ಸ್ಪೀಡ್ ಪೋಸ್ಟ್ ಲ್ಲಿ ಮನೆ ಬಾಗಿಲಿಗೆ ಬರಲಿದೆ ಡಿಎಲ್, ಆರ್ ಸಿ

ಸ್ಪೀಡ್ ಪೋಸ್ಟ್ ಲ್ಲಿ ಮನೆ ಬಾಗಿಲಿಗೆ ಬರಲಿದೆ ಡಿಎಲ್, ಆರ್ ಸಿ !!




ರಾಜ್ಯದ ಎಲ್ಲಾ 67 ಆರ್ ಟಿ ಓ ಕಚೇರಿಗಳಲ್ಲಿ ಹೊಸ ವ್ಯವಸ್ಥೆ 

ವಾಹನ ಚಾಲನಾ ಅನುಜ್ಞಾ ಪತ್ರ ( ಡಿಎಲ್ ) ಮತ್ತು ವಾಹನ ನೋಂದಣಿ ಪ್ರಮಾಣಪತ್ರ ( ಆರ್ ಸಿ ) ಪಡೆಯಲು ಸಾರ್ವಜನಿಕರು ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿಗೆ ಅಲೆಯುವ ತಾಪತ್ರಯ ತಪ್ಪಿಸುವ ಸಲುವಾಗಿ, ಇನ್ನು ಮುಂದೆ ಅಂಚೆ ಮೂಲಕವೇ ಡಿಎಲ್ ಮತ್ತು ಆರ್ ಸಿ ಯನ್ನು ಸಂಬಂಧಪಟ್ಟವರ ಮನೆಗೆ ತಲುಪಿಸಲಾಗುತ್ತಿದೆ.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸೂಚನೆ ಮೇರೆಗೆ ರಾಜ್ಯ ಸರ್ಕಾರ ಈ ನೂತನ ಕ್ರಮ ಕೈಗೊಂಡಿದೆ. 2021 ರಲ್ಲಿಯೇ ಈ ಕುರಿತಂತೆ ಕೇಂದ್ರ ಸಾರಿಗೆ ಇಲಾಖೆ ಆದೇಶಿಸಿತ್ತು. ಆದರೆ, ಅದನ್ನು ಜಾರಿಗೊಳಿಸಿರಲಿಲ್ಲ. ಇದೀಗ ನೂತನ ವ್ಯವಸ್ಥೆ ಜಾರಿಗೊಳಿಸಲಾಗಿದೆ. ಅದರಂತೆ ಮುದ್ರಿತ ಡಿಎಲ್ ಮತ್ತು ಆರ್ ಸಿ ಗಳನ್ನೂ ಕವರ್ ನಲ್ಲಿ ಹಾಕಿ ಸ್ಪೀಡ್ ಪೋಸ್ಟ್ ಮೂಲಕ ಸಂಬಂಧಪಟ್ಟವರು ನೀಡುವ ವಿಳಾಸಕ್ಕೆ ಕಳುಹಿಸಲಾಗುತ್ತದೆ. ಹೀಗೆ ಮಾಡಲಾಗುವ ಸ್ಪೀಡ್ ಪೋಸ್ಟ್ ಗೆ ಡಿಎಲ್ ಮತ್ತು ಆರ್ ಸಿ ಪಡೆಯುವವರೇ ಹಣ ಪಾವತಿಸಬೇಕಿದೆ.

whatss

ಆನ್ಲೈನ್ ಅರ್ಜಿ ಸಲ್ಲಿಸುವ ಲಿಂಕ್ ....


ಈ ಕುರಿತಂತೆ ಸಾರಿಗೆ ಇಲಾಖೆ ಮತ್ತು ಅಂಚೆ ಇಲಾಖೆ ಶುಕ್ರವಾರ ಒಪ್ಪಂದವನ್ನು ಮಾಡಿಕೊಂಡಿದೆ. ರಾಜ್ಯದ 67 ಆರ್ ಟಿ ಓ ಕಚೇರಿಗಳಲ್ಲೂ ಈ ವ್ಯವಸ್ಥೆ ಇರಲಿದ್ದು, ಸ್ಪೀಡ್ ಪೋಸ್ಟ್ ಮೂಲಕ ಡಿಎಲ್, ಆರ್ ಸಿ ಪಡೆಯುವ ಕುರಿತು ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗುತ್ತದೆ. ಡಿಎಲ್ ಮತ್ತು ಆರ್ ಸಿ ಸಿದ್ಧವಾದ ಬಳಿಕ ಸ್ಪೀಡ್ ಪೋಸ್ಟ್ ಮೂಲಕ ಅದನ್ನು ಕಳುಹಿಸುವ ವ್ಯವಸ್ಥೆಯನ್ನು ಆರ್ ಟಿ ಓ ಕಚೇರಿ ಮಾಡಲಿದೆ. 



ಅರ್ಜಿದಾರರು ಆನ್ ಲೈನ್ ಮೂಲಕ ಸ್ಪೀಡ್ ಪೋಸ್ಟ್ ನಲ್ಲಿ ಕಳುಹಿಸಲಾಗಿರುವ ತಮ್ಮ ದಾಖಲಾತಿ ಎಲ್ಲಿದೆ ಎಂಬುದನ್ನು ಪತ್ತೆ ಮಾಡಿಕೊಳ್ಳಬಹುದಾಗಿದೆ. ಸಾರಿಗೆ ಇಲಾಖೆಯು ಸಂಪರ್ಕ ರಹಿತ ಜನಸ್ನೇಹಿ ಕಾರ್ಯಕ್ರಮ ರೂಪಿಸಿದೆ ಎಂದು ಸಾರಿಗೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.




















ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು