ರೈತರು ಕಡ್ಡಾಯವಾಗಿ ಈ ಐಡಿ ಮಾಡಿಸಲೇಬೇಕು ! ಇದನ್ನು ನಿಮ್ಮ ಮೊಬೈಲ್ ನಲ್ಲಿ ಹೇಗೆ ಪಡೆಯುವುದು?
ಈ ತಂತ್ರ್ಯಾಂಶಕ್ಕೆ ಪ್ರುಟ್ಸ್ ಎಂದು ಕರೆಯಲಾಗುತ್ತದೆ. " Fruits " ಅಂದರೆ Farmer Registration and Unified beneficiary inform Tion System ಎಂದರ್ಥ. ಈ ತಂತ್ರಾಶದಲ್ಲಿ ಒಬ್ಬ ರೈತ ಹೆಸರಿನಲ್ಲಿರುವ ಎಲ್ಲಾ ಜಮೀನಿನ ಸರ್ವೇ ನಂಬರ್ ವಿವರ ಮತ್ತು ಅವರ ಬ್ಯಾಂಕ್ ಖಾತೆಯ ವಿವರವನ್ನು ದಾಖಲಾತಿ ಮಾಡಿದಾಗ "FID " ನಂಬರ್ ಸೃಜನೆಯಾಗುತ್ತದೆ.
ಬೆಳೆ ವಿಮೆಗೆ ಅರ್ಜಿ ಸಲ್ಲಿಸಲು ಮತ್ತು ಬೆಳೆ ಸಾಲ ಪಡೆಯಲು ಹಾಗೂ ಕೃಷಿ/ ತೋಟಗಾರಿಕೆ/ ರೇಷ್ಮೆ ಇಲಾಖೆಗಳಿಂದ ಯಾವುದೇ ಸರ್ಕಾರೀ ಸೌಲಭ್ಯ ಪಡೆಯಲು ಪ್ರತಿಯೊಬ್ಬ ರೈತರು FID ನಂಬರ್ ಅನ್ನು ಅಗತ್ಯವಾಗಿ ಒದಗಿಸಬೇಕಾಗುತ್ತದೆ. ಏನಿದು FID ಸಂಖ್ಯೆ ? ಎಲ್ಲಿ ಪಡೆಯಬೇಕು ? ಪ್ರುಟ್ಸ್ ತಂತ್ರಾಶದ ಮೂಲಕ FID ನಂಬರ್ ಪಡೆಯುವುದು ಹೇಗೆ? FID ನಂಬರ್ ಕುರಿತು ಸಂಪೂರ್ಣ ಮಾಹಿತಿಯನ್ನು ಈ ಅಂಕಣದಲ್ಲಿ ವಿವರಿಸಲಾಗಿದೆ.
ರಾಜ್ಯದ ಕೃಷಿ ಇಲಾಖೆಯಿಂದ ರೈತರ ಜಮೀನಿನ ವಿವರ ಮತ್ತು ಬ್ಯಾಂಕ್ ಖಾತೆಯ ವಿವರವನ್ನು ಡಿಜಿಟಲ್ ತಂತ್ರಾಶದಲ್ಲಿ ಸಂಗ್ರಹಣೆ ಮಾಡಲಾಗಿದ್ದು ಪ್ರತಿಯೊಬ್ಬರ ರೈತರಿಗೂ ವಿವಿಧ ಬಗೆಯ ಗುರುತಿನ ಸಂಖ್ಯೆಯನ್ನು ಸಹ ನೀಡಲಾಗಿರುತ್ತದೆ.
ನಿಮ್ಮ ಮೊಬೈಲ್ ನಲ್ಲಿ FID ನಂಬರ್ ಪಡೆಯುವ ವಿಧಾನ :
ಈಗಾಗಲೇ ರಾಜ್ಯ ಶೇ. ೯೦ ಕ್ಕಿಂತ ಹೆಚ್ಚಿನ ರೈತರ ವಿವರವು ಪ್ರುಟ್ಸ್ ತಂತ್ರಾಶದಲ್ಲಿ ನೋಂದಾವಣೆಯಾಗಿದ್ದು, ಇವರಿಗೆ " FID Number " ಸೃಜನೆಯಾಗುತ್ತದೆ. ಇವರು ತಮ್ಮ ಈ ನಂಬರ್ ಅಲ್ಲಿ ತಿಳಿದುಕೊಳ್ಳಲು ಈ ಲಿಂಕ್ https://fruitspmk.karnataka.gov.in/MISReport/GetDetailsByAadhaar.aspx ಮೇಲೆ ಕ್ಲಿಕ್ ಮಾಡಿ ತಮ್ಮ ೧೨ ಅಂಕಿಯ ಆಧಾರ್ ನಂಬರ್ ನಮೂದಿಸಿ "serarch " ಬಟನ್ ಮೇಲೆ ಕ್ಲಿಕ್ ಮಾಡಿದರೆ ಸಾಕು ತಮ್ಮ "FID" ಸಂಖ್ಯೆ ಗೋಚರಿಸುತ್ತದೆ.
FID ನಂಬರ್ ಯಾವುದಕ್ಕೆ ಬೇಕಾಗುತ್ತದೆ ?
ಈ ಸಂಖ್ಯೆಯನ್ನು ಬೆಳೆ ವಿಮೆ ಅರ್ಜಿ ಸಲ್ಲಿಸಲು, ಬೆಳೆ ಸಾಲ ವಿತರಿಸಲು, ಕೃಷಿ/ ತೋಟಗಾರಿಕೆ/ ರೇಷ್ಮೆ ಇಲಾಖೆಯಿಂದ ಯಾವುದೇ ಸೌಲಭ್ಯ ಪಡೆಯಲು ಅಗತ್ಯವಾಗಿ ಒದಗಿಸಬೇಕಾಗುತ್ತದೆ.
FID ನಂಬರ್ ನ ಇತರೆ ಮಾಹಿತಿ ಪಡೆಯುವ ವಿಧಾನ :
ಈ FID ನಂಬರ್ ನಲ್ಲಿ ನಮೂದಿಸಿರುವ ಜಮೀನಿನ ಸರ್ವೇ ನಂಬರ್ ಯಾವುವು? ಬ್ಯಾಂಕ್ ಖಾತೆ ವಿವರ ಮತ್ತು ರೈತರ ಹೆಸರು ವಿಳಾಸ ಇತ್ಯಾದಿ ಮಾಹಿತಿಯನ್ನು ತಿಳಿಯಲು ಈ ಕೆಳಗಿನ ವಿಧಾನ ಅನುಸರಿಸಿ.
ಈ ಲಿಂಕ್ https://fruits.karnataka.gov.in/OnlineuserLogin.aspx ಮೇಲೆ ಕ್ಲಿಕ್ ಮಾಡಿ ಅರ್ಜಿದಾರರ ಮೊಬೈಲ್ ಸಂಖ್ಯೆಯ ಮೂಲಕ ನೊಂದಣಿ ಮಾಡಿಕೊಂಡು ಅವರ ಆಧಾರ್ ನಂಬರ್ ಮತ್ತು ಆಧಾರ್ ನಲ್ಲಿರುವಂತೆ ಹೆಸರನ್ನು ನಮೂದಿಸಿ ಅವರ ಹೆಸರಿನಲ್ಲಿ ದಾಖಲಿಸಲಾದ "FID" ವಿವರವನ್ನು ತಿಳಿಯಬಹುದು.
FID ಗೆ ಹೊಸ ಅರ್ಜಿ ಮತ್ತು ಬಿಟ್ಟು ಹೋದ ಸರ್ವೇ ನಂಬರ್ ಸೇರಿಸಲು ಎಲ್ಲಿ ಸಲ್ಲಿಸಬೇಕು ?
ನಿಮ್ಮ ಹೋಬಳಿಯ ರೈತ ಸಂಪರ್ಕ ಕೇಂದ್ರದಲ್ಲಿ ಹೊಸ ಅರ್ಜಿ ಮತ್ತು FID ಸಂಖ್ಯೆಯಲ್ಲಿ ಬಿಟ್ಟು ಹೋಗಿರುವ ಸರ್ವೇ ನಂಬರ್ ಗಳನ್ನು ಸೇರ್ಪಡೆ ಮಾಡಿಕೊಳ್ಳಬಹುದು.
ಪ್ರುಟ್ಸ್ ( FRUITS ) ತಂತ್ರಾಶದ ಕುರಿತು ಒಂದಿಷ್ಟು ಮಾಹಿತಿ ಹೀಗಿದೆ.
Fruits / FID Number : ಪ್ರುಟ್ಸ್ ಎಂದರೇನು ಮತ್ತು ಅದನ್ನು ಹೇಗೆ ಬಳಸಲಾಗುತ್ತದೆ ?
ಪ್ರುಟ್ಸ್ ( ರೈತ ನೋಂದಣಿ ಮತ್ತು ಏಕೀಕೃತ ಫಲಾನುಭವಿ ಮಾಹಿತಿ ವ್ಯವಸ್ಥೆ - Farmer Registration and Unified beneficiary inform Tion System - FRUITS ) ಅಂತರ್ಜಾಲ ಆಧಾರಿತ ತಂತ್ರಾಶಯಗಿದೆ. ಇದು ರೈತರಿಗೆ ರಾಜ್ಯ ಸರ್ಕಾರದಿಂದ ಸವಲತ್ತುಗಳನ್ನು ಪಡೆಯಲು ಆಸಕ್ತಿಯಿರುವ ರೈತರು / ವ್ಯಕ್ತಿಯ ನೋಂದಣಿಗೆ ಸಹಕಾರಿಯಾಗಿದೆ. ಅಲ್ಲದೆ ಫಲಾನುಭವಿಗಳು ಪಡೆಯುವ ಪ್ರಯೋಜನಗಳ ವಿವರಗಳನ್ನು ಪ್ರುಟ್ಸ್ ತಂತ್ರಾಶದಲ್ಲಿ ದಾಖಲಿಸಲಾಗುತ್ತದೆ. ಆದ್ದರಿಂದ ಇದು ರೈತರು, ಭೂಮಿ ಮತ್ತು ಅವರಿಗೆ ವಿಸ್ತರಿಸಿದ ಪ್ರಯೋಜನಗಳ ಸಮಗ್ರ ವಿವರಗಳನ್ನೊಳಗೊಂಡ ಏಕೀಕೃತ ದತ್ತಾಂಶವಾಗಿರುತ್ತದೆ.
ರೈತರು ಸ್ವಯಂ ನೋಂದಾಯಿಸಿಕೊಳ್ಳಬಹುದೇ ?
ಹೌದು. ಜಮೀನು ಹೊಂದಿರುವವರು ಈ ಲಿಂಕ್ https://fruits.karnataka.gov.in/OnlineuserLogin.aspx ಮೇಲೆ ಕ್ಲಿಕ್ ಮಾಡಿ ಮುಖಪುಟದ ಎಡಬದಿಯಲ್ಲಿ ಕಾಣುವ " ನಾಗರೀಕ ಪ್ರವೇಶ ( Citizen Login ) " ಆಯ್ಕೆಗೆ ಭೇಟಿ ನೀಡಿ ಅವಶ್ಯ ದಾಖಲೆಗಳನ್ನು ಒದಗಿಸಿ ಸ್ವಯಂ ನೋಂದಣಿ ಮಾಡುವ ಮೂಲಕ ನೋಂದಾಯಿಸಿಕೊಳ್ಳಬಹುದು. ಆಧಾರ್ ಪ್ರಕಾರ ಆಧಾರ್ ಸಂಖ್ಯೆ ಮತ್ತು ಹೆಸರನ್ನು ನಮೂದಿಸಿ ನಂತರ ತಮ್ಮ ಹೆಸರಿನಲ್ಲಿರುವ ಜಮೀನಿನ ವಿವರಗಳನ್ನು ಭೂಮಿ ತಂತ್ರಾಶದ ಮೂಲಕ ಪಡೆದು ದಾಖಲಿಸಬೇಕಾಗುತ್ತದೆ. ಮತ್ತು ಅನುಮೋದನಾ ಇಲಾಖೆಯನ್ನು ಆಯ್ಕೆ ಮಾಡಿಕೊಳ್ಳಬೇಕು. ಇದಕ್ಕೆ ಸಂಬಂಧಪಟ್ಟ ಅನುಮೋದನಾ ಅಧಿಕಾರಿಯು ಅನುಮೋದಿಸಿದ ನಂತರ ನೋಂದಣಿ ಪೂರ್ಣಗೊಳ್ಳುತ್ತದೆ. ಮೊಬೈಲ್ ಸಂಖ್ಯೆಯನ್ನು ಬಳಕೆದಾರರ ID ಯಾಗಿ ಬಳಸಬೇಕು. ಪ್ರವೇಶ ( Login ) ಒಟಿಪಿ ಧೃಸಿಕರಣ ಆಧರಿಸಿದೆ. ಒಟಿಪಿಯನ್ನು ಆಧಾರ್ ಆಧಾರಿತ ಮೊಬೈಲ್ಗೆ ಕಳುಹಿಸಲಾಗುತ್ತದೆ.
