ಅರ್ಹ ಮಹಿಳೆಯರಿಗೆ ಉಚಿತ ಹೊಲಿಗೆ ಯಂತ್ರ ಅರ್ಜಿ ಆಹ್ವಾನ || ಅರ್ಹತೆಗಳೇನು ಹಾಗೂ ಅವಶ್ಯಕ ದಾಖಲೆಗಳಾವುವು? ಇಲ್ಲಿದೆ ಸಂಪೂರ್ಣ ಮಾಹಿತಿ....

ಅರ್ಹ ಮಹಿಳೆಯರಿಗೆ ಉಚಿತ ಹೊಲಿಗೆ ಯಂತ್ರ ಅರ್ಜಿ ಆಹ್ವಾನ || ಅರ್ಹತೆಗಳೇನು ಹಾಗೂ ಅವಶ್ಯಕ ದಾಖಲೆಗಳಾವುವು? ಇಲ್ಲಿದೆ ಸಂಪೂರ್ಣ ಮಾಹಿತಿ....



  
      ನಮಸ್ಕಾರ ಸ್ನೇಹಿತರೆ....

ಇವತ್ತಿನ ಈ ಲೇಖನದಲ್ಲಿ ನಾವು ತಿಳಿಸುತ್ತಿರುವುದೇನೆಂದರೆ ಅದುವೇ  2023-24 ನೇ ಸಾಲಿನಲ್ಲಿ ಉಚಿತವಾಗಿ ಹೊಲಿಗೆ ಯಂತ್ರ ಹಾಗೂ ಪವರ್ ಟೂಲ್ಸ್ ವಿತರಿಸುವ ಸಂಬಂಧ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವ ಕುರಿತಾಗಿದೆ. ಸಂಪೂರ್ಣ ಮಾಹಿತಿ ಓದಿ ನೀವು ಕೂಡ ಅರ್ಜಿ ಸಲ್ಲಿಸಿ.
ಪ್ರಸಕ್ತ ಸಾಲಿನ ಜಿಲ್ಲೆಯ ಗ್ರಾಮಾಂತರ ಪ್ರದೇಶದ ವೃತ್ತಿನಿರತ ಗ್ರಾಮೀಣ ಕುಶಲಕರ್ಮಿ/ಗುಡಿ ಕೈಗಾರಿಕೆಯಲ್ಲಿ ತೊಡಗಿರುವ ಅಭರ್ತಿಗಳು ತಮ್ಮ ಕಸುಬನ್ನು ಮುಂದುವರೆಸಿಕೊಂಡು ಹೋಗಲು ಇಲಾಖಾ ಸೌಲಭ್ಯವನ್ನು ಪಡೆಯಲು ಇಚ್ಛಿಸಿದ್ದಲ್ಲಿ, ಅನುಬಂಧದಲ್ಲಿರುವ ಮಾಹಿತಿಯಂತೆ ಸಂಬಂಧಪಟ್ಟ ಎಲ್ಲಾ ದಾಖಲಾತಿಗಳನ್ನು mandya.nic.in ವೆಬ್ ಸೈಟ್ ನಲ್ಲಿ ದಿನಾಂಕ 10-08-2023 ರಿಂದ 10-10-2023 ರೊಳಗೆ ಅಪ್ಲೋಡ್ ಮಾಡಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೋರಿದೆ.
ಹೆಚ್ಚಿನ ಮಾಹಿತಿಗಾಗಿ ಸಂಬಂಧಪಟ್ಟ ತಾಲೂಕು ಕೈಗಾರಿಕಾ ವಿಸ್ತರಣಾಧಿಕಾರಿಗಳು/ಉಪ ನಿರ್ದೇಶಕರು ಕಛೇರಿ, ಗ್ರಾಮೀಣ ಕೈಗಾರಿಕೆಗಳು, ಮಂಡ್ಯ ಇಲ್ಲಿ ಸಂಪರ್ಕಿಸುವುದು.

ಅರ್ಜಿ ಸಲ್ಲಿಕೆಯ ಲಿಂಕ್ ...


ಸದರಿ ಪ್ರಕಟಣೆಯನ್ನು ತಮ್ಮ ಇಲಾಖೆಯ ಮುಖಾಂತರ ರಾಜ್ಯ ಮಟ್ಟದ ಹಾಗೂ ಸ್ಥಳೀಯ ಕನ್ನಡ ದಿನ ಪತ್ರಿಕೆಯಲ್ಲಿ ಉಚಿತವಾಗಿ ತಮ್ಮನ್ನು ಕೋರಲಾಗಿದೆ.


whatss


ಯೋಜನೆ ವಿವರ :

ವೃತ್ತಿಪರ ಗ್ರಾಮೀಣ ಕುಶಲಕರ್ಮಿಗಳಿಗೆ ಉಚಿತವಾಗಿ ಸುಧಾರಿತ ಉಪಕರಣ ಸರಬರಾಜು ಯೋಜನೆಯಡಿ ವಿದ್ಯುತ್ ಚಾಲಿತ ಹೊಲಿಗೆಯಂತ್ರ ಮತ್ತು ಮರಗೆಲಸ, ಗಾರೆಕೆಲಸ, ಕ್ಷೌರಿಕ ಹಾಗೂ ಧೋಬಿ ಉಪಕರಣಗಳನ್ನು ಪಡೆಯುವವರು.

ಅರ್ಜಿಯೊಂದಿಗೆ ಸಲ್ಲಿಸಲು ಬೇಕಾದ ದಾಖಲಾತಿಗಳು :

1ಪಾಸ್ಪೋರ್ಟ್ ಗಾತ್ರದ ಭಾವಚಿತ್ರ 

2.  ಜಾತಿ ಪ್ರಮಾಣ ಪತ್ರ 

3.  ಹೊಲಿಗೆ ತರಬೇತಿ ಪಡೆದ ಪ್ರಮಾಣಪತ್ರ 

4.  ರೇಷನ್ ಕಾರ್ಡ್ / ವೋಟರ್ ಐಡಿ ಹೊಂದಿದ್ದಲ್ಲಿ ಪ್ರತಿ ಲಗತ್ತಿಸುವುದು.

5.  ಮರಗೆಲಸ, ಗಾರೆಕೆಲಸ, ಕ್ಷೌರಿಕ ಹಾಗೂ ಧೋಬಿ ಕಸುಬಿನ ಕುಶಲಕರ್ಮಿಯಾಗಿದ್ದಲ್ಲಿ ಆಯಾ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಯವರಿಂದ ಧೃಢೀಕರಣ ಪತ್ರ/ಕಾರ್ಮಿಕ ಇಲಾಖೆಯಿಂದ ವಿತರಿಸಿದ ಕುಶಲಕರ್ಮಿ ಗುರುತಿನ ಚೀಟಿ ಪ್ರತಿ.

  


1 ಕಾಮೆಂಟ್‌ಗಳು

ನವೀನ ಹಳೆಯದು