ಗೃಹಲಕ್ಷ್ಮಿ ಯೋಜನೆಯ ಮೆಸೇಜ್ ಬಂದಿದ್ರು 2 ಸಾವಿರ ಹಣ ಬಂದಿಲ್ವಾ? ಹಾಗಾದ್ರೆ ನೀವು ಈ ಸ್ಟೋರಿ ಓದಲೇಬೇಕು.
ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಲಿಂಕ್ ಆಗಿದೆಯಾ ಅಂತ ಖಚಿತಪಡಿಸಿಕೊಳ್ಳಿ. ಅಲ್ಲದೆ ಲಿಂಕ್ ಆಗಿರುವ ಬ್ಯಾಂಕ್ ಖಾತೆ ಚಾಲ್ತಿಯಲ್ಲಿ ಇದೆಯಾ ಅಂತ ಪರಿಶೀಲನೆ ಮಾಡಿ.
ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷಿ ಗ್ಯಾರಂಟಿಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆಗೆ ಸರ್ಕಾರ ಚಾಲನೆ ನೀಡಿದ್ದು, ಆ ಮೂಲಕ ಮಹಿಳಾ ಸಬಲೀಕರಣಕ್ಕೆ ಮೊದಲ ಆದ್ಯತೆಯನ್ನು ನೀಡಿದೆ. ಗೃಹಲಕ್ಷ್ಮಿ ಯೋಜನೆಯ ಮೂಲಕ ರಾಜ್ಯದ ಮಹಿಳೆಯರ ಆರ್ಥಿಕ ಪರಿಸ್ಥಿತಿಯನ್ನು ಉತ್ತಮಗೊಳಿಸುವ ಅದ್ದೇಶವನ್ನು ಹೊಂದಿದ್ದು, ಈಗಾಗಲೇ ಬ್ಯಾಂಕ್ ಖಾತೆಗಳಲ್ಲಿ ಹಣವನ್ನು ಪಡಿದುಕೊಂಡಿರುವ ಮಹಿಳೆಯರು ಸಂತಸ ವ್ಯಕ್ತಪಡಿಸಿದ್ದಾರೆ.
ಆದರೆ, ಈ ನಡುವೆ ಹಲವು ಮಹಿಳೆಯರಿಗೆ ಇನ್ನು ಗೃಹಲಕ್ಷ್ಮಿ ಹಣ ಸಂದಾಯವಾಗಿಲ್ಲ. ಈ ಹಿನ್ನೆಲೆಯಲ್ಲಿ ಹಲವರಲ್ಲಿ ಗೊಂದಲ ಮೂಡಿದೆ. ಈ ನಡುವೆ ಹಣ ಸಂದಾಯ ಬಗ್ಗೆ ಸ್ಪಷ್ಟನೆ ನೀಡಿರುವ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳಕರ್ ಶೀಘ್ರವೇ ಹಣ ಸಂದಾಯವಾಗದ ಖಾತೆಗೆ ಹಣ ಸೇರಲಿದೆ ಎಂದು ತಿಳಿಸಿದ್ದಾರೆ.
ಈ ನಡುವೆ ಹಣ ಖಾತೆಗೆ ಸಂದಾಯ ಆಗದಿರಲು ಕಾರಣವೇನು? ಇಲ್ಲಿಯವರೆಗೂ ಎಷ್ಟು ಜನರಿಗೆ ಹಣ ಬಂದಿದೆ? ಇನ್ನು ಎಷ್ಟು ಜನರಿಗೆ ಹಣ ಬರಬೇಕಿದೆ? ಹಣ ಬರಲು ತಡವಾಗಿರುವುದಕ್ಕೆ ಕಾರಣವೇನು? ಈಗಾಗಲೇ ಹಣ ಬಂದಿರುವ ಖಾತೆಗೆ ಪ್ರತಿ ತಿಂಗಳು ಯಾವ ತಾರೀಖಿಗೆ ಹಣ ಬರುತ್ತೆ? ಎಂಬ ಹಲವು ಪ್ರಶ್ನೆಗಳಿಗೆ ಉತ್ತರ ನಾವು ಕೊಡ್ತೀವಿ. ಗೃಹಲಕ್ಷ್ಮಿ ಯೋಜನೆಗೆ ಆಗಸ್ಟ್ 30 ರಷ್ಟು ಮೈಸೂರಿನಲ್ಲಿ ರಾಹುಲ್ ಗಾಂಧಿ ಚಾಲನೆ ನೀಡಿದ್ದರು. ಈ ನಡುವೆ ಯೋಜನೆ ಚಾಲನೆ ನೀಡಿದರೂ ನಿಧಾನವಾಗಿ ಮನೆಯೊಡತಿಯರ ಬ್ಯಾಂಕ್ ಖಾತೆಗೆ ಹಣ ಸಂದಾಯ ಆಗುತ್ತಿತ್ತು. ಈಗಾಗಲೇ ಮೆಸೇಜ್ ಬಂದಿದ್ದರೂ ಹಣ ಮಾತ್ರ ಖಾತೆಗೆ ಬಂದಿಲ್ಲ ಅಂತ ಹಲವು ಮಹಿಳೆಯರು ಪ್ರಶ್ನೆ ಮಾಡ್ತಿದ್ದಾರೆ.
ರಾಜ್ಯದಲ್ಲಿರುವ ಎಲ್ಲಾ ಜಿಲ್ಲೆಗಳಲ್ಲಿ ಗೃಹಲಕ್ಷ್ಮಿ ಯೋಜನೆಗೆ ಸಂದಾಯ ಮಾಡಬೇಕಾದ ಹಣವನ್ನು ಡಿಬಿಟಿ ಮೂಲಕ ಬಿಡುಗಡೆ ಮಾಡಿದೆ. ಬರೋಬ್ಬರಿ ಎರಡು ತಿಂಗಳಿಗೆ ನೀಡಬೇಕಾದ ಹಣವನ್ನು ಈಗಾಗಲೇ ಸರ್ಕಾರ ಬಿಡುಗಡೆ ಮಾಡಿದೆ. ಹಣ ಬಿಡುಗಡೆಯಾಗದಿದ್ದರು ಜನರಿಗೆ ತಲುಪಿಲ್ಲ ಎಂಬ ಪ್ರಶ್ನೆಗೆ ಇಲ್ಲಿದೆ ಉತ್ತರ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು, ಹಣವನ್ನು ನೇರ ನಗದು ವರ್ಗಾವಣೆ ಮೂಲಕ ಮೊದಲ ಬಾರಿಗೆ ನೋಡುತ್ತಿದ್ದೇವೆ. ಇದು ರಾಜ್ಯದಲ್ಲಿ ಮೊದಲ ಬಾರಿಗೆ ಜಾರಿಯಾಗುತ್ತಿದ್ದು, ಇದಕ್ಕೆ ಆರ್ ಬಿಐ ಮೂಲಕ ಹಂತ ಹಂತವಾಗಿ ಹಣ ವರ್ಗಾವಣೆ ಮಾಡಬೇಕು. ಪರಿಣಾಮ ಮೊದಲ ತಿಂಗಳು ಮಾತ್ರ ಇದು ತಡ ಆಗಬಹುದು ಎಂದಿದ್ದಾರೆ.
1.20ಕೋಟಿ ಅರ್ಜಿಗಳಲ್ಲಿ ಸುಮಾರು 63ಲಕ್ಷ ಮನೆಯೊಡತಿಯರ ಖಾತೆಗೆ ಹಣ ಸಂದಾಯವಾಗಿದೆ. ಇನ್ನುಳಿದ ಶೇಕಡಾ ೪೫ ಅರ್ಜಿಗಳಿಗೆ ಹಣ ಸಂದಾಯವಾಗುವ ಪ್ರಕ್ರಿಯೆ ನಡೆಯುತ್ತಿದೆ. ಎರಡನೇ ತಿಂಗಳಿನಿಂದ ಇಂತಹ ಸಮಸ್ಯೆ ಇರೋದಿಲ್ಲ. ಇದರ ಜೊತೆಗೆ ಅನ್ನಭಾಗ್ಯ ಯೋಜನೆಯ ಸಂಬಂಧ ರೇಷನ್ ಕಾರ್ಡ್ಗಳ ಬದಲಾವಣೆಗೂ ಅನುಮತಿ ನೀಡಲಾಗಿತ್ತು. ಅವರು ಅರ್ಜಿ ಸಲ್ಲಿಕೆ ಮಾಡಬಹುದು. ಮುಂದಿನ ತಿಂಗಳಿನಿಂದ ಗೃಹಲಕ್ಷ್ಮಿ ಹಣ ತಿಂಗಳ 15 ನೇ ತಾರೀಖಿನ ಒಳಗೆ ಸಂದಾಯ ಆಗಲಿದೆ ಎಂದು ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
ಇನ್ನು ಅರ್ಜಿ ಸಲ್ಲಿಕೆ ಮಾಡುವ ಸಂಧರ್ಭದಲ್ಲಿ ನಿಮ್ಮ ಅರ್ಜಿಯ ಸ್ಟೇಟಸ್ ನಲ್ಲಿ ಅರ್ಜಿ ಸಲ್ಲಿಕೆ ಆಗಿಲ್ಲ ಎಂದಾದರೆ, ಸ್ಥಳೀಯರು ಅಂಗನವಾಡಿ ಕಾರ್ಯಕರ್ತರ ನೆರವು ಪಡೆದುಕೊಳ್ಳಬಹುದು. ಅಲ್ಲದೆ, ಅಲ್ಲಿಯೂ ಮಾಹಿತಿ ಸಿಗದಿದ್ದರೆ, ತಾಲೂಕು ಮಟ್ಟದದಲ್ಲಿ ಮಹಿಳಾ ಕಲ್ಯಾಣ ಇಲಾಖೆ ಸಿಡಿಪಿಒ ಅಧಿಕಾರಿಯನ್ನು ಪಡೆದುಕೊಳ್ಳಬಹುದು. ಅಲ್ಲದೆ ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ಪಡೆದುಕೊಳ್ಳಬಹುದು.
ತಾಂತ್ರಿಕ ಕಾರಣದಿಂದ 25 ಸಾವಿರ ಮನೆಯೊಡತಿಯರಿಗೆ ಹಣ ವರ್ಗಾವಣೆ ಆಗುತ್ತಿಲ್ಲ. ರಾಜ್ಯದಲ್ಲಿ ಒಂದು ಕೋಟಿ 28 ಸಾವಿರ ಲಕ್ಷ ಮನೆಯೊಡತಿಯರು ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಕೆ ಮಾಡಿಲ್ಲ ಅವರಿಗೆ ಜಾಗೃತಿ ಮೂಡಿಸುವ ಕೆಲಸ ಆಗ್ತಿದೆಯಂತೆ.
ಇನ್ನು ಸಚಿವೆ ಲಕ್ಷ್ಮಿ ಹೆಬ್ಬಾಳಕರ್ ಮಾತನಾಡಿ, ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಹಾಕಿ ಈಗಾಗಲೇ ಯಾರಿಗೆ ಪ್ರಿಂಟ್ ಬಂದಿದೆ. ಅವರಿಗೆ ಎಲ್ಲರಿಗೂ ಹಣ ಸಿಗುತ್ತದೆ. ಹಣ ಬಿಡುಗಡೆಗೆ ಕೆಲವು ಖಾತೆಗಳಿಂದ ತೊಂದರೆ ಆಗಿದೆ. ಹಾಗಾಗಿ ಹಣ ಬರುತ್ತಿಲ್ಲ. ಅಂತಹ ಖಾತೆಗಳನ್ನು ಗುರುತಿಸಿ ಅಧಿಕಾರಿಗಳು ಹಾಗೂ ಅಂಗನವಾಡಿ ಕಾರ್ಯಕರ್ತೆಯರ ಸಹಾಯದಿಂದ ಹಣವನ್ನು ಫಲಾನುಭವಿ ಖಾತೆಗೆ ಹಣ ಬಿಡುಗಡೆ ಮಾಡಲಾಗುವುದು. ಯಾರಿಗೂ ತೊಂದರೆಯಾಗದಂತೆ ಮುಂದೆ ಸರ್ಕಾರದಿಂದ ಸಹಾಯವಾಣಿ ಸಂಖ್ಯೆ ಪ್ರಾರಂಭ ಮಾಡಲಾಗುವುದು ಎಂದು ಹೇಳಿದ್ದಾರೆ. ( ವರದಿ : ಶರಣು ಹಂಪಿ, ನ್ಯೂಸ್ 18, ಬೆಂಗಳೂರು)
ಇದಕ್ಕೂ ಮುನ್ನ ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಲಿಂಕ್ ಆಗಿರುವ ಬ್ಯಾಂಕ್ ಖಾತೆ ಚಾಲ್ತಿಯಲ್ಲಿ ಇದೆಯಾ ಅಂತ ಪರಿಶೀಲನೆ ಮಾಡಿ. ಅನ್ನಭಾಗ್ಯ ಯೋಜನೆಯ ಅಡಿಯಲ್ಲಿ 5 ಕೆಜಿ ಅಕ್ಕಿ ಬದಲಿಗೆ 170 ರೂಪಾಯಿಯನ್ನು ಸರ್ಕಾರ ಈಗಾಗಲೇ ನೀಡುತ್ತಿದ್ದು, ರೇಷನ್ ಕಾರ್ಡ್ ನಲ್ಲಿ ಮನೆ ಯಜಮಾನಿ ಇರ್ತಾರೆ ಅವರ ಖಾತೆಗೆ ಹಣ ಜಮೆ ಆಗುತ್ತದೆ.
Tags
Govt.scheme