ಇಂದಿನ ದಿನಗಳಲ್ಲಿ ಪ್ರತಿಯೊಬ್ಬರ ಕೈಯಲ್ಲಿ ಸ್ಮಾರ್ಟ್ ಫೋನ್ ಇರುತ್ತದೆ. ಅದರೊಂದಿಗೆ ಬೆಳಿಗ್ಗೆಯಿಂದ ಸಂಜೆಯವರೆಗೆ ಸಾಕಷ್ಟು ಕೆಲಸ ಮಾಡಲಾಗುತ್ತಿದೆ. ಆದರೆ ದಿನಕ್ಕೆ ಎಷ್ಟು ಬಾರಿ ಚಾರ್ಜ್ ಮಾಡುತ್ತಿದ್ದೀರಿ ಎಂದು ಗಮನಿಸಿದ್ದೀರಾ??????
ಒಂದೆಡೆ ಬ್ಯಾಟರ್ ಖಾಲಿಯಾದ ಕಾರಣ ಫೋನ್ ಬಳಸಲಾಗುವುದಿಲ್ಲ, ಆದರೆ ಪದೇ ಪದೇ ಚಾರ್ಜ್ ಮಾಡದೇ ಇರುವುದು ಇದಕ್ಕೆ ಪರಿಹಾರವಾಗಿದೆ. ಒಂದು ವಿಧಾನದ ಪ್ರಕಾರ ಫೋನ್ ಅನ್ನು ಸರಿಯಾಗಿ ಚಾರ್ಜ್ ಮಾಡಿದರೆ, ಆಗ ಬ್ಯಾಟರಿ ಹೆಚ್ಚು ಕಾಲ ಬಾಳಿಕೆ ಬರುತ್ತದೆ. ಅದರ ಬಗ್ಗೆ ಸಂಪೂರ್ಣವಾಗಿ ಈ ಲೇಖನದಲ್ಲಿ ತಿಳಿಸಲಾಗಿದೆ.
ಕೆಲವರು ಫೋನ್ ಚಾರ್ಜ್ ಮಾಡಲು ಹೆಚ್ಚು ಸಮಯ ಕಳೆಯುತ್ತಾರೆ. ಮತ್ತು ಕೆಲವರು ಕಡಿಮೆ ಸಮಯವನ್ನು ಕಳೆಯುತ್ತಾರೆ. ಇತರರು ಪದೇ ಪದೇ ಚಾರ್ಜ್ ಮಾಡುತ್ತಾರೆ. ಇವೆಲ್ಲವೂ ಒಳ್ಳೆಯ ವಿಧಾನಗಳಲ್ಲ. ಅತಿಯಾಗಿ ಚಾರ್ಜ್ ಮಾಡುವುದರಿಂದ ಬ್ಯಾಟರಿ ಹಾಳಾಗಬಹುದು. ಕಡಿಮೆ ಚಾರ್ಜ್ ಮಾಡುವುದರಿಂದ ಬ್ಯಾಟರಿಗೆ ಹಾನಿಯಾಗಬಹುದು. ಹಗಲಿನಲ್ಲಿ ಪದೇ ಪದೇ ಫೋನ್ ಚಾರ್ಜ್ ಮಾಡುವುದು ಕೆಟ್ಟ ಅಭ್ಯಾಸ.
ಹೀಗೆ ಮಾಡುವುದರಿಂದ ಫೋನಿನ ಬ್ಯಾಟರಿಯು ಹಾಳಾಗುತ್ತದೆ. ಆದ್ದರಿಂದ ಫೋನ್ ಅನ್ನು ಸರಿಯಾದ ರೀತಿಯಲ್ಲಿ ಚಾರ್ಜ್ ಮಾಡುವುದು ಅವಶ್ಯಕ.
ಫೋನ್ ಬ್ಯಾಟರಿಯನ್ನು ಚಾರ್ಜ್ ಮಾಡುವ ಸರಿಯಾದ ಮಾರ್ಗಗಳು:
1} ಬ್ಯಾಟರಿ 20% ಕ್ಕಿಂತ ಕಡಿಮೆ ಇದ್ದಾಗ ಚರ್ಗಿನ್ಗ್ ಮಾಡಬೇಕು.
2} ಬ್ಯಾಟರಿ ಸಂಪೂರ್ಣವಾಗಿ ಡಿಸ್ಚಾರ್ಜ್ ಆಗುವವರೆಗೆ ಬಳಸಬೇಡಿ, ಅಂದರೆ ಪೂರ್ತಿ ಖಾಲಿ ಆಗುವ ತನಕ ಬಳಸಬೇಡಿ.
3} ಫೋನ್ ಬ್ಯಾಟರಿಯನ್ನು 80% ಮತ್ತು 100% ನಡುವೆ ಇರಿಸಲು ಪ್ರಯತ್ನಿಸಿ.
4} ಫೋನ್100% ಚಾರ್ಜ್ ಎಡಿಎ ನಂತರ ಚಾರ್ಜರ್ ಅನ್ನು ತೆಗೆದುಹಾಕಬೇಕು.
5} ಕೆಲವರು ರಾತ್ರಿ ಮಲಗುವ ಮುನ್ನ ಚಾರ್ಜ್ ಗೆ ಹಾಕಿ ಬೆಳಗ್ಗೆ ತೆಗೆಯುತ್ತಾರೆ, ಅಂದಿಗೂ ಈ ತಪ್ಪನ್ನು ಮಾಡಬೇಡಿ, ಫೋನ್ ಸಿಡಿಯುವ ಅಥವಾ ಬ್ಯಾಟರಿ ಹಾಳಾಗುವ ಸಾಧ್ಯತೆ ಹೆಚ್ಚು ಅಲ್ಲದೆ ಇದು ಅಪಾಯದ ಅಭ್ಯಾಸ.
6} ಫೋನ್ ಬ್ಯಾಟರಿಯನ್ನು ಆರೋಗ್ಯಕರವಾಗಿಡಲು 20-80 ನಿಯಮವನ್ನು ಅನುಸರಿಸಬಹುದು. ಇದು ಫೋನ್ ಬ್ಯಾಟರಿಗೆ ಹಾನಿಯಾಗದಂತೆ ರಕ್ಷಿಸುತ್ತದೆ. ಬ್ಯಾಟರಿ 20% ಅಥವಾ ಕಡಿಮೆ ಇದ್ದಾಗ ಫೋನ್ ಅನ್ನು ಚಾರ್ಜ್ ಮಾಡಿ ಮತ್ತು 80% ತಲುಪಿದಾಗ ಚಾರ್ಜ್ ಅನ್ನು ತೆಗೆದುಹಾಕಿ.
7} ಫೋನ್ ನ ಬ್ಯಾಟರಿ ದಿನಕ್ಕೆ ಎರಡು ಬಾರಿ 20% ತಲುಪುತ್ತದೆ ಆದ್ದರಿಂದ ಅದನ್ನು ಎರಡು ಬಾರಿ ಚಾರ್ಜ್ ಮಾಡಬೇಕಾಗುತ್ತದೆ. ಇದಕ್ಕಿಂತ ಹೆಚ್ಚಿನ ಚಾರ್ಜ್ ಮಾಡುವ ಅಗತ್ಯವಿಲ್ಲ.
Tags
Social