ವಿಶ್ವದ ಅತಿ ಉದ್ದದ ಸುರಂಗ ರಸ್ತೆಗೆ ಸಾಕ್ಷಿಯಾಗಲಿದೆ ಬೆಂಗಳೂರು !
ಮೂಲಕಸೌಕರ್ಯ ಅಭಿವೃದ್ಧಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಹೊಸ ಇತಿಹಾಸ ನಿರ್ಮಿಸಲು ಮುಂದಾಗಿದೆ. ಶರವೇಗದಲ್ಲಿ ಬೆಳೆಯುತ್ತಿರುವ ಬೆಂಗಳೂರು ಮಹಾನಗರಿಯಲ್ಲಿ ಸಂಚಾರ ದಟ್ಟಣೆ ಕಿರಿಕಿರಿ ತಪ್ಪಿಸಲು ವಿಶ್ವದಲ್ಲಿಯೇ ಅತಿ ಉದ್ದದ ಸುರಂಗ ರಸ್ತೆ ( Turnel Road ) ನಿರ್ಮಿಸಲು ರಾಜ್ಯ ಸರ್ಕಾರ ಯೋಜನೆ ರೂಪಿಸುತ್ತಿದೆ.
ಬೆಂಗಳೂರಿನಲ್ಲಿ 99 ಕಿಲೋಮೀಟರ್ ಉದ್ದದ ಸುರಂಗ ರಸ್ತೆಯನ್ನು ಮಾಡಲು ಸರ್ಕಾರ, ಯೋಜನಾ ಕಾರ್ಯತಂತ್ರವನ್ನು ಸಿದ್ಧಪಡಿಸುತ್ತಿದೆ. ಈ ಸುರಂಗ ರಸ್ತೆಯು ಪ್ರಮುಖ ಮೂರೂ ಕಾರಿಡಾರ್ ಗಳನ್ನು ಒಳಗೊಂಡಿರಲಿದೆ. ಮೊದಲ, ಉತ್ತರ-ದಕ್ಷಿಣ ಕಾರಿಡಾರ್, ಯಲಹಂಕ, ಹೆಬ್ಬಾಳ,ಮೇಖ್ರಿ ಸರ್ಕಲ್, ಕಂಟೋನ್ಮೆಂಟ್, ಕಸ್ತೂರ್ಬಾ ರಸ್ತೆ ಹಾಗೂ ಸಿಲ್ಕ್ ಬೋರ್ಡ್ ಮೂಲಕ ಹೊಸೂರು ರಸ್ತೆಯನ್ನು ಸಂಪರ್ಕಿಸಲಿದೆ.
ಎರಡನೇ ಪೂರ್ವ-ಪಶ್ಚಿಮ ಕಾರಿಡಾರ್, ಎರಡು ಮಾರ್ಗದ ರಸ್ತೆಯನ್ನು ಹೊಂದಿರಲಿದೆ. ಒಂದು ವರ್ತೂರು ಕೋಡಿಯಿಂದ ಜ್ಞಾನಭಾರತಿ, ಮತ್ತೊಂದು ಕೆ.ಆರ್.ಪುರಂ ನಿಂದ ಹಳೆ ಮದ್ರಾಸ್ ರೋಡ ಮೂಲಕ ಗೊರಗುಂಟೆಪಾಳ್ಯಕ್ಕೆ ಸಂಪರ್ಕ ಕಲ್ಪಿಸಲಿದೆ. ಜೊತೆಗೆ ಈ ಸುರಂಗ ರಸ್ತೆಯು ಮೂರೂ ಸಂಪರ್ಕಿಸುವ ಕಾರಿಡಾರ್ ( connecting corriidors ) ಗಳನ್ನು ಒಳಗೊಂಡಿರಲಿದೆ.
ಮೊದಲನೆಯದು ಸೇಂಟ್ ಜಾನ್ ಆಸ್ಪತ್ರೆ ಜಂಕ್ಷನ್ ನಿಂದ ಅಗರ ರಸ್ತೆಯವರೆಗೆ, ಎರಡನೆಯದು ಪೂರ್ವ-ಪಶ್ಚಿಮ ಕಾರಿಡಾರ್ ಎರಡು ಮಾರ್ಗದ ರಸ್ತೆ, ಮೂರನೆಯದು ವಿಲರ್ಸ್ ರಸ್ತೆ ಜಂಕ್ಷನ್ ನಿಂದ ಕಲ್ಯಾಣನಗರದವರೆಗೆ ಇರಲಿದೆ. ಹಂತ-1 ರ ಅಡಿಯಲ್ಲಿ ಸುಮಾರು ರೂ.22,000 ಕೋಟಿ ವೆಚ್ಚದಲ್ಲಿ ಮೊದಲಿಗೆ ೫೦ ಕಿಲೋಮೀಟರ್ ಉದ್ದದ ರಸ್ತೆಯನ್ನು ಮಾಡಲು ಸರ್ಕಾರ ಯೋಜನೆ ರೂಪಿಸಿದೆ ಎಂದು ವರದಿಯಾಗಲಿದೆ.
ಇದರಲ್ಲಿ ಹೆಬ್ಬಾಳವನ್ನು ಕೆ.ಆರ್.ಪುರಂ ಹಾಗೂ ಕಂಟೋನ್ಮೆಂಟ್ ಅನ್ನು ಸಿಲ್ಕ್ ಬೋರ್ಡ್ ನೊಂದಿಗೆ ಸಂಪರ್ಕಿಸುವ ಸುರಂಗ ರಸ್ತೆ ಕಾಮಗಾರಿಯನ್ನು ನಡೆಸಲಾಗುತ್ತದೆ ಎಂದು ಹೇಳಲಾಗಿದೆ. ಈ ಯೋಜನೆಯ ಕಾರ್ಯಸಾಧ್ಯತೆಯ ಅಧ್ಯಯನವನ್ನು ತಜ್ಞರು ಹಾಗೂ ಅಧಿಕರಿಗಳು ಶೀಘ್ರದಲ್ಲೇ ಕೈಗೊಳ್ಳಬಹುದು. ಆದರೆ ಈ ಬಗ್ಗೆ ಯಾವುದೇ ಖಚಿತ ವಿವರ ಲಭ್ಯವಾಗಿಲ್ಲ.
ಈ ಸುರಂಗ ಯೋಜನೆಯು ಬೆಂಗಳೂರಿನ ಸಂಚಾರ ದಟ್ಟಣೆ ಸಮಸ್ಯೆ ಕಡಿಮೆಗೊಳಿಸಲು ಸಹಾಯವಾಗಿದೆ ಎಂದು ವಿಶ್ಲೇಷಿಸಲಾಗಿದೆ. ಸುರಂಗ ರಸ್ತೆಯ ಈ ಕಿಲೋಮೀಟರ್ ನಿರ್ಮಾಣಕ್ಕೆ ಸುಮಾರು ರೂ. 450 ಕೋಟಿಯನ್ನು ವ್ಯಯಿಸಬೇಕಾಗಿದೆ. ಕಾಮಗಾರಿಯನ್ನು ಸಾರ್ವಜನಿಕ ಹಾಗೂ ಖಾಸಗಿ ಸಹಭಾಗಿತ್ವದಲ್ಲಿ ನಡೆಸಲು ಸರ್ಕಾರ ಚಿಂತನೆ ನಡೆಸಿದೆ. ಗಮನಿಸಬೇಕಾದ ಮುಖ್ಯ ಅಂಶವೆಂದರೆ, ಈ ರಸ್ತೆಗೆ ಟೋಲ್ ಶುಲ್ಕವಿರುತ್ತದೆಯಂತೆ.
ಇನ್ನು ಸಿ ಎಂ ಸಿದ್ದರಾಮಯ್ಯ ಇತ್ತೀಚೆಗೆ ಮಂಡಿಸಿದ್ದ ಬಜೆಟ್ ನಲ್ಲೂ ಬೆಂಗಳೂರಿಗೆ ದೊಡ್ಡಮಟ್ಟದಲ್ಲಿ ಅನುದಾನ ನೀಡಿದ್ದರು. ಟ್ರಾಫಿಕ್ ಸಮಸ್ಯೆ ಬಗೆಹರಿಸಲು ನಮ್ಮ ಮೆಟ್ರೋ ಹಾಗೂ ಉಪನಗರ ರೈಲು ಯೋಜನೆ ಕಾಮಗಾರಿ ಕೈಹೊಳ್ಳಲು ರೂ. 30,000 ಕೋಟಿಯನ್ನು ಮೀಸಲಿಟ್ಟಿದ್ದರು. ಜೊತೆಗೆ ಮುಂದಿನ 3 ವರ್ಷಗಳಲ್ಲಿ ಮೆಟ್ರೋ ಜಾಲವನ್ನು 176 ಕಿಲೋಮೀಟರ್ ಗೆ ವಿಸ್ತರಿಸುವ ಗುರಿಯನ್ನು ಹಾಕಿಕೊಳ್ಳಲಾಗಿದೆ.
ಡ್ರೈವ್ ಸ್ಪಾರ್ಕ್ ಕನ್ನಡ ವೆಬ್ ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ. ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವಿಡಿಯೋಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್ ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.