ಕುಶಲಕರ್ಮಿಗಳಿಗೆ ವಿಶ್ವಕರ್ಮ
ಪ್ರಮುಖ ನಿರ್ಣಯಗಳು :
1 ಪಿಎಂ ವಿಶ್ವಕರ್ಮ ಯೋಜನೆಗೆ 13 ಸಾವಿರ ಕೋಟಿ ರೂ
2 ಪಿಎಂ ಇ-ಬಸ್ ಯೋಜನೆಗೆ 57,613 ಕೋಟಿ ರೂ
3 ಡಿಜಿಟಲ್ ಇಂಡಿಯಾ ಯೋಜನೆ ವಿಸ್ತರಣೆಗೆ 14,903 ಕೋಟಿ
4 ಹೊಸ ರೈಲ್ವೆ ಯೋಜನೆಗಳಿಗೆ 35 ಸಾವಿರ ಕೋಟಿ ರೂ
ಕೆಂಪುಕೋಟೆ ಆವರಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಪ್ರಸ್ತಾಪಿಸಿದ್ದ ಪಿಎಂ ವಿಶ್ವಕರ್ಮ ಯೋಜನೆ ಸೇರಿದಂತೆ ಪ್ರಮುಖ ಯೋಜನೆಲ್ಲಿಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ. ಕುಶಲಕರ್ಮಿಗಳ ಬದುಕು ಉಜ್ವಲಗೊಳಿಸುವ ಉದ್ದೇಶದ 13 ಸಾವಿರ ಕೋಟಿ ರೂ ವೆಚ್ಚದ ಪಿಎಂ ವಿಶ್ವಕರ್ಮ ಯೋಜನೆ, ಮಾಲಿನ್ಯ ನಿಯಂತ್ರಣಕ್ಕೆ ಪೂರಕವಾದ 57,613 ಕೋಟಿ ರೂಪಾಯಿ ವೆಚ್ಚದ ಪಿಎಂ ಇ-ಬಸ್ ಸೇವೆ, ರೈಲ್ವೆ ಜಾಲ ಬಲಪಡಿಸುವ 35 ಸಾವಿರ ಕೋಟಿ ರೂ ವೆಚ್ಚದ ಹೊಸ ರೈಲ್ವೆ ಯೋಜನೆ, 14903 ಕೋಟಿ ರೂ ವೆಚ್ಚದ ಡಿಜಿಟಲ್ ಇಂಡಿಯಾ ವಿಸ್ತರಣೆಗೆ ಬುಧವಾರ ನಡೆದ ಸಚಿವ ಸಂಪುಟ ಸಭೆ ಅಷ್ಟು ಎಂದಿದೆ. ಗುರು ಶಿಷ್ಯ ಪರಂಪರೆ ಮತ್ತು ಕುಟುಂಬ ಆಧಾರಿತ ಸಾಂಪ್ರದಾಯಿಕ ಕರಕುಶಲ, ಕುಶಲಕರ್ಮಿಗಳ ಕೆಲಸ ಪ್ರೋತ್ಸಾಹಿಡಿ ಅವರನ್ನು ಬಲಪಡಿಸುವುದು ಪಿಎಂ ವಿಶ್ವಕರ್ಮ ಯೋಜನೆಯ ಉದ್ದೇಶವಾಗಿದೆ. ಮುಂದಿನ ಐದು ವರ್ಷಗಳ ಅವಧಿಗೆ (2023-24 ರಿಂದ 2027-28) ಅನ್ವಯವಾಗುವಂತೆ 13,000 ಕೋಟಿ ರೂ ವೆಚ್ಚ ಮಾಡಲಾಗುತ್ತದೆ. ಈ ಯೋಜನೆ ಕುಶಲಕರ್ಮಿಗಳ ಉತ್ಪನ್ನಗಳು, ಅವರ ಸೇವೆಗಳ ವ್ಯಾಪ್ತಿಯನ್ನು ಹೆಚ್ಚಿಸುವ ಹಾಗೂ ವಿಶ್ವಕರ್ಮರನ್ನು ದೇಶಿಯ ಮತ್ತು ಜಾಗತಿಕ ಮೌಲ್ಯ ಸರಪಳಿಯೊಂದಿಗೆ ಬೆಸೆಯಲಿದೆ. ಈ ಯೋಜನೆಯಡಿ ಪಿಎಂ ವಿಶ್ವಕರ್ಮ ಪ್ರಮಾಣಪತ್ರ ಮತ್ತು ಗುರುತಿನ ಚೀಟಿ ನೀಡಲಾಗುವುದು. ಮೊದಲ ಹಂತದಲ್ಲಿ ಗರಿಷ್ಟ 1 ಲಕ್ಷ ರೂ, ಎರಡನೇ ಹಂತದಲ್ಲಿ 2 ಲಕ್ಷ ರೂ ಗಳನ್ನು ಶೇ 5 ಬಡ್ಡಿದರದೊಂದಿಗೆ ನೀಡಲಾಗುತ್ತದೆ.
ಯಾರೆಲ್ಲ ಅರ್ಹರು?
✡ ಬಡಗಿಗಳು
✡ ದೋಣಿ ತಯಾರಕರು
✡ ಕುಮ್ಮಾರರು,
✡ ಬೀಗ ತಯಾರಿಸುವವರು
✡ ಅಕ್ಕಸಾಲಿಗರು
✡ ಕುಂಬಾರರು
✡ ಹೂ ಕಟ್ಟುವವರು
✡ ದೋಬಿಗಳು
✡ ದರ್ಜಿಗಳು
✡ ಶಿಲ್ಪಿಗಳು
✡ ಚಮ್ಮಾರರು
✡ ದರ್ಜಿಗಳು
✡ ಸಾಂಪ್ರದಾಯಿಕ ಗೊಂಬೆ ತಯಾರಕರು
✡ ಪೊರಕೆ ತಯಾರಿಸುವವರು
ಈ ಯೋಜನೆಯ ಫಲಾನುಭವಿಗಳಾಗಿದ್ದರೆ. ಸಾಲದ ನೆರವಿನೊಂದಿಗೆ ಫಲಾನುಭವಿಗಳಿಗೆ ಇತ್ತೀಚಿನ ತಂತ್ರಜ್ಞಾನದ ಸವಲತ್ತು ದೊರಕಲಿದ್ದು, ಕರಕುಶಲ ವಸ್ತುಗಳಿಗೆ ಇದರಿಂದ ಜಾಗತಿಕ ಮಾರುಕಟ್ಟೆಗೆ ವ್ಯಾಪಕ ಪ್ರಮಾಣದಲ್ಲಿ ಪ್ರವೇಶ ಸಿಗಲಿದೆ. ಕೌಶಲ ತರಬೇತಿಗೆ ಪ್ರತಿದಿನ 500 ರೂ ಸ್ಟೈಪಂಡ್ ಪಡೆಯುವ ಅವಕಾಶವಿದೆ. ಹಾಗೆಯೆ ಆಧುನಿಕ ಸಾಧನಗಳ ಖರೀದಿಗೆ 15,000 ರೂ ನೀಡಲಾಗುತ್ತದೆ. ಈ ಯೋಜನೆಗೆ ಹಳ್ಳಿಗಳಲ್ಲಿನ ಸಾಮಾನ್ಯ ಸೇವಾ ಕೇಂದ್ರಗಳಲ್ಲಿ ಕೂಡ ನೋಂದಾಯಿಸಿಕೊಳ್ಳಬಹುದು.
ಡಿಜಿಟಲ್ ಇಂಡಿಯಾ ವಿಸ್ತರಣೆ :
ಜನರಿಗೆ ಡಿಜಿಟಲ್ ವ್ಯವಸ್ಥೆ ಮೂಲಕ ಸೇವೆಗಳನ್ನು ತಲುಪಿಸುವ ಡಿಜಿಟಲ್ ಇಂಡಿಯಾ ಕಾರ್ಯಕ್ರಮದ ವಿಸ್ತರಣೆಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ. ಇದಕ್ಕಾಗಿ ಒಟ್ಟು 14,903 ಕೋಟಿ ರೂಪಾಯಿ ಮೀಸಲಿಡಲಾಗಿದೆ.
ಯೋಜನೆಯ ಲಾಭವೇನು ?
✓ ಫ್ಯೂಚರ್ ಸ್ಕಿಲ್ಸ್ ಪ್ರೈಮ್ ಪ್ರೋಗ್ರಾಮ್ (ಭವಿಷ್ಯದ ಕೌಶಲ ಪ್ರಮುಖ ಕಾರ್ಯಕ್ರಮ) ಅನ್ವಯ ೬.೨೫ ಲಕ್ಷ ಮಾಹಿತಿ ತಂತ್ರಜ್ಞಾನ ವೃತ್ತಿಪರರಿಗೆ ಮರು ಕೌಶಲ ಮತ್ತು ಉನ್ನತ ಕೌಶಲ ಪಡೆಯುವ ಅವಕಾಶ
✓ ಮಾಹಿತಿ ಭದ್ರತೆ ಮತ್ತು ಶಿಕ್ಷಣ ಜಾಗೃತಿ ಹಂತ ಕಾರ್ಯಕ್ರಮದಡಿ 2.65 ಲಕ್ಷ ಜನರಿಗೆ ಮಾಹಿತಿ ಭದ್ರತೆಯಲ್ಲಿ ತರಬೆತಿ.
✓ ಹೊಸ ಯುಗದ ಆಡಳಿತಕ್ಕಾಗಿ ಏಕೀಕೃತ ಮೊಬೈಲ್ ಅಪ್ಲಿಕೇಶನ್ / ಇದರಲ್ಲಿ 540 ಹೆಚ್ಚುವರಿ ಸೇವೆಗಳು ಲಭ್ಯವಿರುತ್ತವೆ. ಪ್ರಸ್ತುತ 1,700 ಕ್ಕೂ ಹೆಚ್ಚು ಸೇವೆಗಳು ಉಮಂಗ್ ಆಫ್ ನಲ್ಲಿ ಲಭ್ಯವಿದೆ.
✓ ರಾಷ್ಟ್ರಿಯ ಸೂಪರ್ ಕಂಪ್ಯೂಟರ್ ಮಿಷನ್ ಅಡಿಯಲ್ಲಿ ಇನ್ನೂ ೯ ಸೂಪರ್ ಕಂಪ್ಯೂಟರ್ ಗಳಿಗೆ ಹೆಚ್ಚುವರಿಯಾಗಿರಲಿದೆ.
✓ ಭಾಷಿನಿ, ಕೃತಕ ಬುದ್ಧಿಮತ್ತೆ (ಎಐ)-ಸಕ್ರಿಯಗೊಳಿಸಿದ/ಅಳವಡಿಸಿದ ಬಹು-ಭಾಷಾ ಅನುವಾದ ಸಾಧನ ಎಲ್ಲ 22 ಸೆಡ್ಯೂಲ್ 8 ಭಾಷೆಗಳಲ್ಲಿ ಕಾರ್ಯಾಚರಿಸುವಂತೆ ಮಾಡಲಾಗುತ್ತಿದೆ.
✓ 1787 ಶಿಕ್ಷಣ ಸಂಸ್ಥೆಗಳನ್ನು ಸಂಪರ್ಕಿಸುವ ರಾಷ್ಟೀಯ ಜ್ಞಾನ ಜಾಲದ (ಎನ್ ಕೆ ಎನ್) ಆಧುನೀಕರಣ
✓ ಡಿಜಿಲಾಕರ್ ಅಡಿಯಲ್ಲಿ ಡಿಜಿಟಲ್ ದಾಖಲೆ ಪರಿಶೀಲನೆ ಸೌಲಭ್ಯವು ಈಗ MSME ಗಳು ಮತ್ತು ಇತರ ಸಂಸ್ಥೆಗಳಿಗೆ ಲಭ್ಯವಿರುತ್ತದೆ.
✓ 2/3 ಶ್ರೇಣಿಯ / ಹಂತದ ನಗರಗಳಲ್ಲಿ 1200 ನವೋದ್ಯಮಗಳಿಗೆ ಬೆಂಬಲ ನೀಡಲಾಗುವುದು.
✓ ಅರೋಗ್ಯ, ಕೃಷಿ ಮತ್ತು ಸುಸ್ಥಿರ ನಗರಗಳ ಕುರಿತಂತೆ ಕೃತಕ ಬುದ್ಧಿಮತ್ತೆಯಲ್ಲಿ ಉತ್ಕೃಷ್ಟತೆಯ 3 ಕೇಂದ್ರಗಳನ್ನು ಸ್ಥಾಪಿಸಲಾಗುವುದು.
✓ 12 ಕೋಟಿ ಕಾಲೇಜು ವಿದ್ಯಾರ್ಥಿಗಳಿಗೆ ಸೈಬರ್ ಜಾಗೃತಿ ಕೋರ್ಸ್ ಗಳು
✓ ಸಾಧನಗಳ / ಸಲಕರಣೆಗಳ ಅಭಿವೃದ್ಧಿ ಮತ್ತು ರಾಷ್ಟೀಯ ಸೈಬರ್ ಸಮನ್ವಯ ಕೇಂದ್ರದೊಂದಿಗೆ 200 ಕ್ಕೂ ಹೆಚ್ಚು ಸೈಟ ಗಾಲ ಏಕೀಕರಣ ಸೇರಿದಂತೆ ಸೈಬರ್ ಭದ್ರತೆ ಕ್ಷೇತ್ರದಲ್ಲಿ ಹೊಸ ಉಪಕ್ರಮಗಳು.
Tags
Govt.scheme