ವಾಹನ ಖರೀದಿಸಲು ಇಲ್ಲಿದೆ ನೋಡಿ ಮಾರ್ಗ : ಆನ್ಲೈನ್ ಅರ್ಜಿ ಸಲ್ಲಿಸಿ 3 ಲಕ್ಷ ಸಹಾಯಧನ ಪಡೆಯಿರಿ...

ವಾಹನ ಖರೀದಿಸಲು ಇಲ್ಲಿದೆ ನೋಡಿ ಮಾರ್ಗ : ಆನ್ಲೈನ್ ಅರ್ಜಿ ಸಲ್ಲಿಸಿ 3 ಲಕ್ಷ ಸಹಾಯಧನ ಪಡೆಯಿರಿ...


               


                    ಎಲ್ಲರಿಗೂ ನಮಸ್ಕಾರ .......

ನೀವು ವಾಹನ ಚಾಲಕರೇ? ಆಟೋ ರಿಕ್ಷಾ, ಟ್ಯಾಕ್ಸಿ, ಸರಕು ವಾಹನ ಖರೀದಿಸಲು ನಿಮಗೆ ಸರ್ಕಾರದ ಸಬ್ಸಿಡಿ ಹಣ ಪಡೆಯಬೇಕೆ? ಹಾಗಿದ್ದರೆ ನಿಮಗೆ ಇಲ್ಲಿದೆ ಸರಳ ಮಾರ್ಗ .....

 ಆಟೋ ರಿಕ್ಷಾ, ಟ್ಯಾಕ್ಸಿ, ಸರಕು ವಾಹನ ಖರೀದಿಸಲು ಸ್ವಾವಲಂಬಿ ಸಾರಥಿ ಯೋಜನೆಯಡಿ ಬ್ಯಾಂಕುಗಳಿಂದ ಮಂಜೂರಾತಿ ನೀಡಿದ ಅರ್ಹ ಪ್ರತಿ ಫಲಾನುಭವಿಗೆ ವಾಹನದ ಮೌಲ್ಯದ ಶೇ 50 ರಷ್ಟು ಅಥವಾ ಗರಿಷ್ಟ ರೂ 3,00,000 ರ ವರೆಗೆ ಸಹಾಯಧನವನ್ನು ನೀಡುತ್ತಾರೆ. ವಾಹನದ ಉಳಿದ ಮೊತ್ತಕ್ಕೆ ಬ್ಯಾಂಕ್ ಸಾಲ ಪಡೆದುಕೊಂಡ ಬಗ್ಗೆ ಬ್ಯಾಂಕ್ ಪತ್ರವನ್ನು ಸಲ್ಲಿಸಬೇಕಾಗುತ್ತದೆ.


ಅರ್ಜಿ ಸಲ್ಲಿಸುವುದು ಹೇಗೆ?

             ಅರ್ಹ ಅಭ್ಯರ್ಥಿಗಳು ಅಗತ್ಯ ದಾಖಲೆಗಳೊಂದಿಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದ್ದು, ಅರ್ಜಿ ಸಲ್ಲಿಕೆ ಲಿಂಕ್ ನ್ನು ಕೆಳಗೆ ಕೊಡಲಾಗಿದೆ.


whatss


ಸಾಲ ಪಡೆಯಲು ಬೇಕಾದ ಅರ್ಹತೆಗಳು :

✔ ಅರ್ಜಿದಾರ ಕರ್ನಾಟಕ ರಾಜ್ಯದ ಧಾರ್ಮಿಕ ಅಲ್ಪಸಂಖ್ಯಾತರಿಗೆ ಸೇರಿದವರಾಗಿರಬೇಕು. 

✔ ಅರ್ಜಿದಾರ ಕರ್ನಾಟಕದ ಶಾಶ್ವತ ನಿವಾಸಿಯಾಗಿರಬೇಕು.

✔ ಅರ್ಜಿದಾರರು 18 ರಿಂದ 55 ವರ್ಷಗಳ ನಡುವಿನ ವಯೋಮಿತಿಯವರಾಗಿರಬೇಕು. 

✔ ಕುಟುಂಬದ ವಾರ್ಷಿಕ ಆದಾಯ ರೂ 4,50,000/- ಕ್ಕಿಂತ ಕಡಿಮೆ ಇರಬೇಕು. 


✔ ಅರ್ಜಿದಾರರ ಕುಟುಂಬದ ಯಾವುದೇ ಸದಸ್ಯರು ಕೇಂದ್ರ ಅಥವಾ ರಾಜ್ಯ ಸರ್ಕಾರಿ ಉದ್ಯೋಗಿಗಳಾಗಿರಬಾರದು.

✔ ಕಳೆದ 05 ವರ್ಷಗಳಲ್ಲಿ ಅರ್ಜಿದಾರ ಅಥವಾ ಅವನ ಅಥವಾ ಅವಳ ಕುಟುಂಬದ ಸದಸ್ಯರು ಸರ್ಕಾರದ ಅಥವಾ ನಿಗಮದ ಯಾವುದೇ ಇತರ ಯೋಜನೆಯಡಿಯಲ್ಲಿ ಸಾಲ ಸೌಲಭ್ಯಗಳನ್ನು ಪಡೆದಿರಬಾರದು.

ಅವಶ್ಯಕ ದಾಖಲಾತಿಗಳೇನು?

1. ಸಕ್ಷಮ ಪ್ರಾಧಿಕಾರದಿಂದ ನೀಡಲಾದ ಜಾತಿ ಪ್ರಮಾಣ ಪತ್ರ 

2. ಸಕ್ಷಮ ಪ್ರಾಧಿಕಾರದಿಂದ ಪಡೆದ ಆದಾಯ ಪತ್ರ 

3. ಆಧಾರ್ ಕಾರ್ಡ್ ಪ್ರತಿ 

4. ವಾಹನ ಚಾಲನಾ ಪರವಾನಗಿ ಪ್ರತಿ.

5. ಬ್ಯಾಂಕ್ ಪಾಸ್ ಬುಕ್ ಪ್ರತಿ 

6. ವಾಹನದ ಅಂದಾಜು ದರಪಟ್ಟಿ 

7. ಸ್ವಯಂ ಘೋಷಣೆ ಪತ್ರ 

8. ಫಲಾನುಭವಿಯ ಇತ್ತೀಚಿನ 2 ಪಾಸ್ಪೋರ್ಟ್ ಅಳತೆಯ ಭಾವಚಿತ್ರ.

9. ಅರ್ಜಿದಾರರ ಮತ್ತು ಕುಟುಂಬದ ಸದಸ್ಯರು ವಾಹನ ಖರೀದಿಗೆ ರಾಜ್ಯ ಸರ್ಕಾರದ ಯಾವುದೇ ಯೋಜನೆಯಡಿ ಸಾಲ ಸೌಲಭ್ಯ ಪಡೆದಿಲ್ಲದಿರುವ ಬಗ್ಗೆ ಜಿಲ್ಲಾ ವ್ಯವಸ್ಥಾಪಕರಿಂದ ಧೃಢೀಕರಣ ಪತ್ರ 

10.  ಈ ಬಗ್ಗೆ ಯೋಜನೆಯಡಿ ಪಡೆದ ವಾಹನವನ್ನು ಯಾರಿಗೂ ಪರಭಾರೆ ಮಾಡದಿರುವ ಬಗ್ಗೆ 
ಧೃಢೀಕರಣ ಪತ್ರ 




ಆಯ್ಕೆ ಸಮಿತಿ :

ಸಂಬಂಧಪಟ್ಟ ಜಿಲ್ಲೆಯ ಜಿಲ್ಲಾಧಿಕಾರಿಗಳು- ಅಧ್ಯಕ್ಷರು 

ಜಿಲ್ಲಾ ಪಂಚಾಯತ್ ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ - ಉಪಾಧ್ಯಕ್ಷರು 

ಸಂಬಂಧಪಟ್ಟ ಜಿಲ್ಲೆಯ ಲೀಡ ಬ್ಯಾಂಕಿನ ವ್ಯವಸ್ಥಾಪಕರು-ಸದಸ್ಯರು 

ಸಂಬಂಧಪಟ್ಟ ಜಿಲ್ಲೆಯ ಜಿಲ್ಲಾ ಅಧಿಕಾರಿ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ - ಸದಸ್ಯರು 

ಸಂಬಂಧಪಟ್ಟ ಜಿಲ್ಲೆಯ ಕ.ಅ.ಅ ನಿಗಮದ ಜಿಲ್ಲಾ ವ್ಯವಸ್ಥಾಪಕರು-ಸದಸ್ಯ ಕಾರ್ಯದರ್ಶಿ 


whatss

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು