ಸರ್ಕಾರಿ ಶಾಲೆಗಳಲ್ಲಿಯೂ ಆರಂಭವಾಗಲಿವೆ ಎಲ್ ಕೆಜಿ, ಯುಕೆಜಿ: 262 ಶಾಲೆಗಳಲ್ಲಿ ಆರಂಭಕ್ಕೆ ಸಿಕ್ತು ಗ್ರೀನ್ ಸಿಗ್ನಲ್ !!!!!

ಸರ್ಕಾರಿ ಶಾಲೆಗಳಲ್ಲಿಯೂ ಆರಂಭವಾಗಲಿವೆ ಎಲ್ ಕೆಜಿ, ಯುಕೆಜಿ: 262 ಶಾಲೆಗಳಲ್ಲಿ ಆರಂಭಕ್ಕೆ ಸಿಕ್ತು ಗ್ರೀನ್ ಸಿಗ್ನಲ್ !!!!!




  

ಕರ್ನಾಟಕದ 262 ಸರ್ಕಾರಿ ಶಾಲೆಗಳು ಈ ವರ್ಷದ ಸೆಪ್ಟೆಂಬರ್ ನಿಂದ 4-5 ವರ್ಷದ ಮಕ್ಕಳಿಗಾಗಿ ಪೂರ್ವ ಪ್ರಾಥಮಿಕ ವಿಭಾಗಳನ್ನು ಪ್ರಾರಂಭಿಸಲಿವೆ ಎಂದು ವರದಿಯಾಗಿದೆ. ಶಾಲೆಗಳಲ್ಲಿ ಎಲ್ ಕೆಜಿ ಹಾಗೂ ಯುಕೆಜಿ ಪೋಷಕರಿಂದ ಬೇಡಿಕೆಯು ಹೆಚ್ಚಾಗಿದೆ. ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ, ಅಂಗನವಾದಿಗಳು ಮಕ್ಕಳ ಶೈಕ್ಷಣಿಕ ಅಗತ್ಯತೆಗಳನ್ನು ಪೂರೈಸುತ್ತಿಲ್ಲ ಎಂಬ ಆರೋಪಗಳಿವೆ. ಇವುಗಳ ಮಧ್ಯೆಯೇ ಸರ್ಕಾರಿ ಶಾಲೆಗಳಲ್ಲಿ ಎಲ್ ಕೆಜಿ, ಯುಕೆಜಿ ಆರಂಭಿಸುವ ಕುರಿತು ವರದಿಯಾಗಿದೆ. 

ಇದು ಸ್ವಾಗತಾರ್ಹ ಕ್ರಮವಾಗಿದೆ. ದುಡಿಯುವ ಮಹಿಳೆಯರಿಗೆ, ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ, ಮಕ್ಕಳನ್ನು ಬಿಡಲು ಸಂಘಟಿತ ಸ್ಥಳಗಳಲ್ಲಿದವರಿಗೆ ಇದು ಅತ್ಯಂತ ಮುಖ್ಯವಾಗಿದೆ. 5-6 ವರ್ಷ ವಯೋಮಾನ ಕೂಡ ಮಕ್ಕಳ ಬೆಳವಣಿಗೆಯಲ್ಲಿ ಪ್ರಮುಖವಾಗಿದೆ. ಈ ಶಿಕ್ಷಕರು ಅರ್ಹತೆ ಏನು ಎಂಬುದು ಸದ್ಯದ ಪ್ರಶ್ನೆಯಾಗಿದೆ ಎಂದು ಕರ್ನಾಟಕ ಪ್ರೀಸ್ಕೂಲ್ ಕೌನ್ಸಿಲ್ ಕಾರ್ಯದರ್ಶಿ ಪೃಥ್ವಿ ಬನವಾಸಿ ಅವರು ಹೇಳಿರುವುದನ್ನು ಟೈಮ್ಸ್ ಆಫ್ ಇಂಡಿಯಾ ವರದಿ ಉಲ್ಲೇಖಿಸಿದೆ.

                ಪ್ರಸ್ತುತ 276 ಕರ್ನಾಟಕ ಪಬ್ಲಿಕ್ ಸ್ಕೂಲ್ ಗಳು ಸೇರಿದಂತೆ ಸುಮಾರು 900 ಶಾಲೆಗಳು ಎಲ್ ಕೆಜಿ ಹಾಗೂ ಯುಕೆಜಿ ಒಳಗೊಂಡಿವೆ. ಶಾಲಾ ಅಭಿವೃದ್ಧಿ ಮೇಲ್ವಿಚಾರಣಾ ಸಮಿತಿಗಳು 664 ಶಾಲೆಗಳಲ್ಲಿ ಪೂರ್ವ ಪ್ರಾಥಮಿಕ ತರಗತಿಗಳನ್ನು ನಡೆಸುತ್ತಿದೆ.



whatss

ಪ್ರಾಜೆಕ್ಟ್ ಅನುಮೋದನ ಮಂಡಳಿಯು ಬೆಂಗಳೂರು ದಕ್ಷಿಣದಲ್ಲಿ 10 ಮತ್ತು ಬೆಂಗಳೂರು ಉತ್ತರದಲ್ಲಿ ನಾಲ್ಕು ಸೇರಿದಂತೆ 262 ಶಾಲೆಗಳಲ್ಲಿ ಎಲ್ ಕೆಜಿ ಹಾಗೂ ಯುಕೆಜಿ ಆರಂಭಿಸಲು ಸಮ್ಮತಿ ನೀಡಿದೆ. ಶಾಲಾ ಅಭಿವೃದ್ಧಿ ಮೇಲ್ವಿಚಾರಣಾ ಸಮಿತಿಗಳು 664 ಶಾಲೆಗಳಲ್ಲಿ ಪೂರ್ವ ಪ್ರಾಥಮಿಕ ತರಗತಿಗಳನ್ನು ನಡೆಸುತ್ತಿದೆ. ಪ್ರತಿ ತರಗತಿಯು ಕನಿಷ್ಠ 20ಮತ್ತು ಗರಿಷ್ಟ 30 ಮಕ್ಕಳನ್ನು ದಾಖಲಾತಿ ಮಾಡಿಕೊಳ್ಳುವ ಸಾಮರ್ಥ್ಯ ಹೊಂದಿರಬೇಕು. ಎಸ್ ಡಿಎಂಸಿ ಗಳು 10 ತಿಂಗಳ ಅವಧಿಗೆ ಶಿಕ್ಷಕರನ್ನು ಮತ್ತು ಆಯಗಳನ್ನು ತಿಂಗಳಿಗೆ ಕ್ರಮವಾಗಿ ರೂ 7,000 ಮತ್ತು ರೂ 5,000 ಪಾವತಿಸಿ ನೇಮಕ ಮಾಡುತ್ತಿವೆ ಎಂದು ಟೈಮ್ಸ್ ಆಫ್ ಇಂಡಿಯಾ' ವರದಿ ಮಾಡಿದೆ.

ಅಂಗನವಾದಿಗಳು ಲಭ್ಯವಿದ್ದರೂ, ಅವುಗಳಲ್ಲಿ ಶಿಕ್ಷಣಕ್ಕೆ ಸಂಬಂಧಿಸಿದ ಅನೇಕ ಕೊರತೆಗಳಿವೆ. ಇಲ್ಲಿ, ನಾವು ತರಬೇತಿ ಪಡೆದ ಶಿಕ್ಷಕರು, ವೈಜ್ಞಾನಿಕ ಪಠ್ಯಕ್ರಮವನ್ನು ವಿನ್ಯಾಸಗೊಳಿಸದ್ದೇವೆ ಅಮ್ತ್ತು ಉತ್ತಮ ಮೂಲಸೌಕರ್ಯವನ್ನು ಹೊಂದಿದ್ದೇವೆ, ಇದು ಪೋಷಕರಿಗೆ ದೊಡ್ಡ ಆಕರ್ಷಣೆಯಾಗಿದೆ ಎಂದು ಶಿಕ್ಷಣಾಧಿಕಾರಿ ತಿಳಿಸಿರುವುದಾಗಿ ವರದಿ ಉಲ್ಲೇಖಿಸಿದೆ.


  

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು