ಪಡಿತರ ಚೀಟಿಯಲ್ಲಿ ತಿದ್ದುಪಡಿಗೆ ಅವಕಾಶ ನೀಡಿ ಆದೇಶ... ಕೂಡಲೇ ತಿದ್ದುಪಡಿ ಮಾಡಿಕೊಳ್ಳಿ.
ಪಡಿತರ ಚೀಟಿಯಲ್ಲಿರುವ ಕುಟುಂಬದ ಮುಖ್ಯಸ್ಥರ ಹೆಸರು ಬದಲಾವಣೆ ಮತ್ತು ಹೊಸ ಸದಸ್ಯರ ಸೇರ್ಪಡೆಗೆ ಅವಕಾಶ ಮಾಡಿಕೊಟ್ಟು ರಾಜ್ಯ ಸರ್ಕಾರ ಆದೇಶಿಸಿದೆ. ಆದರೆ ಹೊಸ ಪಡಿತರ ಚೀಟಿಗಳನ್ನು ಮುಂದಿನ ಆದೇಶದವರೆಗೆ ಮಂಜೂರ ಮಾಡದಂತೆ ಆದೇಶದಲ್ಲಿ ಸೂಚನೆ ನೀಡಲಾಗಿದೆ.
ಪಡಿತರ ಚೀಟಿ ತಿದ್ದುಪಡಿ ಮತ್ತು ಸೇರ್ಪಡೆಗೆ ಸದ್ಯಕ್ಕೆ ಯಾವುದೇ ಅಂತಿಮ ಗಡುವನ್ನು ನೀಡಲಾಗಿಲ್ಲ. ಆದರೆ ಆಹಾರ ಇಲಾಖೆಯಲ್ಲಿ ಈಗಾಗಲೇ 3,15 ಲಕ್ಷ ಅರ್ಜಿಗಳು ಪರಿಷ್ಕರಣೆಗಾಗಿ ಬಾಕಿಯಿವೆ. ಆಹಾರ ನಿರೀಕ್ಷಕರು ಮೊದಲು ಈ ಎಲ್ಲ ಅರ್ಜಿಗಳನ್ನು ಪರಿಷ್ಕರಣೆ ಮಾಡಲಿದ್ದಾರೆ.ಈಗಾಗಲೇ ಪರಿಷ್ಕರಣೆ ಕಾರ್ಯವು ಆರಂಭಗೊಂಡಿದೆ. ಬಾಕಿ ಇರುವ ಎಲ್ಲಾ ಅರ್ಜಿಗಳ ಪರಿಷ್ಕರಣೆ ಪೂರ್ಣಗೊಂಡ ಬಳಿಕ, ಕುಟುಂಬದ ಮುಖ್ಯಸ್ಥರ ಹೆಸರು ಬದಲಾವಣೆ ಮತ್ತು ಹೊಸ ಸದಸ್ಯರ ಸೇರ್ಪಡೆಗೆ ಅರ್ಜಿಗಳನ್ನು ಆಹ್ವಾನಿಸಲಾಗುವುದು ಎಂದು ಆಹಾರ ಇಲಾಖೆ ತಿಳಿಸಿದೆ.
ಪ್ರಸ್ತುತ ಪಡಿತರ ಚೀಟಿಯಲ್ಲಿನ ಫಲಾನುಭವಿಗಳ ಮಾಹಿತಿಯ ತಿದ್ದುಪಡಿ ಹಾಗೂ ಹೆಚ್ಚುವರಿ ಫಲಾನುಭವಿಗಳ ಹೆಸರನ್ನು ಸೇರ್ಪಡೆ ಮಾಡುವ ಕೆಲಸ ಪೂರ್ಣಗೊಳ್ಳುವವರೆಗೂ ಹೊಸ ಪಡಿತರ ಚೀಟಿ ವಿತರಣೆ ಮಾಡದಂತೆ ಆಹಾರ ಇಲಾಖೆಗೆ ಸರ್ಕಾರ ಆದೇಶಿಸಿದೆ. ಹೀಗಾಗಿ ಕಳೆದ 2019 ರಿಂದ ಈವರೆಗೂ ಹೊಸ ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸಿರುವ ಸುಮಾರು 3 ಲಕ್ಷಕ್ಕೂ ಹೆಚ್ಚು ಕುಟುಂಬಗಳಿಗೆ ಸದ್ಯ ಪಡಿತರ ಚೀಟಿ ಸಿಗುವುದು ಅನುಮಾನ.
ರೇಷನ್ ಕಾರ್ಡ್ ಅಪ್ಡೇಟ್ ಮಾಡಲು ಇಲ್ಲಿದೆ ಲಿಂಕ್ ...
ಆಗಸ್ಟ್ ನ ಅನ್ನಭಾಗ್ಯ ಅಕ್ಕಿ ಹಣ 1 ವಾರದಲ್ಲಿ ಪಾವತಿ
ಡಿಬಿಟಿ ಸಮಸ್ಯೆಯಿಂದ ಹಣ ವರ್ಗಾವಣೆ ತಡ : ಸಚಿವ ಮುನಿಯಪ್ಪ
ಆಂಧ್ರ ತೆಲಂಗಾಣ ಜತೆ ಅಕ್ಕಿ ಖರೀದಿಗೆ ಚರ್ಚೆ