144 ಕೋಟಿ ರೂಪಾಯಿ ಸ್ಕಾಲರ್ ಶಿಪ್ ದುರ್ಬಳಕೆ !! ಕರ್ನಾಟಕದ ಶೇ 64 ವಂಚಕ ಸಂಸ್ಥೆಗಳು

144 ಕೋಟಿ ರೂಪಾಯಿ ಸ್ಕಾಲರ್ ಶಿಪ್ ದುರ್ಬಳಕೆ !!

ಕರ್ನಾಟಕದ ಶೇ 64 ವಂಚಕ ಸಂಸ್ಥೆಗಳು 





         ಅಲ್ಪಸಂಖ್ಯಾತ ವರ್ಗದ ವಿದ್ಯಾರ್ಥಿಗಳಿಗೆ ನೀಡುವ ಶಿಷ್ಯವೇತನದಲ್ಲಿ ಭಾರಿ ಹಗರಣ ನಡೆದಿದ್ದು, ಶೇ 53 ಶಿಕ್ಷಣ ಸಂಸ್ಥೆಗಳು ನಕಲಿ ಎಂಬುದು ಬೆಳಕಿಗೆ ಬಂದಿದೆ. ಕರ್ನಾಟಕದಲ್ಲಿ ಪರಿಶೀಲನೆಗೆ ಒಳಪಟ್ಟ ಶಿಕ್ಷಣ ಸಂಸ್ಥೆಗಳಲ್ಲಿ ಶೇ. 64 ರಲ್ಲಿ ವಂಚನೆ ನಡೆದಿದೆ.

ಅಲ್ಪಸಂಖ್ಯಾತ ಕೋಟಾದಡಿ ನೋಂದಣಿಯಾದ ಶಿಕ್ಷಣ ಸಂಸ್ಥೆಗಳ ಪೈಕಿ 830 ಸಂಸ್ಥೆಗಳು ಕಳೆದ ಐದು ವರ್ಷಗಳಿಂದ ೧೪೪.೮೩ ಕೋಟಿ ರೂ ಶಿಷ್ಯವೇತನವನ್ನು ದುರ್ಬಳಕೆ ಮಾಡಿಕೊಂಡಿವೆ ಎಂಬುದು ಕೇಂದ್ರ ಅಲ್ಪಸಂಖ್ಯಾತರ ಕಲ್ಯಾಣ ಸಚಿವಾಲಯದ ಆಂತರಿಕ ತನಿಖೆಯಿಂದ ತಿಳಿದುಬಂದ ನಂತರ ಈ ಹಗರಣವನ್ನು ಸಚಿವೆ ಸ್ಮೃತಿ ಇರಾನಿ ಸಿಬಿಐ ಗೆ ಒಪ್ಪಿಸಿದ್ದಾರೆ. 

        34 ರಾಜ್ಯಗಳ 100 ಜಿಲ್ಲೆಗಳಿಗೆ ಈ ಹಗರಣ ವಿಸ್ತರಿಸಿದ್ದು, 1572 ಶಿಕ್ಷಣ ಸಂಸ್ಥೆಗಳ ಲೆಕ್ಕಪತ್ರ ಪಡಿಶೀಲನೆ ನಡೆಸಿದಾಗ 21 ರಾಜ್ಯಗಳ 830 ಸಂಸ್ಥೆಗಳಲ್ಲಿ ಅಕ್ರಮ ನಡೆದಿರುವುದು ಬೆಳಕಿಗೆ ಬಂದಿದೆ.

ಯಾವ ರಾಜ್ಯ ಎಷ್ಟು ?

❋ ಛತ್ತೀಸಗಢದಲ್ಲಿ ಪರಿಶೀಲನೆಗೆ ಒಳಪಟ್ಟ 62 ಶಿಕ್ಷಣ ಸಂಸ್ಥೆಗಳಲ್ಲಿ ಎಲ್ಲದರಲ್ಲೂ ವಂಚನೆ ನಡೆದಿದೆ. 

❋ ರಾಜಸ್ಥಾನದಲ್ಲಿ 128 ಸಂಸ್ಥೆಗಳ ಪೈಕಿ 99 ಅಸ್ತಿತ್ವದಲ್ಲೇ ಇಲ್ಲ. 

