200 ಯೂನಿಟ್ ದಾಟಿದರೆ ಸಂಪೂರ್ಣ ವಿದ್ಯುತ್ ಮೊತ್ತ ಪಾವತಿ ಕಡ್ಡಾಯ ಗ್ರಾಹಕರಿಗೆ ಶೂನ್ಯ ಬಿಲ್ ಗ್ಯಾರಂಟಿ :

200 ಯೂನಿಟ್ ದಾಟಿದರೆ ಸಂಪೂರ್ಣ ವಿದ್ಯುತ್ ಮೊತ್ತ ಪಾವತಿ ಕಡ್ಡಾಯ 
ಗ್ರಾಹಕರಿಗೆ ಶೂನ್ಯ ಬಿಲ್ ಗ್ಯಾರಂಟಿ :




ಅರ್ಹತೆ ಮಿತಿಯೊಳಗೆ ಬಳಸಿದ್ದರೆ ಶೂನ್ಯ ಬಿಲ್ ನೀಡಲಿದ್ದು ಅಂಥವರು ಯಾವುದೇ ಶುಲ್ಕ ಪಾವತಿಸಬೇಕಾಗಿಲ್ಲ. ಗರಿಷ್ಟ ವಿದ್ಯುತ್ ಬಳಕೆಯ ಮಿತಿಯನ್ನು 200 ಯೂನಿಟ್ ಗಳಿಗೆ ನಿರ್ಬಂಧಿಸಲಾಗಿದೆ. ನಿಗದಿತ ಸರಾಸರಿ ಬಳಕೆಯ ಮಿತಿ ಮೀರಿದರೂ 200 ಯೂನಿಟ್ ಒಳಗಿದ್ದರೆ ಹೆಚ್ಚುವರಿ ಯೂನಿಟ್ ಗೆ ಮಾತ್ರ ಶುಲ್ಕ ಪಾವತಿಸಬೇಕಾಗುತ್ತದೆ ಎಂದು ಸಚಿವರು ಹೇಳಿದರು. 

ಎಷ್ಟು ವೆಚ್ಚ ?

ಗೃಹ ಜ್ಯೋತಿ ಸರ್ಕಾರದ ಕಾರ್ಯ ಕ್ರಮವಾಗಿದೆ. ಇಂಧನ ಇಲಾಖೆ ಅಥವಾ ಎಸ್ಕಾಂ ಗಳಿಗೆ ಹೊರೆ ಬೀಳದು. ಉಚಿತ ವಿದ್ಯುತ್ ಪೂರೈಕೆ ವೆಚ್ಚವನ್ನು ಸರ್ಕಾರವೇ ಭರಿಸಲಿದೆ. ಮುಂಗಡವೋ ಅಥವಾ ತಿಂಗಳ ಕೊನೆಗೆ ಎನ್ನುವುದೇನಿಲ್ಲ. ನೀರಾವರಿ ಪಂಪ್ ಸೆಟ್ ಗಳಿಗೆ ಉಚಿತ ವಿದ್ಯುತ್ ಪೂರೈಕೆ ವೆಚ್ಚ ತುಂಬುವ ಮಾದರಿಯೇ ಗೃಹಜ್ಯೋತಿಗೆ ಅನ್ವಯವಾಗಲಿದೆ. ಬೆಲೆ ಏರಿಕೆಯಿಂದ ಕಷ್ಟಕ್ಕೆ ಸಿಲುಕಿರುವ ಜನರಿಗೆ ನೆರವಾಗುವ ಯೋಜನೆ ಇದಾಗಿದ್ದು, ಎಂದಿಗೂ ಸರ್ಕಾರಕ್ಕೆ ಹೊರೆಯಾಗದು. ಬೊಕ್ಕಸಕ್ಕೆ ತಗಲುವ ವೆಚ್ಚ ಎಷ್ಟೆಂಬುದು ಮಾಸಾಂತ್ಯಕ್ಕೆ ನಿಖರವಾಗಿ ತಿಳಿಯಲಿದೆ ಎಂದು ಜಾರ್ಜ್ ಪ್ರತಿಕ್ರಿಯಿಸಿದರು.

ಕಲಬುರಗಿಯಲ್ಲಿ ಚಾಲನೆ: 

ಎಸ್ಕಾಂ ಗಳು ಮಾಸಿಕ ವಿದ್ಯುತ್ ಬಿಲ್ ರೆಡಿ ಮಾಡುತ್ತಿವೆ, ಕಲಬುರಗಿಯಲ್ಲಿ 5 ರಂದು ಗೃಹಜ್ಯೋತಿ ಯೋಜನೆಗೆ ಸಿಎಂ ಸಿದ್ಧರಾಮಯ್ಯ ವಿದ್ಯುಕ್ತವಾಗಿ ಚಾಲನೆ ನೀಡಲಿದ್ದಾರೆ. ಸಾಂಕೇತಿಕವಾಗಿ ಕೆಲ ಫಲಾನುಭವಿಗಳಿಗೆ ಶೂನ್ಯ ವಿದ್ಯುತ್ ಬಿಲ್ ವಿತರಿಸಲಾಗುತ್ತದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಡಿಸಿಎಂ ಡಿ.ಕೆ ಶಿವಕುಮಾರ್ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ, ಸೇರಿ ಹಿರಿಯ ಸಚಿವರು ಪಾಲ್ಗೊಳ್ಳಲಿದ್ದಾರೆ ಎಂದು ಜಾರ್ಜ್ ತಿಳಿಸಿದರು. ಸಿ ಎಂ ಈಗಾಗಲೇ ನೀಡಿದ ಸೂಚನೆಯಂತೆ ಏಕಕಾಲಕ್ಕೆ ಎಲ್ಲ ಜಿಲ್ಲೆಗಳ್ಲಲಿ ಈ ಕಾರ್ಯಕ್ರಮ  ಆಯೋಜಿಸುತ್ತಿದ್ದು, ಆಯಾ ಜಿಲ್ಲಾ ಉಸ್ತುವಾರಿ ಸಚಿವರು ಚಾಲನೆ ನೀಡಲಿದ್ದಾರೆ ಎಂದರು. 


tel share transformed


ಮಾಸಿಕ ಸರಾಸರಿ 53 ಯೂನಿಟ್ : ವಾರ್ಷಿಕ ಬಳಕೆ ಲೆಕ್ಕಾಚಾರದ ಪ್ರಕಾರ ರಾಜ್ಯದ ಒಟ್ಟಾರೆ ಮಾಸಿಕ ಬಳಕೆ ಸರಾಸರಿ 53 ಯೂನಿಟ್ ಗಳಾಗಿವೆ. ಕುಟೀರ್ ಜ್ಯೋತಿ ಹಾಗು ಭಾಗ್ಯಜ್ಯೋತಿ ಫಲಾನುಭವಿಗಳಿಗೆ ಮಾಸಿಕ 40 ಯೂನಿಟ್ ಉಚಿತ ಸದ್ಯಕ್ಕೆ ನೀಡುತ್ತಿದ್ದು, ಹೆಚ್ಚುವರಿ ಸೇರಿಸಿ 58 ಯೂನಿಟ್ ನಿಗದಿಪಡಿಸಲಾಗಿದೆ.

                  ಅಮೃತ ಜ್ಯೋತಿ ಫಲಾನುಭವಿಗಳು ಈಗ ಮಾಸಿಕ 75ಯೂನಿಟ್ ಉಚಿತವಾಗಿ ಪಡೆಯುತ್ತಿದ್ದು, ಹೆಚ್ಚುವರಿ 7 ಯೂನಿಟ್ ಸೇರಿಸಲಾಗಿದೆ. ಇದರಿಂದಾಗಿ ವಾರ್ಷಿಕ ಸರಾಸರಿ ಲೆಕ್ಕಾಚಾರದಂತೆ ಈ ಯೋಜನೆಗಳ ಫಲಾನುಭವಿಗಳು ೪೦ ಅಥವಾ 75 ಯೂನಿಟ್ ಗಳಿಂದ ವಂಚಿತರಾಗುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಚಾರ್ಜ್ ತಳ್ಳಿಹಾಕಿದರು.

ಬಿಲ್ ಮರು ಪಾವತಿಗೆ ಕ್ರಮ :

             ಗೃಹಜ್ಯೋತಿ ಜುಲೈ 1 ರಿಂದಲೇ ಪ್ರಾರಂಭವೆಂಬ ಘೋಷಣೆಗೆ ಸರ್ಕಾರ ಬದ್ಧವಾಗಿದೆ. ಆದರೆ ವಿದ್ಯುತ್ ಬಿಲ್ ಸಿದ್ಧಪಡಿಸಲು ಒಂದೊಂದು ಎಸ್ಕಾಂ  ಒಂದೊಂದು ರೀತಿಯ ದಿನಾಂಕ ಅನುಸರಿಸುತ್ತದೆ. ಜೂನ್. 1 ರ ಬದಲು 5, 8 ಅಥವಾ 15 ರಿಂದ ಮುಂದಿನ ತಿಂಗಳ 15 ಕ್ಕೆ ಬಿಲ್ ಗೆ ಕಟ್ ಆಫ್ ದಿನಾಂಕ ನಿಗದಿಪಡಿಸಿದ್ದರೆ ವ್ಯತ್ಯಾಸದ ಮೊತ್ತವನ್ನು ಅರ್ಹ ಕುಟುಂಬಗಳಿಗೆ ಸರ್ಕಾರ ಮರು ಪಾವತಿಸಲಿದೆ. ಐದರಿಂದ ಹೆಚ್ಚೆಂದರೆ 15 ದಿನಗಳ ವಿದ್ಯುತ್ ಶುಲ್ಕ ಬರಬಹುದು. ಈ ಮೊತ್ತ ಆಯಾ ಬಳಕೆದಾರರ ಬಾಕಿಗೆ ಹೊಂದಾಣಿಕೆ ಇಲ್ಲವೇ ಮರುಪಾವತಿಗೆ ಕ್ರಮ ವಹಿಸಲಾಗುತ್ತದೆ ಎಂದು ಜಾರ್ಜ್ ತಿಳಿಸಿದರು. 








ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು