ಹೊಸ ರೇಷನ್ ಕಾರ್ಡ್ ಗಾಗಿ ಅರ್ಜಿ ಸಲ್ಲಿಸುವುದು ಹೇಗೆ ? ಇಲ್ಲಿದೆ ಅರ್ಜಿ ಸಲ್ಲಿಕೆ ವಿಧಾನ !!

ಹೊಸ ರೇಷನ್ ಕಾರ್ಡ್ ಗಾಗಿ ಅರ್ಜಿ ಸಲ್ಲಿಸುವುದು ಹೇಗೆ ? ಇಲ್ಲಿದೆ ಅರ್ಜಿ ಸಲ್ಲಿಕೆ ವಿಧಾನ !!



               ನೀವು ರೇಷನ್ ಕಾರ್ಡ್ ಅರ್ಜಿ ಸಲ್ಲಿಸಲು ಪ್ರಯತ್ನಿಸುತ್ತಿದ್ದೀರಾ? ಹಾಗಾದರೆ  ಇಲ್ಲಿ ನಾವು ಹೊಸ ಪಡಿತರ ಚೀಟಿಯ ಅರ್ಜಿ ಸಲ್ಲಿಸುವ ವಿಧಾನದ ಬಗ್ಗೆ ತಿಳಿಸಿದ್ದೇವೆ. ಈ ಮಾಹಿತಿ ಮೂಲಕ ನೀವು ಆನ್ಲೈನ್ ಅರ್ಜಿ ಸಲ್ಲಿಸಬಹುದು. 

ರೇಷನ್ ಕಾರ್ಡ್ ಸರ್ಕಾರದ ಪ್ರಮುಖ ಯೋಜನೆಗಳ ಸೌಲಭ್ಯ ಪಡೆಯಲು ಬಹುಮುಖ್ಯ ದಾಖಲೆಯಾಗಿದ್ದು,  ರೇಖೆಗಿಂತ ಕೆಳಗಿರುವ ನಾಗರಿಕರಿಗೆ BPL ಅಥವಾ ಅಂತ್ಯೋದಯ  ಹಾಗೂ ಬಡತನ ರೇಖೆಗಿಂತ ಮೇಲಿರುವ ನಾಗರಿಕರಿಗೆ  APL ಕಾರ್ಡ್ ವಿತರಿಸಲಾಗುತ್ತದೆ. 

ರೇಷನ್ ಕಾರ್ಡ್ ನ ಉಪಯೋಗಗಳು :

ಆಹಾರ, ನಾಗರೀಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯು ರಾಜ್ಯದ ಅರ್ಹ ನಾಗರಿಕರಿಗೆ ವಿತರಿಸುವ ಬಿಪಿಎಲ್ ಕಾರ್ಡ್ ಅಥವಾ ಅಂತ್ಯೋದಯ ಕಾರ್ಡ್ ಮತ್ತು ಎಪಿಎಲ್ ಕಾರ್ಡ್ ಗಳ ಉಪಯೋಗ ....

1. ರೇಷನ್ ಕಾರ್ಡ್ ಸರ್ಕಾರದ ಬಹುಮುಖ್ಯ ದಾಖಲೆಗಳಲ್ಲಿ ಒಂದು.

2. ಸರ್ಕಾರದಿಂದ ಸಿಗುವ ಕಲ್ಯಾಣ ಯೋಜನೆಗಳ ಸೌಲಭ್ಯ ಪಡೆಯಬಹುದು.

3. ಬಿಪಿಎಲ್ ಕಾರ್ಡ್ ಅಥವಾ ಅಂತ್ಯೋದಯ ಕಾರ್ಡ್ ಹೊಂದಿದವರಿಗೆ ಅನ್ನಭಾಗ್ಯ ಯೋಜನೆಯಡಿ ಉಚಿತ ಅಕ್ಕಿ ನೀಡಲಾಗುತ್ತದೆ. 
ಕಾಂಗ್ರೆಸ್ ಪಕ್ಷ ಪ್ರನಾಳಿಕೆಯಲ್ಲಿ ಘೋಷಿಸಿದಂತೆ ಅನ್ನಭಾಗ್ಯ ಯೋಜನೆಯ 10 ಕೆಜಿ ಅಕ್ಕಿ ವಿತರಣೆ ಮಾಡುವುವರಿದ್ದರು, ಆದರೆ ಅಕ್ಕಿ ಲಭ್ಯತೆಯ ಕಾರಣದಿಂದ ಹೆಚ್ಚುವರಿ 5 ಕೆಜಿ ಅಕ್ಕಿಯ ಬದಲಿಗೆ ಕೆಜಿಗೆ 34 ರೂ ರಂತೆ ಕುಟುಂಬದ ಪ್ರತಿ ಸದಸ್ಯರಿಗೆ 172 ರೂ ನೀಡಲಾಗುತ್ತದೆ.

