ಶಕ್ತಿ ಯೋಜನೆ ಯಾವುದೇ ಕಾರಣಕ್ಕೂ ಬಂದ್ ಆಗೋಲ್ಲ ..

ಶಕ್ತಿ ಯೋಜನೆ ಯಾವುದೇ ಕಾರಣಕ್ಕೂ ಬಂದ್ ಆಗೋಲ್ಲ ..

ಫ್ರೀ ಬಸ್ ನಿಲ್ಲಲ್ಲ ...ನಾನೇ ಗ್ಯಾರಂಟಿ...!

ಶಕ್ತಿ ಯೋಜನೆ  ರದ್ದಾಗದು ಸುಳ್ಳು ಸುದ್ದಿ ನಂಬಬೇಡಿ ಸಿಎಂ ಸಿದ್ದರಾಮಯ್ಯ




ಇಂದಿನ ಲೇಖನದಲ್ಲಿ ತಿಳಿಸುವುದೇನೆಂದರ್ರೆ ಮಹಿಳೆಯರ ಉಚಿತ ಪ್ರಯಾಣದ ಶಕ್ತಿ ಯೋಜನೆ   !ಯಾವುದೇ ಕಾರಣಕ್ಕೂ  ಸ್ಥಗಿತಗೊಳಸಲ್ಲ ಸಿ ಎಂ ಸಿದ್ದರಾಮಯ್ಯ ಹಾಗೂ ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ತಿಳಿಸಿದ್ರು. ಯಾವುದುಕ್ಕೂ ಸುಳ್ಳು ಸುದ್ದಿ ಗಳನ್ನು  ನಂಬದಂತೆ ಸಾರ್ವಜನಿಕರಿಗೆ ಹೇಳಿದರು.


ಶಕ್ತಿ ಯೋಜನೆ ಕುರಿತು ಸಾಮಾಜಿಕ ಜಾಲತಾಣ ಗಳಲ್ಲಿ ಹರಡುತ್ತಿರುವ ಸುದ್ಧಿ ಕುರಿತಂತೆ ಟ್ವೀಟ್ ಮೂಲಕ ಸಿಎಂ ಸಿದ್ಧರಾಮಯ್ಯ ಪ್ರತಿಕ್ರಿಯಿಸಿದ್ದು, ಮೊದಲಿಗೆ ಗ್ಯಾರಂಟಿ ಯೋಜನೆಗಳು ಜಾರಿಯಾಗುವುದಿಲ್ಲ ಎಂದು ಅಪಪ್ರಚಾರ ಮಾಡಿದರು. ಈಗ ಆ ಯೋಜನೆಗಳು ಹೆಚ್ಚು ಕಾಲ ಚಲನೆಯಲ್ಲಿ ಇರುವುದಿಲ್ಲ ಎಂದು ಅಪಪ್ರಚಾರ ಮಾಡುತ್ತಿದ್ದಾರೆ. ಇಂತಹ ಸುಳ್ಳು ಸುದ್ಧಿಗೆ ಕಿವಿಗೊಡಬೇಡಿ. ಯಾವುದೇ ಕಾರಣಕ್ಕೂ ಶಕ್ತಿ ಯೋಜನೆ ಸ್ಥಗಿತಗೊಳ್ಳುವುದಿಲ್ಲ. ನಮ್ಮದು ನುಡಿದಂತೆ ನಡೆಯುವ ಸರ್ಕಾರ, ಇದಕ್ಕೆ ನಾನೆ ಗ್ಯಾರಂಟಿ ಎಂದು ತಿಳಿಸಿದ್ದಾರೆ.



            ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಪ್ರತಿಕ್ರಿಯಿಸಿ, ಶಕ್ತಿ ಯೋಜನೆಯನ್ನು ನಿಲ್ಲಿಸಲಾಗುತ್ತದೆ ಎಂದು ಒಂದು ರಾಜಕೀಯ ಪಕ್ಷ ಸುಳ್ಳು ಹರಡುತ್ತಿದೆ. ಯೋಜನೆಯ ಯಶಸ್ಸನ್ನು ಸಹಿಸಿಕೊಳ್ಳಲಾಗದ ಪ್ರತಿಪಕ್ಷದವರು ಈ ರೀತಿ ಮಾಡುತ್ತಿದ್ದಾರೆ. ಈ ಐದು ವರ್ಷ ಮಾತ್ರವಲ್ಲ ಇನ್ನೂ ಹತ್ತು ವರ್ಷ ಶಕ್ತಿ ಯೋಜನೆ ಮುಂದುವರೆಯಲಿದೆ ಎಂದು ಹೇಳಿದರು.

ಯೋಜನೆಯ ಲಾಭ ಪಡೆಯಲು ಸದ್ಯಕ್ಕೆ ಯಾರೂ ಪಾಸ್ ಪಡೆಯುವ ಅಗತ್ಯವೂ ಇಲ್ಲ. ಮುಂದೆಯೂ (2028) ನಾವೇ ಅಧಿಕಾರಕ್ಕೆ ಬರುತ್ತೇವೆ. ಹೀಗಾಗಿ ಮುಂದಿನ 10 ವರ್ಷ ಮಹಿಳೆಯರು ರಾಜ್ಯಾದ್ಯಂತ ಸಾರಿಗೆ ಬಸ್ಸುಗಳಲ್ಲಿ ಉಚಿತವಾಗಿ ಪ್ರಯಾಣಿಸುಬಹುದು. ಇದರಲ್ಲಿ ಯಾವುದೇ ಗೊಂದಲಗಳು ಬೇಕಿಲ್ಲ ಎಂದು ಸ್ಪಷ್ಟಪಡಿಸಿದರು.



tel share transformed



₹ 900 ಕೋಟಿ ದಾಟಿದ ಶಕ್ತಿ ಟಿಕೆಟ್ ಮೌಲ್ಯ !!

                   ಶಕ್ತಿ ಯೋಜನೆ ಅಡಿಯಲ್ಲಿ ಪ್ರಯಾಣಿಸುವ ಮಹಿಳಾ ಪ್ರಯಾಣಿಕರ ಸಂಖ್ಯೆ ಸರಾಸರಿ 60 ಲಕ್ಷ ತಲುಪಿದೆ. ಅದರ ಜತೆಗೆ ನಿತ್ಯ ಟಿಕೆಟ್ ಮೌಲ್ಯ 16 ಕೋಟಿ ರೂ ದಾಟುತ್ತಿದೆ. ಅದರಂತೆ ಆಗಸ್ಟ್ 14 ರವರೆಗೆ ಒಟ್ಟು 39.36 ಕೋಟಿ ಮಹಿಳಾ ಪ್ರಯಾಣಿಕರು ಶಕ್ತಿ ಯೋಜನೆ ಲಾಭ ಪಡೆದಿದ್ದು, ಅವರು ಪ್ರಯಾಣಿಸುವ ಟಿಕೆಟ್ ಮೌಲ್ಯ 916.18 ಕೋಟಿ ರೂಪಾಯಿಗಳಾಗಿವೆ.


ಸುಳ್ಳು ಸಂದೇಶ ನಂಬಬೇಡಿ :

             ಈ ಬಗ್ಗೆ ಸಾರಿಗೆ ಇಲಾಖೆಯು ಸ್ಪಷ್ಟನೆ ನೀಡಿದ್ದು, ಸಾರ್ವಜನಿಕರು ಶಕ್ತಿ ಯೋಜನೆಯ ಕುರಿತು ಸಾಮಾಜಿಕ ಜಾಲತಾಣಗಲ್ಲಿ ಹರಡುತ್ತಿರುವ ಗೊಂದಲಮಯ ಸಂದೇಶಗಳನ್ನು ನಂಬಬೇಡಿ. ಮಹಿಳೆಯರ ಉಚಿತ ಪ್ರಯಾಣದ ಶಕ್ತಿ ಯೋಜನೆ ಎಂದಿನಂತೆ ಮುಂದುವರೆಯಲಿದೆ ಎಂದಿದೆ.




1 ಕಾಮೆಂಟ್‌ಗಳು

ನವೀನ ಹಳೆಯದು