ರೇಷನ್ ಕಾರ್ಡ್ ಅಪ್ಡೇಟ್ ಮಾಡದಿದ್ದರೆ ಗೃಹಲಕ್ಷ್ಮಿ ಹಣ ಸಿಗಲ್ಲ!!! ಇಲ್ಲಿದೆ ಅಪ್ಡೇಟ್ ಮಾಡುವ ಸರಳ ವಿಧಾನ :
ರೇಷನ್ ಕಾರ್ಡ್ ಅಪ್ಡೇಟ್ ಆಗದ ಹೊರತು ಗೃಹಲಕ್ಷ್ಮಿ ಯೋಜನೆಯ ಹಣ ಸಿಗುವುದಿಲ್ಲ. ಇದೀಗ ಸರ್ಕಾರ ತಿಳಿಸಿರುವ ಮಾಹಿತಿ .................
ಕುಟುಂಬದ ಯಜಮಾನಿಗೆ ಪ್ರತಿ ತಿಂಗಳು ತಲಾ 2,000/- ರೂಪಾಯಿ ನೀಡುವ ಗೃಹಲಕ್ಷ್ಮಿ ಯೋಜನೆ ನೋಂದಣಿಗೆ ರಾಜ್ಯಾದ್ಯಂತ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಅಂತ್ಯೋದಯ, ಬಿಪಿಎಲ್ ಕಾರ್ಡ್ ಮಾತ್ರವಲ್ಲ. ಎಪಿಎಲ್ ಪಡಿತರ ಚೀಟಿ ಹೊಂದಿದವರಿಗೂ ಈ ಸೌಲಭ್ಯ ಕಲ್ಪಿಸಲಾಗುತ್ತಿದೆ.
ಆದರೆ ಒಂದು ಹಂತಕ್ಕೆ ಮಾಧ್ಯಮ ವರ್ಗದವರೇ ಹೆಚ್ಚಾನೆಚ್ಚು ಎಪಿಎಲ್ ಕಾರ್ಡ್ ಹೊಂದಿದ್ದು, ಇವುಗಳಲ್ಲಿ ಅನೇಕ ಕಾರ್ಡ್ ಗಳು ಅಮಾನತ್ತುಗೊಂಡಿವೆ. ಬಹಳಷ್ಟು ರದ್ದಾಗಿ ಕೂಡ. ಇಂತಹ ಕಾರ್ಡ್ ಹೊಂದಿರುವ ಕುಟುಂಬದ ಯಜಮಾನಿಗೆ ಎಪಿಎಲ್ ಕಾರ್ಡ್ ಅಪ್ಡೇಟ್ ಮಾಡದ ಹೊರತು ಗೃಹ ಲಕ್ಷ್ಮಿ ಯೋಜನೆಯ ಹಣ ಸಿಗುವುದಿಲ್ಲ.
25 ಲಕ್ಷ ಕುಟುಂಬಗಳು :
ಆಹಾರ ಇಲಾಖೆಯ ಮಾಹಿತಿ ಪ್ರಕಾರ, ರಾಜ್ಯದಲ್ಲಿ ಸುಮಾರು 25 ಲಕ್ಷ ಎಪಿಎಲ್ ಕಾರ್ಡ್ ಹೊಂದಿರುವ ಕುಟುಂಬಗಳಿದ್ದು, ಅಂದಾಜು ೮೬ ಲಕ್ಷ ಸದಸ್ಯರಿದ್ದಾರೆ. ಇದರಲ್ಲಿ ಹಲವಾರು ಈಗ ತಾಲೂಕು ಕಚೇರಿಗಳಿಗೆ ಅಪ್ಡೇಟ್ ಮಾಡಲು ಧಾವಿಸುತ್ತಿದ್ದಾರೆ. ಇನ್ನೂ ಕೆಲವರಿಗೆ ಇದರ ಬಗ್ಗೆ ಮಾಹಿತಿಯು ಇಲ್ಲ.
ಅಂತ್ಯೋದಯ ಮತ್ತು ಬಿಪಿಎಲ್ ಕಾರ್ಡ್ ಗಳಲ್ಲೂ ಕೆಲ ಫಲಾನುಭವಿಗಳು ಬ್ಯಾಂಕ್ ಖಾತೆ ಸಂಖ್ಯೆ ಹೊಂದಿದ್ದರು, ಅವುಗಳು ಸಕ್ರಿಯವಾಗಿಲ್ಲ. ಈಗ KYC ಮೂಲಕ ಸಕ್ರಿಯಗೊಳಿಸುವ ಪ್ರಕ್ರಿಯೆ ನಡೆದಿದೆ. ಆಹಾರ, ನಾಗರೀಕ ಸರಬರಾಜು ಮತ್ತು ಗ್ರಾಹಕ ವ್ಯವಹಾರ ಅಧಿಕಾರಿಯಾಳು ಎಪಿಎಲ್ ಕಾರ್ಡ್ ಗಳನ್ನು ಕೂಡ ಮತ್ತೆ ಸಕ್ರಿಯಗೊಳಿಸಲು ಸರ್ಕಾರದ ಮಟ್ಟದಲ್ಲಿ ಪರಿಶೀಲಿಸಿ, ಕ್ರಮ ಕೈಗೊಳ್ಳಲಾಗುತ್ತಿದೆ. ಎಂದು ಹೇಳುತ್ತಾರೆ.

ಕಾರ್ಡು ರದ್ದು ಅಥವಾ ಅಮಾನತಾಗಿದ್ದೇಕೆ?
ಸಾಮಾನ್ಯವಾಗಿ ಎಪಿಎಲ್ ಕಾರ್ಡ್ ಹೊಂದಿರುವವರು ಪಡಿತರಕ್ಕಾಗಿ ಕಾರ್ಡ್ ಹೊಂದುವುದು ತುಂಬಾ ವಿರಳ. ಇವರು ವಿಳಾಸ ಗುರುತಿಗಾಗಿ, ಮತ್ತಿತರ ಸೌಲಭ್ಯಗಳಿಗಾಗಿ ಮಾತ್ರ ಕಾರ್ಡ್ ಹೊಂದಿರುತ್ತಾರೆ. ಆದರೆ ಕಾಲಕಾಲಕ್ಕೆ ಅಪ್ಡೇಟ್ ಮಾಡದೇ ಇದ್ದಿದ್ದರಿಂದ ಎಪಿಎಲ್ ಕುಟುಂಬಗಳ KYC ಲಭ್ಯವಾಗಿಲ್ಲ. ಇದರಿಂದಾಗಿ ಈ ಎಲ್ಲ ಕಾರ್ಡುಗಳು ಅಮಾನತುಗೊಂಡಿವೆ. ಹಲವು ರದ್ದು ಕೂಡ ಆಗಿವೆ.
ಗೃಹಲಕ್ಷ್ಮಿ ಯೋಜನೆ ಘೋಷಣೆ ಆಗುತ್ತಿದ್ದಂತೆಯೇ ಎಪಿಎಲ್ ಕಾರ್ಡ್ ಗಳಿಗೆ ಮಹತ್ವ ಬಂದಿದ್ದು, ಸೇವಾ ಕೇಂದ್ರಗಳಿಗೆ ನೋಂದಣಿಗಾಗಿ ಧಾವಿಸುತ್ತಿದ್ದಾರೆ. ಆದರೆ ಅಲ್ಲಿ ರದ್ದುಗೊಂಡಿರುವುದು ಅಥವಾ ಅಮಾನತುಗೊಂಡಿರುವುದನ್ನು ತಿಳಿದು ನಿರಾಶರಾಗುತ್ತಿದ್ದರೆ.
ಅಪ್ಡೇಟ್ ಮಾಡಲು ಅವಕಾಶ :
ಬಹುತೇಕ ಎಪಿಎಲ್ ಕಾರ್ಡ್ ಗಳೇ ಅಮಾನತು ಅಥವಾ ರದ್ದುಗೊಂಡಿರುವುದರಿಂದ ಆಯಾ ಕುಟುಂಬಗಳ ಯಜಮಾನಿಯರು ಹತಾಶರಾಗುವಂತಾಗಿದೆ. ಆದರೆ, ಆ ವರ್ಗದ ಆತಂಕವನ್ನು ದೂರ ಮಾಡುವ ನಿಟ್ಟಿನಲ್ಲಿ ಸರ್ಕಾರ ಎಪಿಎಲ್ ಕಾರ್ಡ್ ಗಳನ್ನು ಆಯಾ ನ್ಯಾಯಬೆಲೆ ಅಂಗಡಿಗಳ ವ್ಯಾಪ್ತಿಯಲ್ಲೇ ಅಪ್ಡೇಟ್ ಮಾಡಲು ಅವಕಾಶ ನೀಡಿದೆ.
ಎಪಿಎಲ್ ಸೇರಿದಂತೆ ಯಾವುದೇ ಕಾರ್ಡ್ ಹೊಂದಿದ್ದರು ಬೆರಳಿನ ಗುರುತು ಮತ್ತು ಆಧಾರ್ ಸಂಖ್ಯೆ, ಮೊಬೈಲ್ ಸಂಖ್ಯೆಯೊಂದಿಗೆ ಎಲ್ಲಾ ಕಾರ್ಡ್ ಗಳನ್ನು ಸಕ್ರಿಯಗೊಳಿಸಲು ಅವಕಾಶ ಇದೆ. ಆಯಾ ನ್ಯಾಯಬೆಲೆ ಅಂಗಡಿ ಅಥವಾ ತಾಲೂಕು ಕಚೇರಿಗಳಿಗೆ ಭೇಟಿ ನೀಡಿ ಈ ಪ್ರಕ್ರಿಯೆ ಮುಗಿಸಬಹುದು ಎನ್ನುತ್ತಾರೆ ಆಹಾರ ಇಲಾಖೆಯ ಅಧಿಕಾರಿಗಳು .....................
Tags
Govt.scheme

WhatsApp Group