ರಾಜ್ಯಾದ್ಯಂತ 188 ಹೊಸ ಇಂದಿರಾ ಕ್ಯಾಂಟೀನ್ ತೆರೆಯಲು ತೀರ್ಮಾನ !
ವಿಸ್ತೃತ ಯೋಜನಾ ವರದಿ ತಯಾರಿಗೆ ಸಚಿವ ಸಂಪುಟ ನಿರ್ಧಾರ ಊಟದ ಬೆಲೆ ಏರಿಕೆ ಇಲ್ಲ : ಸಿಹಿ, 2 ಪಲ್ಯಗಳ ಹೆಚ್ಚುವರಿ ಸೇರ್ಪಡೆ
ಬಿಬಿಎಂಪಿ ಹೊರತುಪಡಿಸಿ ರಾಜ್ಯದ ಇತರೆ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ 188 ಹೊಸ ಇಂದಿರಾ ಕ್ಯಾಂಟೀನ್ ಸ್ಥಾಪನೆಗೆ ವಿಸ್ತೃತ ಯೋಜನಾ ವರದಿ ಸಿದ್ಧಪಡಿಸಲು ಹಾಗೂ ಹಾಲಿ ಇರುವ ಕ್ಯಾಂಟೀನ್ ಗಳ ದುರಸ್ತಿ, ನವೀಕರಣ ಹಾಗೂ ಗುಣಮಟ್ಟ ಉತ್ತಮಪಡಿಸಲು ಒಟ್ಟು 21 ಕೋಟಿ ರೂ. ಅನುದಾನ ಮೀಸಲಿಡಲು ಶನಿವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ. ಇದೆ ವೇಳೆ ಬಿಬಿಎಂಪಿ ಹೊರತುಪಡಿಸಿ ಉಳಿದೆಡೆಯ ಇಂದಿರಾ ಕ್ಯಾಂಟೀನ್ ಗಳಲ್ಲಿ ಆಯಾ ಭಾಗದ ಸ್ಥಳೀಯ ಆಹಾರಕ್ಕೆ ಆದ್ಯತೆ ನೀಡಿ ಮೆನು ಬದಲಿಸುವುದು, ಮೆನುವಿನಲ್ಲಿ ಸಿಹಿ ಹಾಗೂ ಎರಡು ರೀತಿಯ ಪಲ್ಯ ಸೇರಿಸಲು ತೀರ್ಮಾನಿಸಲಾಗಿದೆ.
👉 ರಾಜ್ಯದಂತ ಹಾಲಿ ಇರುವ ಇಂದಿರಾ ಕ್ಯಾಂಟೀನ್ ಗಳ ದುರಸ್ತಿ ಹಾಗೂ ನವೀಕರಣ
👉 ಇದಕ್ಕಾಗಿ 21 ಕೋಟಿ ರೂ. ಅನುದಾನ ಮೀಸಲಿಡಲು ಸಚಿವ ಸಂಪುಟ ಸಭೆ ನಿರ್ಧಾರ
👉 ಬೆಂಗಳೂರು ಹೊರಗಿನ ಕ್ಯಾಂಟೀನ್ ಗಳಲ್ಲಿ ಸ್ಥಳೀಯ ಆಹಾರ ಒದಗಿಸುವುದಕ್ಕೆ ಕ್ರಮ
👉 ಊಟದ ಮೆನುವಿನಲ್ಲಿ ಸಿಹಿ, ಎರಡು ರೀತಿಯ ಪಲ್ಯ ಸೇರ್ಪಡೆಗೆ ಸಂಪುಟ ಸಭೆಯಲ್ಲಿ ತೀರ್ಮಾನ
👉 ಒಂದು ದಿನದ ಆಹಾರಕ್ಕೆ ಆಗುವ ಖರ್ಚು ರೂ.57 ರಿಂದ ರೂ.62 ಕ್ಕೆ ಏರಿಕೆ. ಗ್ರಾಹಕರಿಗೆ ಏರಿಕೆ ಇಲ್ಲ.
188 ಹೊಸ ಇಂದಿರಾ ಕ್ಯಾಂಟೀನ್ ತೆರೆಯಲು ತೀರ್ಮಾನ
ರಾಜ್ಯದ್ಯಂತ ನಗರಸಭೆ, ಪುರ ಸಭೆ, ಪಟ್ಟಣ ಪಂಚಾಯತ್ ಗಳಲ್ಲಿ ಅರ್ಹ ಗುತ್ತಿಗೆದಾರರಿಗೆ 188 ಹೊಸ ಇಂದಿರಾ ಕ್ಯಾಂಟೀನ್ ತೆರೆಯಲು ಈ ಅವಕಾಶ ನೀಡಲಾಗಿದೆ.
ಹೆಚ್ಚಿನ ಮಾಹಿತಿಗಾಗಿ ನಿಮ್ಮ ಹತ್ತಿರದ ನಗರಸಭೆ, ಪುರ ಸಭೆ, ಪಟ್ಟಣ ಪಂಚಾಯತ್ ಗಳಲ್ಲಿ ವಿಚಾರಿಸಿ ಅರ್ಜಿ ಸಲ್ಲಿಸಬಹುದು.
ಹೀಗಾಗಿ ಸರ್ಕಾರ ಆಹಾರ ಗುತ್ತಿಗೆದಾರರಿಗೆ ನೀಡುತ್ತಿರುವ ಒಂದು ದಿನದ ಆಹಾರ ( ಬೆಳಗಿನ ತಿಂಡಿ, ಮಧ್ಯಾಹ್ನ ಹಾಗೂ ರಾತ್ರಿ ಊಟ ) ಬೆಲೆಯನ್ನು 57ರೂ. ಗಳಿಂದ 62 ರೂ ಗಳಿಗೆ ಹೆಚ್ಚಳ ಮಾಡಿದೆ. ಈ ಹೆಚ್ಚುವರಿ ಮೊತ್ತವನ್ನು ರಾಜ್ಯ ಸರ್ಕಾರವೇ ಭರಿಸಲಿದ್ದು, ಸಾರ್ವಜನಿಕರಿಗೆ ಎಂದಿನಂತೆ ಬೆಳಗಿನ ತಿಂಡಿ 5 ರೂ, ಮಧ್ಯಾಹ್ನದ ಊಟ 10 ರೂ. ಹಾಗೂ ರಾತ್ರಿ ಊಟ 10 ರೂ. ಗಳಿಗೆ ಲಭ್ಯವಾಗಲಿದೆ ಎಂದು ಮುಖ್ಯಮಂತ್ರಿಗಳ ಕಚೇರಿ ಮೂಲಗಳು ತಿಳಿಸಿವೆ.
Tags
Govt.scheme