4.  ರೇಷನ್ ಕಾರ್ಡ್ ಹೊಂದಿರುವ ಕುಟುಂಬದ ಮನೆ ಯಜಮಾನಿಗೆ ಗೃಹ ಲಕ್ಷ್ಮಿ ಯೋಜನೆಯಡಿ ಪ್ರತಿ ತಿಂಗಳು 2,000 ರೂ ಪಡೆಯಬಹುದು.

5. ಬಿಪಿಎಲ್ ಕಾರ್ಡ್ ಅಥವಾ ಅಂತ್ಯೋದಯ ಕಾರ್ಡ್ ದಾರರು ಸರ್ಕಾರೀ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಲು ರಿಯಾಯಿತಿ ದೊರೆಯುತ್ತದೆ. 

ಹೀಗೆ ಅನೇಕ ಸರ್ಕಾರದ ಸೌಲಭ್ಯಗಳನ್ನು ಪಡೆಯಬಹುದು.

ಹೊಸ ರೇಷನ್ ಕಾರ್ಡ್ ಅರ್ಜಿ ಸಲ್ಲಿಸುವುದು ಹೇಗೆ?

              ಸರ್ಕಾರದ ಪ್ರಮುಖ ದಾಖಲೆಗಳಲ್ಲಿ ಒಂದಾದ ರೇಷನ್ ಕಾರ್ಡ್ ಪಡೆಯಲು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕಾಗುತ್ತದೆ. ಹೊಸ ರೇಷನ್ ಕಾರ್ಡ್ ಅರ್ಜಿ ಸಲ್ಲಿಕೆಯ ಸರಳ ವಿಧಾನ ಈ ಕೆಳಗಿನಂತಿದೆ. ...

ಹಂತ: ೧ ಮೊದಲಿಗೆ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯಾಯಾಹಾರಗಳ ಇಲಾಖೆಯ ಅಧಿಕೃತ ವೆಬ್ ಸೈಟ್ ಮೇಲೆ ಕ್ಲಿಕ್ ಮಾಡಿ 

ಹಂತ: ಆಹಾರ ಇಲಾಖೆಯ ವೆಬ್ ಸೈಟ್ ನಲ್ಲಿ ಮೇಲ್ಭಾಗದಲ್ಲಿ ಇರುವ "ಈ-ಸೇವೆಗಳು" ಎಂಬ ಆಯ್ಕೆ ಮೇಲೆ ಕ್ಲಿಕ್ ಮಾಡಿ.


ಹಂತ: ಎಡ  ಭಾಗದಲ್ಲಿ ಇರುವ ಈ-ಪಡಿತರ ಚೀಟಿ ಎಂದಿರುವ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.


ಹಂತ: ಅಲ್ಲಿಯೇ ಕೆಳಗೆ ಹೊಸ ಪಡಿತರ ಚೀಟಿ ಎಂಬ ಆಯ್ಕೆ ಮೇಲೆ ಕ್ಲಿಕ್ ಮಾಡಿ.


ಹಂತ: "New Application For Ration Card" ಎಂದಿರುವ ಆನ್ಲೈನ್ ಅರ್ಜಿ ಪುಟ ತೆರೆಯುತ್ತದೆ. ಅದರಲ್ಲಿ ಮೂರು ಆಯ್ಕೆಗಳಿರುತ್ತವೆ. ಮೊದಲನೆಯ ಆಯ್ಕೆ "New Ration Card Request "  ಮೇಲೆ ಕ್ಲಿಕ್ ಮಾಡಿ 


ಹಂತ: Priority Household ಮತ್ತು Non-Priority Household ಎರಡು ಆಯ್ಕೆಗಳಿವೆ. ನೀವು BPL Card ಗೆ ಅರ್ಹರಿದ್ದಾರೆ Priority Household ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಿ ಅಥವಾ ನೀವು APL ಕಾರ್ಡ್ ಗೆ ಅರ್ಹರಿದ್ದಾರೆ  Non-Priority Household ಎಂಬುದನ್ನು ಆಯ್ಕೆ ಮಾಡಿ.


ಹಂತ: ಈ ಕೆಳಗಿನ ಅಂಶಗಳನ್ನು ಓದಿ ಹೌದು - ಎಲ್ಲ ಎಂದು ಆಯ್ಕೆ ಮಾಡಿ ಮುಂದುವರೆಯಿರಿ.


ಹಂತ: ನಿಮ್ಮ ಆಧಾರ್ ಸಂಖ್ಯೆ ಮತ್ತು ಆಧಾರ್ ಗೆ ಲಿಂಕ್ ಮೊಬೈಲ್ ಸಂಖ್ಯೆಯನ್ನು ಎಂಟರ್ ಮಾಡಿ. Go ಬಟನ್ ಮೇಲೆ ಕ್ಲಿಕ್ ಮಾಡಿ.


ಹಂತ: OTP ಬರುತ್ತದೆ ಅದನ್ನು ಅಲ್ಲಿರುವ ಬಾಕ್ಸ್ ನಲ್ಲಿ ಎಂಟರ್ ಮಾಡಿ, Go ಬಟನ್ ಮೇಲೆ ಕ್ಲಿಕ್ ಮಾಡಿ.


ಹಂತ: ಕೆಳಗೆ ಇರುವ ಚ್ಯಾಪ್ಚ್ಯಾ ಅನ್ನು ಎಂಟರ್ ಮಾಡಿ Verify ಮಾಡಬೇಕು.


ಹಂತ: ನಂತರ Finger Print Verification ಮೇಲೆ ಕ್ಲಿಕ್ ಮಾಡಿ. Finger Print  ಮಷಿನ್ ಮೇಲೆ ಬೆರಳಚ್ಚು ಇತ್ತು ವೆರಿಫಿಕೇಷನ್ ಮಾಡಬೇಕು.


ಹಂತ: ನಂತರ ಅಲ್ಲಿ ನೀವು ನಮೂದಿಸಿರುವ ಆಧಾರ್ ಸಂಖೆಯಲ್ಲಿ ಎಲ್ಲ ಮಾಹಿತಿ ತೋರಿಸುತ್ತದೆ. ನಿಮ್ಮ ಹೆಸರು, ಜನ್ಮ ದಿನಾಂಕ, ಭಾವಚಿತ್ರ ಹೀಗೆ ಮಾಹಿತಿ ಇರುತ್ತದೆ. ಅಲ್ಲಿಯೇ ಕೆಳಗೆ Add ಬಟನ್ ಇರುತ್ತದೆ, ಅದರ ಮೇಲೆ ಕ್ಲಿಕ್ ಮಾಡಿ 


ಹಂತ: Add Family Member ಎಂದಿರುವ ಬಟನ್ ಮೇಲೆ ಕ್ಲಿಕ್ ಮಾಡಿ ನಿಮ್ಮ ಮನೆಯ ಇನ್ನಿತರ ಸದಸ್ಯರನ್ನು add ಮಾಡಿ.

ಹಂತ: ನಂತರ ಆಧಾರ್ ಕಾರ್ಡ್ ನಲ್ಲಿರುವ ನಿಮ್ಮ ವಿಳಾಸ ಅಲ್ಲಿ ಕಾಣುತ್ತದೆ ಅದನ್ನು ಸೆಲೆಕ್ಟ್ ಮಾಡಿ 


ಹಂತ: ನ್ಯಾಯ ಬೆಲೆ ಅಂಗಡಿಯನ್ನು ಆಯ್ಕೆ ಮಾಡಿ ಎಂದಿರುತ್ತದೆ. ನಿಮ್ಮ ಸಮೀಪದ ನ್ಯಾಯ ಬೆಲೆ ಅಂಗಡಿಯನ್ನು ಆಯ್ಕೆ ಮಾಡಿ.


ಹಂತ: ಅಲ್ಲಿಯೇ ಮುಂದೆ ನಗರ ಅಥವಾ ಗ್ರಾಮೀಣ ಎಂಬ ಆಯ್ಕೆಗಳಿರುತ್ತವೆ. ನಿಮಗೆ ಯಾವುದು ಅನ್ವಯವೋ ಅದನ್ನು ಸೆಲೆಕ್ಟ್ ಮಾಡಿ Next Stage ಬಟನ್ ಮೇಲೆ ಕ್ಲಿಕ್ ಮಾಡಿ.





ಹಂತ: ಕುಟುಂಬದ ಮುಖ್ಯಸ್ಥರನ್ನು ಆಯ್ಕೆ ಮಾಡಿ Save ಬಟನ್ ಮೇಲೆ ಕ್ಲಿಕ್ ಮಾಡಿ.


ಹಂತ: ನಂತರ ನೀವು ಅರ್ಜಿ ಸಲ್ಲಿಸಿದ ಪಡಿತರ ಚೀಟಿಯ ಸ್ವೀಕೃತಿ ಸಿಗುತ್ತದೆ ಅದನ್ನು ಪ್ರಿಂಟ್ ಮಾಡಿ ತೆಗೆದುಕೊಳ್ಳಿ.






1 ಕಾಮೆಂಟ್‌ಗಳು

ನವೀನ ಹಳೆಯದು