ಜಮೀನು ಜಂಟಿ ಮಾಲೀಕತ್ವದ ರೈತರನ್ನು ಪ್ರುಟ್ಸ್ ತಂತ್ರಾಶದಲ್ಲಿ ನೋಂದಾಯಿಸಿಕೊಳ್ಳಬಹುದೇ ?
ನೋಂದಣಿ ಮಾಡಿಕೊಳ್ಳಬಹುದು, ಜಂಟಿ ಮಾಲೀಕತ್ವದ ದಾಖಲೆಗಳನ್ನು (RTC) ಭೂಮಿಯಲ್ಲಿ ಏಕ ದಾಖಲೆಯಾಗಿ ಪರಿಗಣಿಸಲಾಗುತ್ತದೆ. ಆದಾಗ್ಯೂ ಸರ್ಕಾರದ ಸವಲತ್ತುಗಳನ್ನು ಪ್ರತಿಯೊಬ್ಬ ಅರ್ಹ ಫಲಾನುಭವಿಗಳಿಗೆ ತಲುಪಿಸುವ ನಿಟ್ಟಿನಲ್ಲಿ ಜಂಟಿ ಮಾಲೀಕರು ಈ ಕೆಳಗಿನ ಮೂರೂ ಪ್ರಕಾರಗಳಲ್ಲಿ ಯಾವುದಾದರು ಒಂದು ಪ್ರಕಾರದಲ್ಲಿ ನೋಂದಾಯಿಸಿಕೊಳ್ಳಲು ಪ್ರುಟ್ಸ್ ತಂತ್ರಾಶದಲ್ಲಿ ಅವಕಾಶ ಕಲ್ಪಿಸಲಾಗಿದೆ.
(A) ಜಂಟಿ ಮಾಲೀಕರು ಒಟ್ಟಾಗಿ ನೋಂದಾಯಿಸಿಕೊಳ್ಳಬಹುದು. ಹೀಗೆ ನೋಂದಾಯಿಸಿದಲ್ಲಿ ಒಬ್ಬರ ಹೆಸರಿನಲ್ಲಿ ನೋಂದಾಯಿಸಿಕೊಳ್ಳಬಹುದು.
(B) ಸ್ವಯಂ ಘೋಷಣೆಯೊಂದಿಗೆ, ಘೋಷಣೆಯ ಪ್ರಕಾರ ಪ್ರತಿ ಮಾಲೀಕರಿಗೆ ಭೂ ವ್ಯಾಪ್ತಿಯನ್ನು ದಾಖಲಿಸಿ ಎಲ್ಲಾ ಜಂಟಿ ಮಾಲೀಕರು ಪ್ರತ್ಯೇಕವಾಗಿ ನೋಂದಾಯಿಸಿಕೊಳ್ಳಬಹುದು.
(C) ಪ್ರತಿ ಮಾಲೀಕರಿಗೆ ಸಮಾನ ಪಾಲು ಹೊಂದಿರುವಂತೆ ಭೂ ವ್ಯಾಪ್ತಿಯನ್ನು ದಾಖಲಿಸಿ ಪ್ರತಿ ಒಬ್ಬ ಜಂಟಿ ಮಾಲೀಕರು ಪ್ರತ್ಯೇಕವಾಗಿ ನೋಂದಾಯಿಸಿಕೊಳ್ಳಬಹುದು.
ಪ್ರುಟ್ಸ್ ತಂತ್ರಾಶದಲ್ಲಿ ನೋಂದಾಯಿಸಲು ಬೇಕಾಗುವ ದಾಖಲಾತಿಗಳು :
👉 ಆಧಾರ್ ಕಾರ್ಡ್
👉 ಬ್ಯಾಂಕ್ ಪಾಸ್ ಬುಕ್
👉 ಪಹಣಿ / ಉತಾರ್ / RTC
👉 ಪರಿಶಿಷ್ಠ ಜಾತಿ ಮತ್ತು ಪರಿಶಿಷ್ಠ ಪಂಗಡ ಪ್ರಮಾಣ ಪತ್ರ ( ಈ ವರ್ಗಕ್ಕೆ ಸೇರಿ ರೈತರಿಗೆ ಮಾತ್ರ )