ಡಿಸೇಂಬರ್ 31 ರಿಂದ Gmail ಇರುವ ಎಲ್ಲರಿಗೂ ಹೊಸ ರೂಲ್ಸ್ !!! ತಪ್ಪದೆ ಈ ಕೆಲಸ ಮಾಡಿ ........

ಡಿಸೇಂಬರ್ 31 ರಿಂದ  Gmail ಇರುವ ಎಲ್ಲರಿಗೂ ಹೊಸ ರೂಲ್ಸ್  !!!  ತಪ್ಪದೆ ಈ ಕೆಲಸ ಮಾಡಿ ........


                       ಟೆಕ್ ದುನಿಯಾದಲ್ಲಿ ಗೂಗಲ್ ಎನ್ನುವುದು ಕುಂಭಕರ್ಣ ರೀತಿಯಲ್ಲಿ ಅತ್ಯಂತ ದಿಗ್ಗಜ ಹಾಗೂ ದೊಡ್ಡ ಕಂಪನಿಯಾಗಿದೆ. ಆದರೆ ಇದೆ ಮೇ ತಿಂಗಳಿನಲ್ಲಿ ಅಧಿಕೃತವಾಗಿ ಘೋಷಿಸಿರುವ ಪ್ರಕಾರ In Active ಆಗಿರುವಂತಹ ಗೂಗಲ್ ಖಾತೆಗಳನ್ನು ಡಿಲೀಟ್ ಮಾಡುವಂತಹ ನಿರ್ಧಾರಕ್ಕೆ ಬಂದಿದ್ದು ಇದನ್ನು ಡಿಸೆಂಬರ್ 30 ರಿಂದ ಪ್ರಾರಂಭ ಮಾಡಲಿದೆ ಎಂಬುದಾಗಿ ಅಧಿಕೃತವಾಗಿ ಕಂಪನಿ ಹೇಳಿಕೊಂಡಿದೆ. ಇದಕ್ಕೆ ಮತ್ತೊಂದು ಕಾರಣ ಇತ್ತೀಚಿನ ದಿನಗಳಲ್ಲಿ ಸ್ಕ್ಯಾನರ್ ಗಳು ಜಾಸ್ತಿ ಆಗಿರುವುದು ಕೂಡ ಒಂದು ಎಂದು ಹೇಳಬಹುದು.

ಗೂಗಲ್ ನ ಪ್ರಾಡಕ್ಟ್ ಮ್ಯಾನೇಜ್ಮೆಂಟ್ ಟೀಮ್ ಹೇಳಿರುವ ಪ್ರಕಾರ ಇಂತಹ ದೀರ್ಘಕಾಲಿಕ ಆಕ್ಟಿವ್ ಇಲ್ಲದೆ ಇರುವ ಅಕೌಂಟ್ ಗಳು ಹ್ಯಾಕ್ ಆಗಿರುವ ಸಾಧ್ಯತೆ ಹೆಚ್ಚಾಗಿರುತ್ತದೆ. ಅಥವಾ ಇವುಗಳಿಗೆ 2 ಫ್ಯಾಕ್ಟರ್ ಆಥೆಂಟಿಫಿಕೇಷನ್ ಮಾಡಿಲ್ಲ ಎಂಬುದಾಗಿ ಅರ್ಥವಾಗಿದೆ ಎಂದು ಹೇಳಿದೆ. ಇದೆ ಕಾರಣಕ್ಕಾಗಿ ಈ Gmail ಐಡಿಯನ್ನು ಬಳಸಿರುವಂತಹ ವ್ಯಕ್ತಿಯ ವೈಯಕ್ತಿಕ ಮಾಹಿತಿಗಳನ್ನು ಸೋರಿಕೆ ಮಾಡುವ ಸಾಧ್ಯತೆ ಕೂಡ ಹೆಚ್ಚಾಗಿದೆ ಎಂಬುದಾಗಿ ಹೇಳಿದ್ದಾರೆ. ಒಂದು ವೇಳೆ ನೀವು ಕಳೆದ ಎರಡು ವರ್ಷಗಳಿಂದ ನಿಮ್ಮ ಗೂಗಲ್ ಅಕೌಂಟ್ ಅನ್ನು ಸೈನ್ ಇನ್ ಮಾಡಿಲ್ಲ ಅಂದ್ರೆ ನಿಮ್ಮ ಅಕೌಂಟ್ ಡಿಲೀಟ್ ಆಗುವ ಸಾಧ್ಯತೆ ಹೆಚ್ಚಾಗಿದೆ. 


