ನಮಸ್ಕಾರ ಸ್ನೇಹಿತರೆ
ಇವತ್ತಿನ ಈ ಲೇಖನದಲ್ಲಿ ಇದುವರೆಗೂ ಮನೆ ಮನೆ ಮಾತಾಗಿರುವ ಗೃಹಲಕ್ಷ್ಮಿ ಯೋಜನೆಯ ಮೊದಲ ಕಂತಿನ ಹಣ ಯಾರಿಗೆಲ್ಲ ಬಂದಿಲ್ಲವೋ ಈ ಕುರಿತಾಗಿ ಸರ್ಕಾರ ಒಂದು ಅಪ್ಡೇಟ್ ಕೊಟ್ಟಿದೆ. ಆ ಮಾಹಿತಿ ಏನು ಎನ್ನುವುದನ್ನು ಈ ಲೇಖನದ ಮೂಲಕ ತಿಳಿಯಿರಿ.
ಗೃಹಲಕ್ಷ್ಮಿ ಮೊದಲನೇ ಕಂತಿನ ಹಣ ಬಿಡುಗಡೆಯಾಗಿ ಒಂದು ತಿಂಗಳಿಗೆ ಇನ್ನೊಂದು ನಾಲ್ಕೈದು ದಿನ ಬಾಕಿ ಇದೆ. ಯಾವುದೇ ಯೋಜನೆ ಇರಲಿ ಒಂದು ಸೈಕಲ್ ಆಧಾರ ಮೇಲೆ ಹಣ ಬಿಡುಗಡೆ ಮಾಡಲಾಗುತ್ತೆ, ಗೃಹಲಕ್ಷ್ಮಿ ಯೋಜನೆಗೂ ಕೂಡ ಇದೆ ನಿಯಮ ಅಪ್ಲೈ ಆಗುತ್ತೆ.
ಇದುವರೆಗೂ ಅಂದ್ರೆ ಆಗಸ್ಟ್ 30 ರಿಂದ ಇಲ್ಲಿಯವರೆಗೂ ಒಟ್ಟು 82 ಲಕ್ಷ ಮಹಿಳೆಯರ ಖಾತೆಗೆ 2 ಸಾವಿರ ರೂಪಾಯಿ ಜಮಾ ಆಗಿದೆ.
ಎಲ್ಲರ ಖಾತೆಗೂ ಬಂದಿಲ್ಲ ಮೊದಲ ಕಂತಿನ ಹಣ?
ಅರ್ಜಿ ಸಲ್ಲಿಸಿದ 1.13 ಕೋಟಿ ಮಹಿಳೆಯರಲ್ಲಿ 82 ಲಕ್ಷ ಮಹಿಳೆಯರ ಖಾತೆಗೆ 2000 ಹಣ ಜಮಾ ಆಗಿದೆ ಎಂದು ಸರ್ಕಾ ಮಾಹಿತಿ ನೀಡಿದೆ. ಆದರೆ ಉಳಿದವರ ಕಥೆ ಏನು? ಎಂಬುದರ ಯಕ್ಷ ಪ್ರಶ್ನೆ.
ಹಲವಾರು ಕಾರಣಗಳಿಂದ ಇನ್ನು ಹಲವಾರು ಕುಟುಂಬದ ಮಹಿಳೆಯರಿಗೆ ಮೊದಲ ಕಂತಿನ ಹಣ ಬಂದಿಲ್ಲ.
ಸರ್ಕಾರ ನೀಡಿದೆ ಗುಡ್ ನ್ಯೂಸ್ !
ಈಗ ಮೊದಲ ಕಂತಿನ ಹಣ ಯಾರಿಗೆ ಸಂದಾಯವಾಗಿಲ್ಲವೋ ಅವರಿಗೆ ಎರಡನೇ ಕಂತಿನ ಹಣವನ್ನು ಸೇರಿಸಿ ನಾಲ್ಕು ಸಾವಿರ ರೂಪಾಯಿಗಳನ್ನು ನೀಡುವುದಾಗಿ ಸಿಎಂ ಸಿದ್ಧರಾಮಯ್ಯ ತಿಳಿಸಿದ್ದಾರೆ. ಇದೀಗ ಆಗಸ್ಟ್ ತಿಂಗಳ ಮೊದಲ ಕಂತಿನ ಹಣವನ್ನು ಸೆಪ್ಟೆಂಬರ್ ಶೀಘ್ರವೇ ಈ 10 ಜಿಲ್ಲೆಗಳಿಗೆ ಬಿಡುಗಡೆ ಮಾಡಲಾಗುವುದು....
ಆ ಹತ್ತು ಜಿಲ್ಲೆಗಳು ಯಾವುವು?
1} ರಾಯಚೂರು
2} ಕಲಬುರ್ಗಿ
3} ಬೀದರ್
4} ಮಂಡ್ಯ
5} ಹಾಸನ
6} ಕೊಡಗು
7} ಚಿಕ್ಕಮಗಳೂರು
8} ಉಡುಪಿ
9} ಬಳ್ಳಾರಿ
10} ಯಾದಗಿರಿ
ಅಂದರೆ ಇನ್ನು ಕೆಲವೇ ದಿನಗಳಲ್ಲಿ ಈ ಎಲ್ಲಾ ಜಿಲ್ಲೆಗಳ ಫಲಾನುಭವಿಗಳಿಗೆ ಅವರ ಮೊದಲ ಕಂತಿನ ಹಣ ಸಂಪೂರ್ಣವಾಗಿ ಜಮಾ ಆಗುತ್ತೆ ಎಂದು ಹೇಳಲಾಗಿದೆ.
Tags
Govt.scheme