ಗೃಹಲಕ್ಷೀ ಯೋಜನೆಗೆ ಅರ್ಜಿ ಹಾಕಿರುವವರು, ಅಪ್ಲಿಕೇಶನ್ ಸ್ಟೇಟಸ್ ಚೆಕ್ ಮಾಡುವುದು ಮರೆಯಬೇಡಿ...
ನಮಸ್ಕಾರ ಸ್ನೇಹಿತರೆ .....
ಇವತ್ತಿನ ಈ ಲೇಖನದಲ್ಲಿ ತಿಳಿಸುವ ವಿಷಯ ಗೃಹಲಕ್ಷ್ಮಿ ಸಂಬಂಧಿಸಿದ್ದಾಗಿದ್ದು, ಯಾರೆಲ್ಲಾ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿರುವಿರೋ ಈಗ ನಿಮ್ಮ ಅರ್ಜಿ ಸ್ಥಿತಿ ಏನಾಗಿದೆ ಎಂಬುದನ್ನು ತಿಳಿಯುವ ವೇಳೆ. ಹೇಗೆ ಚೆಕ್ ಮಾಡುವುದು ಎಂದು ಲೇಖನದಲ್ಲಿ ತಿಳಿಸಲಾಗಿದೆ. ತಪ್ಪದೆ ಸಂಪೂರ್ಣ ಲೇಖನ ಓದಿ ಅರ್ಜಿ ಸ್ಥಿತಿಯನ್ನು ತಿಳಿಯಿರಿ.
☆ ಗೃಹಲಕ್ಷ್ಮಿ ಯೋಜನೆಯ ಪ್ರತಿ ಮನೆಯ ಗೃಹಲಕ್ಷ್ಮಿಯರಿಗೂ ತಿಂಗಳಿಗೆ 2000/- ರೂಪಾಯಿ ಕೊಡುವ ಯೋಜನೆಯನ್ನು ಸರ್ಕಾರ ತಂದಿದೆ ಈ ಯೋಜನೆಯ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಶುರುವಾಗಿದ್ದು, ಲಕ್ಷಾಂತರ ಮಹಿಳೆಯರು ಅರ್ಜಿ ಸಲ್ಲಿಸಿದ್ದಾರೆ.
☆ ಆದರೆ ಹಲವರ ಅರ್ಜಿ ರಿಜೆಕ್ಟ್ ಆಗಿವೆ. ಇನ್ನು ಸಾಕಷ್ಟು ಜನರ ಅರ್ಜಿಗಳು ಮತ್ತೆ ಪರಿಶೀಲನೆ ನಡೆಯುತ್ತಿವೆ. ಹಾಗಾಗಿ ನೀವು ಅರ್ಜಿ ಹಾಕಿದ್ದಾರೆ ಅದರ ಸ್ಟೇಟಸ್ ಏನಾಗಿದೆ ಎಂದು ತಿಳಿಯುವುದು ಬಹಳ ಮುಖ್ಯವಾಗಿದೆ.
☆ ಅಪ್ಲಿಕೇಶನ್ ಸ್ಟೇಟಸ್ ಚೆಕ್ ಮಾಡಲು ಕೇಂದ್ರಗಳಿಗೆ ಹೋಗಬೇಕಾ ಎಂದು ತಲೆಕೆಡಿಸಿಕೊಳ್ಳಬೇಡಿ. ಅರ್ಜಿ ಸ್ಥಿತಿ ಚೆಕ್ ಮಾಡುವುದು ಬಹಳ ಸುಲಭ.
ಗೃಹಲಕ್ಷ್ಮಿ ಯೋಜನೆಯ ಅಪ್ಲಿಕೇಶನ್ ಸ್ಟೇಟಸ್ ತಿಳಿಯುವುದು ಹೇಗೆ ?
ಗೃಹಲಕ್ಷ್ಮಿ ಯೋಜನೆಗೆ ಎಲ್ಲರು ಅರ್ಜಿ ಹಾಕಿರುತ್ತಾರೆ. ಆದರೆ, ಅವರ ಅರ್ಜಿ ಸ್ವೀಕರವಾಗಿದೆಯಾ? ಅಥವಾ ರಿಜೆಕ್ಟ್ ಆಗಿದೆಯಾ ಎಂದು ಅವರಿಗೆ ಗೊತ್ತಿರುವುದಿಲ್ಲ. ಅದನ್ನು ಹೇಗೆ ಚೆಕ್ ಮಾಡುವುದು ಎಂದು ಕೂಡ ಅವರಿಗೆ ಗೊತ್ತಿರುವುದಿಲ್ಲ.
ಒಂದು ವೇಳೆ ನಿಮ್ಮ ಅರ್ಜಿ ರಿಜೆಕ್ಟ್ ಆಗಿದ್ದರೆ ಅದನ್ನು ತಿಳಿದುಕೊಳ್ಳುವುದು ಬಹಳ ಮುಖ್ಯವಾಗುತ್ತದೆ.
ನಿಮ್ಮ ಮೊಬೈಲ್ ಇಂದಲೇ ಅರ್ಜಿ ಸ್ಥಿತಿ ತಿಳಿಯಬಹುದು. ನಿಮ್ಮ ಮೊಬೈಲ್ ನಲ್ಲಿರುವ App ಮತ್ತು ನಿಮ್ಮ ಮೊಬೈಲ್ ನಂಬರ್ ಇಂದ ಅರ್ಜಿ ಸ್ಥಿತಿಯನ್ನು ತಿಳಿಯಬಹುದು.
ಮೇಲಿನ ಲಿಂಕ್ ಕ್ಲಿಕ್ ಮಾಡಿ ಅದರಲ್ಲಿ ನಿಮ್ಮ ರೇಷನ್ ಕಾರ್ಡ್ ನಂಬರ್ ಟೈಪ್ ಮಾಡಿದರೆ ಸಾಕು.
ಈಗ ನಿಮ್ಮ ಮುಂದೆ ನೀವು ಗೃಹಲಕ್ಷ್ಮಿ ಯೋಜನೆಗೆ ಸಲ್ಲಿಸಿರುವ ಅರ್ಜಿ ಸ್ಥಿತಿ ಗೊತ್ತಾಗುತ್ತದೆ. ಅರ್ಜಿ ಸಲ್ಲಿಸಿದ ಸ್ವೀಕೃತಿಯನ್ನು ಕೂಡ ತೆಗೆದುಕೊಳ್ಳಬಹುದಾಗಿದೆ.
Tags
Govt.scheme

WhatsApp Group