ಆನ್ಲೈನ್ ಶಾಪಿಂಗ್ ಗ್ರಾಹಕರಿಗೆ ಧೋಖಾ : 21 ಸೆರೆ ....

ಆನ್ಲೈನ್ ಶಾಪಿಂಗ್ ಗ್ರಾಹಕರಿಗೆ ಧೋಖಾ : 21 ಸೆರೆ ....



ಇ-ಕಾಮರ್ಸ್ ಗ್ರಾಹಕರಿಗೆ ವಂಚನೆ :


   
 ವಿವಿಧ ರಾಜ್ಯಗಳ 21 ಸೈಬರ್ ಕಳ್ಳರ ಸೆರೆ । ಸಿಇಎನ್ ಪೋಲೀಸರ ಕಾರ್ಯಾಚರಣೆ 
             ಇ ಕಾಮರ್ಸ್ ನಲ್ಲಿ ಗ್ರಾಹಕರ ಡೇಟಾ ಕದ್ದು ನಕಲಿ ವಸ್ತುಗಳನ್ನು ಕಳುಹಿಸಿ ಮೋಸ ಮಾಡುತ್ತಿದ್ದ ಅಂತರಾಜ್ಯದ 21 ಆರೋಪಿಗಳನ್ನು ಉತ್ತರ ವಿಭಾಗ ಸಿಇಎನ್ ತೇನ್ ಪೊಲೀಸರು ಬಂಧಿಸಿದ್ದಾರೆ.
ಗುಜರಾತ್, ಮಧ್ಯಪ್ರದೇಶ ಮತ್ತು ಮುಂಬೈ ಮೂಲದ 21 ಆರೋಪಿಗಳು ಬಂಧಿತರು, ಕೃತ್ಯಕ್ಕೆ 11 ಮೊಬೈಲ್, ಲ್ಯಾಪ್ಟಾಪ್, ಹಾರ್ಡ್ ಡಿಸ್ಕ್, ಮತ್ತು 19.45 ಲಕ್ಷ ರೂ ನಗದು ಜಪ್ತಿ ಮಾಡಿದ್ದಾರೆ. ಇ-ಕಾಮರ್ಸ್ ಆಪ್ ಗಳಾದ ಫ್ಲಿಪ್ಕಾರ್ಟ್, ಅಮೆಜಾನ್, ಮೀಶೋಗಳಲ್ಲಿ ಆರ್ಡರ್ ಮಾಡುತ್ತಿದ್ದ ಡೇಟಾ ಕದ್ದು ಆರೋಪಿಗಳು ದುರ್ಬಳಕೆ ಮಾಡಿದ್ದರು. ಕ್ಯಾಶ್ ಆನ್ ಡೆಲಿವರಿ ಗ್ರಾಹಕರನ್ನೇ ಟಾರ್ಗೆಟ್ ಮಾಡಿ ನಕಲಿ ವಸ್ತು ಕೊಟ್ಟು ಮೋಸ ಮಾಡುತ್ತಿದ್ದರು ಎಂದು ಉತ್ತರ ವಿಭಾಗ ಡಿಸಿಪಿ ಶಿವ ಪ್ರಕಾಶ್ ದೇವ್ ರಾಜ್ ತಿಳಿಸಿದ್ದಾರೆ.
                      2021ರಿಂದ ಕೃತ್ಯ ಎಸಗುತ್ತಿದ್ದ ಗ್ಯಾಂಗ್, ಮೀಶೋ ಬಳಸುವ ಗ್ರಾಹಕರನ್ನೇ ಗುರಿಯಾಗಿಸುತ್ತಿದ್ದರು. ಬಂಧಿತರ ಪೈಕಿ ಕೆಲವರು ಮೀಶೋದಲ್ಲಿ ಕೆಲಸ ಮಾಡಿ ಬಿಟ್ಟಿದ್ದರು. ಮೀಶೋ ಕಂಪನಿಯಲ್ಲಿ ಆರ್ಡರ್ ಮಾಡುವ ಗ್ರಾಹಕರ ಡೇಟಾಗಳನ್ನು ಕಳುವು ಮಾಡಿ ಅದನ್ನು ಇತರ ಆರೋಪಿಗಳಇಗೆ ಮಾರಾಟ ಮಾಡುತ್ತಿದ್ದರು.


whatss

ಇದಾದ ಮೇಲೆ ಮುಂಬೈ ಮೂಲದ ಆರೋಪಿಗಳು ಕ್ಯಾಶ್ ಆನ್ ಡೆಲಿವರಿ ಆರ್ಡರ್ ಮಾಡುವ ಗ್ರಾಹಕರನ್ನೇ ಗುರಿಯಾಗಿಸಿಕೊಂಡು ಬುಕ್ಕಿಂಗ್ ಮಡಿದ ವಸ್ತುಗಳ ಬದಲಾಗಿ ಣ್ಣಕಲಿ ವಸ್ತುಗಳನ್ನು ನಿಂಬೂಸ್ ಪೋಸ್ಟ್, ಎಕ್ಸ್ಪ್ರೆಸ್ ಬಿ, ಷಾಡೋಪಾಕ್ಸ್, ಬ್ಲೂ ಡಾರ್ಟ್, ಒನ್ ಡೇ ಕೊರಿಯೆರ್ ಹಾಗೂ ಇತರೆ ಕೊರಿಯರ್ ಸರ್ವಿಸಸ್ ಮೂಲಕ ಕಳುಹಿಸುತ್ತಿದ್ದರು. ಸಾಮಾನ್ಯವಾಗಿ ಆನ್ಲೈನ್ ನಲ್ಲಿ ವಸ್ತುಗಳ ಆರ್ಡರ್ ಮಡಿದ ಎರಡಮೂರು ದಿನಗಳ ಬಳಿಕ ಗ್ರಾಹಕರ ಕೈಗೆ ವಸ್ತುಗಳು ಸೇರುತ್ತವೆ. ಆದರೆ ಆರೋಪಿಗಳು ಅದಕ್ಕೂ ಮೊದಲೇ ಗ್ರಾಹಕರಿಗೆ ಕೊರಿಯೆರ್ ಮೂಲಕ ವಸ್ತುಗಳನ್ನು ಕಳುಹಿಸಿ ನಗದು ಪಡೆಯುತ್ತಿದ್ದರು.
ಇದು ಕೊರಿಯೆರ್ ಸಂಸ್ಥೆಗಳಿಗೂ ಗೊತ್ತಿರಲಿಲ್ಲ. ಹೀಗಾಗಿ ಕೊರಿಯೆರ್ ಸಂಸ್ಥೆಗಳು ಬ್ಯಾಂಕ್ ಖಾತೆ ಮೂಲಕವೇ ಆರೋಪಿಗಳ ಖಾತೆಗೆ ಹಣ ಜಮೆ ಮಾಡುತ್ತಿದ್ದವು. ಇದಾದ ಮೇಲೆ ಇ-ಕಾಮರ್ಸ್ ಕಂಪನಿಯಿಂದ ನೈಜ ವಸ್ತು ಗ್ರಾಹಕರ ಬಳಿ ಬಂದಾಗ ಕೆಲವರು ನಕಲಿ ವಸ್ತುಗಳನ್ನು ಇ-ಕಾಮರ್ಸ್ ಪೋರ್ಟಲ್ ಮೂಲಕವೇ ವಾಪಾಸ್ ಕಳುಹಿಸಿ, ಹಣ ಪಡೆಯುತ್ತಿದ್ದರು. ಕೆಲವರು ನೈಕ ವಸ್ತುಗಳನ್ನು ಪಡೆದು, ಈಗಾಗಲೇ ಹಣ ಪಾವತಿ ಮಾಡಲಾಗಿದೆ ಎಂದು ಡೆಲಿವರಿ ಬಾಯ್ ಗಳಿಗೆ ದಬಾಯಿಸಿ ಕಳುಹಿಸುತ್ತಿದ್ದರು.

ಕೊರಿಯರ್ ಜಾಡು ಹಿಡಿದು ಬಲೇ 

ಗ್ರಾಹಕರಿಗೆ ನಕಲಿ ವಸ್ತುಗಳನ್ನು ಕಳುಹಿಸಲು ನಿಂಬೂಸ್ ಪೋಸ್ಟ್, ಎಕ್ಸ್ ಪ್ರೆಸ್ ಬಿ, ಷಡೋಪಾಕ್ಷ್, ಬ್ಲ್ಯೂಡರ್ಟ್, ಒನ್ ಡೇ ಕೊರಿಯರ್ ಕಂಪನಿಗಳನ್ನು ಬಂಧಿತರು ಬಳಸಿದ್ದರು. ಈ ಜಾಡು ಹಿಡಿದ ಪೊಲೀಸರು ಕೆ ವೈ ಸಿ ಮತ್ತು ಬ್ಯಾಂಕ್ ಖಾತೆಯ ಮಾಹಿತಿ ಆಧಾರದ ಮೇಲೆ ಗುಜರಾತ್, ಮಾಧ್ಯಮಪ್ರದೇಶ ಮತ್ತು ಮುಂಬೈ ನಲ್ಲಿ ವಂಚಕರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದಾಗ ಮತ್ತಷ್ಟು ಕಂಪನಿಗಳಿಗೆ ಮೋಸ ಮಾಡಿರುವುದು ಬೆಳಕಿಗೆ ಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

whatss

ಇ-ಕಾಮರ್ಸ್ ಕಂಪನಿಯಲ್ಲಿ ಕೋಟ್ಯಂತರ ರೂ ವಹಿವಾಟು ನಡೆಯುವುದರಿಂದ ಕಡಿಮೆ ಮೊತ್ತದ ನಷ್ಟಕ್ಕೆ  ತಲೆಕೆಡಿಸಿಕೊಳ್ಳುತ್ತಿರಲಿಲ್ಲ.ಇತ್ತೀಚಿಗೆ ದೂರುದಾರ ಕಂಪನಿಗೆ 70 ಲಕ್ಷ ರೂ ವಂಚನೆ ಆಗಿರುವುದು ಬೆಳಕಿಗೆ ಬಂದಿತ್ತು. ಇದನ್ನು ಗಂಭೀರವಾಗಿ ಪರಿಗಣಿಸಿ ಉತ್ತರ ವಿಭಾಗ ಸಿಇಎನ್ ಠಾಣೆಗೆ ದೂರು ಸಲ್ಲಿಸಲಾಗಿತ್ತು. ಇದರ ಮೇರೆಗೆ ತನಿಖೆ ಕೈಗೊಂಡ ಕಾಶ್ಯಾಯನಿ ಆಳ್ವ ನೇತೃತ್ವದ ತಂಡ ಆರೋಪಿಗಳನ್ನು ಬಂಧಿಸಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಆರೋಪಿಗಳಿವರು .....

ಮುಂಬೈನ ಅಭಿಷೇಕ್ ಗುಪ್ತಾ, ಆಶಿಷ್ ತಲಿವಿಯಾ ಸೂರತ್ ಮಿಲನ್, ಗೌತಮ್ ಪನಸೂರ್ಯ, ಪಾರ್ಶ್ ತಲಿವಿಯಾ. ವಾಗ್ನಿಯಾ ಹರ್ಷ, ಅಕ್ಷಯ್, ದರ್ಶಿತ್, ರಾಹುಲ್, ವಾಗ್ನಿಯಾ ಕೇಯೂರ್, ಬ್ರಿಜೇಶ್ ಸೊರ್ಲಾ, ಗೌರವ್ ಜಗದೀಶ್ ಬಾಯಿ, ರೇಖಾಬಿನ್ ರಶಿ ಬಾಯಿ, ವಿವೇಕ್, ತಲಿವಿಯಾ ಭೂಮಿಕಾ, ಪೆನ್ ಸೂರ್ಯ, ಉತ್ತಮ, ನಿಕುಂಜಾ ಮತ್ತು ಭೂಪಾಲ್ ನ ಮೊದ್ ಸಾಕಿರ್ ಅನ್ವಾರಿ, ಅಂಕಿತ್ ವಿಶ್ವಕುಮಾರ್, ಅಂಕಿತಾ ವಿಶುಕುಮಾರ್, ಶುಭಂ ವರ್ಮಾ ಬಂಧಿತರು.


   

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು