ಸೆಪ್ಟೆಂಬರ್ 2 ಕ್ಕೆ ದೇಶದ ಮೊದಲ ಸೂರ್ಯಯಾನ ಉಡಾವಣೆ !
ಶ್ರೀಹರಿಕೋಟದಿಂದ ಬೆಳಗ್ಗೆ 11.50 ಕ್ಕೆ ಉಡಾವಣೆ ! ' ಆದಿತ್ಯ ಎಲ್-1' ಉಪಗ್ರಹ ಉಡಾವಣೆಗೆ ಮುಹೂರ್ತ
ಚಂದ್ರನ ಅಂಗಳದಲ್ಲಿ ತನ್ನ ' ಚಂದ್ರಯಾನ-3' ಇಳಿಸುವಲ್ಲಿ ಯಶಸ್ವಿಯಾಗಿರುವ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ( ಇಸ್ರೋ), ಸೂರ್ಯಯಾನಕ್ಕೆ ಸಜ್ಜಾಗಿದೆ.ಸೂರ್ಯನ ಕುರಿತು ಹೆಚ್ಚಿನ ಅಧ್ಯಯನದ ಉದ್ದೇಶ ಹೊಂದಿರುವ ' ಆದಿತ್ಯ-ಎಲ್ 1' ವ್ಯೋಮನೌಕೆಯನ್ನು ಸೆ.2 ರಂದು ಬೆಳಗ್ಗೆ 11.50 ಕ್ಕೆ ಆಂಧ್ರಪ್ರದೇಶದ ಶ್ರೀಹರಿಕೋಟಾದ ನೆಲೆಯಿಂದ ಉಡ್ಡಯನ ಮಾಡಲಾಗುವುದು ಎಂದು ಇಸ್ರೋ ಅಧಿಕೃತ ಘೋಷಣೆ ಮಾಡಿದೆ. ಸೂರ್ಯನ ಅಧ್ಯಯನಕ್ಕಾಗಿ ಇಸ್ರೋ ಹಾರಿಬಿಡುತ್ತಿರುವ ಮೊದಲ ನೌಕೆಯಾಗಿದೆ.ಈ ಮೂಲಕ ಚಂದ್ರಯಾನ-3 ನೌಕೆ ಮೂಲಕ ಚಂದ್ರನ ಮೇಲೆ ' ವಿಕ್ರಮ್ ' ಸಾಧಿಸಿದ್ದ ಇಸ್ರೋ, ಇದೀಗ ' ಆದಿತ್ಯ ವಿಕ್ರಮ ' ಕ್ಕೆ ಸಜ್ಜಾಗಿದೆ.
👉 ಚಂದ್ರ, ಮಂಗಳ ಗ್ರಹದಲ್ಲಿ ಸಂಶೋಧನೆ ನಡೆಸಿರುವ ಇಸ್ರೋದಿಂದ ಮೊದಲ ಬಾರಿ ಸೂರ್ಯ ಅಧ್ಯಯನ
👉 ಸೂರ್ಯ-ಭೂಮಿಯ ನಡುವೆ ಶೂನ್ಯ ಗುರುತ್ವ ಬಲವಿರುವ 'ಎಲ್-1' ಬಿಂದುವಿನಲ್ಲಿ ನೌಕೆ ನಿಯೋಜನೆ
👉 'ಎಲ್-1' ನಲ್ಲಿ ನಿಯೋಜಿಸುವುದರಿಂದ ಅಡ್ಡಿ ರಹಿತವಾಗಿ ಹಾಗೂ ಇಂಧನ ಖರ್ಚಿಲ್ಲದೆ ಸೂರ್ಯ ವೀಕ್ಷಣೆ ಸಾಧ್ಯ.
👉 ಸೂರ್ಯನ ದ್ಯುತಿಗೋಳ, ಪ್ರಭಾವಲಯ, ಕರೋನ ಅಧ್ಯಯನಕ್ಕೆ 7 ಉಪಕರಣ ಒಯ್ಯಲಿರುವ ನೌಕೆ.
👉 ಸೂರ್ಯನಲ್ಲಿರುವ ಉಷ್ಣತೆ ಸಮಸ್ಯೆ, ಜ್ವಾಲೆಯ ಚಟುವಟಿಕೆ, ಅದರ ಗುಣಲಕ್ಷಣ ಅಧ್ಯಯನ ಇಸ್ರೋ ಗುರಿ
15 ಕೋಟಿ ಕಿ ಮೀ : ಭೂಮಿ ಹಾಗೂ ಸೂರ್ಯನ ನಡುವಣ ಅಂತರ
15 ಲಕ್ಷ ಕಿಮೀ : ಇಸ್ರೋದ ಸೂರ್ಯಯಾನ ನೌಕೆ ತಲುಪುವ ದೂರ
120 ದಿನ : 15 ಲಕ್ಷ ಕಿಮೀ ದೂರದ ' ಎಲ್-1' ತಲುಪಲು ಹಿಡಿವ ಸಮಯ
7 ಸಾಧನ : ' ಆದಿತ್ಯ-ಎಲ್-1' ನೌಕೆ ಒಯ್ಯಲಿರುವ ಉಪಕರಣಗಳ ಸಂಖ್ಯೆ
Tags
News