❋ ಅಸ್ಸಾಂ ನಲ್ಲಿ ಪರಿಶೀಲನೆಯಾದ ಸಂಸ್ಥೆಗಳ ಪೈಕಿ ಶೇ 68 

❋ ಕರ್ನಾಟಕದಲ್ಲಿ ಶೇ 64

❋ ಉತ್ತರ ಪ್ರದೇಶದಲ್ಲಿ ಶೇ ೪೪ ಹಾಗೂ ಪಶ್ಚಿಮ ಬಂಗಾಳದ ಶೇ 39 ಸಂಸ್ಥೆಗಳು ನಕಲಿಯಾಗಿವೆ.

whatss


 
                    ಈ 820 ಸಂಸ್ಥೆಗಳ  ಬ್ಯಾಂಕ್ ಖಾತೆಯನ್ನು ನಿಷ್ಕ್ರಿಯಗೊಳಿಸಲು ಸೂಚಿಸಲಾಗಿದೆ. ಉಳಿದ ಶಿಕ್ಷಣ ಸಂಸ್ಥೆಗಳ ಲೆಕ್ಕಪತ್ರ ಪರಿಶೀಲನೆ ಕಾರ್ಡ್ಯ ನಡೆಯುತ್ತಿದೆ. 2007-08 ರಲ್ಲಿ ಆರಂಭವಾದ ಅಲ್ಪಸಂಖ್ಯಾತ ವಿದ್ಯಾರ್ಥಿಗಳ ಸ್ಕಾಲರ್ ಶಿಪ್ ಕಾರ್ಯಕ್ರಮವನ್ನು ಸಚಿವಾಲಯವು 1.80 ಲಕ್ಷ ಶಿಕ್ಷಣ ಸಂಸ್ಥೆಗಳಿಗೆ ವಿಸ್ತರಿಸಿದ್ದು, ಒಂದನೇ ತರಗತಿಯಿಂದ ಉನ್ನತ ಶಿಕ್ಷಣ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಈ ಯೋಜನೆಯ ಫಲಾನುಭವಿಗಳಾಗಿದ್ದಾರೆ.

ಸಿಬಿಐ ತನಿಖೆ ಆರಂಭಿಸಿದ್ದು, ಶಿಕ್ಷಣ ಸಂಸ್ಥೆಯ ನೋಡಲ್ ಅಧಿಕಾರಿ, ಫಲಾನುಭವಿಗಳ ಪಟ್ಟಿ ಪರಿಶೀಲನೆಗೆ ಹೊಣೆಯಾದ ಜಿಲ್ಲಾ ನೋಡಲ್ ಅಧಿಕಾರಿಗಳ ವಿರುದ್ಧ ವಿಚಾರಣೆ  ನಡೆಯಲಿದೆ.ಬೇನಾಮಿ ಖಾತೆ ತೆರೆಯಲು ಸಹಕರಿಸಿದ ಬ್ಯಾಂಕ್ ಗಳು ಕೂಡ ವಿಚಾರಣೆಗೆ ಒಳಪಡಿಸಲಿವೆ. ಅಸ್ತಿತ್ವದಲ್ಲೇ ಇಲ್ಲದ ಸಂಸ್ಥೆಗಳು ನೋಂದಣಿಯಾಗಿದ್ದು ಹೇಗೆ ಎಂಬುದನ್ನು ಸಿಬಿಐ ಬಯಲಿಗೆಳೆಯಲಿದೆ ಎಂದು ಮೂಲಗಳು ತಿಳಿಸಿವೆ.


ವಂಚನೆಯ ವಿಸ್ತಾರ :

❋ ಕೇರಳದ ಮಲಪ್ಪುರಂ ನ ಒಂದೇ ಬ್ಯಾಂಕ್ ಶಾಖೆಯಿಂದ 66 ಸಾವಿರ ಶಿಷ್ಯವೇತನ ವಿತರಣೆ 

❋ ಜಮ್ಮು ಕಾಶ್ಮೀರದ ಅನಂತನಾಗ್ ನಲ್ಲಿ 5000 ವಿದ್ಯಾರ್ಥಿಗಳಿಗೆ 7000 ಶಿಷ್ಯವೇತನ 

❋ 9 ನೇ ತರಗತಿಯ 22 ವಿದ್ಯಾರ್ಥಿಗಳಿಗೆ ಒಂದೇ ಮೊಬೈಲ್ ಸಂಖ್ಯೆ 

❋ ಹಾಸ್ಟೆಲ್ ಇಲ್ಲದಿದ್ದರೂ ಹಾಸ್ಟೆಲ್ ಶಿಷ್ಯವೇತನ ಪಡೆದ ವಿದ್ಯಾರ್ಥಿಗಳು 

❋ ಅಸ್ಸಾಂನಲ್ಲಿ ಒಂದೇ ಬ್ಯಾಂಕ್ ಶಾಖೆಯಲ್ಲಿ 66 ಸಾವಿರ ವಿದ್ಯಾರ್ಥಿ ವೇತನದ ಖಾತೆಗಳು. ಪರಿಶೀಲನೆಗೆ ತೆರಳಿದ ಅಧಿಕಾರಿಗಳಿಗೆ ಮದರಸದವರಿಂದ ಬೆದರಿಕೆ 

❋ ಪಂಜಾಬ್ ನಲ್ಲಿ ಶಾಲೆಗೆ ದಾಖಲಾಗದಿದ್ದರೂ ಸ್ಕಾಲರ್ ಶಿಪ್ ಪಡೆದ ವಿದ್ಯಾರ್ಥಿಗಳು.






ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು