ಎರಡನೇ ಸ್ಥಾನಕ್ಕೆ ಜಿಗಿದ ' ಸೀತಾ ರಾಮ ', ಟಿಆರ್ ಪಿ ರೆಸ್ ನಲ್ಲಿ ಯಾವ ಧಾರಾವಾಹಿಗೆ ಯಾವ ಸ್ಥಾನ? ಇಲ್ಲಿದೆ ವಿವರ

 

ಎರಡನೇ ಸ್ಥಾನಕ್ಕೆ ಜಿಗಿದ ' ಸೀತಾ ರಾಮ ', ಟಿಆರ್ ಪಿ ರೆಸ್ ನಲ್ಲಿ ಯಾವ ಧಾರಾವಾಹಿಗೆ ಯಾವ ಸ್ಥಾನ? ಇಲ್ಲಿದೆ ವಿವರ 




32 ನೇ ವಾರದ ಟಿ ಆರ್ ಪಿ ಲಿಸ್ಟ್ ಹೊರ ಬಿದ್ದಿದೆ. ಈ ಪೈಕಿ ಜೀ ಕನ್ನಡದಲ್ಲಿ ಪ್ರಸಾರ ಆಗುತ್ತಿರುವ ' ಪುಟ್ಟಕ್ಕನ ಮಕ್ಕಳು ' ಧಾರವಾಹಿ ಮೊದಲ ಸ್ಥಾನದಲ್ಲಿ ಕಾಯ್ದುಕೊಂಡಿದೆ. ಕಳೆದ ವಾರಕ್ಕೆ ಹೋಲಿಕೆ ಮಾಡಿದರೆ ಧಾರಾವಾಹಿಯ ಟಿ ಆರ್ ಪಿ ಕೊಂಚ ತಗ್ಗಿದೆ. ' ಸೀತಾ ರಾಮ ' ಧಾರವಾಹಿ ಎರಡನೇ ಸ್ಥಾನ ಪಡೆದುಕೊಂಡಿದೆ.

ಹೊಸ ಹೊಸ ಧಾರಾವಾಹಿಗಳು ಪ್ರಸಾರ ಕಾಣುತ್ತಲೇ ಇರುತ್ತವೆ. ಹೊಸ ಮಾದರಿಯ ಕಥೆಯೊಂದಿಗೆ ಪ್ರಕ್ಷಕರ ಎದುರು ಬರುವ ಪ್ರಯತ್ನ ನಿರಂತರವಾಗಿ ಆಗುತ್ತಲೇ ಇರುತ್ತದೆ. ಧಾರಾವಾಹಿಗಳ ಜನಪ್ರಿಯತೆ ಅಳೆಯೋಕೆ ಇರೋ ಮಾನದಂಡ ಟಿ ಆರ್ ಪಿ. ಒಳ್ಳೆಯ ಟಿಆರ್ ಪಿ ಗಳಿಕೆಗೆ ಎಲ್ಲಾ ವಾಹಿನಿಗಳು ರೆಸ್ ಗೆ ಇಳಿದಿವೆ. ಧಾರಾವಾಹಿಗಳನ್ನು ಅದ್ದೂರಿಯಾಗಿ ಸಿದ್ಧಪಡಿಸಲಾಗುತ್ತಿದೆ. ಈಗ 32 ನೇ ವಾರದ ಟಿಆರ್ ಪಿ ಲಿಸ್ಟ್ ಹೊರಬಿದ್ದಿದೆ. ಈ ಪೈಕಿ ಜೀ ಕನ್ನಡದಲ್ಲಿ ಪ್ರಸಾರ ಆಗುತ್ತಿರುವ ' ಪುಟ್ಟಕ್ಕನ ಮಕ್ಕಳು ' ಧಾರವಾಹಿ  ಮೊದಲ ಸ್ಥಾನದಲ್ಲಿ ಕಾಯ್ದುಕೊಂಡಿದೆ. ಕಳೆದ ವಾರಕ್ಕೆ ಹೋಲಿಕೆ ಮಾಡಿದರೆ ಧಾರಾವಾಹಿಯ ಟಿ ಆರ್ ಪಿ ಕೊಂಚ ತಗ್ಗಿದೆ. ' ಸೀತಾ ರಾಮ ' ಧಾರವಾಹಿ ಎರಡನೇ ಸ್ಥಾನ ಪಡೆದುಕೊಂಡಿದೆ.


ಪುಟ್ಟಕ್ಕನ ಮಕ್ಕಳು 

ಉಮಾಶ್ರೀ, ಸಂಜನಾ ಬುರುಳಿ ಮೊದಲಾದವರು ನಟಿಸಿರುವ ' ಪುಟ್ಟಕ್ಕನ ಮಕ್ಕಳು ' ಧಾರವಾಹಿ ಮೊದಲ ಸ್ಥಾನದಲ್ಲಿದೆ. ಈ ಧಾರವಾಹಿ ಕಳೆದ ಕೆಲ ತಿಂಗಳಿಂದ ಮೊದಲ ಸ್ಥಾನ ಕಾಪಾಡಿಕೊಂಡು ಬಂದಿದೆ. ಕೆಲವು ಪ್ರಮುಖ ತಿರುವುಗಳಲ್ಲಿ ಧಾರಾವಾಹಿಯ ಕಥೆ ಸಾಗಿದ್ದರಿಂದ ಈ ಧಾರಾವಾಹಿಯ ಟಿ ಆರ್ ಪಿ ಹೆಚ್ಚಿದೆ.



ಸೀತಾ ರಾಮ 

ಎರಡನೇ ಸ್ಥಾನದಲ್ಲಿ ' ಸೀತಾ ರಾಮ ' ಧಾರವಾಹಿ ಇದೆ. ವೈಷ್ಣವಿ ಗೌಡ, ಗಗನ್ ಚಿನ್ನಪ್ಪ ಹಾಗೂ ರಿತು ಸಿಂಗ್ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿರುವ ' ಸೀತಾ ರಾಮ ' ಧಾರವಾಹಿ ಗಮನ ಸೆಳೆಯುತ್ತಿದೆ. ಕಾಮಿಡಿ ಹಾಗೂ ಅಮ್ಮ-ಮಗಳ ಎಮೋಷನ್ ವರ್ಕ್ ಆಗುತ್ತಿದೆ.


ಗಟ್ಟಿಮೇಳ 

ನಿಶಾ ರವಿಕೃಷ್ಣನ್, ರಕ್ಷಿತ್ ಗೌಡ ಹಾಗೂ ಮೊದಲಾದವರು ' ಗಟ್ಟಿಮೇಳ ' ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಸಾವಿರ ಎಪಿಸೋಡ್ ಮುಗಿಸಿರುವ ಈ ಧಾರವಾಹಿ ಇಷ್ಟು ದಿನ ಎರಡನೇ ಸ್ಥಾನದಲ್ಲಿ ಇತ್ತು. ಈಗ ಧಾರಾವಾಹಿಗೆ ಮೂರನೇ ಸ್ಥಾನ ಸಿಕ್ಕಿದೆ. ಈ ಧಾರಾವಾಹಿಗೆ ದೊಡ್ಡ ವೀಕ್ಷಕರ ವರ್ಗ ಇದೆ.



whatss



ಸತ್ಯ  

'ಸತ್ಯ' ಧಾರವಾಹಿ ನಾಲ್ಕನೇ ಸ್ಥಾನದಲ್ಲಿದೆ. ಈ ಧಾರಾವಾಹಿಗೆ ಎಲ್ಲ ಕಡೆಗಳಿಂದ ಮೆಚ್ಚುಗೆ ಸಿಗುತ್ತಿದೆ. ಈ ಧಾರವಾಹಿ ಪ್ರಬಲ ಸ್ಪರ್ಧೆ ನೀಡುತ್ತಿದೆ.


ಅಮೃತಧಾರೆ-ಶ್ರೀರಸ್ತು ಶುಭಮಸ್ತು 

ಅಮೃತಧಾರೆ ಧಾರಾವಾಹಿಯಲ್ಲಿ ಮದುವೆ ಸಂಭ್ರಮ ಮನೆ ಮಾಡಿದೆ. ಗೌತಮ್-ಭೂಮಿಕಾ ಮದುವೆ ನಡೆಯುತ್ತಿದೆ. ಈ ಧಾರವಾಹಿ ಈ ಬಾರಿ ಐದನೇ ಸ್ಥಾನ ಅಲಂಕರಿಸಿದೆ. ಇದರ ಜೊತೆಗೆ ಸುಧಾರಾಣಿ ನಟಿಸುತ್ತಿರುವ ' ಶ್ರೀರಸ್ತು ಶುಭಮಸ್ತು ' ಧಾರವಾಹಿ ಕೂಡ ಐದನೇ ಸ್ಥಾನದಲ್ಲಿದೆ. ಈ ಧಾರಾವಾಹಿಯಲ್ಲಿಯೂ ಮದುವೆ ವಿಚಾರ ಹೈಲೈಟ್ ಆಗಿದೆ.






ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು