ಟ್ಯಾಬ್ ವಿತರಣೆ ಡೋಲಾಯಮಾನ
ಈ ವರ್ಷವೂ ಇಲ್ಲ ಅನುದಾನ । ವಿದ್ಯಾರ್ಥಿಗಳಿಗೆ ಕುತ್ತಾದ 'ಗ್ಯಾರಂಟಿ'
ರಾಜ್ಯದ ಸರ್ಕಾರೀ ಮತ್ತು ಅನುದಾನಿತ ಪದವಿ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣಕ್ಕೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಸಿಎಂ ಸಿದ್ಧರಾಮಯ್ಯ 2017-18ರಲ್ಲಿ ಜಾರಿಗೆ ತಂಡ ಟ್ಯಾಬ್ಲೆಟ್ (ಪಿಸಿ) ವಿತರಿಸುವ ಯೋಜನೆ 'ಗ್ಯಾರಂಟಿ'ಗಳಿಂದಾಗಿ ಡೋಲಾಯಮಾನ ಸ್ಥಿತಿಗೆ ತಲುಪಿದೆ.
ಕಳೆದ ವರ್ಷ ಕೂಡ ವಿದ್ಯಾರ್ಥಿಗಳಿಗೆ ಟ್ಯಾಬ್ಲೆಟ್ ವಿತರಿಸಿರಲಿಲ್ಲ. ಯೋಜನೆ ಕುರಿತಂತೆ ಇದುವರೆಗೂ ಯಾವುದೇ ಚರ್ಚೆಗಳು ನಡೆದಿಲ್ಲ. ಇದಕ್ಕಾಗಿ ಅನುದಾನ ಕೂಡ ಮೀಸಲಿಡದ ಕಾರಣ ಈ ವರ್ಷವೂ ಯೋಜನೆ ಜಾರಿಯಾಗುವುದು ಅನುಮಾನ ಎಂದು ಇಲಾಖೆ ಮೂಲಕಗಳು ತಿಳಿಸಿವೆ.
ಬದಲಾದ ತಂತ್ರಜ್ಞಾನಕ್ಕೆ ಅನುಗುಣವಾಗಿ ವಿದ್ಯಾರ್ಥಿಗಳು ಇಂಟರ್ನೆಟ್ ನಲ್ಲಿ ಆಕಾರ ಪುಸ್ತಕಗಳನ್ನು ಓದಲು ಹಾಗು ಪಠ್ಯಕ್ಕೆ ಸಂಬಂಧಿಸಿದ ಮಾಹಿತಿಗಳನ್ನು ಸಂಶೋಧಿಸಲು ಅನುವಾಗಲಿ ಎಂಬ ಉದ್ದೇಶದಿಂದ ಹಿಂದಿನ ಕಾಂಗ್ರೆಸ್ ಸರ್ಕಾರ ಸರ್ಕಾರೀ ಕಾಲೇಜುಗಳಲ್ಲಿ ಕಲೆ, ವಿಜ್ಞಾನ, ವಾಣಿಜ್ಯ ಪದವಿ, ವೃತ್ತಿಪರ ಕೋರ್ಸ್ ಗಳನ್ನು ವ್ಯಾಸಂಗ ಮಾಡುತ್ತಿರುವ ಮೊದಲ ವರ್ಷದ ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್ ವಿತರಿಸುವ ಯೋಜನೆ ರೂಪಿಸಿತ್ತು. ಬಳಿಕ ಆಡಳಿತಕ್ಕೆ ಬಂದ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ಮತ್ತು ಆರಂಭದಲ್ಲಿ ಬಿಜೆಪಿ ಸರ್ಕಾರ ಕೂಡ 2019ರಲ್ಲಿ ಸರ್ಕಾರ ಲ್ಯಾಪ್ ಟಾಪ್ ಬದಲಾಗಿ ಟ್ಯಾಬ್ಲೆಟ್ ಪಿಸಿ ವಿತರಿಸಿದ್ದು, ನಂತರ ಸ್ಥಗಿತಗೊಂಡಿತು.
1.5 ಲಕ್ಷ ಫಲಾನುಭವಿಗಳು :
ಪ್ರತಿವರ್ಷ ವಿವಿಧ ಪದವಿ ಕೋರ್ಸ್ ಗಳಲ್ಲಿ ವ್ಯಾಸಂಗ ಮಾಡುವ ಮೊದಲ ವರ್ಷದ ಅಂದಾಜು 1.5 ಲಕ್ಷ ವಿದ್ಯಾರ್ಥಿಗಳು ಈ ಯೋಜನೆಯ ಫಲಾನುಭವಿಗಳಿದ್ದರೆ. ಈ ವರ್ಷ ಬಜೆಟ್ ನಲ್ಲಿ ಗ್ಯಾರಂಟಿ ಯೋಜನೆಗಳಿಗೆ ಹೆಚ್ಚಿನ ಅನುದಾನ ನೀಡುತ್ತಿದ್ದು, ಟ್ಯಾಬ್ಲೆಟ್ ಯೋಜನೆ ಬಗ್ಗೆ ಪ್ರಸ್ತಾಪ ಮಾಡದಿರುವ ಕಾರಣ ಹಾಗೂ ಹಿಂದಿನ ಸರ್ಕಾರ ಕಳೆದ ವರ್ಷ ವಿತರಣೆ ಮಾಡದಿರುವುದರಿಂದ ಈ ಯೋಜನೆ ಪುನಾರಂಭ ಮಾಡುವುದು ಅನುಮಾನ ಎಂದು ಇಲಾಖೆ ಮೂಲಗಳು ತಿಳಿಸಿವೆ.
ಕನಿಷ್ಠ 160 ಕೋಟಿ ರೂಪಾಯಿ ಬೇಕು!!
ಉತ್ತಮವಾದ ಟ್ಯಾಬ್ ವಿತರಿಸಲು ಕನಿಷ್ಠ 10-12 ಸಾವಿರ ರೂಪಾಯಿ ಬೇಕಾಗುತ್ತದೆ. 1.5 ಲಕ್ಷ ವಿದ್ಯಾರ್ಥಿಗಳಿಗೆ ವಿತರಣೆ ಮಾಡಲು 150 ರಿಂದ 160 ಕೋಟಿ ರೂ ವೆಚ್ಚ ಮಾಡಬೇಕಾಗುತ್ತದೆ ಎಂದು ಇಲಾಖೆ ಮೂಲಗಳು ಮಾಹಿತಿ ನೀಡಿವೆ.
ಇತ್ತೀಚಿಗೆ ನಡೆದ ಎಸ್ ಸಿ ಪಿ/ ಟಿ ಎಸ್ ಪಿ ಯೋಜನೆ ಸಭೆಯಲ್ಲಿ ಪದವಿ ವಿದ್ಯಾರ್ಥಿಗಳಿಗೆ ಟ್ಯಾಬ್ ವಿತರಿಸುವ ವಿಷಯ ಕೂಡ ಪ್ರಸ್ತಾಪವಾಗಿದ್ದು, ಸಿ ಎಂ ಟ್ಯಾಬ್ ವಿತರಿಸುವುದಕ್ಕೆ ಆಸಕ್ತಿ ತೋರಿದ್ದಾರೆ. ಅನುದಾನ ಬಿಡುಗಡೆಯದಲ್ಲಿ ಖಂಡಿತವಾಗಿಯೂ ಯೋಜನೆ ಜಾರಿ ಮಾಡಲಾಗುತ್ತದೆ.