ಹೊಸ ಉದ್ಯೋಗ ಪ್ರಾರಂಭಿಸಲು ಈಗಲೇ ಅರ್ಜಿ ಸಲ್ಲಿಸಿ,,, ಸರ್ಕಾರದಿಂದ 1 ಲಕ್ಷ ಸಹಾಯಧನ!!

ಹೊಸ ಉದ್ಯೋಗ ಪ್ರಾರಂಭಿಸಲು ಈಗಲೇ ಅರ್ಜಿ ಸಲ್ಲಿಸಿ,,,  ಸರ್ಕಾರದಿಂದ 1 ಲಕ್ಷ ಸಹಾಯಧನ!!


 

                  ಎಲ್ಲರಿಗೂ ನಮಸ್ಕಾರ...

ಇವತ್ತಿನ ಈ ಲೇಖನದಲ್ಲಿ ಸ್ವಯಂ ಉದ್ಯೋಗ ಯೋಜನೆಯಡಿ ಸಿಗುವ 1 ಲಕ್ಷ ಸಬ್ಸಿಡಿ ಲೋನ್ ಗಳಿಗೆ ಅರ್ಜಿ ಅಹ್ವಾನ ಮಾಡಲಾದ ಸರ್ಕಾರ ಯೋಜನೆ ಕುರಿತು ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ. ನಿರುದ್ಯೋಗಿಗಳಿಗೆ ಇದೊಂದು ಸುವರ್ಣಾವಕಾಶ, ಹೀಗಿರುವಾಗ ಯೋಜನೆಗೆ ಯಾರೆಲ್ಲ ಅರ್ಹರು? ಅರ್ಜಿ ಸಲ್ಲಿಸಲು ಅರ್ಹತೆ ಏನು? ದಾಖಲಾತಿಗಳೇನು ಬೇಕು ಎಂಬುದನ್ನು ತಿಳಿಯೋಣ.

ಸ್ವಯಂ ಉದ್ಯೋಗ ಯೋಜನೆಯ ಉದ್ದೇಶ :

ನಿರುದ್ಯೋಗ ದರವನ್ನು ಕಡಿಮೆ ಮಾಡಲು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವಿವಿಧ ರೀತಿಯ ಯೋಜನೆಗಳನ್ನು ಪ್ರಾರಂಭಿಸುತ್ತವೆ. ಈ ಯೋಜನೆಯ ಮೂಲಕ ಉತ್ಪಾದನೆ, ಮತ್ತು ಸೇವಾ ಚಟುವಟಿಕೆಗಳಿಗೆ ಸರ್ಕಾರವು ಸಾಲದ ಮೇಲೆ ಸಬ್ಸಿಡಿಗಳನ್ನು ನೀಡುತ್ತದೆ.
ಈ ಯೋಜನೆಯಡಿ ಫಲಾನುಭವಿಗಳಿಗೆ ಸಣ್ಣಪುಟ್ಟ ವ್ಯಾಪಾರದ ಚಟುವಟಿಕೆಗಳಾದ ಪೆಟ್ಟಿ ಅಂಗಡಿ, ಸಿದ್ಧ ಉಡುಪುಗಳ ಅಂಗಡಿ, ಕುರಿ ಮತ್ತು ಮೇಕೆ ಸಾಕಣೆ, ಮೀನುಗಾರಿಕೆ, ಹಣ್ಣು ಮತ್ತು ತರಕಾರಿ ಅಂಗಡಿ, ಟೈಲರಿಂಗ್ ಮುಂತಾದ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳಲು ಅನುಕೂಲವಾಗುವಂತೆ ನಿಗಮವು ನೋಡಿಕೊಳ್ಳುತ್ತದೆ.
          ಆಸಕ್ತ ಅರ್ಜಿದಾರರು ಅರ್ಜಿಯನ್ನು ಸೇವಾ ಸಿಂಧು ಪೋರ್ಟಲ್ ಮೂಲಕ ಆನ್ಲೈನ್ ನಲ್ಲಿ ಸಲ್ಲಿಸಬಹುದು. ಹಾಗೂ 'ಗ್ರಾಮ ಒನ್,  'ಬೆಂಗಳೂರು ಒನ್,  'ಕರ್ನಾಟಕ ಒನ್' ಕೇಂದ್ರಗಳಲ್ಲಿ ಸಹ ಅರ್ಜಿಯನ್ನು ಸಲ್ಲಿಸಬಹುದು.

ಯೋಜನೆಗಳ ಷರತ್ತುಗಳು ಏನು?

1}  ಫಲಾನುಭವಿಗಳನ್ನು ಆಯ್ಕೆ ಸಮಿತಿಯ ಆಯ್ಕೆ ಮಾಡಬೇಕು.

2}  ಅರ್ಜಿದಾರರ ಕುಟುಂಬದ ವಾರ್ಷಿಕ ಆದಾಯವು, ಅರ್ಜಿದಾರರು ಗ್ರಾಮೀಣ ಪ್ರದೇಶಕ್ಕೆ ಸೇರಿದವರಾಗಿದ್ದಾರೆ, ವಾರ್ಷಿಕ ಆದಾಯ 1.50 ಲಕ್ಷಗಳು ಮತ್ತು ನಗರ ಪ್ರದೇಶಕ್ಕೆ ಸೇರಿದವರಾಗಿದ್ದಾರೆ, ರು 2.00 ಲಕ್ಷ ಮಿತಿಯಲ್ಲಿರಬೇಕು.

3}  ಅರ್ಜಿದಾರರು 21 ವರ್ಷ ಮತ್ತು ಮೇಲ್ಪಟ್ಟವರು ಮತ್ತು 50 ವರ್ಷದ ವಯಸ್ಸಿನವರಾಗಿರಬೇಕು.
ಉದ್ದೇಶ / ಚಟುವಟಿಕೆಗಳ ಆಧಾರದ ಮೇಲೆ ಸಹಾಯಧನವನ್ನು ಮಂಜೂರು ಮಾಡಲಾಗುವುದು.

4}  ಆಯ್ಕೆ ಪ್ರಕ್ರಿಯೆಯಲ್ಲಿ ಅರ್ಜಿದಾರರು ಅನರ್ಹರೆಂದು ಕಂಡು ಬಂದರೆ ಅರ್ಜಿಯನ್ನು ತಿರಸ್ಕರಿಸಲಾಗುತ್ತದೆ.

5}  ಸಬ್ಸಿಡಿ ಮತ್ತು ಸಾಲದ ಮೊತ್ತವನ್ನು ನೇರವಾಗಿ ಫಲಾನುಭವಿ/ಮಾರಾಟಗಾರರಿಗೆ ಬಿಡುಗಡೆ ಮಾಡಲಾಗುತ್ತದೆ.

whatss


ವೈಶಿಷ್ಟ್ಯಗಳು:

ಸ್ವಯಂ ಉದ್ಯೋಗದಲ್ಲಿ ತೊಡಗಿಕೊಳ್ಳಲು ಈ ಯೋಜನೆಯಡಿ ಪರಿಶಿಷ್ಟ ಜಾತಿಯ ಮಾದಿಗ ಮತ್ತು ಸಂಬಂಧಿತ ಸಮುದಾಯಕ್ಕೆ ಸೇರಿದ ಪುರುಷ ಮತ್ತು ಮಹಿಳೆಯರಿಗೆ ಆರ್ಥಿಕ ನೆರವನ್ನು ನೀಡಲಾಗುತ್ತದೆ. ಹೀಗೆ ಪ್ರತಿ ಫಲಾನುಭವಿಗೆ ರೂಪಾಯಿ 1 ಲಕ್ಷ ಧನ ಸಹಾಯವನ್ನು ನೀಡುತ್ತಿದೆ. ಈ ಸಹಾಯದ ಮೊತ್ತವು ರೂಪಾಯಿ 50,000 ಸಹಾಯಧನ ಮತ್ತು 50,000 ಸಾಲವನ್ನು ಒಳಗೊಂಡಿರುತ್ತದೆ. ಬಡ್ಡಿದರ ೪% ರ ದರದಲ್ಲಿ ಸಾಮಾನ್ಯ ಕಂತುಗಳಲ್ಲಿ ಮರುಪಾವತಿಸಬೇಕು.

ಯಾರು ಅರ್ಹರು?

👉  ಡಾ.ಬಿ.ಆರ್ ಅಂಬೇಡ್ಕರ್ ಅಭಿವೃದ್ಧಿ ನಿಗಮ 
👉  ಕರ್ನಾಟಕ ಭೋವಿ ಅಭಿವೃದ್ಧಿ ನಿಗಮ
👉  ಕರ್ನಾಟಕ ತಾಂಡ ಅಭಿವೃದ್ಧಿ ನಿಗಮ 
👉  ಕರ್ನಾಟಕ ಆದಿಜಾಂಬವ ಅಭಿವೃದ್ಧಿ ನಿಗಮ 
👉  ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ 👉  ಪಂಗಡಗಳ ಅಲೆಮಾರಿ ಅಭಿವೃದ್ಧಿ ನಿಗಮ 

ಈ ಮೇಲಿನ ಸಮುದಾಯಕ್ಕೆ ಸೇರಿದವರು ಯೋಜನೆಗೆ ಅರ್ಹರಾಗಿದ್ದಾರೆ.

 

ಅವಶ್ಯಕ ದಾಖಲಾತಿಗಳು:

⇶  ಅರ್ಜಿ ಸಲ್ಲಿಸಿದ ಅಪ್ಲಿಕೇಶನ್ 

⇶  ಫೋಟೋ 

⇶  ಜಾತಿ ಪ್ರಮಾಣಪತ್ರ 

⇶  ಆದಾಯ ಪ್ರಮಾಣಪತ್ರ 

⇶  ಆಧಾರ್ ಕಾರ್ಡ್ 

⇶  ಬ್ಯಾಂಕ್ ಪಾಸ್ ಬುಕ್ ಪ್ರತಿ 





2 ಕಾಮೆಂಟ್‌ಗಳು

ನವೀನ ಹಳೆಯದು