ಸರ್ವೇ, ಪೋಡಿಗೆ ಪಂಚಾಯತಿಗಳಲ್ಲೇ ಅರ್ಜಿ

ಸರ್ವೇ, ಪೋಡಿಗೆ ಪಂಚಾಯತಿಗಳಲ್ಲೇ ಅರ್ಜಿ
 



      
            ಗ್ರಾಮೀಣ ಜನರು ಭೂಮಾಪನ ಕಂದಾಯ ವ್ಯವಸ್ಥೆ ಮತ್ತು ಭೂ ದಾಖಲೆಗಳ ಇಲಾಖೆಗೆ ಸಂಬಂಧಿಸಿದ ಕಾರ್ಯಗಳಿಗೆ ಇನ್ನು ಮುಂದೆ ಆಯಾ ಗ್ರಾಮದ ಪಂಚಾಯತಿಗಳ ಬಾಪೂಜಿ ಸೇವಾ ಕೇಂದ್ರಗಳಲ್ಲೆ ಅರ್ಜಿ ಸಲ್ಲಿಸಬಹುದು.



ಭೂ ಪರಿವರ್ತನೆ, ತತ್ಕಾಲ್ ಪೋಡಿ, ಹದ್ದುಬಸ್ತು, 11-ಇ ನಕ್ಷೆ ಸೇರಿದಂತೆ ಇಲಾಖೆ ಒದಗಿಸುವ ಸೇವೆಗಳಿಗೆ ಅರ್ಜಿ ಸಲ್ಲಿಸಲು ಇದುವರೆಗೂ ಹೋಬಳಿಮಟ್ಟದ ನಾಡಕಛೇರಿ, ಇಲ್ಲವೇ ತಾಲೂಕು ಕಚೇರಿಗಳಲ್ಲಿನ ಅಟಲ್-ಜಿ ಜನಸ್ನೇಹಿ ಕೇಂದ್ರಗಳಿಗೆ ತೆರಳಬೇಕಿತ್ತು. 


whatss


ಪ್ರತಿ ತಾಲೂಕು ಸುಮಾರು 30 ರಿಂದ 40 ಹಾಗೂ ಹೋಬಳಿಗಳು ಐದಾರು ಗ್ರಾಮ ಪಂಚಾಯತಿಗಳನ್ನು ಒಳಗೊಂಡಿದ್ದು, ಸಾವಿರಾರು ಜನರು ಸೇವೆ ಪಡೆಯಲು ಸರದಿಯಲ್ಲಿ ನಿಲ್ಲುವ ಸ್ಥಿತಿ ಇದೆ. ಬಾಪೂಜಿ ಕೇಂದ್ರಗಳಲ್ಲೇ ಅರ್ಜಿ ಸಲ್ಲಿಕೆಗೆ ಅವಕಾಶ ನೀಡುವುದರಿಂದ ಅನಗತ್ಯ ಅಲೆದಾಟ ತಪ್ಪಲಿದೆ. ಸಮಯ, ವೆಚ್ಚದ ಉಳಿತಾಯವಾಗಲಿದೆ ಎಂದು ಗ್ರಾಮೀಣಾಭಿವೃದ್ಧಿ ಇಲಾಖೆ ವಿವರಿಸಿದೆ.


11-ಇ ನಕ್ಷೆಗೆ ರೂಪಾಯಿ 1,500 ಭೂ ಪರಿವರ್ತನೆಗೆ ಎರಡು ಎಕರೆವರೆಗೂ ರೂಪಾಯಿ 1,500 ನಂತರ ಪ್ರತಿ ಎಕರೆಗೆ ರೂಪಾಯಿ 400 ಹಾಗು ಪೋಡಿಗೆ ರೂಪಾಯಿ 400 ದರ ನಿಗದಿ ಮಾಡಲಾಗಿದೆ.

      

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು