ಆಧಾರ್ ಅಪ್ಡೇಟ್ ಮಾಡಬೇಕೆಂಬ ಸಂದೇಶಗಳು ಜನಸಾಮಾನ್ಯರನ್ನು ಗಲಿಬಿಲಿಗೊಳಿಸಿದ್ದು, ಸೇವಾ ಕೇಂದ್ರಗಳ ಮುಂದೆ ಸರತಿಸಾಲು ಹೆಚ್ಚಾಗಿ ಪರದಾಡುವಂತಾಗಿದೆ.
ರಜಾದಿನವಾದ ಭಾನುವಾರವೂ ಕೂಡ ಆಧಾರ್ ಅಪ್ಡೇಟ್ ಬೆಂಗಳೂರು ಒನ್ ಗೆ ಬಂದ ನೂರಾರು ನಾಗರಿಕರು ವ್ಯವಸ್ಥೆಗೆ ಇಡೀ ಶಾಪ ಹಾಕುತ್ತಿರುವುದು ಕಂಡುಬಂತು.
ಐದು ಗ್ಯಾರಂಟಿ ಯೋಜನೆಗಳಲ್ಲಿ ಪ್ರಮುಖವಾಗಿರುವ ಗೃಹಾಜ್ಯೋತಿಗೆ ಆಧಾರ್ ಸಂಖ್ಯೆಯನ್ನು ಕೇಳುತ್ತಿದೆ. ಬಹಳಷ್ಟು ಮಂದಿ ತಮ್ಮ ಮೊಬೈಲ್ ಸಂಖ್ಯೆಗಳನ್ನು ಬದಲಾವಣೆ ಮಾಡಿಕೊನಿದ್ದರೆ. ಆಧಾರ್ ಜೊತೆ ಜೋಡಎಣೆಯಾಗಿರುವ ಮೊಬೈಲ್ ಸಂಖ್ಯೆ ಬದಲಾವಣೆಯಾಗಿರುವ ಕಾರಣ ಒಟಿಪಿ ಬರದೇ ಗೃಹಜ್ಯೋತಿ ಕೆಲವರದು ವಿಳಾಸಗಳ ಬದಲಾವಣೆಯಾಗಿದೆ. ಇವುಗಳನ್ನು ನೋಂದಣಿಯಾಗುತ್ತಿಲ್ಲ. ಇನ್ನು ಕೆಲವರದು ವಿಳಾಸಗಳ ಬದಲಾವಣೆಯಾಗಿದೆ. ಹೀಗಾಗಿ ಪ್ರತಿದಿನ ಅಂಚೆಕಚೇರಿ, ಬೆಂಗಳೂರು-1, ಗ್ರಾಮ-1, ಕರ್ನಾಟಕ-1 ಮತ್ತು ಬಾಪೂಜಿ ಸೇವಾ ಕೇಂದ್ರಗಳ ಮುಂದೆ ಸರತಿಗಾಗಿ ಜನ ಸಾಲುಗಟ್ಟಿ ನಿಲ್ಲುವಂತಾಗಿದೆ.
ಪ್ರತಿಯೊಂದು ಸೇವಾ ಕೇಂದ್ರವು ದಿನಕ್ಕೆ ೬೦ ಜನರ ಮಾಹಿತಿಯನ್ನು ಮಾತ್ರ ಅಪ್ಡೇಟ್ ಮಾಡಲಾಗುತ್ತಿದೆ. ಇದಕ್ಕಾಗಿ ಟೋಕನ್ ಪಡೆದುಕೊಳ್ಳಲು ಬೆಳಗ್ಗೆ 5 ಗಂಟೆಗೆ ಜನ ಸಾಲಿನಲ್ಲಿ
ನಿಲ್ಲುತ್ತಿದ್ದಾರೆ. ಟೋಕನ್ ಪಡೆದ ಬಳಿಕ ಅಪ್ಡೇಟ್ ದತ್ತಾಂಶಗಳನ್ನು ನಮೂದಿಸುವ ಅರ್ಜಿ ನಮೂನೆಗೆ ಸಾಲು ನಿಲ್ಲಬೇಕಿದೆ. ಇದರಿಂದ ಜನಸಾಮಾನ್ಯರು ಬೇಸತ್ತು ಹೋಗಿದ್ದಾರೆ.
ದುಡಿಯುವ ವರ್ಗ ವಾರ ಪೂರ್ತಿ ಕಚೇರಿ ಮತ್ತು ಕಾರ್ಯಭಾರಗಳ ಒತ್ತಡದಲ್ಲಿ ಮುಳುಗಿರುತ್ತದೆ. ಭಾನುವಾರ ಒಂದು ದಿನ ವಿಶ್ರಾಂತಿ ಸಿಗಬಹುದೆಂದು ನಿರೀಕ್ಷಿಸಿದವರಿಗೆ ಆಧಾರ್ ಅಪ್ಡೇಟ್ ಜಂಟಾಟ ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡುತ್ತಿದೆ. ಭಾನುವಾರವಷ್ಟೇ ಅಲ್ಲ ಪ್ರತಿದಿನವೂ ಆಧಾರ್ ಅಪ್ಡೇಟ್ ಮಾಡಿಸಲು ಜನಸಾಮಾನ್ಯರು ಪರದಾಡುತ್ತಿದ್ದಾರೆ.
ಆನ್ಲೈನ್ ಮೂಲಕ ತಮ್ಮ ವಿದ್ಯುನ್ಮಾನ ಸಲಕರಣೆಗಳ ಮೂಲಕವೇ ಆಧಾರ್ ಅಪ್ಡೇಟ್ ಮಾಡಿಕೊಳ್ಳಬಹುದು ಎಂದು ಸರ್ಕಾರ ಪದೇ ಪದೇ ಹೇಳುತ್ತಿದೆ. ಆದರೆ ಅದು ಊರ್ಜಿತವಲ್ಲ. ಬೆರಳಚ್ಚು ಮತ್ತು ಕಣ್ಣಿನ ರೇಟಿನ ಸ್ಕ್ಯಾನಿಂಗ್ ದತ್ತಾಂಶ ನೀಡಿದಾಗ ಮಾತ್ರ ಅಪ್ಡೇಟ್ ಖಾತ್ರಿಯಾಗುತ್ತದೆ ಎಂದು ಹೇಳಲಾಗುತ್ತಿದೆ. ಈವರೆಗೂ ಯಾರು ಈ ಬಗ್ಗೆ ಅಧಿಕೃತವಾದ ಮಾಹಿತಿಯನ್ನು ಸ್ಪಷ್ಟಪಡಿಸಿಲ್ಲ. ಹೀಗಾಗಿ ವಿದ್ಯಾವಂತರು ಕೂಡ ಸೇವಾ ಕೇಂದ್ರಗಳ ಮುಂದೆ ಸಾಲುಗಟ್ಟಿ ನಿಲ್ಲುತ್ತಿದ್ದಾರೆ. ಆಧಾರ್ ಅಪ್ಡೇಟ್ ಮಾಡಿಕೊಳ್ಳುವಂತೆ ಪದೇ ಪದೇ ಮೊಬೈಲ್ ಗೆ ಸಂದೇಶ ಬರುತ್ತಿದೆ. ಬಹಳಷ್ಟು ಮಂದಿ ಸಂದೇಶಕ್ಕೆ ಮನ್ನಣೆ ನೀಡಿ ಆಧಾರ್ ಅಪ್ಡೇಟ್ ಮಾಡಿಕೊಳ್ಳುತ್ತಿದ್ದಾರೆ. ಹೀಗಾಗಿ ಜನರ ಸಾಲು ಹೆಚ್ಚಾಗುತ್ತಿದೆ. ಈ ಮೊದಲು ಪಡೆಯಲಾಗುತ್ತಿದ್ದ 50 ರೂ ಶುಲ್ಕವನ್ನು ಸೇವಾ ಸಿಂಧು ಕೇಂದ್ರಗಳು ಇದನ್ನೇ ಬಂಡವಾಳ ಮಾಡಿಕೊಂಡು ಏಕಾಏಕಿ 150 ರೂ ಗೆ ಏರಿಸಲಾಗಿದೆ. ಇದು ಕೂಡ ಜನಸಾಮಾನ್ಯರ ಆಕ್ರೋಶಕ್ಕೆ ಕಾರಣವಾಗಿದೆ.