Gmail , Docs , Gallery ಅಂತಹ ಮುಂತಾದ ಗೂಗಲ್ ಅಕೌಂಟಿಗೆ ಸಂಬಂಧ ಇರುವಂತಹ ಸೇವೆಗಳನ್ನು ಡಿಲೀಟ್ ಮಾಡುವ ಮುಂಚೆ ನಿಮಗೆ ಗೂಗಲ್ ಅಧಿಕೃತವಾಗಿ ನೋಟಿಫಿಕೇಶನ್ ಕಳುಹಿಸುತ್ತದೆ. ಇದರಲ್ಲಿ ನಿಮಗೆ ರಿಕವರಿ ಅಡ್ರೆಸ್ ಅನ್ನು ಉಪಯೋಗಿಸಲು ಸಾಧ್ಯವಿಲ್ಲ. ಹೀಗಾಗಿ ಆಗೊಮ್ಮೆ ಈಗೊಮ್ಮೆ ನೀವು ಗೂಗ್ಲ್ ಅಕೌಂಟ್ ಅನ್ನು ಉಳಿಸಿಕೊಳ್ಳಬೇಕು ಎನ್ನುವ ಅಸೆ ಇದ್ರೆ ನೀವು ಎರಡು ವರ್ಷಕ್ಕೊಮ್ಮೆ ಯಾರಾದರೂ ಈ ಅಕೌಂಟ್ ನಲ್ಲಿ ಲಾಗ್ ಇನ್ ಆಗಿರಬೇಕು. 
ಆಗ ಮಾತ್ರ ನೀವು ಗೂಗಲ್ ನ ಇನ್ ಆಕ್ಟಿವ್ ಅಕೌಂಟ್ ಕ್ಯಾಟಗರಿಗೆ ನಿಮ್ಮ ಖಾತೆ ಬರುವುದಿಲ್ಲ.


tel share transformed



          ಇಂತಹ ಖಾತೆಗಳನ್ನು ನೀವು Mail ಕಳುಹಿಸುವ ಹಾಗೂ ಓದುವ ಕೆಲಸಗಳಿಗೆ ಮಾತ್ರವಲ್ಲದೆ Google Drive ಮಾದರಿಯ ಕೆಲಸಗಳಿಗೂ ಕೂಡ ಬಳಸಬಹುದು. ಕೇವಲ ಇಷ್ಟೇ ಯಾಕೆ You Tube ನಲ್ಲಿ ಅಕೌಂಟ್ ಕ್ರಿಯೇಟ್ ಮಾಡಿ ವಿಡಿಯೋ ಸರ್ಚ್ ಮಾಡೋದಕ್ಕೆ ಕೂಡಾ ಇಂತಹ ಅಕೌಂಟ್ ಗಳನ್ನು ಬಳಸಬಹುದು.

ವೆಬ್ ಸೈಟ್ ನಲ್ಲಿ ಕೂಡ ಲಾಗ್ ಇನ್ ಆಗುವುದಕ್ಕೆ ಇದನ್ನು ಬಳಸಬಹುದಾಗಿದೆ. ಹೀಗಾಗಿ ನಿಮ್ಮ ಗೂಗಲ್ ಖಾತೆ ಇನ್ ಆಕ್ಟಿವ್ ಆಗಿ ಡಿಲೀಟ್ ಆಗಬಾರದು ಎನ್ನುವ ಆಸೆ ಇದ್ದರೆ  ನೀವು ಎರಡು ವರ್ಷಕ್ಕೊಮ್ಮೆ ಆದರೂಕೂಡ ಈ ಮೇಲೆ ಹೇಳಿರುವಂತಹ ಕೆಲಸಗಳಿಗೆ ನಿಮ್ಮ ಗೂಗಲ್ ಖಾತೆಯನ್ನು ಲಿಂಕ್ ಮಾಡಿ ಸಕ್ರಿಯರಾಗಿದ್ದರೆ ಸಾಕು ನಿಮ್ಮ ಗೂಗಲ್ ಖಾತೆ ಉಳಿದುಕೊಳ್ಳುತ್ತದೆ. ಹೀಗಾಗಿ ಈ ಮೂಲಕ ನೀವು ನಿಮ್ಮ ಗೂಗಲ್ ಖಾತೆಯನ್ನು ಡಿಲೀಟ್ ಆಗುವುದರಿಂದ ಬಚಾವ್ ಮಾಡಬಹುದಾಗಿದೆ. 















ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು